ತೂಗುಯ್ಯಾಲೆಯಲ್ಲಿ ಇರಾನ್-ಅಮೆರಿಕ 2ನೇ ಸುತ್ತಿನ ಮಾತುಕತೆ: ಪಾಕಿಸ್ತಾನಕ್ಕೆ ಪ್ರಯಾಣ ಬೆಳೆಸುವ ಹಾದಿಯಲ್ಲಿ ವಾಷಿಂಗ್ಟನ್ ನಾಯಕರು

ಇರಾನ್ ಅಧ್ಯಕ್ಷ ಮಸೂದ್ ಪೆಝೆಶ್ಕಿಯನ್ ನಿನ್ನೆ ಸೋಮವಾರ ಹೇಳಿಕೆ ನೀಡಿ, ಒಪ್ಪಂದಗಳನ್ನು ಗೌರವಿಸುವುದೇ ಅರ್ಥಪೂರ್ಣ ಸಂವಾದದ ಆಧಾರವಾಗಿದೆ. ಆದರೆ ಅಮೆರಿಕನ್ ಅಧಿಕಾರಿಗಳಿಂದ ಬರುತ್ತಿರುವ ವಿರೋಧಾಭಾಸದ ಸಂದೇಶಗಳು ಕಹಿ ಸಂದೇಶವನ್ನು ಹೊತ್ತಿವೆ ಎಂದು ಹೇಳಿದ್ದಾರೆ.
Iran Supreme Leader Mojtaba Khamenei and US President Donald Trump
ಇರಾನ್‌ನ ಪರಮೋಚ್ಚ ನಾಯಕ ಮೊಜ್ತಬಾ ಖಾಮೆನೆಇ ಮತ್ತು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್
Updated on

ಇರಾನ್–ಇಸ್ರೇಲ್–ಅಮೆರಿಕಾ ಯುದ್ಧದಲ್ಲಿ ಎರಡು ವಾರಗಳ ಯುದ್ಧ ವಿರಾಮ ಅವಧಿ ಅಂತ್ಯಕ್ಕೆ ಸಮೀಪಿಸುತ್ತಿರುವ ಸಂದರ್ಭದಲ್ಲಿ, ಎರಡನೇ ಸುತ್ತಿನ ಮಾತುಕತೆಗಳು ಇನ್ನೂ ಅನಿಶ್ಚಿತತೆಯಲ್ಲಿ ಉಳಿದಿವೆ. ಅಮೆರಿಕ ಜೊತೆ ನಡೆಯಲಿರುವ ಹೊಸ ಶಾಂತಿ ಮಾತುಕತೆಗಳಲ್ಲಿ ಭಾಗವಹಿಸುವ ಬಗ್ಗೆ ಇನ್ನೂ ಯಾವುದೇ ನಿರ್ಧಾರ ಕೈಗೊಳ್ಳಲಾಗಿಲ್ಲ ಎಂದು ಇರಾನ್ ಹೇಳಿದೆ.

ಮುಂದಿನ ಸುತ್ತಿನ ಮಾತುಕತೆಗಾಗಿ ಯಾವುದೇ ಯೋಜನೆಗಳಿಲ್ಲ, ಈ ವಿಷಯದಲ್ಲಿ ಇನ್ನೂ ನಿರ್ಧಾರ ತೆಗೆದುಕೊಳ್ಳಲಾಗಿಲ್ಲ ಎಂದು ಇರಾನ್ ವಿದೇಶಾಂಗ ಸಚಿವಾಲಯದ ವಕ್ತಾರ ಇಸ್ಮಾಯಿಲ್ ಬಕಾಈ ಹೇಳಿದ್ದಾರೆ.

ಇರಾನ್ ಅಧ್ಯಕ್ಷ ಮಸೂದ್ ಪೆಝೆಶ್ಕಿಯನ್ ನಿನ್ನೆ ಸೋಮವಾರ ಹೇಳಿಕೆ ನೀಡಿ, ಒಪ್ಪಂದಗಳನ್ನು ಗೌರವಿಸುವುದೇ ಅರ್ಥಪೂರ್ಣ ಸಂವಾದದ ಆಧಾರವಾಗಿದೆ. ಆದರೆ ಅಮೆರಿಕನ್ ಅಧಿಕಾರಿಗಳಿಂದ ಬರುತ್ತಿರುವ ವಿರೋಧಾಭಾಸದ ಸಂದೇಶಗಳು ಕಹಿ ಸಂದೇಶವನ್ನು ಹೊತ್ತಿವೆ ಎಂದು ಹೇಳಿದ್ದಾರೆ.

Iran Supreme Leader Mojtaba Khamenei and US President Donald Trump
watch| ಇರಾನ್ ಸರಕು ಹಡಗಿನ ಮೇಲೆ ಅಮೆರಿಕ ದಾಳಿ; ಹಳ್ಳ ಹಿಡಿದ 2ನೇ ಸುತ್ತಿನ ಸಂಧಾನ ಮಾತುಕತೆ!

ಅಮೆರಿಕ ಸರ್ಕಾರದ ನಡೆಗೆ ಸಂಬಂಧಿಸಿದಂತೆ ಇರಾನ್‌ನಲ್ಲಿ ಹಿಂದಿನಿಂದಲೂ ಅನುಮಾನ ಇನ್ನೂ ಉಳಿದಿದೆ. ಅಮೆರಿಕ ಅಧಿಕಾರಿಗಳಿಂದ ಬರುತ್ತಿರುವ ವಿರೋಧಾಭಾಸದ ಸಂದೇಶಗಳು ಕಹಿ ಸಂದೇಶವನ್ನು ನೀಡುತ್ತಿವೆ; ಅವರು ಇರಾನ್ ಶರಣಾಗತಿಯಾಗಬೇಕು ಎಂದು ಬಯಸುತ್ತಾರೆ. ಆದರೆ ಇರಾನಿಯರು ಬಲಾತ್ಕಾರಕ್ಕೆ ತಲೆಬಾಗುವುದಿಲ್ಲ ಎಂದು ಅವರು X ನಲ್ಲಿ ಮಾಡಿದ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.

ಇದರ ನಡುವೆ, ರಾಯಿಟರ್ಸ್ ವರದಿ ಪ್ರಕಾರ ಅಮೆರಿಕ ಉಪಾಧ್ಯಕ್ಷ ಜೆ.ಡಿ. ವ್ಯಾನ್ಸ್ ಇನ್ನೂ ಪಾಕಿಸ್ತಾನಕ್ಕೆ ಪ್ರಯಾಣ ಆರಂಭಿಸಿಲ್ಲ. ಮೊದಲು ನ್ಯೂಯಾರ್ಕ್ ಪೋಸ್ಟ್ ವರದಿಯಲ್ಲಿ ವ್ಯಾನ್ಸ್, ವೈಟ್ ಹೌಸ್ ಪ್ರತಿನಿಧಿ ಸ್ಟೀವ್ ವಿಟ್‌ಕಾಫ್ ಮತ್ತು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಅಳಿಯ ಜಾರೆಡ್ ಕುಶ್ನರ್ ಮಾತುಕತೆಗೆ ತೆರಳುತ್ತಿದ್ದಾರೆ ಎಂದು ಹೇಳಲಾಗಿತ್ತು. ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮುಂದಿನ ದಿನಗಳಲ್ಲಿ ಯುದ್ಧ ವಿರಾಮ ಅವಧಿ ಮುಗಿಯುವ ಮೊದಲು ಹೆಚ್ಚುವರಿ ಮಾತುಕತೆಗಾಗಿ ಅಮೆರಿಕದ ಪ್ರತಿನಿಧಿ ಮಂಡಳಿಯನ್ನು ಪಾಕಿಸ್ತಾನಕ್ಕೆ ಕಳುಹಿಸುವುದಾಗಿ ಹೇಳಿದ್ದರು.

Iran Supreme Leader Mojtaba Khamenei and US President Donald Trump
ಹಾರ್ಮುಜ್ ಒಂದು "ಅಂತರರಾಷ್ಟ್ರೀಯ ಜಲಮಾರ್ಗ", ಅದನ್ನು ಓಪನ್ ಮಾಡಿ: ಚೀನಾ ಅಧ್ಯಕ್ಷ ಕ್ಸಿ ಸ್ಫೋಟಕ ಹೇಳಿಕೆ

ಸೋಮವಾರ ರಾಯಿಟರ್ಸ್‌ಗೆ ಮಾತನಾಡಿದ ಇರಾನ್ ನ ಹಿರಿಯ ಅಧಿಕಾರಿಯೊಬ್ಬರು, ಇರಾನ್ ಶಾಂತಿ ಮಾತುಕತೆಗಳಲ್ಲಿ ಭಾಗವಹಿಸುವ ವಿಚಾರವನ್ನು ಪರಿಗಣಿಸುತ್ತಿದೆ ಎಂದು ಹೇಳಿದ್ದಾರೆ. ಆದರೆ ಇನ್ನೂ ಅಂತಿಮ ನಿರ್ಧಾರವಾಗಿಲ್ಲ. ಅಮೆರಿಕದ ಪ್ರತಿನಿಧಿ ಮಂಡಳಿಯ ಇತರ ಸದಸ್ಯರು ಈಗಾಗಲೇ ಇಸ್ಲಾಮಾಬಾದ್‌ಗೆ ತೆರಳಿದಾರೆಯೋ ಅಥವಾ ತೆರಳುವ ಹಾದಿಯಲ್ಲಿದ್ದಾರೆಯೋ ಎಂಬುದು ಸ್ಪಷ್ಟವಾಗಿಲ್ಲ. ಇರಾನ್ ಮತ್ತು ಅಮೆರಿಕದ ನಡುವಿನ ಎರಡು ವಾರಗಳ ಯುದ್ಧ ವಿರಾಮ ನಾಳೆ ಬುಧವಾರ ಅಂತ್ಯಗೊಳ್ಳಲಿದೆ. ಅಮೆರಿಕದ ಪ್ರತಿನಿಧಿಗಳು ನಿನ್ನೆ ಇಸ್ಲಾಮಾಬಾದ್‌ಗೆ ತಲುಪುವ ನಿರೀಕ್ಷೆಯಿದ್ದರೆ, ಟೆಹ್ರಾನ್ ಇನ್ನೂ ಪಾಕಿಸ್ತಾನಕ್ಕೆ ತನ್ನ ಪ್ರತಿನಿಧಿ ಮಂಡಳಿಯನ್ನು ಕಳುಹಿಸುವುದೇ ಅಥವಾ ಇಲ್ಲವೇ ಎಂಬುದನ್ನು ಘೋಷಿಸಿಲ್ಲ.

ಇರಾನ್ ಸರ್ಕಾರದ ಟಿವಿ ವರದಿ ಉಲ್ಲೇಖಿಸಿದಂತೆ, ಹೆಸರು ಬಹಿರಂಗಪಡಿಸದ ಮೂಲವೊಂದು ಅಮೆರಿಕದ ಅತಿಯಾದ ಮತ್ತು ಅಸಂಗತ ಬೇಡಿಕೆಗಳು ಹಾಗೂ ಅದರ ಬದಲಾಗುತ್ತಿರುವ ನಿಲುವುಗಳ ಕಾರಣದಿಂದ ಎರಡನೇ ಸುತ್ತಿನ ಮಾತುಕತೆಗಳಿಗೆ ಯಾವುದೇ ಯೋಜನೆಗಳಿಲ್ಲ ಎಂದು ಹೇಳಿದೆ.

ಹಾರ್ಮುಜ್ ಸಮುದ್ರಸಂಧಿಯ ವಿಚಾರದಲ್ಲಿ ಎರಡೂ ದೇಶಗಳು ತೀವ್ರ ಭಿನ್ನಾಭಿಪ್ರಾಯದಲ್ಲಿವೆ. ಅಮೆರಿಕಾ ಇರಾನ್ ಬಂದರುಗಳನ್ನು ನಿರ್ಬಂಧಿಸುತ್ತಿರುವಾಗ, ಇರಾನ್ ಸಮುದ್ರ ಸಾರಿಗೆಯ ಮೇಲೆ ತನ್ನ ನಿಯಂತ್ರಣವನ್ನು ಬಿಗಿಗೊಳಿಸಿದೆ. ಭಾನುವಾರ ಅಮೆರಿಕಾ ತನ್ನ ನಿರ್ಬಂಧವನ್ನು ಮೀರಿ ಹೋಗಲು ಪ್ರಯತ್ನಿಸಿದ ಒಂದು ಹಡಗನ್ನು ವಶಪಡಿಸಿಕೊಂಡಿದೆ. ಇರಾನ್ ಮತ್ತು ಅಮೆರಿಕಾ ಎರಡೂ ಪರಸ್ಪರ ಯುದ್ಧ ವಿರಾಮ ಉಲ್ಲಂಘನೆ ಆರೋಪಗಳನ್ನು ಮಾಡಿವೆ.

Iran Supreme Leader Mojtaba Khamenei and US President Donald Trump
ಇರಾನ್ ಶಾಂತಿ ಒಪ್ಪಂದಕ್ಕೆ ಸಹಿ ಹಾಕುವವರೆಗೂ ದಿಗ್ಬಂಧನ ತೆರವುಗೊಳಿಸಲ್ಲ: ಡೊನಾಲ್ಡ್ ಟ್ರಂಪ್

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com