Operation Sindoor ವೇಳೆ ಮೂರನೇ ದೇಶದ ಮಧ್ಯಸ್ಥಿಕೆ ಇರಲಿಲ್ಲ: ಟ್ರಂಪ್ ಮುಖವಾಡ ಬಯಲು ಮಾಡಿದ ಪಾಕ್ ಸಚಿವ

ಪಹಲ್ಗಾಮ್ ದಾಳಿ ಮತ್ತು ಆಪರೇಷನ್ ಸಿಂದೂರ್ ಸಂಘರ್ಷದ ಹಲವು ತಿಂಗಳುಗಳ ನಂತರ, ಪಾಕಿಸ್ತಾನದ ವಿದೇಶಾಂಗ ಸಚಿವ ಇಶಾಕ್ ದಾರ್ ಅವರ ಪ್ರತಿಕ್ರಿಯೆ ಮುನ್ನೆಲೆಗೆ ಬಂದಿದೆ.
Donald Trump-Ishaq Dar
ಡೊನಾಲ್ಡ್ ಟ್ರಂಪ್-ಇಶಾಕ್ ದಾರ್
Updated on

ಪಹಲ್ಗಾಮ್ ದಾಳಿ ಮತ್ತು ಆಪರೇಷನ್ ಸಿಂದೂರ್ ಸಂಘರ್ಷದ ಹಲವು ತಿಂಗಳುಗಳ ನಂತರ, ಪಾಕಿಸ್ತಾನದ ವಿದೇಶಾಂಗ ಸಚಿವ ಇಶಾಕ್ ದಾರ್ ಅವರ ಪ್ರತಿಕ್ರಿಯೆ ಮುನ್ನೆಲೆಗೆ ಬಂದಿದೆ. ನಾವು ಭಾರತದೊಂದಿಗೆ ಮಾತನಾಡಲು ಬಯಸುತ್ತೇವೆ ಎಂದು ಪಾಕ್ ವಿದೇಶಾಂಗ ಸಚಿವರು ಹೇಳಿದ್ದು ಆದರೆ ಭಾರತದ ಕಡೆಯಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎಂದರು.

ಪಾಕಿಸ್ತಾನದ ವಿದೇಶಾಂಗ ಸಚಿವ ಇಶಾಕ್ ದಾರ್ ಕಾರ್ಯಕ್ರಮದ ಸಂದರ್ಭದಲ್ಲಿ ಇದನ್ನು ಸಾರ್ವಜನಿಕವಾಗಿ ಒಪ್ಪಿಕೊಂಡಿದ್ದಾರೆ. ಭಾರತ ಯಾವುದೇ ಮೂರನೇ ವ್ಯಕ್ತಿಯ ಮಧ್ಯಸ್ಥಿಕೆಗೆ ಎಂದಿಗೂ ಒಪ್ಪಿಕೊಂಡಿಲ್ಲ ಎಂದು ಅವರು ಹೇಳಿದರು. ಭಾರತದೊಂದಿಗೆ ಮೂರನೇ ವ್ಯಕ್ತಿಯ ಮಧ್ಯಸ್ಥಿಕೆ ಬಗ್ಗೆ ಪಾಕಿಸ್ತಾನ ಅಮೆರಿಕದ ವಿದೇಶಾಂಗ ಸಚಿವ ಮಾರ್ಕೊ ರುಬಿಯೊ ಅವರನ್ನು ಕೇಳಿದ್ದಕ್ಕೆ ಅವರು ಭಾರತ ಅದನ್ನು ನಿರಾಕರಿಸಿದೆ. ಪಾಕಿಸ್ತಾನದೊಂದಿಗಿನ ಎಲ್ಲಾ ವಿಷಯಗಳು 'ಕಟ್ಟುನಿಟ್ಟಾಗಿ ದ್ವಿಪಕ್ಷೀಯ' ಎಂಬುದು ನವದೆಹಲಿಯ ಸ್ಥಿರ ನಿಲುವು ಎಂದು ಅಮೆರಿಕದ ರಾಜತಾಂತ್ರಿಕ ಸ್ಪಷ್ಟಪಡಿಸಿದ್ದರು ಎಂದು ದಾರ್ ಹೇಳಿದರು. ಇದು ಕಾಶ್ಮೀರದ ಬಗ್ಗೆ ಮಧ್ಯಸ್ಥಿಕೆ ವಹಿಸಲು ತಮ್ಮನ್ನು ಆಹ್ವಾನಿಸಲಾಗಿದೆ ಎಂಬ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಹೇಳಿಕೆಗೆ ವಿರುದ್ಧವಾಗಿದೆ.

ಭಾರತದೊಂದಿಗೆ ಮಾತುಕತೆಗೆ ನಾವು ಸಿದ್ಧರಿದ್ದೇವೆ ಎಂದು ಪಾಕಿಸ್ತಾನದ ವಿದೇಶಾಂಗ ಸಚಿವರು ಮತ್ತಷ್ಟು ಹೇಳಿದರು. ಭಾರತ ಬಯಸಿದ ರೀತಿಯಲ್ಲಿ ಮಾತುಕತೆ ನಡೆಯಲಿದೆ. ಆದರೆ ನಾವು ಅದಕ್ಕಾಗಿ ಬೇಡಿಕೊಳ್ಳುವುದಿಲ್ಲ. ಯಾವುದೇ ದೇಶ ಮಾತನಾಡಲು ಬಯಸಿದರೆ, ನಾವು ಅದನ್ನು ಸ್ವಾಗತಿಸುತ್ತೇವೆ. ಏಕೆಂದರೆ ಮಾತುಕತೆಗಳು ಮಾತ್ರ ಪರಿಹಾರಗಳಿಗೆ ಕಾರಣವಾಗಬಹುದು. ಪಾಕಿಸ್ತಾನ ಶಾಂತಿ ಪ್ರಿಯ ದೇಶ ಎಂದು ಇಶಾಕ್ ದಾರ್ ಹೇಳಿಕೊಂಡಿದ್ದಾರೆ. ಭಾರತ ಮಾತನಾಡಲು ಬಯಸದಿದ್ದರೆ, ನಾವು ಅವರ ಮೇಲೆ ಒತ್ತಡ ಹೇರುವುದಿಲ್ಲ ಎಂದರು.

ಟ್ರಂಪ್ 30 ಕ್ಕೂ ಹೆಚ್ಚು ಬಾರಿ ಈ ಹೇಳಿಕೆ

ಮೇ 10ರಂದು ಭಾರತ ಮತ್ತು ಪಾಕಿಸ್ತಾನ ನಡುವೆ ಕದನ ವಿರಾಮದ ನಂತರ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಲವು ಬಾರಿ ಈ ಹೇಳಿಕೆ ನೀಡಿದ್ದಾರೆ. ವಾಸ್ತವವಾಗಿ, ಎರಡೂ ದೇಶಗಳ ನಡುವೆ ಕದನ ವಿರಾಮ ಜಾರಿಗೆ ತರಲಾಗಿದೆ ಎಂದು ಅವರು 30 ಕ್ಕೂ ಹೆಚ್ಚು ಬಾರಿ ಹೇಳಿಕೊಂಡಿದ್ದಾರೆ. ಭಾರತ ಮತ್ತು ಪಾಕಿಸ್ತಾನ ನಡುವಿನ ಉದ್ವಿಗ್ನತೆಯನ್ನು ಕೊನೆಗೊಳಿಸಲು ತಾನು ಸಹಾಯ ಮಾಡಿದ್ದೇನೆ ಎಂದು ಟ್ರಂಪ್ ಹಲವು ವೇದಿಕೆಗಳಿಂದ ಹೇಳಿದ್ದರು. ಎರಡೂ ದೇಶಗಳು ಸಂಘರ್ಷವನ್ನು ನಿಲ್ಲಿಸಿದರೆ, ಅಮೆರಿಕ ಅವರೊಂದಿಗೆ ವ್ಯಾಪಾರವನ್ನು ಹೆಚ್ಚಿಸುತ್ತದೆ ಎಂದು ಅವರು ಹೇಳಿದ್ದರು.

Donald Trump-Ishaq Dar
BJP ಅಧಿಕಾರದಲ್ಲಿರಲು ಧರ್ಮ ರಾಜಕಾರಣ ಮಾಡುತ್ತೆ, Rahul Gandhi ಒಳ್ಳೆಯ ವ್ಯಕ್ತಿ: Shahid Afridi

ಟ್ರಂಪ್ ಅವರ ಹೇಳಿಕೆಗಳನ್ನು ತಿರಸ್ಕರಿಸಿದ್ದ ಭಾರತ

ಟ್ರಂಪ್ ಅವರ ಕದನ ವಿರಾಮ ಹಕ್ಕುಗಳನ್ನು ಭಾರತ ನಿರಂತರವಾಗಿ ನಿರಾಕರಿಸುತ್ತಿದೆ. ಎರಡೂ ದೇಶಗಳ ಸೇನೆಗಳ ಮಹಾನಿರ್ದೇಶಕರ (ಡಿಜಿಎಂಒ) ನಡುವಿನ ನೇರ ಮಾತುಕತೆಯ ನಂತರ ಕದನ ವಿರಾಮ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದು ಭಾರತ ಹೇಳುತ್ತದೆ. ಈ ಸಂಪೂರ್ಣ ವಿಷಯದಲ್ಲಿ ಟ್ರಂಪ್‌ಗೆ ಯಾವುದೇ ಪಾತ್ರವಿಲ್ಲ. ಈಗ ಪಾಕಿಸ್ತಾನದ ವಿದೇಶಾಂಗ ಸಚಿವ ಇಶಾಕ್ ದಾರ್ ಕೂಡ ಟ್ರಂಪ್ ಅವರ ಹೇಳಿಕೆಗಳನ್ನು ಬಹಿರಂಗಪಡಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com