ಇರಾನ್ ನಿಂದ ಪ್ರತಿದಾಳಿ: ಕತಾರ್ ನಲ್ಲಿ ಸ್ಫೋಟದ ಸದ್ದು, ಬಹ್ರೇನ್ ನಲ್ಲಿರುವ ಅಮೆರಿಕ ನೌಕ ನೆಲೆ ಗುರಿಯಾಗಿಸಿ ಕ್ಷಿಪಣಿ ದಾಳಿ!

ಇರಾನ್ ಮೊದಲಿಗೆ ಇಸ್ರೇಲ್ ಕಡೆಗೆ ಕ್ಷಿಪಣಿ ಮತ್ತು ಡ್ರೋನ್ ದಾಳಿ ನಡೆಸಿದೆ. ನಂತರ ಕುವೈತ್ ಮತ್ತು ಕತಾರ್‌ನಲ್ಲಿನ ಸೇನಾ ನೆಲೆ ಸೇರಿದಂತೆ ಅಮೆರಿಕದ ಮಿಲಿಟರಿ ನೆಲೆಗಳನ್ನು ಗುರಿಯಾಗಿಸಿ ದಾಳಿ ನಡೆಸಿರುವುದಾಗಿ ವರದಿಯಾಗಿದೆ.
US Navy 5th Fleet headquarters IN Bahrain
ಬಹ್ರೇನ್ ನಲ್ಲಿರುವ ಅಮೆರಿಕ ನೌಕ ನೆಲೆ
Updated on

ಟೆಹರಾನ್: ಅಮೆರಿಕ ಹಾಗೂ ಇಸ್ರೇಲ್ ನ ಜಂಟಿ ಕ್ಷಿಪಣಿ ದಾಳಿಗೆ ಹೆದರದ ಇರಾನ್, ಪ್ರತಿದಾಳಿ ನಡೆಸಿದೆ. ಕತಾರ್, ದೋಹಾ, ಬಹ್ರೇನ್ ಸೇರಿದಂತೆ 8 ದೇಶಗಳಲ್ಲಿ ಇರಾನ್ ಖಂಡಾಂತರ ಕ್ಷಿಪಣಿ ದಾಳಿ ನಡೆಸಿದೆ. ಕತಾರ್‌ನಲ್ಲಿ ಭಾರಿ ಸ್ಫೋಟದ ಸದ್ದು ಕೇಳಿಬಂದಿದೆ. ಆದರೆ ಯಾವುದೇ ಸಾವು-ನೋವು ಅಥವಾ ಹಾನಿಯ ಬಗ್ಗೆ ತಕ್ಷಣ ವರದಿಯಾಗಿಲ್ಲ.

ಇರಾನ್ ಮೊದಲಿಗೆ ಇಸ್ರೇಲ್ ಕಡೆಗೆ ಕ್ಷಿಪಣಿ ಮತ್ತು ಡ್ರೋನ್ ದಾಳಿ ನಡೆಸಿದೆ. ನಂತರ ಕುವೈತ್ ಮತ್ತು ಕತಾರ್‌ನಲ್ಲಿನ ಸೇನಾ ನೆಲೆ ಸೇರಿದಂತೆ ಅಮೆರಿಕದ ಮಿಲಿಟರಿ ನೆಲೆಗಳನ್ನು ಗುರಿಯಾಗಿಸಿ ದಾಳಿ ನಡೆಸಿರುವುದಾಗಿ ವರದಿಯಾಗಿದೆ.

ಕತಾರ್ ನಲ್ಲಿನ ಎಲ್ಲಾ ವಿಮಾನಗಳ ಸಂಚಾರವನ್ನು ತಾತ್ಕಾಲಿಕವಾಗಿ ನಿಷೇಧಿಸಿ ಕತಾರ್ ನಾಗರಿಕ ವಿಮಾನಯಾನ ಪ್ರಾಧಿಕಾರ ಆದೇಶ ಹೊರಡಿಸಿದೆ.

ಇರಾನ್ ನಲ್ಲಿ US-ಇಸ್ರೇಲಿ ಕಾರ್ಯಾಚರಣೆಗಳ ನಂತರ ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನ ಪರಿಸ್ಥಿತಿ ಉಂಟಾಗಿರುವಂತೆಯೇ ಇರಾನ್ ಪ್ರತಿದಾಳಿ ನಡೆಸಿದೆ. ಬಹ್ರೇನ್ ನಲ್ಲಿರುವ ಅಮೆರಿಕ ನೌಕ ನೆಲೆಗಳನ್ನು ಗುರಿಯಾಗಿಸಿ ಇರಾನ್ ಮಿಸೈಲ್ ದಾಳಿ ನಡೆಸಿದೆ. US ನೌಕಾಪಡೆಯ ಐದನೇ ಘಟಕವೊಂದು ಬಹ್ರೇನ್‌ನಿಂದ ಕಾರ್ಯನಿರ್ವಹಿಸುತ್ತದೆ. ಇದು ಆಯಕಟ್ಟಿನ ಸ್ಥಳವಾದ ಹಾರ್ಮುಜ್ ಜಲಸಂಧಿ ಸೇರಿದಂತೆ ಗಲ್ಫ್ ಪ್ರದೇಶದಾದ್ಯಂತ ಅಮೆರಿಕದ ನೌಕಾ ಕಾರ್ಯಾಚರಣೆಗಳನ್ನು ಮೇಲ್ವಿಚಾರಣೆ ಮಾಡುತ್ತದೆ.

ಇರಾನ್‌ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಅವರ ಕಚೇರಿಗಳ ಬಳಿ ಮೊದಲ ಬಾರಿಗೆ ಇಸ್ರೇಲ್ ಮತ್ತು ಅಮೆರಿಕ ದಾಳಿ ನಡೆಸಿದೆ ಎಂದು ಹೇಳಲಾಗಿದೆ. ಇರಾನ್ ಮಾಧ್ಯಮಗಳು ದೇಶದ ಹಲವಾರು ಭಾಗಗಳಲ್ಲಿ ಸ್ಫೋಟಗಳು ಮತ್ತು ದಾಳಿಗಳನ್ನು ವರದಿ ಮಾಡಿದೆ.

US Navy 5th Fleet headquarters IN Bahrain
ಇರಾನ್ ವಿರುದ್ಧ ಕ್ಷಿಪಣಿ ದಾಳಿ: ಇಸ್ರೇಲ್, ಜೋರ್ಡಾನ್‌ ನಲ್ಲಿರುವ ಭಾರತೀಯ ಪ್ರಜೆಗಳಿಗೆ ಸೂಚನೆ!

ರಾಜಧಾನಿ ಟೆಹ್ರಾನ್‌ನ ನಲ್ಲಿ ದಟ್ಟ ಹೊಗೆ ಕಂಡುಬರುತ್ತಿದೆ. ಈ ಪರಿಸ್ಥಿತಿಯು ಪಶ್ಚಿಮ ಏಷ್ಯಾದಲ್ಲಿ ಪ್ರಾದೇಶಿಕ ಸಂಘರ್ಷದ ಕಳವಳವನ್ನು ಮತ್ತಷ್ಟು ಹೆಚ್ಚಿಸಿದೆ. ಮುಂಜಾಗ್ರತಾ ಕ್ರಮವಾಗಿ ವಾಯುಯಾನ ಪ್ರದೇಶವನ್ನು UAE ಬಂದ್ ಮಾಡಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com