

ಮೆಲ್ಬರ್ನ್: ಆಸ್ಟ್ರೇಲಿಯಾದ ಸಿಡ್ನಿ ನಗರದಲ್ಲಿ ಸಂಭವಿಸಿದ ಅಪಘಾತದಲ್ಲಿ ಎಂಟು ತಿಂಗಳ ಗರ್ಭಿಣಿ ಹಾಗೂ ಹೊಟ್ಟೆಯೊಳಗಿದ್ದ ಮಗು ಸಾವನ್ನಪ್ಪಿರುವ ದಾರುಣ ಘಟನೆ ನಡೆದಿದೆ.
ಸಮನ್ವಿತಾ ಧಾರೇಶ್ವರ್ (33) ಮೃತ ಮಹಿಳೆ. ಕಳೆದ ಶುಕ್ರವಾರ ರಾತ್ರಿ 8ರ ಸುಮಾರಿಗೆ ಸಮನ್ವಿತಾ ಅವರು ತಮ್ಮ ಪತಿ ಹಾಗು 3 ವರ್ಷದ ಮಗನೊಂದಿಗೆ ಜರ್ಜ್ ಸೇಂಟ್ ಇನ ಹಾರ್ನ್‌ಸ್ಬಿ ಬಳಿ ರಸ್ತೆ ದಾಟುತ್ತಿದ್ದ ಸಂದರ್ಭದಲ್ಲಿ ರಸ್ತೆ ಅಪಘಾತ ಸಂಭವಿಸಿದೆ. ಹೆರಿಗೆಗೆ ಇನ್ನು ಕೆಲವೇ ವಾರಗಳು ಬಾಕಿ ಇರುವಾಗಲೇ ಈ ದುರ್ಘಟನೆ ಸಂಭವಿಸಿದೆ.
ಶುಕ್ರವಾರ ರಾತ್ರಿ ಸುಮಾರು 8 ಗಂಟೆಗೆ ಹಾರ್ನ್ಸ್‌ಬೈನಲ್ಲಿರುವ ಜಾರ್ಜ್ ಸ್ಟ್ರೀಟ್‌ನಲ್ಲಿ ಈ ದುರ್ಘಟನೆ ನಡೆದಿದೆ. ಸಮನ್ವಿತಾ ಮತ್ತು ಅವರ ಕುಟುಂಬ ಫುಟ್‌ಪಾತ್‌ನಲ್ಲಿ ರಸ್ತೆ ದಾಟಲು ನಿಂತಿದ್ದಾಗ, ಹಿಂದಿನಿಂದ ಬಂದ BMW ಕಾರು , ಮುಂದೆ ನಿಧಾನವಾಗಿ ಹೋಗುತ್ತಿದ್ದ ಕಿಯಾ ಕಾರ್ನಿವಲ್ ಕಾರಿಗೆ ಡಿಕ್ಕಿ ಹೊಡೆದಿದೆ. ಈ ಪರಿಣಾಮ ಕಿಯಾ ಕಾರ್ ಮುಂದೆ ನುಗ್ಗಿ, ರಸ್ತೆ ದಾಟುತ್ತಿದ್ದ ಸಮನ್ವಿತಾಗೆ ಅಪ್ಪಳಿಸಿದೆ.
ಈ ಭೀಕರ ಅಪಘಾತದಲ್ಲಿ ಸಮನ್ವಿತಾಗೆ ಗಂಭೀರ ಗಾಯಗಳಾಗಿದ್ದವು. ಅವರನ್ನು ತಕ್ಷಣವೇ ವೆಸ್ಟ್‌ಮೀಡ್ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ, ದುರದೃಷ್ಟವಶಾತ್, ಸಮನ್ವಿತಾ ಮತ್ತು ಅವರ ಗರ್ಭದಲ್ಲಿದ್ದ ಮಗುವನ್ನು ಉಳಿಸಲು ಸಾಧ್ಯವಾಗಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಈ BMW ಕಾರನ್ನು 19 ವರ್ಷದ ಆರೋನ್ ಪಪಜೋಗ್ಲು ಎಂಬಾತ ಚಲಾಯಿಸುತ್ತಿದ್ದ ಎನ್ನಲಾಗಿದೆ. ಇವನು 'P-plater' ಆಗಿದ್ದನು, ಅಂದರೆ ತಾತ್ಕಾಲಿಕ ಅಥವಾ ಪ್ರೊಬೇಷನರಿ ಲೈಸೆನ್ಸ್ ಹೊಂದಿದ್ದನು. ಬಿಎಂಡಬ್ಲ್ಯೂ ಓಡಿಸುತ್ತಿದ್ದ 19 ವರ್ಷದ ಯುವಕ ಮತ್ತು ಕಿಯಾ ಚಾಲನೆ ಮಾಡುತ್ತಿದ್ದ 48 ವರ್ಷದ ವ್ಯಕ್ತಿಗೆ ಯಾವುದೇ ಗಾಯಗಳಾಗಿಲ್ಲ
Advertisement