4 ಲಕ್ಷ ಮಹಿಳೆಯರ ಮೇಲೆ ಅತ್ಯಾಚಾರಕ್ಕೆ ಅನುಮತಿ ನೀಡಿದವರಿಂದ ಪಾಠದ ಅಗತ್ಯವಿಲ್ಲ: ವಿಶ್ವಸಂಸ್ಥೆಯಲ್ಲಿ ಪಾಕ್‌ ವಿರುದ್ಧ ಭಾರತ ಗುಡುಗು; Video

ಪಾಕಿಸ್ತಾನದ ಸೇನೆಯು "ವ್ಯವಸ್ಥಿತ ನರಮೇಧ" ನಡೆಸಿದೆ. 1971 ರಲ್ಲಿ ಆಪರೇಷನ್ ಸರ್ಚ್‌ಲೈಟ್ ಸಮಯದಲ್ಲಿ 400,000 ಕ್ಕೂ ಹೆಚ್ಚು ಮಹಿಳೆಯರ ಮೇಲೆ ಸಾಮೂಹಿಕ ಅತ್ಯಾಚಾರಕ್ಕೆ ಅನುಮತಿ ನೀಡಿದೆ.
India's Permanent Representative to the United Nations Parvathaneni Harish speaks during a UN Security Council meeting.
ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಸಭೆಯಲ್ಲಿ ಭಾರತದ ವಿಶ್ವಸಂಸ್ಥೆಯ ಖಾಯಂ ಪ್ರತಿನಿಧಿ ಪರ್ವತನೇನಿ ಹರೀಶ್ ಮಾತನಾಡುತ್ತಿರುವುದು.
Updated on

ವಿಶ್ವಸಂಸ್ಥೆ: ತಮ್ಮದೇ ಜನರ ಮೇಲೆ ಬಾಂಬ್ ದಾಳಿ ನಡೆಸುವ, 4 ಲಕ್ಷ ಜನರ ಸಾಮೂಹಿಕ ಅತ್ಯಾಚಾರಕ್ಕೆ ಅನುಮತಿ ನೀಡಿದವರಿಂದ ಪಾಠದ ಅಗತ್ಯ ನಮಗಿಲ್ಲ ಎಂದು ಹೇಳುವ ಮೂಲಕ ವಿಶ್ವಸಂಸ್ಥೆಯಲ್ಲಿ ಕಾಶ್ಮೀರಿ ಮಹಿಳೆಯರ ಬಗ್ಗೆ ಮಾತನಾಡಿದ ಪಾಕಿಸ್ತಾನಕ್ಕೆ ಭಾರತ ತಕ್ಕ ತಿರುಗೇಟು ನೀಡಿದೆ.

ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಮಹಿಳೆಯರು ಮತ್ತು ಭದ್ರತೆಯ ಕುರಿತ ಚರ್ಚೆಯ ಸಂದರ್ಭದಲ್ಲಿ ಮಾಡಿದ ಅತ್ಯಂತ ಕಠೋರ ಭಾಷಣದಲ್ಲಿ ಭಾರತದ ಖಾಯಂ ಪ್ರತಿನಿಧಿ ಪರ್ವತನೇನಿ ಹರೀಶ್, 1971 ರ ಆಪರೇಷನ್ ಸರ್ಚ್‌ಲೈಟ್ ಹಾಗೂ ಕಳೆದ ತಿಂಗಳು ಖೈಬರ್ ಪಖ್ತುನ್ಖ್ವಾ ಪ್ರಾಂತ್ಯದಲ್ಲಿ ಪಾಕಿಸ್ತಾನಿ ವಾಯುಪಡೆಯು ರಾತ್ರಿಯಿಡೀ ನಡೆಸಿದ ವಾಯುದಾಳಿಯನ್ನು ಉಲ್ಲೇಖಿಸಿಸಿ ಪಾಕಿಸ್ತಾನದ ಜನ್ಮ ಜಾಲಾಡಿದರು.

ಪಾಕಿಸ್ತಾನದ ಸೇನೆಯು "ವ್ಯವಸ್ಥಿತ ನರಮೇಧ" ನಡೆಸಿದೆ. 1971 ರಲ್ಲಿ ಆಪರೇಷನ್ ಸರ್ಚ್‌ಲೈಟ್ ಸಮಯದಲ್ಲಿ 400,000 ಕ್ಕೂ ಹೆಚ್ಚು ಮಹಿಳೆಯರ ಮೇಲೆ ಸಾಮೂಹಿಕ ಅತ್ಯಾಚಾರಕ್ಕೆ ಅನುಮತಿ ನೀಡಿದೆ.

ಪಾಕಿಸ್ತಾನವು 1971 ರಲ್ಲಿ ಆಪರೇಷನ್ ಸರ್ಚ್‌ಲೈಟ್ ನಡೆಸಿದ ದೇಶವಾಗಿದ್ದು, ತನ್ನದೇ ಆದ ಸೈನ್ಯದಿಂದ 400,000 ಮಹಿಳಾ ನಾಗರಿಕರ ಮೇಲೆ ಜನಾಂಗೀಯ ಹತ್ಯೆಯ ಸಾಮೂಹಿಕ ಅತ್ಯಾಚಾರದ “ವ್ಯವಸ್ಥಿತ ಅಭಿಯಾನ”ಕ್ಕೆ ಅನುಮತಿ ನೀಡಿದೆ. ಆದರೂ ತಪ್ಪು ನಿರ್ದೇಶನ ಮತ್ತು ಅತಿಶಯೋಕ್ತಿಯಿಂದ ಜಗತ್ತನ್ನು ಬೇರೆಡೆಗೆ ಸೆಳೆಯಲು ಪ್ರಯತ್ನಿಸುತ್ತದೆ ಎಂದು ಹೇಳಿದ್ದಾರೆ.

ಪ್ರತಿ ವರ್ಷ, ದುರದೃಷ್ಟವಶಾತ್, ನನ್ನ ದೇಶದ ವಿರುದ್ಧ, ವಿಶೇಷವಾಗಿ ಅವರು ಬಯಸುವ ಭಾರತೀಯ ಪ್ರದೇಶವಾದ ಜಮ್ಮು ಮತ್ತು ಕಾಶ್ಮೀರದ ವಿರುದ್ಧ ಪಾಕಿಸ್ತಾನದ ಭ್ರಮೆಯ ಟೀಕೆಗಳನ್ನು ಕೇಳುತ್ತಾ ಬಂದಿದ್ದೇವೆ. ಮಹಿಳೆಯರು, ಶಾಂತಿ ಮತ್ತು ಭದ್ರತಾ ಕಾರ್ಯಸೂಚಿಯಲ್ಲಿ ಭಾರತದ ದಾಖಲೆಯು ಕಳಂಕರಹಿತವಾಗಿದೆ. ತನ್ನದೇ ಜನರ ಮೇಲೆ ಬಾಂಬ್ ದಾಳಿ ಮಾಡುವ, ವ್ಯವಸ್ಥಿತ ನರಮೇಧವನ್ನು ನಡೆಸುವ ದೇಶವು ತಪ್ಪು ನಿರ್ದೇಶನ ಮತ್ತು ಅತಿಶಯೋಕ್ತಿಯಿಂದ ಮಾತ್ರ ಜಗತ್ತನ್ನು ಗಮನವನ್ನು ಬೇರೆಡೆ ಸೆಳೆಯಲು ಪ್ರಯತ್ನಿಸಬಹುದು ಎಂದು ತಿಳಿಸಿದ್ದಾರೆ.

ಜಗತ್ತು ಪಾಕಿಸ್ತಾನದ ಅಪಪ್ರಚಾರವನ್ನು ನೋಡುತ್ತದೆ. ವಿಶ್ವದ ಅತ್ಯಂತ ಕೆಟ್ಟ ಮಾನವ ಹಕ್ಕುಗಳ ದಾಖಲೆ ಹೊಂದಿದ ದೇಶವು ತನ್ನ ಸಮಾಜದಲ್ಲಿ ಧಾರ್ಮಿಕ ಅಲ್ಪಸಂಖ್ಯಾತರ ಮೇಲೆ ರಾಜ್ಯ ಪ್ರಾಯೋಜಿತ ಕಿರುಕುಳ ಮತ್ತು ವ್ಯವಸ್ಥಿತ ತಾರತಮ್ಯವನ್ನು ನಡೆಸುತ್ತಾ ಬಂದಿದೆ ಎಂದು ವಾಗ್ದಾಳಿ ನಡೆಸಿದರು.

ಪಾಕಿಸ್ತಾನದ ಪ್ರತಿನಿಧಿ ಸೈಮಾ ಸಲೀಮ್ ತಮ್ಮ ಭಾಷಣದಲ್ಲಿ, ಕಾಶ್ಮೀರದ ಮಹಿಳೆಯರು ದಶಕಗಳಿಂದ "ಯುದ್ಧದ ಆಯುಧವಾಗಿ ಬಳಸಲಾಗುವ ಲೈಂಗಿಕ ಹಿಂಸೆಯನ್ನು ಸಹಿಸಿಕೊಂಡಿದ್ದಾರೆ ಎಂದು ಆರೋಪಿಸಿದ್ದರು.

India's Permanent Representative to the United Nations Parvathaneni Harish speaks during a UN Security Council meeting.
Op Sindoor ವೇಳೆ ಕದನ ವಿರಾಮಕ್ಕೆ ಅಂಗಲಾಚಿದ್ದಿರಿ; ನಿಮ್ಮ ಪರಮಾಣು ಬ್ಲ್ಯಾಕ್‌ಮೇಲ್‌ಗೆ ಹೆದರೋಲ್ಲ: ವಿಶ್ವಸಂಸ್ಥೆಯಲ್ಲಿ ಪಾಕ್'ಗೆ ಭಾರತ ಛೀಮಾರಿ

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com