

ಹಂಟಿಂಗ್ಟನ್: ಬ್ರಿಟನ್‌ನ ಕೇಂಬ್ರಿಡ್ಜ್‌ಶೈರ್‌ನ ರೈಲೊಂದರಲ್ಲಿ ಇಬ್ಬರು ದುಷ್ಕರ್ಮಿಗಳು ಹಲವು ಪ್ರಯಾಣಿಕರಿಗೆ ಚೂಕುವಿನಿಂದ ಇರಿದಿದ್ದು, ಘಟನೆ ಬೆನ್ನಲ್ಲೇ ಪೊಲೀಸರು ಇಬ್ಬರು ಶಂಕಿತರನ್ನು ಬಂಧನಕ್ಕೊಳಪಡಿಸಿದ್ದಾರೆ.
ಚೂರಿ ಇರಿತದಿಂದ 10 ಮಂದಿ ಗಂಭೀರವಾಗಿ ಗಾಯಗೊಂಡಿದ್ದು, 9 ಮಂದಿಯ ಸ್ಥಿತಿ ಗಂಭೀರವಾಗಿದೆ ಎಂದು ವರದಿಗಳಿಂದ ತಿಳಿದುಬಂದಿದೆ.
ಬ್ರಿಟಿಷ್ ಸಾರಿಗೆ ಪೊಲೀಸರು ಈ ಘಟನೆಯನ್ನು ಎಕ್ಸ್ ನಲ್ಲಿ ದೃಢಪಡಿಸಿದ್ದು, ಹುಟಿಂಗ್ಡನ್ ಗೆ ತೆರಳುತ್ತಿದ್ದ ರೈಲಿನಲ್ಲಿ ನಡೆದ ಅವಘಡದಲ್ಲಿ ಹಲವು ಮಂದಿಗೆ ಇರಿದ ಘಟನೆಗೆ ಸಂಬಂಧಿಸಿದಂತೆ ತುರ್ತು ಸ್ಪಂದನೆ ನಡೆದಿದೆ. ಇಬ್ಬರನ್ನು ಬಂಧಿಸಲಾಗಿದೆ ಎಂದು ಮಾಹಿತಿ ನೀಡಿದೆ.
ರೈಲಿನಲ್ಲಿ ಹಲವರಿಗೆ ಇರಿತವಾಗಿದೆ ಎಂಬ ಕುರಿತು ಶನಿವಾರ ಸಂಜೆ 7:39ಕ್ಕೆ (ಸ್ಥಳೀಯ ಸಮಯ) ನಮಗೆ ಕರೆ ಬಂದಿತು.‘ಹಂಟಿಂಗ್‌ಡನ್‌ನಲ್ಲಿ ರೈಲನ್ನು ತಡೆದಾ ಇಬ್ಬರು ಪುರುಷರನ್ನು ಬಂಧಿಸಲಾಯಿತು. ಘಟನೆಯಲ್ಲಿ 10 ಜನರಿಗೆ ಗಾಯವಾಗಿದ್ದು, 9 ಮಂದಿ ಸ್ಥಿತಿ ಗಂಭೀರವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಏತನ್ಮಧ್ಯೆ ಬ್ರಿಟಿಷ್ ಪ್ರಧಾನಿ ಕೀರ್ ಸ್ಟಾರ್ಮರ್ ಭಯಾನಕ ಘಟನೆಯನ್ನು ಖಂಡಿಸಿದ್ದು, ಜನರು ಪೊಲೀಸರ ಸಲಹೆಯನ್ನು ಪಾಲಿಸುವಂತೆ ಒತ್ತಾಯಿಸಿದ್ದಾರೆ.
ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಅವರು, ‘ಗಾಯಾಳುಗಳ ನೆರವಿಗೆ ನಾವಿದ್ದೇವೆ. ಸಂತ್ರಸ್ತರಿಗೆ ಸ್ಪಂದಿಸಿದ ತುರ್ತು ಸೇವೆ ಅಧಿಕಾರಿಗಳಿಗೆ ಧನ್ಯವಾದ. ಆ ಪ್ರದೇಶ ಪ್ರತಿಯೊಬ್ಬರೂ ಪೊಲಿಸರ ಸಲಹೆ ಪಾಲಿಸಬೇಕು’ ಎಂದು ಹೇಳಿದ್ದಾರೆ. ಈ ದಾಳಿಯ ಹಿಂದಿನ ಉದ್ದೇಶ ಇನ್ನೂ ದೃಢಪಟ್ಟಿಲ್ಲ ಹಾಗೂ ತನಿಖೆ ಮುಂದುವರಿದಿದೆ.
Advertisement