ಪಾಕ್‌ಗೆ ಜಲಕಂಟಕ ಶುರು: ನೀರನ್ನು ಆಯುಧವಾಗಿ ಬಳಸಬೇಡಿ; ಮತ್ತೊಮ್ಮೆ ಭಾರತಕ್ಕೆ ಶಹಬಾಜ್ ಷರೀಫ್ ಬೆದರಿಕೆ

ಭಾರತ ನೀರನ್ನು ಆಯುಧವಾಗಿ ಬಳಸಲು ಪ್ರಯತ್ನಿಸುತ್ತಿದೆ. ಆದರೆ ನಾವು ಇದನ್ನು ಮಾಡಲು ಬಿಡುವುದಿಲ್ಲ ಎಂದು ಪಾಕಿಸ್ತಾನ ಪ್ರಧಾನಿ ಶಹಬಾಜ್ ಷರೀಫ್ ಹೇಳಿದ್ದಾರೆ.
ಶಹಬಾಜ್ ಷರೀಫ್-ನರೇಂದ್ರ ಮೋದಿ
ಶಹಬಾಜ್ ಷರೀಫ್-ನರೇಂದ್ರ ಮೋದಿ
Updated on

ತಜಿಕಿಸ್ತಾನ್: ಭಾರತ ನೀರನ್ನು ಆಯುಧವಾಗಿ ಬಳಸಲು ಪ್ರಯತ್ನಿಸುತ್ತಿದೆ. ಆದರೆ ನಾವು ಇದನ್ನು ಮಾಡಲು ಬಿಡುವುದಿಲ್ಲ ಎಂದು ಪಾಕಿಸ್ತಾನ ಪ್ರಧಾನಿ ಶಹಬಾಜ್ ಷರೀಫ್ ಹೇಳಿದ್ದಾರೆ. ಸಿಂಧೂ ಜಲ ಒಪ್ಪಂದವನ್ನು ಮುರಿದು ಲಕ್ಷಾಂತರ ಜನರ ಜೀವಕ್ಕೆ ಅಪಾಯವನ್ನುಂಟುಮಾಡುವ ಮೂಲಕ ಭಾರತ ಕೆಂಪು ರೇಖೆಯನ್ನು ದಾಟಲು ಪ್ರಯತ್ನಿಸುತ್ತಿದೆ. ಆದರೆ ನಾವು ಅದಕ್ಕೆ ಅವಕಾಶ ನೀಡುವುದಿಲ್ಲ ಎಂದು ಹೇಳಿದರು.

ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ 26 ಜನರ ಹತ್ಯೆಯ ನಂತರ, ಭಾರತ ಸಿಂಧೂ ಜಲ ಒಪ್ಪಂದವನ್ನು ರದ್ದುಗೊಳಿಸುವ ಬಗ್ಗೆ ಮಾತನಾಡಿತ್ತು. ಆದಾಗ್ಯೂ, ಈ ದಾಳಿಯಲ್ಲಿ ತನ್ನ ಪಾತ್ರವನ್ನು ಪಾಕಿಸ್ತಾನ ನಿರಾಕರಿಸಿತ್ತು. ಏಪ್ರಿಲ್ 22ರ ದಾಳಿಯ ನಂತರ, ಪ್ರಧಾನಿ ನರೇಂದ್ರ ಮೋದಿ ಅವರು ಚೆನಾಬ್, ಝೀಲಂ ಮತ್ತು ಸಿಂಧೂ ನದಿಗಳ ಮೇಲೆ ನಡೆಯುತ್ತಿರುವ ಯೋಜನೆಗಳನ್ನು ವೇಗಗೊಳಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದರು. ಈ ಮೂರು ನದಿಗಳು ಸಿಂಧೂ ನದಿ ವ್ಯವಸ್ಥೆಯ ಭಾಗವಾಗಿದ್ದು, ಪಾಕಿಸ್ತಾನದ ಬಳಕೆಗೆ ಉದ್ದೇಶಿಸಲಾಗಿದೆ.

ಮೇ 29-31ರಿಂದ ತಜಿಕಿಸ್ತಾನ್‌ನ ರಾಜಧಾನಿ ದುಶಾಂಬೆಯಲ್ಲಿ ಹಿಮನದಿ ಸಂರಕ್ಷಣೆ ಕುರಿತು ಮೂರು ದಿನಗಳ ಅಂತರರಾಷ್ಟ್ರೀಯ ಸಮ್ಮೇಳನ ನಡೆಯುತ್ತಿದೆ. ಇದರಲ್ಲಿ 80 ವಿಶ್ವಸಂಸ್ಥೆಯ ಸದಸ್ಯ ರಾಷ್ಟ್ರಗಳು ಮತ್ತು ವಿವಿಧ ದೇಶಗಳ ಪ್ರಧಾನ ಮಂತ್ರಿಗಳು, ಉಪಾಧ್ಯಕ್ಷರು, ಸಚಿವರು ಮತ್ತು ವಿಶ್ವಸಂಸ್ಥೆಯ ಸಹಾಯಕ ಪ್ರಧಾನ ಕಾರ್ಯದರ್ಶಿಗಳು ಸೇರಿದಂತೆ 70 ಅಂತರರಾಷ್ಟ್ರೀಯ ಸಂಸ್ಥೆಗಳ 2,500ಕ್ಕೂ ಹೆಚ್ಚು ಪ್ರತಿನಿಧಿಗಳು ಭಾಗವಹಿಸುತ್ತಿದ್ದಾರೆ. ತಜಕಿಸ್ತಾನ್ ಸರ್ಕಾರವು ವಿಶ್ವಸಂಸ್ಥೆ, ಯುನೆಸ್ಕೋ, ಡಬ್ಲ್ಯುಎಂಒ, ಏಷ್ಯನ್ ಅಭಿವೃದ್ಧಿ ಬ್ಯಾಂಕ್ ಮತ್ತು ಇತರ ಪ್ರಮುಖ ಪಾಲುದಾರರ ಸಹಯೋಗದೊಂದಿಗೆ ಈ ಕಾರ್ಯಕ್ರಮವನ್ನು ಆಯೋಜಿಸುತ್ತಿದೆ.

ಸಿಂಧೂ ಜಲ ಒಪ್ಪಂದವನ್ನು ಮುರಿಯುವ ಭಾರತದ ಏಕಪಕ್ಷೀಯ ಮತ್ತು ಕಾನೂನುಬಾಹಿರ ನಿರ್ಧಾರವು ಅತ್ಯಂತ ನಿರಾಶಾದಾಯಕವಾಗಿದೆ. ರಾಜಕೀಯ ಲಾಭಕ್ಕಾಗಿ ಲಕ್ಷಾಂತರ ಜನರ ಜೀವಗಳನ್ನು ಅಪಾಯಕ್ಕೆ ಸಿಲುಕಿಸಲು ಸಾಧ್ಯವಿಲ್ಲ ಮತ್ತು ಪಾಕಿಸ್ತಾನವು ಇದನ್ನು ಮಾಡಲು ಬಿಡುವುದಿಲ್ಲ. ನಾವು ಎಂದಿಗೂ ಕೆಂಪು ರೇಖೆಯನ್ನು ದಾಟಲು ಬಿಡುವುದಿಲ್ಲ ಎಂದು ಪ್ರಧಾನಿ ಶಹಬಾಜ್ ತಮ್ಮ ಭಾಷಣದಲ್ಲಿ ಹೇಳಿದರು.

ಶಹಬಾಜ್ ಷರೀಫ್-ನರೇಂದ್ರ ಮೋದಿ
ಪಾಕ್ ಎಚ್ಚರಗೊಳ್ಳುವ ಮುನ್ನವೇ ಭಾರತದ 'ಬ್ರಹ್ಮೋಸ್' ಕ್ಷಿಪಣಿ ದಾಳಿ: ಎಡವಿದ್ದನ್ನು ಒಪ್ಪಿಕೊಂಡ ಪ್ರಧಾನಿ ಶೆಹಬಾಜ್!

ಪ್ರಧಾನ ಮಂತ್ರಿ ಶಹಬಾಜ್ ತಮ್ಮ ಭಾಷಣದಲ್ಲಿ ಹಿಮನದಿ ಸಂರಕ್ಷಣೆ, ಪಾಕಿಸ್ತಾನದ ಹವಾಮಾನ ಸವಾಲುಗಳು, 2022ರಲ್ಲಿ ಪಾಕಿಸ್ತಾನದಲ್ಲಿ ಪ್ರವಾಹ, ಜಾಗತಿಕ ಹವಾಮಾನ ಕ್ರಮ ಮತ್ತು ಜವಾಬ್ದಾರಿ, ಹಿಮನದಿ ಕರಗುವಿಕೆಯ ವೈಜ್ಞಾನಿಕ ಪ್ರಕ್ಷೇಪಗಳು, ನೀರಿನ ಶಸ್ತ್ರಾಸ್ತ್ರೀಕರಣ ಮತ್ತು ಪ್ರಕೃತಿ ಮತ್ತು ಮಾನವೀಯತೆಯ ಹಂಚಿಕೆಯ ಹಣೆಬರಹವನ್ನು ರಕ್ಷಿಸುವ ಕರೆ ಮುಂತಾದ ಎಲ್ಲಾ ಸಂಬಂಧಿತ ವಿಷಯಗಳ ಕುರಿತು ಮಾತನಾಡಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com