Bolivia ರಾಜಧಾನಿ ಸಮೀಪ ಕಾರ್ಗೊ ವಿಮಾನ ಪತನ: ಕನಿಷ್ಠ 15 ಮಂದಿ ಸಾವು-Video

ವಿಮಾನವು ಲಾ ಪಾಸ್‌ಗೆ ಸಮೀಪದಲ್ಲಿರುವ ಎಲ್ ಅಲ್ಟೊ ನಗರದಲ್ಲಿ ವಾಹನಗಳಿಗೆ ಡಿಕ್ಕಿ ಹೊಡೆದು ನಂತರ ಹೊಲವೊಂದರಲ್ಲಿ ಬಿದ್ದಿರುವುದನ್ನು ಎಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಚಿತ್ರಗಳು ಸೂಚಿಸುತ್ತವೆ.
Bolivian Air Force Hercules crash in El Alto kills 15
Bolivian Air Forceಗೆ ಸೇರಿದ ಹೆರ್ಕ್ಯುಲೀಸ್ ವಿಮಾನವು El Altoನಲ್ಲಿ ಪತನಗೊಂಡು 15 ಮಂದಿ ಮೃತಪಟ್ಟಿದ್ದಾರೆ
Updated on

ಹಣವನ್ನು ಸಾಗಿಸುತ್ತಿದ್ದ ಸರಕು ವಿಮಾನವು ಭಾರತೀಯ ಕಾಲಮಾನ ನಿನ್ನೆ ಶುಕ್ರವಾರ ಸಂಜೆ ಬೊಲಿವಿಯಾದ ರಾಜಧಾನಿ ಸಮೀಪ ಪತನಗೊಂಡು, ಹೆದ್ದಾರಿಯಲ್ಲಿ ಸುಮಾರು ಹನ್ನೆರಡು ವಾಹನಗಳಿಗೆ ಹಾನಿ ಉಂಟುಮಾಡಿತು. ವಿಮಾನದಲ್ಲಿದ್ದ ನೋಟುಗಳಲ್ಲಾ ನೆಲದ ಮೇಲೆ ಚದುರಿ ಬಿದ್ದಿದ್ದು, ಕನಿಷ್ಠ 15 ಮಂದಿ ಮೃತಪಟ್ಟಿದ್ದಾರೆ.

ಅಗ್ನಿಶಾಮಕ ದಳದ ಮುಖ್ಯಸ್ಥ ಪಾವೆಲ್ ಟೋವಾರ್ ಅವರು ಮೃತಪಟ್ಟವರು ವಿಮಾನದಲ್ಲಿದ್ದವರೋ ಅಥವಾ ಲಾ ಪಾಸ್ ವಿಮಾನ ನಿಲ್ದಾಣದ ಸಮೀಪದ ಹೆದ್ದಾರಿಯಲ್ಲಿದ್ದ ವಾಹನಗಳಲ್ಲಿ ಇದ್ದವರೋ ಎಂಬುದನ್ನು ಸ್ಪಷ್ಟಪಡಿಸಲಿಲ್ಲ. ಗಾಯಾಳುಗಳೂ ಇದ್ದಾರೆ ಎಂದು ಹೇಳಿದರು.

ವಿಮಾನವು ಲಾ ಪಾಸ್‌ಗೆ ಸಮೀಪದಲ್ಲಿರುವ ಎಲ್ ಅಲ್ಟೊ ನಗರದಲ್ಲಿ ವಾಹನಗಳಿಗೆ ಡಿಕ್ಕಿ ಹೊಡೆದು ನಂತರ ಹೊಲವೊಂದರಲ್ಲಿ ಬಿದ್ದಿರುವುದನ್ನು ಎಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಚಿತ್ರಗಳು ಸೂಚಿಸುತ್ತವೆ. ವಿಮಾನ ಪತನಗೊಳ್ಳುವ ಸಂದರ್ಭದಲ್ಲಿ ಅದು ಹಾರಾಟ ಆರಂಭಿಸುತ್ತಿತ್ತೋ ಅಥವಾ ಇಳಿಯುತ್ತಿದ್ದಿತ್ತೋ ಎಂಬ ಬಗ್ಗೆ ಸ್ಪಷ್ಟತೆಯಿಲ್ಲ. ವಿಮಾನದ ಅವಶೇಷಗಳು, ಧ್ವಂಸಗೊಂಡ ಕಾರುಗಳು ಹಾಗೂ ಮೃತದೇಹಗಳು ರಸ್ತೆಯಲ್ಲೇ ಬಿದ್ದಿವೆ. ಟೋವಾರ್ ಅವರ ಪ್ರಕಾರ ಕನಿಷ್ಠ 15 ವಾಹನಗಳು ಹಾನಿಗೀಡಾಗಿವೆ. ಅಗ್ನಿಶಾಮಕ ಸಿಬ್ಬಂದಿ ವಿಮಾನವನ್ನು ಆವರಿಸಿದ್ದ ಬೆಂಕಿಯನ್ನು ನಂದಿಸಲು ಯಶಸ್ವಿಯಾದರು.

ಈ ವಿಮಾನವು ಬೊಲಿವಿಯನ್ ವಾಯುಪಡೆಯ ಹೆರ್ಕ್ಯುಲೀಸ್ ಮಾದರಿಯದು ಆಗಿದ್ದು, ಕೇಂದ್ರ ಬ್ಯಾಂಕಿನಿಂದ ಇತರೆ ನಗರಗಳಿಗೆ ಹೊಸ ನೋಟುಗಳನ್ನು ಸಾಗಿಸುತ್ತಿತ್ತು. ಅಪಘಾತ ಸ್ಥಳದಲ್ಲಿ ಬಹಳಷ್ಟು ನೋಟುಗಳು ನೆಲದ ಮೇಲೆ ಚದುರಿಕೊಂಡಿದ್ದವು.

ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ ಚಿತ್ರಗಳಲ್ಲಿ ಜನರು ಚದುರಿದ ನೋಟುಗಳನ್ನು ಸಂಗ್ರಹಿಸಲು ಧಾವಿಸುತ್ತಿರುವುದು ಹಾಗೂ ಗಲಭೆ ನಿಯಂತ್ರಣ ಸಜ್ಜಿನಲ್ಲಿ ಇದ್ದ ಪೊಲೀಸರು ಅವರನ್ನು ಚದುರಿಸಲು ಪ್ರಯತ್ನಿಸುತ್ತಿರುವುದು ಕಾಣಿಸುತ್ತದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com