

ಮೆಕ್ಸಿಕೋದಲ್ಲಿರುವ ಭಾರತೀಯ ನಾಗರಿಕರಿಗೆ ಭಾರತದ ರಾಯಭಾರ ಕಚೇರಿ ಎಚ್ಚರಿಕೆ ಸೂಚನೆ ಹೊರಡಿಸಿದೆ. ಮೆಕ್ಸಿಕೋ ಸೈನಿಕರು ಡ್ರಗ್ ಕಾರ್ಟೆಲ್ ಕಿಂಗ್ ಪಿನ್ ಎಲ್ ಮೆಂಚೊ ಹತ್ಯೆ ಬಳಿಕ ದೇಶದಲ್ಲಿ ಹಿಂಸಾಚಾರ ತೀವ್ರಗೊಂಡಿರುವ ಹಿನ್ನೆಲೆಯಲ್ಲಿ ಭಾರತೀಯ ನಾಗರಿಕರು ಎಚ್ಚರಿಕೆಯಿಂದ ಮನೆಗಳಲ್ಲಿ ಜಾಗ್ರತೆಯಿಂದ ಇರಲು ಸೂಚನೆ ನೀಡಲಾಗಿದೆ.
ಜಾಲಿಸ್ಕೊ ನ್ಯೂ ಜನರೇಷನ್ ಕಾರ್ಟೆಲ್‌ನ ನಾಯಕನಾದ ನೆಮೆಸಿಯೊ ಒಸೆಗುಯೆರಾ ಸರ್ವಾಂಟೆಸ್, ‘ಎಲ್ ಮೆಂಚೊ’ ಎಂದು ಪರಿಚಿತನಾಗಿದ್ದವರು, ನಿನ್ನೆ ಭಾನುವಾರ ಹತ್ಯೆಗೀಡಾಗಿದ್ದನು.
ಮೆಕ್ಸಿಕೋದಲ್ಲಿರುವ ಎಲ್ಲಾ ಭಾರತೀಯ ನಾಗರಿಕರಿಗೆ ಮನವಿ ಮಾಡಿಕೊಳ್ಳುತ್ತಿದ್ದೇವೆ. ಭದ್ರತಾ ಕಾರ್ಯಾಚರಣೆಗಳು ನಡೆಯುತ್ತಿದ್ದು, ಸಂಬಂಧಿತ ರಸ್ತೆ ಬಂದ್ ಹಾಗೂ ಅಪರಾಧ ಚಟುವಟಿಕೆಗಳು ನಡೆಯುತ್ತಿರುವುದರಿಂದ ಜಾಲಿಸ್ಕೊ ರಾಜ್ಯ (ಪ್ಯುಏರ್ಟೊ ವಲ್ಲಾರ್ಟಾ, ಚಾಪಾಲಾ ಮತ್ತು ಗ್ವಾಡಲಹಾರಾ ಪ್ರದೇಶಗಳು), ತಮೌಲಿಪಾಸ್ ರಾಜ್ಯ (ರೆಯ್ನೋಸಾ ಹಾಗೂ ಇತರ ನಗರ ಪ್ರದೇಶಗಳು), ಮಿಚೋಆಕಾನ್ ರಾಜ್ಯದ ಕೆಲವು ಭಾಗಗಳು, ಗುರೆರೊ ರಾಜ್ಯ ಮತ್ತು ನುವೋ ಲಿಯೋನ್ ರಾಜ್ಯಗಳಲ್ಲಿ ಇರುವ ಭಾರತೀಯರು ಮುಂದಿನ ಸೂಚನೆ ಬರುವವರೆಗೆ ತಮ್ಮ ಸ್ಥಳದಲ್ಲೇ ಸುರಕ್ಷಿತವಾಗಿ ಉಳಿಯಬೇಕು ಎಂದು ಮೆಕ್ಸಿಕೋದಲ್ಲಿರುವ ಭಾರತೀಯ ರಾಯಭಾರ ಕಚೇರಿ ಎಕ್ಸ್ ಪೋಸ್ಟ್ ನಲ್ಲಿ ಪ್ರಕಟಿಸಿದೆ.
ರಾಯಭಾರ ಕಚೇರಿ ಸುರಕ್ಷತಾ ಸೂಚನೆಗಳನ್ನೂ ನೀಡಿದೆ: “ಕಾನೂನು ಜಾರಿ ಚಟುವಟಿಕೆಗಳು ನಡೆಯುವ ಪ್ರದೇಶಗಳಲ್ಲಿ ಸಂಚಾರ ಮಾಡಬೇಡಿ. ನಿಮ್ಮ ಸುತ್ತಮುತ್ತಲಿನ ಪರಿಸ್ಥಿತಿಗಳ ಬಗ್ಗೆ ಎಚ್ಚರಿಕೆಯಿಂದಿರಿ. ಆಶ್ರಯವನ್ನು ಹುಡುಕಿ ಮತ್ತು ಅನಾವಶ್ಯಕವಾಗಿ ಹೊರಗೆ ಸಂಚರಿಸಬೇಡಿ. ಅಧಿಕಾರಿಗಳ ಸೂಚನೆಗಳನ್ನು ಪಾಲಿಸಿ ತುರ್ತು ಪರಿಸ್ಥಿತಿಯಲ್ಲಿ 911 ಗೆ ಕರೆ ಮಾಡಿ ಎಂದು ಸೂಚನೆ ನೀಡಿದೆ.
ನಿನ್ನೆ ಭಾನುವಾರ ಡ್ರಗ್ ಕಾರ್ಟೆಲ್ ನಾಯಕ ನೆಮೆಸಿಯೊ ಒಸೆಗುಯೆರಾ ಹತ್ಯೆಯ ಬಳಿಕ ಈ ಸೂಚನೆ ನೀಡಲಾಗಿದೆ. ಮೆಕ್ಸಿಕೋ ಮತ್ತು ಅಮೆರಿಕಾದಲ್ಲಿ ಅತ್ಯಂತ ಬೇಕಾಗಿದ್ದ ಅಪರಾಧಿಗಳಲ್ಲಿ ಒಬ್ಬರಾಗಿದ್ದನು. ಫೆಡರಲ್ ಅಧಿಕಾರಿಯೊಬ್ಬರ ಪ್ರಕಾರ, ಮೆಕ್ಸಿಕೋ ಸೇನೆ ಭಾನುವಾರ ನಡೆದ ಸೈನಿಕ ಕಾರ್ಯಾಚರಣೆಯಲ್ಲಿ “ಎಲ್ ಮೆಂಚೊ” ನನ್ನು ಹತ್ಯೆ ಮಾಡಿತು. ಈ ಘಟನೆ ಪಶ್ಚಿಮ ಮೆಕ್ಸಿಕೋದ ಜಾಲಿಸ್ಕೊ ರಾಜ್ಯದಲ್ಲಿ ನಡೆದ ಸೈನಿಕ ಕಾರ್ಯಾಚರಣೆಯ ವೇಳೆ ಸಂಭವಿಸಿದೆ.
Advertisement