ಅಮೆರಿಕಾ ನೌಕಾ ದಿಗ್ಬಂಧನ ಮುಂದುವರೆಸಿದರೆ ಹಾರ್ಮುಜ್ ಜಲಸಂಧಿ ಬಂದ್: ಇರಾನ್ ಎಚ್ಚರಿಕೆ, ಇಂಧನ ಮಾರುಕಟ್ಟೆ ಮತ್ತೆ ಅಸ್ಥಿರ..!

ಇರಾನ್ ಸಂಸತ್ ಸ್ಪೀಕರ್ ಮೊಹಮ್ಮದ್ ಬಘರ್ ಘಾಲಿಬಾಫ್ ಅವರು ಮಾತನಾಡಿ, ಅಮೆರಿಕಾ ನೌಕಾಪಡೆಯು ಇರಾನ್ ಬಂದರುಗಳಿಗೆ ಹೋಗುವ ಹಡಗುಗಳನ್ನು ತಡೆಯುವ ಕ್ರಮ ಕೈಗೊಂಡರೆ, ಸ್ಟ್ರೇಟ್ ಆಫ್ ಹೋರ್ಮುಜ್ ತೆರೆಯಲಾಗುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ.
oil tankers and cargo ships are seen lining up
ಹಾರ್ಮುಜ್ ಜಲಸಂಧಿಯಲ್ಲಿ ಕ್ಯೂನಲ್ಲಿ ನಿಂತಿರುವ ಹಡಗುಗಳು
Updated on

ವಾಷಿಂಗ್ಟನ್: ಇರಾನ್ ಮತ್ತು ಅಮೆರಿಕಾ ನಡುವಿನ ಉದ್ವಿಗ್ನತೆ ದಿನೇದಿನೇ ಗಂಭೀರವಾಗುತ್ತಿದ್ದು, ಅಮೆರಿಕಾ ನೌಕಾ (ಬ್ಲಾಕೇಡ್) ದಿಗ್ಬಂಧನ ಮುಂದುವರಿಸಿದರೆ ಜಾಗತಿಕವಾಗಿ ಅತ್ಯಂತ ಪ್ರಮುಖ ಸಾಗರ ಮಾರ್ಗವಾದ ಸ್ಟ್ರೇಟ್ ಆಫ್ ಹೋರ್ಮುಜ್ ಅನ್ನು ಮತ್ತೆ ಬಂದ್ ಮಾಡುವುದಾಗಿ ಇರಾನ್ ಎಚ್ಚರಿಕೆನೀಡಿದೆ.

ಲೆಬನಾನ್‌ನಲ್ಲಿ ನಡೆದ ಕದನ ವಿರಾಮ ಒಪ್ಪಂದದ ಬಳಿಕ ಈ ಮಾರ್ಗವನ್ನು ಪುನಃ ತೆರೆಯಲಾಗಿದ್ದರೂ, ಹೊಸ ಬೆಳವಣಿಗೆಗಳು ಮತ್ತೆ ಆತಂಕದ ವಾತಾವರಣ ಸೃಷ್ಟಿಸಿವೆ.

ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇರಾನ್ ಜೊತೆ ಶಾಂತಿ ಒಪ್ಪಂದ ಬಹುತೇಕ ಅಂತಿಮ ಹಂತಕ್ಕೆ ತಲುಪಿದೆ ಎಂದು ವಿಶ್ವಾಸ ವ್ಯಕ್ತಪಡಿಸಿ, ಇರಾನ್ ತನ್ನ ಸಮೃದ್ಧ ಯುರೇನಿಯಂ ಸಂಗ್ರಹವನ್ನು ಒಪ್ಪಿಸಲು ಸಮ್ಮತಿಸಿದೆ ಎಂದು ಹೇಳಿದ್ದಾರೆ. ಆದರೆ, ಇದನ್ನು ತಕ್ಷಣವೇ ತಳ್ಳಿಹಾಕಿದ ಇರಾನ್, ಪರಮಾಣು ಶಸ್ತಾಸ್ತ್ರ ಕುರಿತ ಆಗ್ರಹದಲ್ಲಿ ಯಾವುದೇ ಸಡಿಲಿಕೆ ಇಲ್ಲ ಎಂದು ಸ್ಪಷ್ಟಪಡಿಸಿದೆ. ಈ ವಿಚಾರವೇ ಇದೀಗ ಎರಡು ದೇಶಗಳ ನಡುವೆ ಮತ್ತೆ ಉದ್ವಿಗ್ನತೆ ಹೆಚ್ಚಾಗುವಂತೆ ಮಾಡಿದೆ.

ಇರಾನ್ ಸಂಸತ್ ಸ್ಪೀಕರ್ ಮೊಹಮ್ಮದ್ ಬಘರ್ ಘಾಲಿಬಾಫ್ ಅವರು ಮಾತನಾಡಿ, ಅಮೆರಿಕಾ ನೌಕಾಪಡೆಯು ಇರಾನ್ ಬಂದರುಗಳಿಗೆ ಹೋಗುವ ಹಡಗುಗಳನ್ನು ತಡೆಯುವ ಕ್ರಮ ಕೈಗೊಂಡರೆ, ಸ್ಟ್ರೇಟ್ ಆಫ್ ಹೋರ್ಮುಜ್ ತೆರೆಯಲಾಗುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ.

ಈ ಮಾರ್ಗ ತೆರೆಯುವುದು ಅಥವಾ ಮುಚ್ಚುವುದು ಸಾಮಾಜಿಕ ಜಾಲತಾಣಗಳಲ್ಲಿ ನಿರ್ಧಾರವಾಗುವುದಿಲ್ಲ, ನೆಲದ ಪರಿಸ್ಥಿತಿಯೇ ಅಂತಿಮ ನಿರ್ಧಾರ ಕೈಗೊಳ್ಳುತ್ತದೆ. ಅಗತ್ಯವಾದ ಪ್ರತಿಕ್ರಿಯೆ ನೀಡಲು ನಮ್ಮ ಸಶಸ್ತ್ರ ಪಡೆಗಳು ಸಿದ್ಧವಾಗಿವೆ,” ಎಂದು ತಿಳಿಸಿದ್ದಾರೆ.

ಇದೇ ವೇಳೆ ಇರಾನ್ ವಿದೇಶಾಂಗ ಇಲಾಖೆಯ ವಕ್ತಾರ ಎಸ್ಮಾಯಿಲ್ ಬಘಾಈ ಅಮೆರಿಕಾ ತಡೆ ಕ್ರಮವನ್ನು ಯುದ್ಧ ವಿರಾಮದ ಉಲ್ಲಂಘನೆ ಎಂದು ಕರೆದಿದ್ದು, ಅದಕ್ಕೆ ತಕ್ಕ ಪ್ರತಿಕ್ರಿಯೆ ನೀಡಲಾಗುತ್ತದೆ ಎಂದು ಎಚ್ಚರಿಸಿದ್ದಾರೆ.

oil tankers and cargo ships are seen lining up
1 ಗಂಟೆಯಲ್ಲಿ 7 ಸುಳ್ಳುಗಳು: ನಿಮ್ಮ ಆಟ ನಡೆಯಲ್ಲ; 'ಹಾರ್ಮುಜ್ ದಿಗ್ಬಂಧನ' ಕುರಿತು ಟ್ರಂಪ್ ಪೋಸ್ಟ್‌ಗೆ ಇರಾನ್‌ ತಿರುಗೇಟು!

ಸ್ಟ್ರೇಟ್ ಆಫ್ ಹಾರ್ಮುಜ್ ಜಾಗತಿಕ ಇಂಧನ ಸಾಗಣೆಯಲ್ಲಿ ಅತ್ಯಂತ ಮಹತ್ವದ್ದಾಗಿದ್ದು, ವಿಶ್ವದ ಒಟ್ಟು ತೈಲ ಮತ್ತು ದ್ರವೀಕೃತ ಪ್ರಕೃತಿ ಅನಿಲ (LNG) ಸಾಗಣೆಯ ಸುಮಾರು ಶೇ.20ರಷ್ಟು ಈ ಮಾರ್ಗದ ಮೂಲಕವೇ ಸಾಗುತ್ತದೆ.

ಈ ಮಾರ್ಗದಲ್ಲಿ ಯಾವುದೇ ವ್ಯತ್ಯಯ ಉಂಟಾದರೆ ಜಾಗತಿಕ ತೈಲ ಬೆಲೆಗಳು ಏರಿಕೆಯಾಗುವುದು ಮಾತ್ರವಲ್ಲದೆ, ಅನೇಕ ದೇಶಗಳ ಆರ್ಥಿಕತೆಯ ಮೇಲೂ ನೇರ ಪರಿಣಾಮ ಬೀರುತ್ತದೆ. ಇತ್ತೀಚಿನ ದಿನಗಳಲ್ಲಿ ಈ ಮಾರ್ಗವನ್ನು ಮುಚ್ಚುವ ಭೀತಿ ಮೂಡುತ್ತಿದ್ದಂತೆ ತೈಲ ಮಾರುಕಟ್ಟೆಗಳಲ್ಲಿ ಅಸ್ಥಿರತೆ ಕಂಡುಬಂದಿತ್ತು.

ಇದರ ನಡುವೆ ಲೆಬನಾನ್‌ನಲ್ಲಿ ಘೋಷಿಸಲಾದ ತಾತ್ಕಾಲಿಕ ಕದನ ವಿರಾಮದಿಂದ ಸ್ಥಳೀಯ ಜನರಿಗೆ ಸ್ವಲ್ಪ ಮಟ್ಟಿನ ನೆಮ್ಮದಿ ಸಿಕ್ಕಿದೆ. ಬಾಂಬ್ ದಾಳಿಗಳಿಂದ ಹಾನಿಗೊಳಗಾದ ದಕ್ಷಿಣ ಬೈರೂತ್ ಸೇರಿದಂತೆ ಹಲವೆಡೆ ಜನರು ತಮ್ಮ ಮನೆಗಳಿಗೆ ಮರಳಲು ಆರಂಭಿಸಿದ್ದಾರೆ. ಆದರೆ, ಇಸ್ರೇಲ್ ಮತ್ತು ಹಿಜ್ಬುಲ್ಲಾ ನಡುವಿನ ಸಂಘರ್ಷ ಇನ್ನೂ ಸಂಪೂರ್ಣವಾಗಿ ನಿಂತಿಲ್ಲ.

ಇಸ್ರೇಲ್ ಪ್ರಧಾನಮಂತ್ರಿ ಬೆಂಜಮಿನ್ ನೆತನ್ಯಾಹು “ಹಿಜ್ಬುಲ್ಲಾವನ್ನು ಸಂಪೂರ್ಣವಾಗಿ ನಿಷ್ಕ್ರಿಯಗೊಳಿಸುವುದು ನಮ್ಮ ಗುರಿ” ಎಂದು ಹೇಳಿದ್ದು, ಮುಂದಿನ ದಿನಗಳಲ್ಲಿ ಮತ್ತೆ ಸೇನಾ ಕ್ರಮಗಳು ಆರಂಭವಾಗುವ ಸಾಧ್ಯತೆಯನ್ನು ತಳ್ಳಿ ಹಾಕಿಲ್ಲ.

ಅಮೆರಿಕಾ ಮಧ್ಯಪ್ರವೇಶದಿಂದ ಇಸ್ರೇಲ್ ಮೇಲೆ ಕೆಲವು ಮಟ್ಟದ ನಿಯಂತ್ರಣ ತರಲಾಗಿದೆ ಎಂಬ ವರದಿಗಳಿದ್ದರೂ, ನೆಲಮಟ್ಟದಲ್ಲಿ ಉದ್ವಿಗ್ನತೆ ಇನ್ನೂ ಕಡಿಮೆಯಾಗಿಲ್ಲ.

ಲೆಬನಾನ್ ಅಧ್ಯಕ್ಷರು ತಮ್ಮ ದೇಶವನ್ನು ಹೊರಗಿನ ಸಂಘರ್ಷಗಳ ವೇದಿಕೆಯಾಗಲು ಬಿಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಇದೇ ವೇಳೆ ಹಿಜ್ಬುಲ್ಲಾ ಕೂಡ ಯಾವುದೇ ಉಲ್ಲಂಘನೆ ನಡೆದರೆ ತಕ್ಷಣ ಪ್ರತಿಕ್ರಿಯೆ ನೀಡುವುದಾಗಿ ಎಚ್ಚರಿಸಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com