'ವಿಮಾನ ಬದಲಿಸಿದೆವು, ಬಸ್-ರೈಲು ಮೂಲಕ ಪ್ರಯಾಣಿಸಿದೆವು': ಅಮೆರಿಕ ಜೊತೆಗಿನ ಮಾತುಕತೆ ನಂತರ ಇರಾನ್ ನಿಯೋಗಕ್ಕೆ ಬೆದರಿಕೆ!

ಮಧ್ಯಪ್ರಾಚ್ಯದಲ್ಲಿ ಯುದ್ಧವನ್ನು ಕೊನೆಗೊಳಿಸಲು ಮಾತುಕತೆಗಳನ್ನು ಪುನರಾರಂಭಿಸಲು ಅಮೆರಿಕ ಮತ್ತು ಇರಾನ್‌ನ ನಿಯೋಗಗಳು ಈ ವಾರದ ಕೊನೆಯಲ್ಲಿ ಪಾಕಿಸ್ತಾನಕ್ಕೆ ಮರಳಬಹುದು.
Iran Delegation
ಇರಾನ್ ನಿಯೋಗPhoto | AFP
Updated on

ಟೆಹ್ರಾನ್: ಪಾಕಿಸ್ತಾನದ ಇಸ್ಲಾಮಾಬಾದ್‌ನಲ್ಲಿ ಅಮೆರಿಕ ಜೊತೆಗಿನ ಶಾಂತಿ ಮಾತುಕತೆ ವಿಫಲವಾದ ನಂತರ ಇರಾನ್ ನಿಯೋಗವು ಟೆಹ್ರಾನ್‌ಗೆ ಹೋಗುವ ಮಾರ್ಗದಲ್ಲಿ ತುರ್ತು ಭದ್ರತಾ ಬೆದರಿಕೆಗಳನ್ನು ಎದುರಿಸಿದೆ ಎಂದು ವರದಿಯಾಗಿದೆ.

ಇರಾನ್ ವಿದೇಶಾಂಗ ಸಚಿವ ಅಬ್ಬಾಸ್ ಅರಗ್ಛಿ ಮತ್ತು ಸಂಸದೀಯ ಸ್ಪೀಕರ್ ಮೊಹಮ್ಮದ್-ಬಾಘರ್ ಗಾಲಿಬಾಫ್ ಸೇರಿದಂತೆ ನಿಯೋಗವು ಬೆದರಿಕೆಯ ನಡುವೆ ತಮ್ಮ ವಿಮಾನವನ್ನು ಮಧ್ಯದಲ್ಲಿ ಬದಲಿಸಿ ಬಸ್ ಮತ್ತು ರೈಲಿನ ಮೂಲಕ ಟೆಹ್ರಾನ್ ತಲುಪಲು ಪರ್ಯಾಯ ಮಾರ್ಗವನ್ನು ತೆಗೆದುಕೊಂಡಿತು ಎಂದು ಇರಾನ್ ರಾಜಕೀಯ ವಿಶ್ಲೇಷಕ ಮೊಹಮ್ಮದ್ ಮರಂಡಿ ಲೆಬನಾನಿನ ಸುದ್ದಿವಾಹಿನಿ ಅಲ್-ಮಾಯದೀನ್‌ಗೆ ತಿಳಿಸಿದ್ದಾರೆ.

ಟೆಹ್ರಾನ್ ವಿಶ್ವವಿದ್ಯಾಲಯದ ಪ್ರಾಧ್ಯಾಪಕರಾದ ಮರಾಂಡಿ ಅವರು ಇರಾನಿನ ನಿಯೋಗದೊಂದಿಗೆ ಇಸ್ಲಾಮಾಬಾದ್‌ಗೆ ಬಂದಿದ್ದರು. ಪಾಕಿಸ್ತಾನದಲ್ಲಿ ಮಾತುಕತೆ ಮುಗಿಸಿ ಹಿಂದಿರುಗುವಾಗ ಇರಾನಿನ ನಿಯೋಗಕ್ಕೆ ಗಂಭೀರ ಬೆದರಿಕೆಯೊಡ್ಡಲಾಗಿದೆ ಎಂದು ಅವರು ಲೆಬನಾನಿನ ಸುದ್ದಿವಾಹಿನಿಗೆ ತಿಳಿಸಿದರು.

ಇಸ್ಲಾಮಾಬಾದ್‌ನಲ್ಲಿ ಅಮೆರಿಕದೊಂದಿಗೆ ಮಾತುಕತೆಗೆ ತೆರಳುತ್ತಿದ್ದಾಗ ಇರಾನಿನ ನಿಯೋಗವು ನೇರ ಭದ್ರತಾ ಬೆದರಿಕೆಗಳನ್ನು ಎದುರಿಸಿದೆ. 'ನಮ್ಮ ವಿಮಾನದ ಮೇಲೆ ದಾಳಿ ಮಾಡಬಹುದು' ಎಂದು ಇಸ್ಲಾಮಾಬಾದ್‌ಗೆ ಹೋಗುವ ಮಾರ್ಗದಲ್ಲಿ ನಮಗೆ ತಿಳಿಯಿತು. ಇದರ ಪರಿಣಾಮವಾಗಿ, ಟೆಹ್ರಾನ್‌ಗೆ ಹಿಂತಿರುಗುವಾಗ ನಿಯೋಗವು ರಹಸ್ಯವಾಗಿ ವಿಮಾನಗಳನ್ನು ಬದಲಿಸಿತು' ಎಂದು ಹೇಳಿದರು.

Iran Delegation
ಅಮೆರಿಕ-ಇರಾನ್ ನಡುವೆ ಗುರುವಾರ ಮತ್ತೊಂದು ಸುತ್ತಿನ ಮಾತುಕತೆ; 2 ಸಂಭಾವ್ಯ ಸ್ಥಳಗಳ ಪರಿಶೀಲನೆ: ವರದಿ

'ನಂತರ ಇರಾನ್ ನಿಯೋಗವಿದ್ದ ವಿಮಾನವು ಇದ್ದಕ್ಕಿದ್ದಂತೆ ಮಾರ್ಗ ಬದಲಿಸಿ, ಇರಾನಿನ ನಗರವಾದ ಮಶಾದ್‌ನಲ್ಲಿ ತುರ್ತು ಭೂಸ್ಪರ್ಶ ಮಾಡಿತು ಮತ್ತು ಅಲ್ಲಿಂದ ಸದಸ್ಯರು ರೈಲು, ಕಾರು ಮತ್ತು ಬಸ್ ಮೂಲಕ ಟೆಹ್ರಾನ್‌ಗೆ ತಮ್ಮ ಪ್ರಯಾಣವನ್ನು ಮುಂದುವರೆಸಿದರು' ಎಂದರು.

'ನಾವು ಯುನೈಟೆಡ್ ಸ್ಟೇಟ್ಸ್ ಅನ್ನು ನಂಬುವುದಿಲ್ಲ ಮತ್ತು ನಾವು ಮುಂದಿನ ಸುತ್ತಿನ ಯುದ್ಧಕ್ಕೆ ನಮ್ಮನ್ನು ಸಿದ್ಧಪಡಿಸಿಕೊಳ್ಳುವಲ್ಲಿ ತುಂಬಾ ಕಾರ್ಯನಿರತರಾಗಿದ್ದೇವೆ. ಯುನೈಟೆಡ್ ಸ್ಟೇಟ್ಸ್ ಮೋಸಗಾರ ಎಂಬುದು ಇರಾನ್‌ಗೆ ಯಾವಾಗಲೂ ತಿಳಿದಿತ್ತು. ನಾವು ಮಾತುಕತೆಯಲ್ಲಿ ತೊಡಗಿದ್ದಾಗ' ಆಡಳಿತವು ತನ್ನ ಮಿಲಿಟರಿ ಸಾಮರ್ಥ್ಯಗಳನ್ನು ಹೆಚ್ಚಿಸುತ್ತಿದೆ' ಎಂದು ಮರಾಂಡಿ ಮಂಗಳವಾರ ಅಲ್-ಮಾಯದೀನ್‌ಗೆ ತಿಳಿಸಿದರು.

ಅಮೆರಿಕ ಮತ್ತು ಇರಾನ್ ಮತ್ತೊಮ್ಮೆ ಇಸ್ಲಾಮಾಬಾದ್‌ಗೆ ಮರಳಬಹುದು

ಮೊದಲ ಶಾಂತಿ ಮಾತುಕತೆಗಳು ಯಾವುದೇ ಪ್ರಗತಿಯಿಲ್ಲದೆ ಕೊನೆಗೊಂಡ ಕೆಲವು ದಿನಗಳ ನಂತರ, ಮಧ್ಯಪ್ರಾಚ್ಯದಲ್ಲಿ ಯುದ್ಧವನ್ನು ಕೊನೆಗೊಳಿಸಲು ಮಾತುಕತೆಗಳನ್ನು ಪುನರಾರಂಭಿಸಲು ಅಮೆರಿಕ ಮತ್ತು ಇರಾನ್‌ನ ನಿಯೋಗಗಳು ಈ ವಾರದ ಕೊನೆಯಲ್ಲಿ ಪಾಕಿಸ್ತಾನಕ್ಕೆ ಮರಳಬಹುದು ಎಂದು ಪಾಕಿಸ್ತಾನ ಮತ್ತು ಇರಾನಿನ ಅಧಿಕಾರಿಗಳನ್ನು ಉಲ್ಲೇಖಿಸಿ ರಾಯಿಟರ್ಸ್ ವರದಿ ಮಾಡಿದೆ.

ಹೆಸರು ಬಹಿರಂಗಪಡಿಸಲು ಇಚ್ಛಿಸದ ಇರಾನ್ ಮತ್ತು ಪಾಕಿಸ್ತಾನಿ ಅಧಿಕಾರಿಗಳು ಹೇಳಿರುವ ಈ ಯೋಜನೆಗಳ ಬಗ್ಗೆ ಅಮೆರಿಕದ ಅಧಿಕಾರಿಗಳಿಂದ ತಕ್ಷಣದ ದೃಢೀಕರಣ ಬಂದಿಲ್ಲ.

ಮಾತುಕತೆಯಲ್ಲಿ ಭಾಗಿಯಾಗಿರುವ ಮೂಲವೊಂದು, ನಿಯೋಗಗಳು ಇಸ್ಲಾಮಾಬಾದ್‌ಗೆ ಹಿಂತಿರುಗಿ ಚರ್ಚೆಗಳನ್ನು ಪುನರಾರಂಭಿಸುವಂತೆ ವಾಷಿಂಗ್ಟನ್ ಮತ್ತು ಟೆಹ್ರಾನ್‌ಗೆ ಪ್ರಸ್ತಾವನೆಯನ್ನು ಕಳುಹಿಸಲಾಗಿದೆ. ದಿನಾಂಕವನ್ನು ಇನ್ನೂ ನಿರ್ಧರಿಸಲಾಗಿಲ್ಲ, ಆದರೆ ಎರಡೂ ದೇಶಗಳು ಈ ವಾರದ ಅಂತ್ಯದ ವೇಳೆಗೆ ಹಿಂತಿರುಗಬಹುದು ಎಂದು ಹೇಳಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com