
ಈಜಿಪ್ಟ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಭಾರತದ ಪ್ರಧಾನಿ ನರೇಂದ್ರ ಮೋದಿಯವರನ್ನು ಹಾಡಿ ಹೊಗಳಿದ್ದಾರೆ. ಭಾರತವು ಶ್ರೇಷ್ಠ ದೇಶವಾಗಿದ್ದು, ನನ್ನ ಉತ್ತಮ ಸ್ನೇಹಿತ ಅಗ್ರಸ್ಥಾನದಲ್ಲಿದ್ದಾರೆ ಎಂದು ಮೋದಿ ಹೆಸರೆತ್ತದೆ ಅವರು ಹೇಳಿದ್ದಾರೆ.
ಇಸ್ರೇಲ್-ಹಮಾಸ್ ಯುದ್ಧವನ್ನು ಕೊನೆಗೊಳಿಸಿದ ‘ಗಾಜಾ ಕದನ ವಿರಾಮ‘ದ ಬಳಿಕ ಇಲ್ಲಿ ನಡೆಯುತ್ತಿದ್ದ ವಿಶ್ವ ನಾಯಕರ ಶೃಂಗಸಭೆಯನ್ನುದ್ದೇಶಿಸಿ ಟ್ರಂಪ್ ಭಾಷಣ ಮಾಡಿದ್ದಾರೆ. ಅಲ್ಲದೆ ಭಾರತ ಹಾಗೂ ಪಾಕಿಸ್ತಾನವು ಒಟ್ಟಿಗೆ ಸಾಗುತ್ತವೆ ಎಂದು ಭಾವಿಸುವೆ’ ಎಂದಿದ್ದಾರೆ.
ಭಾರತವು ಶ್ರೇಷ್ಠ ದೇಶವಾಗಿದ್ದು, ನನ್ನ ಉತ್ತಮ ಸ್ನೇಹಿತ ಅಗ್ರಸ್ಥಾನದಲ್ಲಿದ್ದಾರೆ. ಅವರು ಅದ್ಭುತ ಕೆಲಸ ಮಾಡಿದ್ದಾರೆ. ಪಾಕಿಸ್ತಾನ ಹಾಗೂ ಭಾರತ ಒಟ್ಟಿಗೆ ಸಾಗುತ್ತದೆ ಎಂದು ಭಾವಿಸುವೆ ಎಂದು ಪಕ್ಕದಲ್ಲೇ ಇದ್ದ ಪಾಕಿಸ್ತಾನ ಪ್ರಧಾನಿ ಶೆಹಬಾಜ್ ಶರೀಫ್ ಅವರನ್ನು ನೋಡಿ ಹೇಳಿದರು.
ಈಗ ಭಾರತ ಮತ್ತು ಪಾಕಿಸ್ತಾನ ಚೆನ್ನಾಗಿ ಹೊಂದಿಕೊಳ್ಳುತ್ತವೇ ಅಲ್ಲವೇ ಎಂದೂ ಶೆಹಬಾಜ್ ಷರೀಫ್ ಕಡೆಗೆ ತಿರುಗಿ ಕೇಳಿದರು. ಇದಕ್ಕೆ ಪಾಕ್ ಪ್ರಧಾನಿ ಹೌದು ಎನ್ನುತ್ತಲೇ ಸಕಾರಾತ್ಮಕವಾಗಿ ತಲೆಯಾಡಿಸಿದ್ರು. ಭಾರತವು ಒಂದು ಅದ್ಭುತ ದೇಶ, ನನ್ನ ಇಳ್ಳೆಯ ಸ್ನೇಹಿತನ ನೇತೃತ್ವದಲ್ಲಿ ಅದ್ಭುತ ಕೆಲಸಗಳನ್ನ ಮಾಡುತ್ತಿದೆ. ಭಾರತ ಮತ್ತು ಪಾಕಿಸ್ತಾನ ತುಂಬಾ ಚೆನ್ನಾಗಿ ಹೊಂದಿಕೊಳ್ಳುತ್ತವೆ ಎಂದು ನಾನು ಭಾವಿಸುತ್ತೇನೆ ಎಂದರು.
ಅದಕ್ಕೂ ಮುನ್ನ ಶರೀಫ್ ಅವರನ್ನು ಟ್ರಂಪ್ ಹೊಗಳಿದರು. ಪಾಕಿಸ್ತಾನ ಸೇನಾ ಮುಖ್ಯಸ್ಥ ಜನರಲ್ ಅಸೀಂ ಮುನೀರ್ ಅವರನ್ನು ‘ನನ್ನ ನೆಚ್ಚಿನ ಫೀಲ್ಡ್ ಮಾರ್ಷಲ್‘ ಎಂದು ಸಂಬೋಧಿಸಿದರು. ಬಳಿಕ ಸಭೆಯನ್ನುದ್ದೇಶಿಸಿ ಮಾತನಾಡಲು ಶರೀಫ್ ಅವರನ್ನು ಆಹ್ವಾನಿಸಿದರು. ಭಾರತ ಮತ್ತು ಪಾಕಿಸ್ತಾನ ನಡುವಿನ ಸಂಘರ್ಷ ಸೇರಿದಂತೆ 7 ಯುದ್ಧಗಳನ್ನು ನಿಲ್ಲಿಸಿದ್ದು, ನಾನೇ ಎಂದು ಹೇಳಿಕೊಳ್ಳುತ್ತಿದ್ದ ಟ್ರಂಪ್, ಇದೀಗ ಇಸ್ರೇಲ್-ಗಾಜಾ ಸಂಘರ್ಷವನ್ನು ಕೂಡ ನಾನೇ ನಿಲ್ಲಿಸಿದ್ದು ಎಂದು ಹೇಳುವ ಮೂಲಕ ಈಗ ಆ ಸಂಖ್ಯೆಯನ್ನು ಎಂಟಕ್ಕೆ ಹೆಚ್ಚಿಸಿದ್ದಾರೆ.
Advertisement