'ಇರಾನ್ ತನ್ನ ಸಮೃದ್ಧ ಯುರೇನಿಯಂ ಸಂಗ್ರಹವನ್ನು ಹಸ್ತಾಂತರಿಸಲು ಒಪ್ಪಿಕೊಂಡಿದೆ; ಶಾಂತಿ ಒಪ್ಪಂದ ಹತ್ತಿರದಲ್ಲಿದೆ': Donald Trump

ನಿನ್ನೆ ಅಮೆರಿಕ ಶ್ವೇತಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಟ್ರಂಪ್, ಟೆಹ್ರಾನ್ ಜೊತೆ ನಡೆಯುತ್ತಿರುವ ಮಾತುಕತೆಗಳು ಉತ್ತಮವಾಗಿ ಮುಂದುವರಿಯುತ್ತಿವೆ. ತುಂಬಾ ಯಶಸ್ವಿಯಾಗಿವೆ ಎಂದರು. ಅವರು ‘ನ್ಯೂಕ್ಲಿಯರ್ ಡಸ್ಟ್’ ನ್ನು ನಮಗೆ ಹಿಂತಿರುಗಿಸಲು ಒಪ್ಪಿಕೊಂಡಿದ್ದಾರೆ ಎಂದು ಹೇಳಿದರು.
Donald Trump
ಡೊನಾಲ್ಡ್ ಟ್ರಂಪ್
Updated on

ಇರಾನ್ ತನ್ನ ಸಮೃದ್ಧ ಯುರೇನಿಯಂ ಸಂಗ್ರಹವನ್ನು ಹಸ್ತಾಂತರಿಸಲು ಒಪ್ಪಿಕೊಂಡಿದೆ ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿಕೊಂಡಿದ್ದು, ಆರು ವಾರಗಳ ಸಂಘರ್ಷದ ನಂತರ ಎರಡು ದೇಶಗಳು ಒಪ್ಪಂದದ ಸಮೀಪಕ್ಕೆ ಬಂದಿವೆ ಎಂದು ತಿಳಿಸಿದ್ದಾರೆ.

ನಿನ್ನೆ ಅಮೆರಿಕ ಶ್ವೇತಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಟ್ರಂಪ್, ಟೆಹ್ರಾನ್ ಜೊತೆ ನಡೆಯುತ್ತಿರುವ ಮಾತುಕತೆಗಳು ಉತ್ತಮವಾಗಿ ಮುಂದುವರಿಯುತ್ತಿವೆ. ತುಂಬಾ ಯಶಸ್ವಿಯಾಗಿವೆ ಎಂದರು. ಅವರು ‘ನ್ಯೂಕ್ಲಿಯರ್ ಡಸ್ಟ್’ ನ್ನು ನಮಗೆ ಹಿಂತಿರುಗಿಸಲು ಒಪ್ಪಿಕೊಂಡಿದ್ದಾರೆ ಎಂದು ಹೇಳಿದರು.

ಇದು ಸಮೃದ್ಧ ಯುರೇನಿಯಂ ಸಂಗ್ರಹವನ್ನು ಸೂಚಿಸಲು ಅವರು ಬಳಸಿದ ಪದವಾಗಿದೆ. ವಾಷಿಂಗ್ಟನ್ ಪ್ರಕಾರ, ಇದನ್ನು ಅಣ್ವಸ್ತ್ರ ನಿರ್ಮಾಣಕ್ಕೆ ಬಳಸಬಹುದು. ನಾವು ಒಪ್ಪಂದ ಮಾಡಿಕೊಳ್ಳುವ ಸಾಧ್ಯತೆ ಬಹಳ ಹೆಚ್ಚಾಗಿದೆ ಎಂದರು.

ಈ ಘೋಷಣೆ, ಇಸ್ರೇಲ್ ಮತ್ತು ಲೆಬನಾನ್ 10 ದಿನಗಳ ಯುದ್ಧ ವಿರಾಮಕ್ಕೆ ಒಪ್ಪಿಕೊಂಡಿವೆ ಎಂಬ ಟ್ರಂಪ್ ಹೇಳಿಕೆಯ ನಂತರ ಬಂದಿದೆ. ಇದು ಇರಾನ್, ಅಮೆರಿಕಾ ಮತ್ತು ಇಸ್ರೇಲ್ ನಡುವೆ ನಡೆಯುತ್ತಿರುವ ಯುದ್ಧ ವಿರಾಮವನ್ನು ವಿಸ್ತರಿಸಲು ಸಹಕಾರಿಯಾಗಬಹುದು.

ಮುಂದಿನ ಅಮೆರಿಕಾ-ಇರಾನ್ ಮಾತುಕತೆಗಳು ಈ ವಾರಾಂತ್ಯದಲ್ಲೇ ನಡೆಯಬಹುದು ಎಂದು ಟ್ರಂಪ್ ಹೇಳಿದರು. ಜೊತೆಗೆ, ಮಾತುಕತೆಯಲ್ಲಿ ಇರಾನ್ ಹೆಚ್ಚು ಆಸಕ್ತಿಯನ್ನು ತೋರಿಸಿದೆ ಎಂದು ಸೂಚಿಸಿ, ಪ್ರಸ್ತುತ ಯುದ್ಧ ವಿರಾಮವನ್ನು ವಿಸ್ತರಿಸುವ ಅಗತ್ಯವಿದೆಯೇ ಎಂಬುದರ ಬಗ್ಗೆ ತಾನು ಖಚಿತವಾಗಿಲ್ಲ ಎಂದು ಹೇಳಿದರು.

Donald Trump
'ನನ್ನ ಸ್ನೇಹಿತ ಮೋದಿ ಜೊತೆಗೆ ಉತ್ತಮ ಮಾತುಕತೆ ನಡೆಸಿದೆ': ಡೊನಾಲ್ಡ್ ಟ್ರಂಪ್; Video

ಈಗ ಇರಾನ್ ಜೊತೆ ನಮಗೆ ತುಂಬಾ ಉತ್ತಮ ಸಂಬಂಧವಿದೆ, ಇದು ಸುಮಾರು ನಾಲ್ಕು ವಾರಗಳ ಬಾಂಬ್ ದಾಳಿ ಮತ್ತು ಬಲವಾದ ನಿರ್ಬಂಧಗಳ ಸಂಯೋಜನೆಯ ಫಲಿತಾಂಶ ಎಂದು ನಾನು ಭಾವಿಸುತ್ತೇನೆ ಎಂದರು.

ಒಪ್ಪಂದದಲ್ಲಿ ಏನಿದೆ?

ಪ್ರಸ್ತಾವಿತ ಒಪ್ಪಂದದಲ್ಲಿ ಇರಾನ್ ತನ್ನ ಅಣ್ವಸ್ತ್ರ ಮಹತ್ವಾಕಾಂಕ್ಷೆಗಳನ್ನು ತ್ಯಜಿಸುವುದು, ಅಣು ಸಾಮಗ್ರಿಯನ್ನು ಹಸ್ತಾಂತರಿಸುವುದು, ಮುಕ್ತ ತೈಲವನ್ನು ಖಚಿತಪಡಿಸುವುದು ಮತ್ತು ಹಾರ್ಮುಜ್ ಕಣಿವೆಯನ್ನು ಪುನಃ ತೆರೆಯುವುದು ಸೇರಿದೆ.

Donald Trump
‘ಇದು ಒಂಟೆ ಕನಸಿನಂತಿದೆ’..: ಟ್ರಂಪ್ ಶಾಂತಿ ಒಪ್ಪಂದ ಹೇಳಿಕೆಗೆ ಇರಾನ್ ವ್ಯಂಗ್ಯ

ಇರಾನ್‌ನ ಅಣು ಕಾರ್ಯಕ್ರಮವು ಮಾತುಕತೆಯ ಪ್ರಮುಖ ಅಡ್ಡಿಯಾಗಿದೆ. ಅಮೆರಿಕಾ, ಇರಾನ್‌ನ ಅಣು ಚಟುವಟಿಕೆಯನ್ನು 20 ವರ್ಷಗಳ ಕಾಲ ಸ್ಥಗಿತಗೊಳಿಸುವಂತೆ ಪ್ರಸ್ತಾಪಿಸಿದೆ. ಆದರೆ ಟೆಹ್ರಾನ್ 3 ರಿಂದ 5 ವರ್ಷಗಳ ಕಡಿಮೆ ಅವಧಿಯ ವಿರಾಮವನ್ನು ಬಯಸುತ್ತಿದೆ ಎನ್ನಲಾಗಿದೆ.

ಅಮೆರಿಕ, ಹೆಚ್ಚಿನ ಮಟ್ಟದ ಸಮೃದ್ಧ ಯುರೇನಿಯಂ ನ್ನು ಇರಾನ್‌ನಿಂದ ಹೊರತೆಗೆದುಕೊಳ್ಳುವಂತೆ ಒತ್ತಾಯಿಸಿದೆ. ಅದೇ ವೇಳೆ, ಇರಾನ್ ಅಂತಾರಾಷ್ಟ್ರೀಯ ನಿರ್ಬಂಧಗಳನ್ನು ತೆಗೆದುಹಾಕುವಂತೆ ಬೇಡಿಕೆ ಇಟ್ಟಿದೆ. ಎರಡು ಇರಾನ್ ಮೂಲಗಳು, ತಮ್ಮ ಯುರೇನಿಯಂ ಸಂಗ್ರಹದ ಕೆಲವು ಭಾಗವನ್ನು ದೇಶದ ಹೊರಗೆ ಕಳುಹಿಸುವ ಬಗ್ಗೆ ಯೋಚಿಸುತ್ತಿರುವುದಾಗಿ ಸೂಚಿಸಿವೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com