

ಕೇಪ್ ಟೌನ್: ದಕ್ಷಿಣ ಆಫ್ರಿಕಾದಲ್ಲಿರುವ ಇರಾನ್ ರಾಯಭಾರ ಕಚೇರಿಯು ಯುದ್ಧ ಪ್ರಾರಂಭವಾದಾಗಿನಿಂದಲೂ ತನ್ನ ಸಾಮಾಜಿಕ ಮಾಧ್ಯಮ ಖಾತೆಗಳಲ್ಲಿ ಮೀಮ್ (Meme)ಶೈಲಿಯ ಪೋಸ್ಟ್‌ಗಳನ್ನು ಹಂಚಿಕೊಳ್ಳುತ್ತಾ ಅಮೆರಿಕವನ್ನು ಲೇವಡಿ ಮಾಡುತ್ತಾ ಬಂದಿದೆ.
ಈ ಪೋಸ್ಟ್ ಗಳು ವೈರಲ್ ಆಗುತ್ತಿವೆ. ಅಮೆರಿಕ ಮತ್ತು ಹಾರ್ಮುಜ್ ಜಲಸಂಧಿಯ ಉದ್ವಿಗ್ನತೆಯ ಹಿನ್ನೆಲೆಯಲ್ಲಿ ವ್ಯಂಗ್ಯ ಮತ್ತು ಲಘು ಹಾಸ್ಯವನ್ನು ಬಳಸಿ ಪೋಸ್ಟ್ ಮಾಡುತ್ತಿದೆ. ಇದು ರಾಜತಾಂತ್ರಿಕ ಸಂವಹನದಲ್ಲಿ ಹೊಸ ರೀತಿಯ ಶೈಲಿಯಾಗಿದೆ.
ಪರ್ಷಿಯನ್ ಗಲ್ಫ್ ಮತ್ತು ಅಮೆರಿಕದ ವಿರುದ್ಧದ ವ್ಯಂಗ್ಯಚಿತ್ರಗಳು, ಎಮೋಜಿಗಳು ಮತ್ತು ವೈರಲ್ ಮೀಮ್‌ಗಳನ್ನು ಬಳಸಲಾಗಿದೆ. ಹಾರ್ಮುಜ್ ಜಲಸಂಧಿಯ ಮೇಲೆ ನಿಯಂತ್ರಣ ಮತ್ತು ಇರಾನ್ ಪರವಾಗಿ ನಿಲ್ಲುವ ಸಂದೇಶಗಳನ್ನು ಈ ಪೋಸ್ಟ್‌ಗಳು ತಿಳಿಸುತ್ತವೆ.
ಇದೀಗ ಇದೇ ರೀತಿಯ ಮತ್ತೊಂದು ಪೋಸ್ಟ್ ಮಾಡಿದ್ದು, ಶಾರ್ಕ್ ಮೀನು ಜೊತೆಗೆ ಅಮೆರಿಕದ ಸೈನಿಕನಿರುವ ಫೋಟೋವೊಂದನ್ನು ಪೋಸ್ಟ್ ಮಾಡುವ ಮೂಲಕ ನಾವು ಅವರಿಗೆ ಆಹಾರವಾಗಲ್ಲ ಬಾ... (We did not feed them for a while. Come) ಎಂದು ಫೋಸ್ಟ್ ಮಾಡಿದೆ.
ಇದಕ್ಕೂ ಮುನ್ನಾ ಅಮೆರಿಕ ರಾಷ್ಟ್ರ ಧ್ವಜದ ಫೋಟೋ ಮುಂದೆ ನಾಯಿ ಬೊಗಳುವ ರೀತಿಯ ಫೋಟೋ ಹಾಗೂ ಇರಾನ್ ರಾಷ್ಟ್ರ ಧ್ವಜದ ಮುಂದೆ ಸಿಂಹದ ಫೋಟೋ ಪೋಸ್ಟ್ ಮಾಡುವ ಮೂಲಕ ಅಮೆರಿಕವನ್ನು ಲೇವಡಿ ಮಾಡಿತ್ತು. ಅಮೆರಿಕವನ್ನುದ್ದೇಶಿಸಿ ಡೊನಾಲ್ಡ್ ಟ್ರಂಪ್ ಭಾಷಣ ಮಾಡಿದ ಬೆನ್ನಲ್ಲೇ ದಕ್ಷಿಣ ಆಫ್ರಿಕಾದಲ್ಲಿರುವ ಇರಾನ್ ರಾಯಭಾರ ಕಚೇರಿ ಈ ರೀತಿಯ ಫೋಸ್ಟ್ ಗಳನ್ನು ಹಾಕಿದೆ.
ಇರಾನ್ ನ ಸೇತುವೆಗಳು, ವಿದ್ಯುತ್ ಸ್ಥಾವರಗಳು ಸೇರಿದಂತೆ ಅವದ ಮೂಲಸೌಕರ್ಯಗಳ ಮೇಲೆ ಸಂಭಾವ್ಯ ದಾಳಿ ಕುರಿತು ಡೊನಾಲ್ಡ್ ಟ್ರಂಪ್ ಇರಾನ್ ಗೆ ಎಚ್ಚರಿಕೆ ನೀಡಿದ್ದರು.
Advertisement