'ನಾವು ಪಾಕ್ ಅನ್ನು ನಂಬುವುದಿಲ್ಲ': ಅಮೆರಿಕ ಕೂಡ ಆ ದೇಶವನ್ನು ಕೇವಲ ಮಧ್ಯವರ್ತಿಯಾಗಿ ನೋಡುತ್ತದೆ: ಇಸ್ರೇಲ್ ರಾಯಭಾರಿ

ಲೆಬನಾನ್‌ನಲ್ಲಿ ಇಸ್ರೇಲ್ ದಾಳಿಗಳ ಕುರಿತು ಪಾಕಿಸ್ತಾನದ ಖಂಡನೆಗೆ ಪ್ರತಿಕ್ರಿಯಿಸಿದ ಅಜರ್, ದೇಶದ ರಕ್ಷಣೆಗೆ ಅಗತ್ಯವಿರುವದನ್ನು ಮಾಡುವುದನ್ನು ಟೆಲ್ ಅವಿವ್ ಮುಂದುವರಿಸುತ್ತದೆ ಎಂದು ಹೇಳಿದರು.
Israel Ambassador Reuven Azar
ಇಸ್ರೇಲ್ ರಾಯಭಾರಿ ರುವೆನ್ ಅಜರ್
Updated on

ಇಸ್ಲಾಮಾಬಾದ್‌ನಲ್ಲಿ ಅಮೆರಿಕ-ಇರಾನ್ ಶಾಂತಿ ಮಾತುಕತೆಗೂ ಮುನ್ನ, ಭಾರತದಲ್ಲಿನ ಇಸ್ರೇಲ್ ರಾಯಭಾರಿ ರುವೆನ್ ಅಜರ್, ಪಾಕಿಸ್ತಾನದ ಬಗ್ಗೆ ತೀವ್ರ ಸಂದೇಹ ವ್ಯಕ್ತಪಡಿಸಿದರು. ಇಸ್ರೇಲ್ ಆ ದೇಶವನ್ನು ನಂಬುವುದಿಲ್ಲ ಮತ್ತು ಅಮೆರಿಕ ಕೂಡ ಇದೇ ದೃಷ್ಟಿಕೋನವನ್ನು ಹೊಂದಿದೆ. ಈ ಪ್ರಕ್ರಿಯೆಯಲ್ಲಿ ಪಾಕಿಸ್ತಾನದ ಪಾತ್ರವನ್ನು ಕೇವಲ ಸಾಗಣೆ ಸೌಲಭ್ಯವಾಗಿ ಪರಿಗಣಿಸಲಾಗಿದೆ ಎಂದು ಹೇಳಿದರು.

NDTV ಜೊತೆ ಮಾತನಾಡಿದ ಅಜರ್, 'ನಾವು ಪಾಕಿಸ್ತಾನಿಗಳನ್ನು ನಂಬುವುದಿಲ್ಲ ಮತ್ತು ಅಮೆರಿಕನ್ನರು ಅವರನ್ನು ನಂಬುವ ಮಟ್ಟಕ್ಕೆ ನೀವು ಅತಿಯಾದ ಉತ್ಸಾಹವನ್ನು ತೋರಿಸಬಾರದು ಎಂದು ನಾನು ಭಾವಿಸುತ್ತೇನೆ. ಇದು ಸಹಾಯಕ ಪಾತ್ರ ಅಷ್ಟೇ, ಅದಕ್ಕಿಂತ ಹೆಚ್ಚೇನೂ ಅಲ್ಲ' ಎಂದಿದ್ದಾರೆ.

ಅಮೆರಿಕ ಮತ್ತು ಇರಾನ್ ನಡುವಿನ ಮಾತುಕತೆಯಲ್ಲಿ ಪಾಕಿಸ್ತಾನದ ಮಧ್ಯಸ್ಥಿಕೆ ಕುರಿತು ಅವರು, 'ಪರಿಸ್ಥಿತಿಯನ್ನು ನಿಭಾಯಿಸಲು ಇಸ್ರೇಲ್ ಪಾಕಿಸ್ತಾನವನ್ನಲ್ಲ, ಅಮೆರಿಕವನ್ನೇ ಅವಲಂಬಿಸಿದೆ. ಈ 2 ವಾರಗಳ ವಿರಾಮದ ಸಮಯದಲ್ಲಿ ಅಮೆರಿಕ ಏನು ಮಾಡುತ್ತದೆ ಎಂಬುದು ಮುಖ್ಯ - ವಿಷಯಗಳನ್ನು ನಿಭಾಯಿಸಲು ಮತ್ತು ಪರಿಸ್ಥಿತಿಯನ್ನು ಸ್ಥಿರಗೊಳಿಸಲು ನಾವು ಅವರನ್ನು ಅವಲಂಬಿಸಿದ್ದೇವೆ' ಎಂದು ಹೇಳಿದರು.

ಲೆಬನಾನ್‌ನಲ್ಲಿ ಇಸ್ರೇಲ್ ದಾಳಿಗಳ ಕುರಿತು ಪಾಕಿಸ್ತಾನದ ಖಂಡನೆಗೆ ಪ್ರತಿಕ್ರಿಯಿಸಿದ ಅಜರ್, ದೇಶದ ರಕ್ಷಣೆಗೆ ಅಗತ್ಯವಿರುವದನ್ನು ಮಾಡುವುದನ್ನು ಟೆಲ್ ಅವಿವ್ ಮುಂದುವರಿಸುತ್ತದೆ ಎಂದು ಹೇಳಿದರು.

Israel Ambassador Reuven Azar
ಅಮೆರಿಕ-ಇರಾನ್ ಕದನ ವಿರಾಮ; ವಿಶ್ವಶಾಂತಿಗೆ ಪಾಕಿಸ್ತಾನದಿಂದ ಕೊಡುಗೆ ಎಂದ ಶಾಹೀನ್ ಅಫ್ರಿದಿ ವಿರುದ್ಧ ಟೀಕೆ

ಎನ್‌ಡಿಟಿವಿಗೆ ನೀಡಿದ ಹಿಂದಿನ ಸಂದರ್ಶನದಲ್ಲಿ, ಗಾಜಾದಲ್ಲಿ ಪಾಕಿಸ್ತಾನಿ ಸೇನೆಯು ಅಂತರರಾಷ್ಟ್ರೀಯ ಸ್ಥಿರೀಕರಣ ಪಡೆಯಾಗಿ ಕಾರ್ಯನಿರ್ವಹಿಸುವುದನ್ನು ಇಸ್ರೇಲ್ ಒಪ್ಪುವುದಿಲ್ಲ. ಹಮಾಸ್ ಮತ್ತು ಲಷ್ಕರ್-ಎ-ತೈಬಾ ಸೇರಿದಂತೆ ಪಾಕಿಸ್ತಾನ ಮೂಲದ ಭಯೋತ್ಪಾದಕ ಗುಂಪುಗಳ ನಡುವೆ ಬೆಳೆಯುತ್ತಿರುವ ಸಂಪರ್ಕಗಳ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದ್ದರು.

ಅಮೆರಿಕ ಮತ್ತು ಇರಾನ್ ನಡುವೆ ಶುಕ್ರವಾರ ಪಾಕಿಸ್ತಾನವು ಮಾತುಕತೆಗಳನ್ನು ಆಯೋಜಿಸಲಿದ್ದು, ಎರಡೂ ಕಡೆಯವರು ದುರ್ಬಲವಾದ ಕದನ ವಿರಾಮವನ್ನು ಬಲಪಡಿಸಲು ಮತ್ತು ಮಧ್ಯಪ್ರಾಚ್ಯದಾದ್ಯಂತ ಮತ್ತಷ್ಟು ಉಲ್ಬಣಗೊಳ್ಳುವುದನ್ನು ತಡೆಯಲು ಪ್ರಯತ್ನಿಸುತ್ತಿದ್ದಾರೆ. ವಾಷಿಂಗ್ಟನ್ ಮತ್ತು ಟೆಹ್ರಾನ್ ಬುಧವಾರ ಎರಡು ವಾರಗಳ ಷರತ್ತುಬದ್ಧ ಕದನ ವಿರಾಮ ಒಪ್ಪಂದಕ್ಕೆ ಬಂದವು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com