
ಬೀಜಿಂಗ್: ಶಾಂಘೈ ಸಹಕಾರ ಸಂಘಟನೆಯ (SCO) ಶೃಂಗಸಭೆಯ ವೇಳೆ ಪಾಕಿಸ್ತಾನದ ಪ್ರಧಾನ ಮಂತ್ರಿ ಶೆಹಬಾಜ್ ಶರೀಫ್ (Shehbaz Sharif) ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ (Vladimir Putin) ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್ (Xi Jinping)ರ ನಿರ್ಲಕ್ಷ್ಯಕ್ಕೆ ಒಳಗಾಗಿ ವ್ಯಾಪಕ ಟ್ರೋಲ್‌ಗೆ ಗುರಿಯಾಗಿದ್ದಾರೆ.
Tianjin ನಲ್ಲಿ ನಡೆಯುತ್ತಿರುವ ಎಸ್‌ಸಿಒ ನಾಯಕರ ಗ್ರೂಪ್ ಫೋಟೋ ಚಿತ್ರೀಕರಣದ ಸಂದರ್ಭದಲ್ಲಿ ಎಲ್ಲ ನಾಯಕರೂ ಪೋಸ್ ನೀಡಿದ್ದರು.
ಈ ವೇಳೆ ಫೋಟೋ ಶೂಟ್ ಮುಕ್ತಾಯದ ಬಳಿಕ ಪುಟಿನ್ ಮತ್ತು ಕ್ಸಿ ಜಿನ್ ಪಿಂಗ್ ಅಲ್ಲಿಂದ ತೆರಳುವಾಗ ಅಲ್ಲಿಯೇ ಇದ್ದ ಪಾಕ್ ಪ್ರಧಾನಿ ಶಹಬಾಶ್ ಷರೀಫ್ ಪುಟಿನ್ ರನ್ನು ಮಾತನಾಡಿಸುವ ಪ್ರಯತ್ನ ಮಾಡಿದರು.
ಈ ವೇಳೆ ಪುಟಿನ್ ರನ್ನು ನೋಡಿ ಷರೀಫ್ ನಮಸ್ಕರಿಸಿದರಾದರೂ ಅವರತ್ತ ತಿರುಗಿಯೂ ನೋಡದ ಪುಟಿನ್ ಮುಂದೆ ಸಾಗಿ ಜಪಾನ್ ಪ್ರಧಾನಿಯನ್ನು ಮಾತನಾಡಿಸಿದರು.
ಈ ವೇಳೆ ಹಿಂದೆಯೇ ಬಂದ ಶಹಭಾಷ್ ಷರೀಫ್ ಪುಟಿನ್ ರ ಬೆನ್ನಿನ ಮೇಲೆ ಕೈಯಿಟ್ಟು ಅವರನ್ನು ತಿರುಗಿ ನೋಡುವಂತೆ ಮಾಡಿ ಮಾತನಾಡಿಸಿದರು. ರಷ್ಯಾದ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರನ್ನು ಭೇಟಿಯಾಗಲು ಪಾಕ್ ಪ್ರಧಾನಿ ತಡಕಾಡುತ್ತಿರುವ ಈ ದೃಶ್ಯ ಇದೀಗ ವ್ಯಾಪಕ ವೈರಲ್ ಆಗುತ್ತಿದೆ.
ಮೋದಿ ಜೊತೆ ಪುಟಿನ್, ಒಂದೇ ಕಣ್ಣಲ್ಲಿ ಗಮನಿಸಿದ ಷರೀಫ್
ಮತ್ತೊಂದು ವಿಡಿಯೊದಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ ಹಾಗೂ ರಷ್ಯಾದ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಪರಸ್ಪರ ಸಂಭಾಷಣೆ ನಡೆಸುತ್ತ ಮುಂದೆ ಸಾಗುತ್ತಿರುವಾಗ ಬದಿಯಲ್ಲಿ ನಿಂತಿದ್ದ ಶೆಹಬಾಜ್ ಶರೀಫ್ ಒಂದೇ ಕಣ್ಣಲ್ಲಿ ನೋಡುತ್ತಿರುವ ದೃಶ್ಯವೂ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿವೆ.
ಈ ಹಿಂದೆ ಪಹಲ್ಗಾಮ್ ದಾಳಿಯ ಬೆನ್ನಲ್ಲೇ ಪಾಕಿಸ್ತಾನ ವಿರುದ್ಧ ಭಾರತ 'ಆಪರೇಷನ್ ಸಿಂಧೂರ' ಹೆಸರಿನ ಮಿಲಿಟರಿ ಕಾರ್ಯಾಚರಣೆ ನಡೆಸಿತ್ತು.
ಅಲ್ಲದೆ ಪಾಕ್‌ನೊಂದಿಗಿನ ರಾಜತಾಂತ್ರಿಕ ಬಾಂಧವ್ಯವನ್ನು ಸಂಪೂರ್ಣವಾಗಿ ಕಡಿದುಕೊಂಡಿತ್ತು. ಪಹಲ್ಗಾಮ್ ಉಗ್ರ ದಾಳಿಯನ್ನುಲಷ್ಕರ್ ಇ ತೊಯ್ಬಾ ಸಂಘಟನೆಯ ರೆಸಿಸ್ಟೆನ್ಸ್ ಫೋರ್ಸ್ ನಡೆಸಿತ್ತು ಎಂದು ಹೇಳಲಾಗಿದೆ.
Advertisement