

ವಾಷಿಂಗ್ಟನ್: ಪಾಕಿಸ್ತಾನದ ಇಸ್ಲಾಮಾಬಾದ್‌ನಲ್ಲಿ ಇರಾನ್ ಮತ್ತು ಅಮೆರಿಕ ನಡುವೆ ನಡೆದ ಶಾಂತಿ ಮಾತುಕತೆಯಲ್ಲಿ ಟೆಹ್ರಾನ್‌ನ ಪರಮಾಣು ಶಸ್ತ್ರಾಸ್ತ್ರದ ಚಟುವಟಿಕೆಗಳ ಕುರಿತಾದ ಭಿನ್ನಾಭಿಪ್ರಾಯವೇ ಕೇಂದ್ರೀಯ ಅಂಶವಾಗಿತ್ತು. ವಾಷಿಂಗ್ಟನ್ ತನ್ನ ಪ್ರಸ್ತಾವನೆಯಲ್ಲಿ ಇರಾನ್‌ನ ಯುರೇನಿಯಂ ಪುಷ್ಟೀಕರಣವನ್ನು 20 ವರ್ಷಗಳ ಕಾಲ ಸ್ಥಗಿತಗೊಳಿಸುವ ಪ್ರಸ್ತಾಪವನ್ನು ಮುಂದಿಟ್ಟಿದೆ. ಆದರೆ, ಟೆಹ್ರಾನ್ ಐದು ವರ್ಷಗಳವರೆಗೆ ಸ್ಥಗಿತಗೊಳಿಸುವ ಒಪ್ಪಂದಕ್ಕೆ ಸಿದ್ಧವಿತ್ತು ಎಂದು ದಿ ನ್ಯೂಯಾರ್ಕ್ ಟೈಮ್ಸ್ ಮತ್ತು ವಾಲ್ ಸ್ಟ್ರೀಟ್ ಜರ್ನಲ್ ವರದಿ ಮಾಡಿದೆ.
ವರದಿಗಳ ಪ್ರಕಾರ, ಇಸ್ಲಾಮಾಬಾದ್ ಮಾತುಕತೆಯ ಸಮಯದಲ್ಲಿ ಅಮೆರಿಕ ಮತ್ತು ಇರಾನ್, ಟೆಹ್ರಾನ್‌ನ ಪರಮಾಣು ಚಟುವಟಿಕೆಗಳನ್ನು ಸ್ಥಗಿತಗೊಳಿಸುವ ಕುರಿತು ಪ್ರಸ್ತಾಪಗಳನ್ನು ವಿನಿಮಯ ಮಾಡಿಕೊಂಡವು. ಆದರೆ, ಉಭಯ ದೇಶಗಳು ಯಾವುದೇ ಒಪ್ಪಂದಕ್ಕೆ ಬರಲು ಸಾಧ್ಯವಾಗಲಿಲ್ಲ. ಟೆಹ್ರಾನ್ ಐದು ವರ್ಷಗಳವರೆಗೆ ಯುರೇನಿಯಂ ಪುಷ್ಟೀಕರಣವನ್ನು 20 ವರ್ಷಗಳ ಕಾಲ ಸ್ಥಗಿತಗೊಳಿಸುವ ಪ್ರಸ್ತಾಪವನ್ನು ಮುಂದಿಟ್ಟಿದೆ. ಟ್ರಂಪ್ ಆಡಳಿತದಿಂದ ಬಂದ ಈ ಪ್ರಸ್ತಾಪವನ್ನು ಇರಾನ್ ತಿರಸ್ಕರಿಸಿತು ಎಂದು ಇಬ್ಬರು ಹಿರಿಯ ಇರಾನಿನ ಅಧಿಕಾರಿಗಳು ಮತ್ತು ಒಬ್ಬ ಅಮೆರಿಕನ್ ಅಧಿಕಾರಿಯನ್ನು ಉಲ್ಲೇಖಿಸಿ NYT ವರದಿ ಮಾಡಿದೆ.
ಈ ಬೆಳವಣಿಗೆಯು, ಡೊನಾಲ್ಡ್ ಟ್ರಂಪ್ ಆಡಳಿತವು ತನ್ನ ನೀತಿಯಲ್ಲಿ ಬದಲಾವಣೆ ತಂದಿದೆ. ಇದಕ್ಕೂ ಮೊದಲು, ಪರಮಾಣು ಶಸ್ತ್ರಾಸ್ತ್ರಗಳ ತಯಾರಿಕೆಗೆ ಕಾರಣವಾಗಬಹುದಾದ ಯುರೇನಿಯಂ ಪುಷ್ಟೀಕರಿಸುವುದನ್ನು ಇರಾನ್ ಸಂಪೂರ್ಣವಾಗಿ ಮತ್ತು ಶಾಶ್ವತವಾಗಿ ನಿಲ್ಲಿಸಬೇಕೆಂದು ಅಮೆರಿಕ ಒತ್ತಾಯಿಸಿತ್ತು. ಈಗ, ಹೊಸ ಪ್ರಸ್ತಾವನೆಯು ತಾತ್ಕಾಲಿಕ ಸ್ಥಗಿತಕ್ಕೆ ಬೇಡಿಕೆ ಇಟ್ಟಿದೆ.
ರಾಜಕೀಯ ಶಾಸ್ತ್ರಜ್ಞ ಇಯಾನ್ ಬ್ರೆಮ್ಮರ್ ಪ್ರಕಾರ, ಭಿನ್ನಾಭಿಪ್ರಾಯದ ನಡುವೆ, ಯುರೇನಿಯಂ ಪುಷ್ಟೀಕರಣದ ಮೇಲೆ ಹನ್ನೆರಡೂವರೆ ವರ್ಷಗಳ ಸ್ಥಗಿತಗೊಳಿಸುವಿಕೆಯ ಮೂಲಕ ಅಮೆರಿಕ ಮತ್ತು ಇರಾನ್ ಒಪ್ಪಂದಕ್ಕೆ ಬರಬಹುದು ಎಂದಿದ್ದಾರೆ.
ಮಾತುಕತೆ ಇನ್ನೂ ಜೀವಂತ
ಯುಎಸ್ ಮತ್ತು ಇರಾನ್ ನಡುವಿನ ಸಂಘರ್ಷವನ್ನು ಪರಿಹರಿಸಲು ನಡೆದ ಈ ಸಭೆಯು ಬಹಳ ಮುಖ್ಯ ಮತ್ತು ಅಪರೂಪದ್ದಾಗಿತ್ತು. ಏಕೆಂದರೆ, ದಶಕಕ್ಕೂ ಹೆಚ್ಚು ಅವಧಿಯಲ್ಲಿ ಅಮೆರಿಕ ಮತ್ತು ಇರಾನ್ ನೇರವಾಗಿ (ಮುಖಾಮುಖಿ) ಮಾತನಾಡಿದ್ದು ಇದೇ ಮೊದಲು. ಇರಾನ್‌ನ 1979ರ ಇಸ್ಲಾಮಿಕ್ ಕ್ರಾಂತಿಯ ನಂತರ ಎರಡೂ ದೇಶಗಳ ನಡುವಿನ ಸಂಬಂಧಗಳು ಪ್ರತಿಕೂಲವಾದವು ಮತ್ತು ನೇರ ಮಾತುಕತೆಗಳು ಬಹುತೇಕ ನಿಂತುಹೋದವು.
ಆದಾಗ್ಯೂ, ಟೆಹ್ರಾನ್‌ನ ಪರಮಾಣು ಚಟುವಟಿಕೆಗಳ ಮೇಲಿನ ಬಿಕ್ಕಟ್ಟು ಇಸ್ಲಾಮಾಬಾದ್ ಮಾತುಕತೆಗಳನ್ನು ಯಾವುದೇ ಫಲಿತಾಂಶವಿಲ್ಲದೆಯೇ ಕೊನೆಗೊಳಿಸಿತು. ಆದರೆ, ಅಧಿಕಾರಿಗಳು ಮಾತುಕತೆ ಇನ್ನೂ ಜೀವಂತವಾಗಿದೆ ಮತ್ತು ಶಾಂತಿ ಒಪ್ಪಂದಕ್ಕೆ ದಾರಿ ಇರಬಹುದು ಎಂದಿದ್ದಾರೆ. ಯುಎಸ್ ಮಿಲಿಟರಿ ಸೋಮವಾರ ಇರಾನಿನ ಬಂದರುಗಳ ಮೇಲೆ ದಿಗ್ಬಂಧನವನ್ನು ಪ್ರಾರಂಭಿಸಿತು.
ಎರಡನೇ ಸುತ್ತಿನ ಮುಖಾಮುಖಿ ಮಾತುಕತೆಯ ಬಗ್ಗೆ ಚರ್ಚಿಸುತ್ತಿರುವುದಾಗಿ ಅಧಿಕಾರಿಗಳು WSJ ಗೆ ತಿಳಿಸಿದ್ದಾರೆ. ಆದರೆ ಯಾವುದೇ ವಿವರಗಳನ್ನು ನೀಡಲಿಲ್ಲ.
Advertisement