'ಇದೇ ಸಮಯ.. ಮಾಡಿ ತೋರಿಸುತ್ತೇನೆ'.. 'ಗ್ರೀನ್‌ಲ್ಯಾಂಡ್‌ನಲ್ಲಿ 'ರಷ್ಯಾದ ಬೆದರಿಕೆ' ಕಿತ್ತೊಗೆಯುತ್ತೇನೆ': Donald Trump ಪ್ರತಿಜ್ಞೆ

ಬಹಳ ಹಿಂದೆಯೇ ಗ್ರೀನ್ ಲ್ಯಾಂಡ್ ಅನ್ನು ವಶಪಡಿಸಿಕೊಳ್ಳಲು ಬಯಸಿತ್ತು. ನನ್ನ ಆಡಳಿತದ ಎರಡನೇ ಅವಧಿಯಲ್ಲಿ, ಅದರ ಯೋಜನೆ ತೀವ್ರಗೊಂಡಿದೆ. ಇದು ಗ್ರೀನ್ ಲ್ಯಾಂಡ್ ಮೇಲೆ ಅಮೆರಿಕ ಜೊತೆ ಉದ್ವಿಗ್ನತೆಗೆ ಕಾರಣವಾಗಿದೆ ಎಂದು ಹೇಳಿದರು
Donald Trump vows action to counter ‘Russian threat’ in Greenland
ಡೊನಾಲ್ಡ್ ಟ್ರಂಪ್
Updated on

ವಾಷಿಂಗ್ಟನ್: ವೆನೆಜುವೆಲಾ ಬೆನ್ನಲ್ಲೇ ಗ್ರೀನ್ ಲ್ಯಾಂಡ್ ಮೇಲೆ ಕಣ್ಣು ಹಾಕಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶತಾಯಗತಾಯ ಆ ದೇಶದ ನೆಲದಿಂದ ರಷ್ಯಾ ಬೆದರಿಕೆಯನ್ನು ಕಿತ್ತೊಗೆಯುವುದಾಗಿ ಶಪಥ ಮಾಡಿದ್ದಾರೆ.

ಗ್ರೀನ್ ಲ್ಯಾಂಡ್ ಗೆ ಹೊಸ ಎಚ್ಚರಿಕೆ ನೀಡಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಬಹಳ ಹಿಂದೆಯೇ ಗ್ರೀನ್ ಲ್ಯಾಂಡ್ ಅನ್ನು ವಶಪಡಿಸಿಕೊಳ್ಳಲು ಬಯಸಿತ್ತು. ನನ್ನ ಆಡಳಿತದ ಎರಡನೇ ಅವಧಿಯಲ್ಲಿ, ಅದರ ಯೋಜನೆ ತೀವ್ರಗೊಂಡಿದೆ ಎಂದು ಹೇಳಿದರು. ಇದು ಗ್ರೀನ್ ಲ್ಯಾಂಡ್ ಮೇಲೆ ಅಮೆರಿಕ ಜೊತೆ ಉದ್ವಿಗ್ನತೆಗೆ ಕಾರಣವಾಗಿದೆ.

ಡೊನಾಲ್ಡ್ ಟ್ರಂಪ್ ಅವರು ತಮ್ಮ ಟ್ರೂತ್ ಸೋಶಿಯಲ್ ನಲ್ಲಿ ಈ ಬಗ್ಗೆ ಪೋಸ್ಟ್ ಹಂಚಿಕೊಂಡಿದ್ದು, "ನಾವು ಗ್ರೀನ್ ಲ್ಯಾಂಡ್ ನಿಂದ ರಷ್ಯಾದ ಬೆದರಿಕೆಯನ್ನು ತೆಗೆದುಹಾಕಬೇಕಾಗಿದೆ ಎಂದು ನ್ಯಾಟೋ 20 ವರ್ಷಗಳಿಂದ ಡೆನ್ಮಾರ್ಕ್ ಗೆ ಹೇಳುತ್ತಿದೆ. ದುರದೃಷ್ಟವಶಾತ್, ಡೆನ್ಮಾರ್ಕ್ ಈ ಬಗ್ಗೆ ಏನನ್ನೂ ಮಾಡಲು ಸಾಧ್ಯವಾಗಲಿಲ್ಲ. ಈಗ ಸಮಯ ಬಂದಿದೆ, ಮತ್ತು ಅದು ಪೂರ್ಣಗೊಳ್ಳುತ್ತದೆ ಎಂದು ಪೋಸ್ಟ್ ಮಾಡಿದ್ದಾರೆ.

ಈ ಹಿಂದೆ, ಟ್ರಂಪ್ ಯುರೋಪಿಯನ್ ಒಕ್ಕೂಟದ ಎಂಟು ದೇಶಗಳ ಮೇಲೆ ಸುಂಕವನ್ನು ವಿಧಿಸುವುದಾಗಿ ಘೋಷಿಸಿದ್ದರು. ಅಮೆರಿಕವನ್ನು ಸಹ ಎದುರಿಸಲಿದೆ ಎಂದು ಐರೋಪ್ಯ ಒಕ್ಕೂಟ ಹೇಳಿದೆ. ಯುರೋಪಿಯನ್ ಒಕ್ಕೂಟವು ಅಮೆರಿಕ ಮೇಲೆ 93 ಬಿಲಿಯನ್ ಯುರೋಗಳವರೆಗೆ ಸುಂಕವನ್ನು ವಿಧಿಸುವ ಬಗ್ಗೆ ಯೋಚಿಸುತ್ತಿದೆ ಎಂದು ವರದಿಗಳು ಹೇಳುತ್ತವೆ. ಆದರೆ, ಈ ಬಗ್ಗೆ ಇನ್ನೂ ಯಾವುದೇ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ.

Donald Trump vows action to counter ‘Russian threat’ in Greenland
ಗ್ರೀನ್‌ಲ್ಯಾಂಡ್ ಮೇಲೆ ಅಮೆರಿಕಾ ನಿಯಂತ್ರಣ: ವಿರೋಧಿಸಿದ ಯುರೋಪಿನ 8 ರಾಷ್ಟ್ರಗಳ ಮೇಲೆ ಶೇ.10ರಷ್ಟು ತೆರಿಗೆ ಘೋಷಿಸಿದ ಟ್ರಂಪ್

ಯುರೋಪಿಯನ್ ಒಕ್ಕೂಟವು ಅಮೆರಿಕ ವಿರುದ್ಧ ಕಾನೂನನ್ನು ಬಳಸುವುದನ್ನು ಪರಿಗಣಿಸುತ್ತಿದೆ. ಅದು ಅಮೆರಿಕಾದ ಕಂಪನಿಗಳ ಪ್ರವೇಶವನ್ನು ಯುರೋಪಿಯನ್ ಮಾರುಕಟ್ಟೆಗೆ ಸೀಮಿತಗೊಳಿಸುತ್ತದೆ ಎಂದು ಕ್ಸಿನ್ಹುವಾ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಫೆಬ್ರವರಿ 1 ರಿಂದ ಸಾಮಾಜಿಕ ಮಾಧ್ಯಮದ ಮೂಲಕ ಶೇಕಡಾ 10 ರಷ್ಟು ಸುಂಕವನ್ನು ಜಾರಿಗೆ ತರಲು ಟ್ರಂಪ್ ಘೋಷಿಸಿದರು. ಪ್ರಸ್ತಾವಿತ ಸುಂಕವು ಡೆನ್ಮಾರ್ಕ್, ಫಿನ್ಲ್ಯಾಂಡ್, ಫ್ರಾನ್ಸ್, ಜರ್ಮನಿ, ನೆದರ್ಲ್ಯಾಂಡ್ಸ್, ನಾರ್ವೆ, ಸ್ವೀಡನ್ ಮತ್ತು ಯುನೈಟೆಡ್ ಕಿಂಗ್ಡಮ್ ಸೇರಿ ಎಂಟು ದೇಶಗಳ ಮೇಲೆ ಪರಿಣಾಮ ಬೀರುತ್ತದೆ. ಆದಾಗ್ಯೂ, ಈ ಎಲ್ಲಾ ದೇಶಗಳು ಡೆನ್ಮಾರ್ಕ್ ಮತ್ತು ಗ್ರೀನ್ ಲ್ಯಾಂಡ್ ನೊಂದಿಗೆ ಸಂಪೂರ್ಣ ಒಗ್ಗಟ್ಟನ್ನು ವ್ಯಕ್ತಪಡಿಸುವ ಜಂಟಿ ಹೇಳಿಕೆಯನ್ನು ನೀಡಿವೆ.

ಫೆಬ್ರವರಿ 1 ರಿಂದ ಈ ಎಂಟು ದೇಶಗಳಿಂದ ಬರುವ ಸರಕುಗಳ ಮೇಲೆ ಅಮೆರಿಕ ಶೇ 10 ರಷ್ಟು ಸುಂಕವನ್ನು ವಿಧಿಸಲಿದೆ ಎಂದು ಟ್ರಂಪ್ ಸಾಮಾಜಿಕ ಮಾಧ್ಯಮದಲ್ಲಿ ತಿಳಿಸಿದ್ದಾರೆ. ಜೂನ್ 1 ರಿಂದ ಶುಲ್ಕವು ಶೇಕಡಾ 25 ಕ್ಕೆ ಹೆಚ್ಚಾಗುತ್ತದೆ ಮತ್ತು ಗ್ರೀನ್ ಲ್ಯಾಂಡ್ "ಸಂಪೂರ್ಣ ಖರೀದಿ" ಯ ಬಗ್ಗೆ ಒಪ್ಪಂದ ಮಾಡಿಕೊಳ್ಳುವವರೆಗೆ ಮುಂದುವರಿಯುತ್ತದೆ ಎಂದು ಅವರು ಎಚ್ಚರಿಸಿದ್ದಾರೆ.

ಅಮೆರಿಕ ಗ್ರೀನ್ಲ್ಯಾಂಡ್ ಅನ್ನು ಆಕ್ರಮಿಸದಿದ್ದರೆ, ಚೀನಾ ಅಥವಾ ರಷ್ಯಾಗಳಲ್ಲಿ ಒಬ್ಬರು ಅದನ್ನು ಮಾಡುತ್ತಾರೆ ಮತ್ತು ಇದು ಯುಎಸ್ ಭದ್ರತೆಗೆ ಧಕ್ಕೆ ತರುತ್ತದೆ ಎಂದು ಟ್ರಂಪ್ ಹೇಳುತ್ತಾರೆ.

ಟ್ರಂಪ್ ಪದೇ ಪದೇ ಡ್ಯಾನಿಶ್ ಸಾರ್ವಭೌಮತ್ವದ ಅಡಿಯಲ್ಲಿ ಸ್ವಾಯತ್ತ ಪ್ರದೇಶವಾದ ಗ್ರೀನ್‌ಲ್ಯಾಂಡ್ ಅನ್ನು ಸ್ವಾಧೀನಪಡಿಸಿಕೊಳ್ಳಬೇಕು ಎಂದು ಪದೇ ಪದೇ ಸಮರ್ಥಿಸಿಕೊಂಡಿದ್ದಾರೆ. ಆರ್ಕ್ಟಿಕ್‌ನಲ್ಲಿ ಬೆಳೆಯುತ್ತಿರುವ ಚೀನೀ ಮತ್ತು ರಷ್ಯಾದ ಚಟುವಟಿಕೆ ಮತ್ತು US ಭದ್ರತಾ ಹಿತಾಸಕ್ತಿಗಳಿಗೆ ದ್ವೀಪದ ಪ್ರಾಮುಖ್ಯತೆಯನ್ನು ಉಲ್ಲೇಖಿಸಿ. ವಾಷಿಂಗ್ಟನ್‌ಗೆ ಈ ಪ್ರದೇಶವನ್ನು ಖರೀದಿಸಲು ಅನುಮತಿಸುವವರೆಗೆ ಯುರೋಪಿಯನ್ ಮಿತ್ರರಾಷ್ಟ್ರಗಳ ಮೇಲಿನ ಸುಂಕಗಳು ಹೆಚ್ಚಾಗುತ್ತವೆ ಎಂದು ಅವರು ಎಚ್ಚರಿಸಿದ್ದಾರೆ.

ಗ್ರೀನ್‌ಲ್ಯಾಂಡ್‌ ಮಾರಾಟಕ್ಕಿಲ್ಲ

ಇನ್ನು ವ್ಯಾಪರದ ಮೂಲಕ ಅಥವಾ ಬಲವಂತದಿಂದಾರೂ ಗ್ರೀನ್‌ಲ್ಯಾಂಡ್‌ ಅನ್ನು ವಶಕ್ಕೆ ಪಡೆದುಕೊಳ್ಳಬೇಕು ಎಂಬ ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರ ನಡೆ ವಿರುದ್ಧ ಗ್ರೀನ್‌ಲ್ಯಾಂಡ್‌ನಲ್ಲಿ ಭಾರೀ ಆಕ್ರೋಶ ಭುಗಿಲೆದ್ದಿದೆ.

ಗ್ರೀನ್‌ಲ್ಯಾಂಡ್‌ನ ಪ್ರಜೆಗಳು ಟ್ರಂಪ್‌ ನಡೆಯನ್ನು ವಿರೋಧಿಸಿ ನೂಕ್‌ನಲ್ಲಿರುವ ಅಮೆರಿಕ ದೂತಾವಾಸ ಕಚೇರಿ ಕಡೆ ಪ್ರತಿಭಟನೆ ನಡೆಸುತ್ತಾ ಸಾಗಿದರು. ಈ ವೇಳೆ ‘ಗ್ರೀನ್‌ಲ್ಯಾಂಡ್‌ ಮಾರಾಟಕ್ಕಿಲ್ಲ’ ಎಂದು ಭಿತ್ತಿಪತ್ರಗಳನ್ನು ಹಿಡಿದು, ಘೋಷಣೆ ಕೂಗುತ್ತಾ, ತಮ್ಮ ರಾಷ್ಟ್ರ ಧ್ವಜವನ್ನು ಬೀಸುತ್ತಾ ಸಾಗಿದರು. ಈ ವೇಳೆ ತಮ್ಮ ದ್ವೀಪದ ಸಾಂಪ್ರದಾಯಿಕ ಹಾಡನ್ನು ಹಾಡಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com