ಶಾಂತಿ ಮಾತುಕತೆ ಮುರಿದು ಬಿದ್ದರೂ ಮುಂದುವರೆದ ಪಾಕ್ ಪ್ರಯತ್ನ: ಇರಾನ್‌ಗೆ ತೆರಳಿದ ಮುನೀರ್ ನೇತೃತ್ವದ ನಿಯೋಗ!

"ಫೀಲ್ಡ್ ಮಾರ್ಷಲ್ ಅಸಿಮ್ ಮುನೀರ್ ಮತ್ತು ಆಂತರಿಕ ಸಚಿವ ಮೊಹ್ಸಿನ್ ನಖ್ವಿ, ನಿಯೋಗದೊಂದಿಗೆ ಟೆಹ್ರಾನ್‌ಗೆ ಆಗಮಿಸಿದ್ದಾರೆ" ಎಂದು ಪ್ರಕಟಣೆ ತಿಳಿಸಿದೆ.
Pakistan steps up US-Iran mediation as Asim Munir-led delegation reaches Tehran
ಪಾಕಿಸ್ತಾನಿ ಸೇನಾ ಮುಖ್ಯಸ್ಥ ಅಸಿಮ್ ಮುನೀರ್ ಅವರನ್ನು ಸ್ವಾಗತಿಸಿದ ಇರಾನ್ ವಿದೇಶಾಂಗ ಸಚಿವ ಅಬ್ಬಾಸ್ ಅರಗ್ಚಿ
Updated on

ಟೆಹ್ರಾನ್: ಪಾಕಿಸ್ತಾನ ಮಧ್ಯಸ್ಥಿಕೆಯಲ್ಲಿ ಇಸ್ಲಾಮಾಬಾದ್ ನಲ್ಲಿ ಅಮೆರಿಕ ಮತ್ತು ಇರಾನ್ ನಡುವೆ ನಡೆದ ಶಾಂತಿ ಮಾತುಕತೆ ಮುರಿದು ಬಿದ್ದಿದೆ. ಆದರೂ ಸಂಘರ್ಷ ಕೊನೆಗೊಳಿಸುವ ತನ್ವ ಪ್ರಯತ್ನ ಮುಂದುವರೆಸಿರುವ ಪಾಕಿಸ್ತಾನ, ಸೇನಾ ಮುಖ್ಯಸ್ಥ ಫೀಲ್ಡ್ ಮಾರ್ಷಲ್ ಅಸಿಮ್ ಮುನೀರ್ ನೇತೃತ್ವದ ನಿಯೋಗವು ಬುಧವಾರ ಟೆಹ್ರಾನ್ ತಲುಪಿದೆ.

ಮಿಲಿಟರಿಯ ಮಾಧ್ಯಮ ವಿಭಾಗವಾದ ಇಂಟರ್ ಸರ್ವೀಸಸ್ ಪಬ್ಲಿಕ್ ರಿಲೇಶನ್ಸ್ ಹೇಳಿಕೆಯ ಪ್ರಕಾರ, ಮುನೀರ್ ಅವರು ಆಂತರಿಕ ಸಚಿವ ಮೊಹ್ಸಿನ್ ನಖ್ವಿ ಅವರನ್ನು ಒಳಗೊಂಡ ನಿಯೋಗದ ಭಾಗವಾಗಿದ್ದಾರೆ ಎಂದು ತಿಳಿಸಿದೆ.

"ಫೀಲ್ಡ್ ಮಾರ್ಷಲ್ ಅಸಿಮ್ ಮುನೀರ್ ಮತ್ತು ಆಂತರಿಕ ಸಚಿವ ಮೊಹ್ಸಿನ್ ನಖ್ವಿ, ನಿಯೋಗದೊಂದಿಗೆ ಟೆಹ್ರಾನ್‌ಗೆ ಆಗಮಿಸಿದ್ದಾರೆ" ಎಂದು ಪ್ರಕಟಣೆ ತಿಳಿಸಿದೆ.

Pakistan steps up US-Iran mediation as Asim Munir-led delegation reaches Tehran
ಇರಾನ್-ಅಮೆರಿಕ ಸಂಘರ್ಷದಲ್ಲಿ ಮಧ್ಯಸ್ಥಿಕೆ; ಯುದ್ಧ ಮುಂದುವರಿದರೆ ಸೌದಿ ಅರೇಬಿಯಾದಿಂದ ಪಾಕಿಸ್ತಾನಕ್ಕೆ ಸಮಸ್ಯೆ!

ಪ್ರಧಾನಿ ಶೆಹಬಾಜ್ ಷರೀಫ್ ಅವರು ಬುಧವಾರ ಸೌದಿ ಅರೇಬಿಯಾ, ಕತಾರ್ ಮತ್ತು ಟರ್ಕಿಗೆ ಅಧಿಕೃತ ಭೇಟಿಗಳನ್ನು ಕೈಗೊಂಡ ಹಿನ್ನೆಲೆಯಲ್ಲಿ ಈ ಮಾತುಕತೆ ನಡೆಯುತ್ತಿದೆ.

ಪ್ರಧಾನಿ ಶೆಹಬಾಜ್ ಷರೀಫ್ ಅವರು ಸೌದಿ ಅರೇಬಿಯಾ ಮತ್ತು ಕತಾರ್‌ ಗೆ ಭೇಟಿ ನೀಡಿದ್ದು, ಅಲ್ಲಿ ಎರಡೂ ದೇಶಗಳ ನಾಯಕತ್ವವನ್ನು ಭೇಟಿ ಮಾಡಿ, ದ್ವಿಪಕ್ಷೀಯ ಸಹಕಾರ ಹಾಗೂ ಪ್ರಾದೇಶಿಕ ಶಾಂತಿ ಮತ್ತು ಭದ್ರತೆಯ ಕುರಿತು ಚರ್ಚಿಸಲಿದ್ದಾರೆ ಎಂದು ವಿದೇಶಾಂಗ ಕಚೇರಿ ತಿಳಿಸಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com