
ಚೆಂಗ್ಡು: ಚೀನಾದಲ್ಲಿ ಎಲೆಕ್ಟ್ರಿಕ್ ಕಾರು ದುರಂತ ಸಂಭವಿಸಿದ್ದು, Xiaomi ಎಲೆಕ್ಟ್ರಿಕ್ ಕಾರೊಂದು ಬೆಂಕಿಗಾಹುತಿಯಾಗಿ ಅದರಲ್ಲಿದ್ದ ಚಾಲಕ ಸಜೀವ ದಹನವಾಗಿರುವ ಘಟನೆ ವರದಿಯಾಗಿದೆ.
ನೈಋತ್ಯ ಚೀನಾದ ಚೆಂಗ್ಡುವಿನಲ್ಲಿ ಈ ದುರಂತ ಸಂಭವಿಸಿದ್ದು, Xiaomi ಸಂಸ್ಥೆಯ SU7 ಎಲೆಕ್ಟ್ರಿಕ್ ಸೆಡಾನ್ ಕಾರು ಅಪಘಾತಕ್ಕೀಡಾಗಿ ಬೆಂಕಿ ಹೊತ್ತುಕೊಂಡಿದೆ. ಅಲ್ಲದೆ ಕಾರಿನ ಡೋರ್ ಲಾಕ್ ಆಗಿ ಜಖಂ ಆದ ಕಾರಣ ಕಾರಿನ ಒಳಗಿದ್ದ ಚಾಲಕ ಹೊರ ಬರಲಾಗದೇ ಸಜೀವ ದಹನರಾಗಿದ್ದಾರೆ.
ಚಾಲಕ ಕುಡಿದು ವಾಹನ ಚಾಲನೆ ಮಾಡಿದ ಪರಿಣಾಮ ಅಪಘಾತ ಸಂಭವಿಸಿ ಕಾರಿನ ಡೋರ್ ಜಾಮ್ ಆಗಿ ಕಾರಿನಲ್ಲಿ ಬೆಂಕಿ ಹೊತ್ತಿಕೊಂಡಿದೆ. ವಿಚಾರ ತಿಳಿದ ಕೂಡಲೇ ಪೊಲೀಸರು ಸ್ಥಳಕ್ಕೆ ದೌಡಾಯಿಸಿದರಾದರೂ ಚಾಲಕನನ್ನು ರಕ್ಷಿಸಲಾಗಲಿಲ್ಲ. ವಾಹನ ಸವಾರ ಸಾವನ್ನಪ್ಪಿದ್ದಾನೆ ಎಂದು ಪೊಲೀಸರು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಪ್ರಾಥಮಿಕ ತನಿಖೆಯ ನಂತರ, ಪೊಲೀಸರು ತಿಳಿಸಿದಂತೆ, 31 ವರ್ಷದ ಡೆಂಗ್ ಎಂಬ ಉಪನಾಮ ಹೊಂದಿರುವ ಚಾಲಕ ಮತ್ತೊಂದು ಕಾರಿಗೆ ಡಿಕ್ಕಿ ಹೊಡೆದು, ವಾಹನ ಬೆಂಕಿಗೆ ಆಹುತಿಯಾಗುವ ಮೊದಲು ನೆಟ್ಟಿದ್ದ ಮೀಡಿಯನ್ ಮೇಲೆ ಉರುಳಿಸಿ, ಮದ್ಯಪಾನ ಮಾಡಿ ವಾಹನ ಚಲಾಯಿಸಿದ್ದಾನೆ ಎಂದು ಶಂಕಿಸಲಾಗಿದೆ. ಹೇಳಿಕೆಯ ಪ್ರಕಾರ, ಡೆಂಗ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಸುದ್ದಿ ಬೆನ್ನಲ್ಲೇ Xiaomi ಷೇರುಗಳ ಕುಸಿತ
ಇನ್ನು ಚೆಂಗ್ಡು ಕಾರು ದುರಂತದ ಬೆನ್ನಲ್ಲೇ ಶಿಯೋಮಿ ಸಂಸ್ಥೆಯ ಷೇರುಗಳ ಮೌಲ್ಯದಲ್ಲಿ ಗಣನೀಯ ಕುಸಿತವಾಗಿದೆ. ಸೋಮವಾರ ಮಾರುಕಟ್ಟೆ ವಹಿವಾಟು ಮುಕ್ತಾಯದ ವೇಳೆಗೆ Xiaomi ಷೇರುಗಳು 8.7% ರಷ್ಟು ಕುಸಿದವು, ಏಪ್ರಿಲ್ ನಂತರದ ಸಂಭವಿಸಿದ ಅತಿ ಹೆಚ್ಚು ನಷ್ಟ ಇದಾಗಿದೆ ಎಂದು ಹೇಳಲಾಗಿದೆ.
ಕಾರಿನಲ್ಲಿ ಗಣನೀಯ ಬದಲಾವಣೆಗೆ ಸಲಹೆ
ಇನ್ನು ಅಪಘಾತದ ವೇಳೆ ಕಾರು ವಿದ್ಯುತ್ ಸಂಪರ್ಕ ಕಳೆದುಕೊಂಡ ನಂತರ ಸಾಮಾನ್ಯವಾಗಿಯೇ ಕಾರಿನ ಡೋರ್ ಗಳು ಜಖಂ ಆಗಿವೆ. ಈ ಘಟನೆ ಬಳಿಕ ಡೋರ್ ಹ್ಯಾಂಡಲ್‌ಗಳ ಪರಿಶೀಲನೆ ಅಥವಾ ಬದಲಾವಣೆ ಬಲಪಡಿಸುವ ಸಾಧ್ಯತೆಯಿದೆ ಎಂದು ಹೇಳಲಾಗಿದೆ.
Advertisement