ನೇಪಾಳದಲ್ಲಿ ಭೀಕರ ಪ್ರವಾಹ; ಮೃತರ ಸಂಖ್ಯೆ 903ಕ್ಕೆ ಏರಿಕೆ, ವಿದೇಶಿಯರು ಸೇರಿ 4,000ಕ್ಕೂ ಹೆಚ್ಚು ಮಂದಿ ಇನ್ನೂ ನಾಪತ್ತೆ!

ವಿನಾಶಕಾರಿ ಪ್ರವಾಹದ ಸಂಪೂರ್ಣ ವ್ಯಾಪ್ತಿಯನ್ನು ಅಂದಾಜಿಸಲು ಅಧಿಕಾರಿಗಳು ಹರಸಾಹಸಪಡುತ್ತಿದ್ದು, ದೇಶವು 'ಊಹಿಸಲಾಗದ ಮತ್ತು ಹೃದಯವಿದ್ರಾವಕ' ದುರಂತವನ್ನು ಎದುರಿಸುತ್ತಿದೆ ಎಂದು ನೇಪಾಳದ ಪ್ರಧಾನಿ ಬಲೇಂದ್ರ ಶಾ ಹೇಳಿದ್ದಾರೆ.
A drone view of the aftermath of flash flooding along the Trishuli river amidst fresh water surge warning in the Trishuli Bazaar area of Nuwakot district
ನುವಾಕೋಟ್ ಜಿಲ್ಲೆಯ ತ್ರಿಶೂಲಿ ಬಜಾರ್ ಪ್ರದೇಶದಲ್ಲಿ ನೀರಿನ ಮಟ್ಟ ಏರಿಕೆಯ ನಡುವೆ, ತ್ರಿಶೂಲಿ ನದಿಯಲ್ಲಿ ಸಂಭವಿಸಿದ ಹಠಾತ್ ಪ್ರವಾಹದ ನಂತರದ ದೃಶ್ಯವನ್ನು ಡ್ರೋನ್ ಮೂಲಕ ಸೆರೆಹಿಡಿಯಲಾಗಿದೆ.Photo | AP
Updated on

ನೇಪಾಳದಲ್ಲಿ ಸಂಭವಿಸಿದ ಭೀಕರ ಹಠಾತ್ ಪ್ರವಾಹದಿಂದಾಗಿ ಮೃತಪಟ್ಟವರ ಸಂಖ್ಯೆ ಸೋಮವಾರ 903ಕ್ಕೆ ಏರಿಕೆಯಾಗಿದೆ; ಈ ಮಧ್ಯೆ, ಇನ್ನೂ ಸುಮಾರು 4,250 ಮಂದಿ ನಾಪತ್ತೆಯಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವಿಪತ್ತು ಸಂಭವಿಸಿ ಆರು ದಿನಗಳು ಕಳೆದಿದ್ದರೂ, ನಾಪತ್ತೆಯಾದವರಿಗಾಗಿ ಹುಡುಕಾಟ ನಡೆಸಲು ಮತ್ತು ಸಿಲುಕಿಕೊಂಡಿರುವವರನ್ನು ರಕ್ಷಿಸಲು ರಕ್ಷಣಾ ಸಿಬ್ಬಂದಿ ತೀವ್ರ ಹರಸಾಹಸ ಪಡುತ್ತಿದ್ದು, ಬಾಧಿತವಾಗಿರುವ ಎಲ್ಲ ಎಂಟು ಜಿಲ್ಲೆಗಳಿಂದಲೂ ಮೃತದೇಹಗಳನ್ನು ಹೊರತೆಗೆಯಲಾಗಿದೆ.

ನೇಪಾಳ-ಟಿಬೆಟ್ ಗಡಿಯ ಸಮೀಪ ಸಂಭವಿಸಿದ ಹಿಮ ಮತ್ತು ಬಂಡೆಗಳ ಕುಸಿತ ಅಥವಾ ಹಿಮಪಾತದಿಂದ ಉಂಟಾಯಿತೆಂದು ನಂಬಲಾದ ಈ ದುರಂತವು, ಆಗಸ್ಟ್ 26 ರಂದು ಉತ್ತರ ಮತ್ತು ಮಧ್ಯ ನೇಪಾಳದ ಪಟ್ಟಣಗಳು ​​ಹಾಗೂ ಹಳ್ಳಿಗಳಲ್ಲಿ ಭಾರಿ ಹಾನಿಯನ್ನುಂಟುಮಾಡಿತು.

ಹಠಾತ್ ಪ್ರವಾಹದಿಂದಾಗಿ ಮೃತಪಟ್ಟವರ ಸಂಖ್ಯೆ 903ಕ್ಕೆ ಏರಿಕೆಯಾಗಿದೆ ಎಂದು ರಾಷ್ಟ್ರೀಯ ವಿಪತ್ತು ಅಪಾಯ ಕಡಿತ ಮತ್ತು ನಿರ್ವಹಣಾ ಪ್ರಾಧಿಕಾರ (NDRRMA) ತಿಳಿಸಿದೆ.

NDRRMA ಪ್ರಕಾರ, ಇಲ್ಲಿಯವರೆಗೆ ಚಿತ್ವಾನ್‌ನಿಂದ 272, ಪೂರ್ವ ನವಾಲ್‌ಪರಸಿಯಿಂದ 207, ಪಶ್ಚಿಮ ನವಾಲ್‌ಪರಸಿಯಿಂದ 151 ಮತ್ತು ಗೋಖಾ ಜಿಲ್ಲೆಗಳಿಂದ 62 ಮೃತದೇಹಗಳನ್ನು ಹೊರತೆಗೆಯಲಾಗಿದೆ. ಅದೇ ರೀತಿ, ನುವಾಕೋಟ್‌ನಿಂದ 95, ಧಾಡಿಂಗ್‌ನಿಂದ 55, ತನಹುವಿನಿಂದ 37 ಮತ್ತು ರಸುವಾದಿಂದ 24 ಮೃತದೇಹಗಳನ್ನು ಹೊರತೆಗೆಯಲಾಗಿದೆ.

85 ಮಂದಿ ಭದ್ರತಾ ಸಿಬ್ಬಂದಿ ಮತ್ತು 320 ವಿದೇಶಿಯರು ಸೇರಿದಂತೆ ಒಟ್ಟು 4,247 ಮಂದಿ ನಾಪತ್ತೆಯಾಗಿದ್ದಾರೆ ಎಂದು ಅದು ತಿಳಿಸಿದೆ.

A drone view of the aftermath of flash flooding along the Trishuli river amidst fresh water surge warning in the Trishuli Bazaar area of Nuwakot district
ನಿಜಕ್ಕೂ ಪವಾಡ! ಮೂರು ದಿನ ಕಳೆದರೂ ಪ್ರವಾಹದ ಅವಶೇಷಗಳಡಿ ಬದುಕುಳಿದಿದ್ದ ಆರು ವರ್ಷದ ಬಾಲಕಿಯ ರಕ್ಷಣೆ, Video ವೈರಲ್

ಈಮಧ್ಯೆ, ವಿನಾಶಕಾರಿ ಪ್ರವಾಹದ ಸಂಪೂರ್ಣ ವ್ಯಾಪ್ತಿಯನ್ನು ಅಂದಾಜಿಸಲು ಅಧಿಕಾರಿಗಳು ಹರಸಾಹಸಪಡುತ್ತಿದ್ದು, ದೇಶವು 'ಊಹಿಸಲಾಗದ ಮತ್ತು ಹೃದಯವಿದ್ರಾವಕ' ದುರಂತವನ್ನು ಎದುರಿಸುತ್ತಿದೆ ಎಂದು ನೇಪಾಳದ ಪ್ರಧಾನಿ ಬಲೇಂದ್ರ ಶಾ ಹೇಳಿದ್ದಾರೆ.

'ರಸುವಾದ ಭೋಟೆ ಕೋಶಿ ನದಿಯಲ್ಲಿ ಉಂಟಾದ ಭೀಕರ ಪ್ರವಾಹದಿಂದಾಗಿ ಜೀವಹಾನಿ, ಆಸ್ತಿಪಾಸ್ತಿ ಮತ್ತು ಮೂಲಸೌಕರ್ಯಗಳಿಗೆ ಆಗಿರುವ ನಷ್ಟದ ಸಂಪೂರ್ಣ ವಿವರವನ್ನು ಸಂಗ್ರಹಿಸುವುದು ಅತ್ಯಂತ ಕಷ್ಟಕರವಾಗಿದೆ. ಪ್ರತಿಕೂಲ ಹವಾಮಾನ, ದುರ್ಗಮ ಭೂಪ್ರದೇಶ ಮತ್ತು ನಿರಂತರ ಅಪಾಯಗಳ ಕಾರಣದಿಂದಾಗಿ ಈ ಕಾರ್ಯವು ಸವಾಲಿನಿಂದ ಕೂಡಿದ್ದರೂ, ನಾಗರಿಕರ ಪ್ರಾಣ ರಕ್ಷಣೆಗಾಗಿ ನಾವು ದೃಢಸಂಕಲ್ಪದಿಂದ ಮುನ್ನಡೆಯುತ್ತಿದ್ದೇವೆ' ಎಂದು ಪ್ರಧಾನಿ ಭಾನುವಾರ ತಡರಾತ್ರಿ ಸಾಮಾಜಿಕ ಜಾಲತಾಣದಲ್ಲಿನ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com