'Economic D-Day' ಘೋಷಣೆ: Iran ವಿರುದ್ಧ ಅಮೆರಿಕಾ ಆರ್ಥಿಕ ದಿಗ್ಬಂಧನ ಅಸ್ತ್ರ; ಇದು ಆರ್ಥಿಕ ಭಯೋತ್ಪಾದನೆ-‘ಜಗತ್ತನ್ನು ವಸಾಹತು ಮಾಡುವ ಹುನ್ನಾರ’- ಇರಾನ್ ಆಕ್ರೋಶ

ಹೊಸ ನಿರ್ಬಂಧಗಳು ಒಂದೇ ದೇಶದ ವಿರುದ್ಧದ ಆರ್ಥಿಕ ಯುದ್ಧವನ್ನು ಮೀರಿವೆ. ಇತರ ಸ್ವತಂತ್ರ ವಿಶ್ವಸಂಸ್ಥೆಯ ಸದಸ್ಯ ರಾಷ್ಟ್ರಗಳ ಮೇಲೆ ತನ್ನ ಅಧಿಕಾರವನ್ನು ವಿಸ್ತರಿಸಲು ಅಮೆರಿಕ ಪ್ರಯತ್ನಿಸುತ್ತಿದೆ.
Irans foreign ministry
ಇರಾನ್ ವಿದೇಶಾಂಗ ಸಚಿವಾಲಯದ ವಕ್ತಾರ ಎಸ್ಮಾಯಿಲ್ ಬಖಾಯೀ
Updated on

ಅಮೆರಿಕ ಇತ್ತೀಚೆಗೆ ಘೋಷಿಸಿರುವ ಹೊಸ ದ್ವಿತೀಯ ನಿರ್ಬಂಧಗಳ (secondary sanctions) ವಿರುದ್ಧ ಇರಾನ್ ತೀವ್ರ ಆಕ್ರೋಶ ಹೊರಹಾಕಿದೆ.

ಇರಾನ್ ಜೊತೆ ಕಾನೂನುಬದ್ಧವಾಗಿ ವ್ಯಾಪಾರ ನಡೆಸುವ ಇತರ ಸ್ವತಂತ್ರ ರಾಷ್ಟ್ರಗಳನ್ನು ಬಲವಂತವಾಗಿ ತಡೆಯುವ ಅಮೆರಿಕದ ಈ ನೀತಿಯು "ಸ್ಪಷ್ಟ ಮತ್ತು ಪೂರ್ಣ ಪ್ರಮಾಣದ ಹೊಸ ವಸಾಹತುಶಾಹಿ" (colonialism) ಎಂದು ಇರಾನ್ ಕಿಡಿಕಾರಿದೆ.

ಅಮೆರಿಕದ ಕ್ರಮಗಳು “ಬಹಿರಂಗ ಹಾಗೂ ಸಂಪೂರ್ಣ ವಸಾಹತುಶಾಹಿ” ಮರಳುವ ಸಾಧ್ಯತೆಯನ್ನು ಸೃಷ್ಟಿಸಬಹುದು ಎಂದು ಇರಾನ್ ವಿದೇಶಾಂಗ ಸಚಿವಾಲಯದ ವಕ್ತಾರ ಇಸ್ಮಾಯಿಲ್ ಬಘಾಯಿ ಕಿಡಿಕಾರಿದ್ದಾರೆ.

ಹೊಸ ನಿರ್ಬಂಧಗಳು ಒಂದೇ ದೇಶದ ವಿರುದ್ಧದ ಆರ್ಥಿಕ ಯುದ್ಧವನ್ನು ಮೀರಿವೆ. ಇತರ ಸ್ವತಂತ್ರ ವಿಶ್ವಸಂಸ್ಥೆಯ ಸದಸ್ಯ ರಾಷ್ಟ್ರಗಳ ಮೇಲೆ ತನ್ನ ಅಧಿಕಾರವನ್ನು ವಿಸ್ತರಿಸಲು ಅಮೆರಿಕ ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದ್ದಾರೆ.

ಇರಾನ್‌ನೊಂದಿಗೆ ಇತರ ದೇಶಗಳ ಸರ್ಕಾರಗಳು, ಬ್ಯಾಂಕ್‌ಗಳು, ಕಂಪನಿಗಳು ಮತ್ತು ವಿಮಾನ ನಿಲ್ದಾಣಗಳು ಹೇಗೆ ವ್ಯಾಪಾರ ನಡೆಸಬೇಕು ಎಂಬುದನ್ನು ವಾಷಿಂಗ್ಟನ್ ನಿರ್ದೇಶಿಸಲು ಮುಂದಾಗಿದೆ.

ತಮ್ಮದೇ ಸಾರ್ವಭೌಮತ್ವದ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುವ ವಿದೇಶಿ ಬ್ಯಾಂಕ್‌ಗಳು, ಉದ್ಯಮಗಳು ಅಥವಾ ವಿಮಾನ ನಿಲ್ದಾಣಗಳು ಮೂರನೇ ದೇಶದೊಂದಿಗೆ ಕಾನೂನುಬದ್ಧ ವ್ಯಾಪಾರ ನಡೆಸಬಾರದು ಎಂದು ಒತ್ತಾಯಿಸುವ ಹಕ್ಕು ಯಾವುದೇ ಸರ್ಕಾರಕ್ಕೂ ಇಲ್ಲ ಎಂದು ಬಘಾಯಿ ಹೇಳಿದ್ದಾರೆ.

Irans foreign ministry
ಇರಾನ್ ಬೆನ್ನೆಲುಬು ಮುರಿಯಲು ಅಮೆರಿಕಾ ಪ್ಲ್ಯಾನ್: 'Economic D-Day' ಘೋಷಣೆ; ನೆರವು ನೀಡುವ ರಾಷ್ಟ್ರಗಳಿಗೂ ಕಾದಿದೆ ಗಂಡಾಂತರ..!

ಈ ನಿರ್ಬಂಧಗಳಿಂದ ಎಲ್ಲಾ ರಾಷ್ಟ್ರಗಳ ಸಾರ್ವಭೌಮತ್ವಕ್ಕೆ ಅಪಾಯ: ಇರಾನ್

ಒಂದು ದೇಶವು ಮತ್ತೊಂದು ಸಾರ್ವಭೌಮ ರಾಷ್ಟ್ರದಲ್ಲಿರುವ ಸಂಸ್ಥೆಗಳ ಮೇಲೆ ವಿಧಿಸುವ ದ್ವಿತೀಯ ನಿರ್ಬಂಧಗಳಿಗೆ ಅಂತರರಾಷ್ಟ್ರೀಯ ಕಾನೂನಿನಲ್ಲಿ ಯಾವುದೇ ಆಧಾರವಿಲ್ಲ ಎಂದು ಬಘಾಯಿ ಹೇಳಿದ್ದಾರೆ.

ಇಂತಹ ದ್ವಿತೀಯ ನಿರ್ಬಂಧಗಳಿಗೆ ಅಂತರರಾಷ್ಟ್ರೀಯ ಕಾನೂನಿನಲ್ಲಿ ಯಾವುದೇ ಆಧಾರವಿಲ್ಲ ಎಂದು ಅವರು ಹೇಳಿದ್ದಾರೆ.

ವಿಶ್ವಸಂಸ್ಥೆಯ ಚಾರ್ಟರ್‌ನ 2ನೇ ವಿಧಿಯ 1ನೇ ಪ್ಯಾರಾಗ್ರಾಫ್‌ನಲ್ಲಿ ಪ್ರತಿಪಾದಿಸಿರುವ ಸಾರ್ವಭೌಮ ಸಮಾನತೆಯ ಮೂಲ ತತ್ವವನ್ನೇ ಇಂತಹ ನಿರ್ಬಂಧಗಳು ಉಲ್ಲಂಘಿಸುತ್ತವೆ ಎಂದು ಕಿಡಿಕಾರಿದ್ದಾರೆ.

ಆರ್ಥಿಕ ಒತ್ತಡ ಹೇರುವುದು “ಅಂತರರಾಷ್ಟ್ರೀಯ ಅಪರಾಧ ಹಾಗೂ ಕಾನೂನುಬಾಹಿರ ಕೃತ್ಯ” ಎಂದು ಬಣ್ಣಿಸಿದ ಅವರು, ನೌಕಾ ದಿಗ್ಬಂಧನದ ಜೊತೆಗೆ ನಿರ್ಬಂಧಗಳನ್ನು ಬಳಸುವುದು ಇತರ ರಾಷ್ಟ್ರಗಳ ಸಾರ್ವಭೌಮತ್ವಕ್ಕೂ ಮತ್ತಷ್ಟು ಅಪಾಯ ಉಂಟುಮಾಡಲಿದೆ ಎಂದು ಹೇಳಿದ್ದಾರೆ.

ಇಂತಹ ಕ್ರಮಗಳಿಂದ ಒಂದು ದೇಶದ ಸಾರ್ವಭೌಮತ್ವ ಮತ್ತೊಂದು ಶಕ್ತಿಶಾಲಿ ರಾಷ್ಟ್ರದ ನಿರ್ಧಾರಗಳಿಗೆ ಒಳಪಡುವ ಪರಿಸ್ಥಿತಿ ನಿರ್ಮಾಣವಾಗಬಹುದು. ಇದು ಕೇವಲ ಅಮೆರಿಕ ಮತ್ತು ಇರಾನ್ ನಡುವಿನ ವಿವಾದವಲ್ಲ, ಬದಲಾಗಿ ಇಡೀ ಅಂತಾರಾಷ್ಟ್ರೀಯ ವ್ಯವಸ್ಥೆಗೆ ಎದುರಾಗಿರುವ ದೊಡ್ಡ ಬೆದರಿಕೆಯಾಗಿದೆ ಎಂದು ಅವರು ಹೇಳಿದ್ದಾರೆ.

‘ರಾಷ್ಟ್ರೀಯ ಸಾರ್ವಭೌಮತ್ವ ಸಂಪೂರ್ಣ ಕುಸಿಯುವ ಅಪಾಯ’

ಅಮೆರಿಕದ ಬೆದರಿಕೆಗೆ ಮಣಿಯದಂತೆ ಇತರ ರಾಷ್ಟ್ರಗಳಿಗೆ ಕರೆ ನೀಡಿದ ಬಘಾಯಿ, ವಾಷಿಂಗ್ಟನ್‌ನ ಒತ್ತಡಕ್ಕೆ ಮಣಿಯುವುದರಿಂದ ಅಂತಿಮವಾಗಿ “ರಾಷ್ಟ್ರೀಯ ಸಾರ್ವಭೌಮತ್ವ ಸಂಪೂರ್ಣವಾಗಿ ಕುಸಿಯುವ” ಪರಿಸ್ಥಿತಿ ಎದುರಾಗಬಹುದು ಎಂದು ಎಚ್ಚರಿಸಿದ್ದಾರೆ.

ಈ ಪ್ರವೃತ್ತಿಯು “ಬಹಿರಂಗ ಹಾಗೂ ಸಂಪೂರ್ಣ ವಸಾಹತುಶಾಹಿಯತ್ತ ದುರಂತಮಯ ವಾಪಸಾತಿ”ಗೆ ಕಾರಣವಾಗಬಹುದು ಎಂದು ಅವರು ಹೇಳಿದ್ದಾರೆ.

ಹೊಸ ಅಮೆರಿಕದ ನಿರ್ಬಂಧಗಳನ್ನು ಕೇವಲ ಇರಾನ್‌ಗೆ ಸಂಬಂಧಿಸಿದ ವಿಚಾರವಾಗಿ ನೋಡದೆ, ಇತರ ರಾಷ್ಟ್ರಗಳ ಮೇಲೂ ಪರಿಣಾಮ ಬೀರುವ ಜಾಗತಿಕ ಸಮಸ್ಯೆಯಾಗಿ ಬಿಂಬಿಸುವ ಉದ್ದೇಶ ಇರಾನ್‌ನ ಹೇಳಿಕೆಯಲ್ಲಿ ಸ್ಪಷ್ಟವಾಗಿದೆ. ಇತರ ದೇಶಗಳು ಇರಾನ್‌ನೊಂದಿಗೆ ಹೊಂದಿರುವ ವ್ಯಾಪಾರ ಹಾಗೂ ಆರ್ಥಿಕ ಸಂಬಂಧಗಳ ವಿಚಾರದಲ್ಲೂ ಅಮೆರಿಕದ ಒತ್ತಡಕ್ಕೆ ಒಳಗಾಗುವ ಸಾಧ್ಯತೆಯಿದೆ ಎಂದು ಟೆಹ್ರಾನ್ ವಾದಿಸಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com