ತಾರಕಕ್ಕೇರಿದ ಉಕ್ರೇನ್ ಯುದ್ಧ; Zelensky ತವರೂರಿನ ಮೇಲೆ ರಷ್ಯಾ ಭೀಕರ ದಾಳಿ, ಕನಿಷ್ಟ 14 ಸಾವು!

ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಜೆಲೆನ್ಸ್ಕಿ ಅವರ ತವರು ನಗರ ಕ್ರಿವಿ ರಿಹ್‌ನಲ್ಲಿ ರಷ್ಯಾ ನಡೆಸಿದ ಡ್ರೋನ್ ದಾಳಿಯಲ್ಲಿ ಕನಿಷ್ಠ 14 ಮಂದಿ ಮೃತಪಟ್ಟಿದ್ದು, 120ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ..
ತಾರಕಕ್ಕೇರಿದ ಉಕ್ರೇನ್ ಯುದ್ಧ; Zelensky ತವರೂರಿನ ಮೇಲೆ ರಷ್ಯಾ ಭೀಕರ ದಾಳಿ, ಕನಿಷ್ಟ 14 ಸಾವು!
Updated on

ಕೀವ್: ರಷ್ಯಾ ಮತ್ತು ಉಕ್ರೇನ್ ಯುದ್ಧ ತಾರಕಕ್ಕೇರಿದ್ದು, ಈ ಬಾರಿ ರಷ್ಯಾ ನೇರವಾಗಿ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಜೆಲೆನ್ಸ್ಕಿ ಅವರ ತವರು ನಗರ ಕ್ರಿವಿ ರಿಹ್‌ ಮೇಲೆ ದಾಳಿ ನಡೆಸಿದೆ.

ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಜೆಲೆನ್ಸ್ಕಿ ಅವರ ತವರು ನಗರ ಕ್ರಿವಿ ರಿಹ್‌ನಲ್ಲಿ ರಷ್ಯಾ ನಡೆಸಿದ ಡ್ರೋನ್ ದಾಳಿಯಲ್ಲಿ ಕನಿಷ್ಠ 14 ಮಂದಿ ಮೃತಪಟ್ಟಿದ್ದು, 120ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಶುಕ್ರವಾರ ಹಗಲು ವೇಳೆಯಲ್ಲಿ ನಗರದ ಶಾಪಿಂಗ್ ಸೆಂಟರ್ ಮೇಲೆ ಎರಡು ರಷ್ಯಾ ಡ್ರೋನ್‌ಗಳು ದಾಳಿ ನಡೆಸಿವೆ. ದಾಳಿಯಲ್ಲಿ 22 ಮಕ್ಕಳು ಸೇರಿದಂತೆ 120ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎಂದು ಪ್ರಾದೇಶಿಕ ಗವರ್ನರ್ ಒಲೆಕ್ಸಾಂಡರ್ ಹಾಂಝಾ ತಿಳಿಸಿದ್ದಾರೆ.

ಗಾಯಗೊಂಡವರ ಪೈಕಿ ಐವರು ಮಕ್ಕಳು ಸೇರಿದಂತೆ 29 ಮಂದಿ ಸ್ಥಿತಿ ಗಂಭೀರವಾಗಿದೆ ಎಂದು ಅವರು ಟೆಲಿಗ್ರಾಂನಲ್ಲಿ ಮಾಹಿತಿ ನೀಡಿದ್ದು, ದಾಳಿಯ ಬಳಿಕ ಭಾರೀ ಕೈಗಾರಿಕಾ ಕಟ್ಟಡವೊಂದರಿಂದ ಕಪ್ಪು ಹೊಗೆ ಮೇಲಕ್ಕೆ ಏರುತ್ತಿರುವ ದೃಶ್ಯಗಳನ್ನು ಅಧಿಕಾರಿಗಳು ಹಂಚಿಕೊಂಡಿದ್ದಾರೆ.

ತಾರಕಕ್ಕೇರಿದ ಉಕ್ರೇನ್ ಯುದ್ಧ; Zelensky ತವರೂರಿನ ಮೇಲೆ ರಷ್ಯಾ ಭೀಕರ ದಾಳಿ, ಕನಿಷ್ಟ 14 ಸಾವು!
ಸಾಲದಲ್ಲೂ ನಂಬರ್ 1 ಅಮೆರಿಕ! 40 ಟ್ರಿಲಿಯನ್ ಡಾಲರ್ ದಾಟಿದ ದೊಡ್ಡಣನ ಲೋನ್; ಭಾರತದ ಆರ್ಥಿಕ ಸ್ಥಿತಿ ಎಷ್ಟು ಸುರಕ್ಷಿತ?

‘ಉದ್ದೇಶಪೂರ್ವಕ ದಾಳಿ’

ದಾಳಿಯನ್ನು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಜೆಲೆನ್ಸ್ಕಿ ತೀವ್ರವಾಗಿ ಖಂಡಿಸಿದ್ದು, ಈ ದಾಳಿ “ಸಂಪೂರ್ಣವಾಗಿ ನಿರ್ಲಜ್ಜ ಮತ್ತು ಖಂಡನೀಯ” ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮೊದಲ ಡ್ರೋನ್ ದಾಳಿ ನಡೆದ ಸುಮಾರು ಅರ್ಧ ಗಂಟೆಯ ಬಳಿಕ ಮತ್ತೊಂದು ರಷ್ಯಾ ಡ್ರೋನ್ ಶಾಪಿಂಗ್ ಸೆಂಟರ್‌ಗೆ ಅಪ್ಪಳಿಸಿದೆ. ತುರ್ತು ಸೇವಾ ಸಿಬ್ಬಂದಿಯನ್ನು ಗುರಿಯಾಗಿಸಿಕೊಂಡೇ ಎರಡನೇ ದಾಳಿ ನಡೆಸಲಾಗಿದೆ ಎಂದು ಜೆಲೆನ್ಸ್ಕಿ ಆರೋಪಿಸಿದ್ದಾರೆ.

“ಇಂತಹ ದಾಳಿಗಳು ಭಯೋತ್ಪಾದಕ ಕೃತ್ಯಗಳಿಗಿಂತ ಕಡಿಮೆಯೇನಲ್ಲ” ಎಂದು ಜೆಲೆನ್ಸ್ಕಿ ಟೆಲಿಗ್ರಾಂನಲ್ಲಿ ತಿಳಿಸಿದ್ದಾರೆ. ರಷ್ಯಾವನ್ನು ಹೊಣೆಗಾರನನ್ನಾಗಿ ಮಾಡುವಂತೆ ಅವರು ಅಂತಾರಾಷ್ಟ್ರೀಯ ಸಮುದಾಯಕ್ಕೆ ಕರೆ ನೀಡಿದ್ದಾರೆ.

'ತಿರುಗೇಟು ಕೊಡುತ್ತೇವೆ'

“ಈ ರಷ್ಯಾ ದಾಳಿಗೆ ನಾವು ಖಂಡಿತವಾಗಿಯೂ ಪ್ರತಿಕ್ರಿಯಿಸುತ್ತೇವೆ. ಈ ಹಿಂದೆ ನಡೆಸಿದ ದಾಳಿಗಳಿಗೆ ಹೇಗೆ ಪ್ರತಿಕ್ರಿಯಿಸಿದ್ದೇವೆಯೋ ಅದೇ ರೀತಿ, ಸಂಪೂರ್ಣ ಶಕ್ತಿಯಿಂದ ಮತ್ತು ದೂರಗಾಮಿ ದಾಳಿಗಳ ಮೂಲಕ ಉತ್ತರ ನೀಡುತ್ತೇವೆ” ಎಂದು ಜೆಲೆನ್ಸ್ಕಿ ಹೇಳಿದ್ದಾರೆ.

ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದ್ದ ಸ್ಥಳವನ್ನೇ ಮತ್ತೊಮ್ಮೆ ಗುರಿಯಾಗಿಸಿಕೊಂಡಿರುವುದು ದಾಳಿಯ ಉದ್ದೇಶಪೂರ್ವಕ ಸ್ವರೂಪವನ್ನು ತೋರಿಸುತ್ತದೆ ಎಂದು ಉಕ್ರೇನ್ ಅಧಿಕಾರಿಗಳು ಆರೋಪಿಸಿದ್ದಾರೆ.

ರಷ್ಯಾ-ಉಕ್ರೇನ್ ಸಂಘರ್ಷ ತೀವ್ರಗೊಳ್ಳುತ್ತಿರುವ ಬೆನ್ನಲ್ಲೇ ಈ ದಾಳಿ ನಡೆದಿದ್ದು, ಜೆಲೆನ್ಸ್ಕಿಯ ಎಚ್ಚರಿಕೆ ಮುಂದಿನ ದಿನಗಳಲ್ಲಿ ಉಭಯ ದೇಶಗಳ ನಡುವಿನ ದಾಳಿಗಳು ಮತ್ತಷ್ಟು ತೀವ್ರಗೊಳ್ಳುವ ಸಾಧ್ಯತೆಯನ್ನು ಸೂಚಿಸಿದೆ.

ಉಕ್ರೇನ್ ಮೇಲೆ ರಷ್ಯಾ ದಾಳಿ ತೀವ್ರ

ಉಕ್ರೇನ್‌ನಲ್ಲಿ ಯುದ್ಧ ಆರಂಭವಾಗಿ ಸುಮಾರು ನಾಲ್ಕೂವರೆ ವರ್ಷಗಳಾಗುತ್ತಿರುವ ಸಂದರ್ಭದಲ್ಲಿ ರಷ್ಯಾ ತನ್ನ ವಾಯುದಾಳಿಯನ್ನು ಮತ್ತಷ್ಟು ತೀವ್ರಗೊಳಿಸಿದೆ. ಇದಕ್ಕೂ ಮುನ್ನ ಗುರುವಾರ ಉಕ್ರೇನ್ ರಾಜಧಾನಿ ಕೀವ್ ಮೇಲೆ ರಷ್ಯಾ ನಡೆಸಿದ ಬ್ಯಾಲಿಸ್ಟಿಕ್ ಕ್ಷಿಪಣಿ ದಾಳಿಯಲ್ಲಿ 17 ಮಂದಿ ಮೃತಪಟ್ಟಿದ್ದರು.

ಇದಕ್ಕೆ ಪ್ರತಿಯಾಗಿ ಉಕ್ರೇನ್ ಕೂಡ ರಷ್ಯಾದ ಮೇಲೆ ದಾಳಿಗಳನ್ನು ಹೆಚ್ಚಿಸಿದೆ. ರಷ್ಯಾದ ಯುದ್ಧ ಸಾಮರ್ಥ್ಯವನ್ನು ದುರ್ಬಲಗೊಳಿಸುವ ಉದ್ದೇಶದಿಂದ ತೈಲ ಸಂಗ್ರಹ ಮತ್ತು ಸಂಸ್ಕರಣಾ ಘಟಕಗಳು ಹಾಗೂ ಲಾಜಿಸ್ಟಿಕ್ಸ್ ಮೂಲಸೌಕರ್ಯಗಳನ್ನು ಗುರಿಯಾಗಿಸಿಕೊಂಡು ಉಕ್ರೇನ್ ದಾಳಿ ನಡೆಸುತ್ತಿದೆ.

ಕ್ರಿವಿ ರಿಹ್ ದಾಳಿಯ ಬಳಿಕ ಪ್ರದೇಶದಲ್ಲಿ ರಕ್ಷಣಾ ಹಾಗೂ ಪರಿಹಾರ ಕಾರ್ಯಾಚರಣೆಗಳು ಮುಂದುವರಿದಿವೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com