

2026ರ ಜುಲೈ 5ರ ಭಾನುವಾರದಂದು ಇರಾನ್‌ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿಗೆ ವಿದಾಯ ಹೇಳಲು ಲಕ್ಷಾಂತರ ಜನರು ಟೆಹ್ರಾನ್‌ನ ಬೀದಿಗಳಲ್ಲಿ ನೆರೆದಿದ್ದರು. ಇಡೀ ರಾಷ್ಟ್ರ ಶೋಕ ಸಾಗರದಲ್ಲಿ ಮುಳುಗಿದೆ. ಆದರೆ ಈ ಐತಿಹಾಸಿಕ ಮತ್ತು ಭಾವನಾತ್ಮಕ ಸಂದರ್ಭದಲ್ಲಿ ಎಲ್ಲರ ಕಣ್ಣುಗಳು ಗೈರುಹಾಜರಾಗಿದ್ದ ಒಬ್ಬ ವ್ಯಕ್ತಿಯ ಮೇಲೆ ಬಿದ್ದಿದ್ದು ಅದೇ ಇರಾನ್‌ನ ಹೊಸ ಸರ್ವೋಚ್ಚ ನಾಯಕ ಅಯತೊಲ್ಲಾ ಮೊಜ್ತಬಾ ಖಮೇನಿ.
ಅಲಿ ಖಮೇನಿಯವರ ಮೂವರು ಪುತ್ರರು ಟೆಹ್ರಾನ್‌ನಲ್ಲಿ ನಡೆದ ಅಂತ್ಯಕ್ರಿಯೆಯ ಪ್ರಾರ್ಥನೆಯಲ್ಲಿ ಭಾಗವಹಿಸಿದ್ದರೂ, ಅವರ ಉತ್ತರಾಧಿಕಾರಿ ಮೊಜ್ತಬಾ ಖಮೇನಿಯವರ ಅನುಪಸ್ಥಿತಿಯು ಗಮನಾರ್ಹ ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ. ಅವರ ಸುರಕ್ಷತೆ ಮತ್ತು ಆರೋಗ್ಯದ ಬಗ್ಗೆ ಊಹಾಪೋಹಗಳು ಹರಡಿವೆ.
ಇರಾನ್ ಅಧ್ಯಕ್ಷ ಮಸೌದ್ ಪೆಜೆಶ್ಕಿಯಾನ್, ಸಂಸತ್ತಿನ ಸ್ಪೀಕರ್ ಮೊಹಮ್ಮದ್ ಬಘರ್ ಘಾಲಿಬಾಫ್ ಮತ್ತು ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC) ಕಮಾಂಡರ್-ಇನ್-ಚೀಫ್ ಅಹ್ಮದ್ ವಹಿದಿ ಕೂಡ ಪ್ರಾರ್ಥನೆಯಲ್ಲಿ ಭಾಗವಹಿಸಿದ್ದರು. ಖಮೇನಿ ಮಕ್ಕಳಾದ ಮೊಸ್ತಫಾ, ಮೇಸಾಮ್ ಮತ್ತು ಮಸೂದ್ ಖಮೇನಿ ಭಾಗಿಯಾಗಿದ್ದರು.
ಅಲಿ ಖಮೇನಿ ಶವಪೆಟ್ಟಿಗೆಯ ಮೇಲೆ ಇರಾನಿನ ಧ್ವಜ ಹೊದಿಸಲಾಗಿದೆ. ಖಮೇನಿ ಶವಪೆಟ್ಟಿಗೆಯ ಪಕ್ಕದಲ್ಲಿ ಫೆಬ್ರವರಿಯಲ್ಲಿ ವೈಮಾನಿಕ ದಾಳಿಯಲ್ಲಿ ಸಾವನ್ನಪ್ಪಿದ ಇತರ ನಾಲ್ಕು ಕುಟುಂಬ ಸದಸ್ಯರ ಶವಪೆಟ್ಟಿಗೆಗಳನ್ನು ಇರಿಸಲಾಗಿದೆ. ಅವರಲ್ಲಿ ಖಮೇನಿಯವರ ಮೊಮ್ಮಗಳು ಕೂಡ ಸೇರಿದೆ. ರಾಷ್ಟ್ರವ್ಯಾಪಿ ಶೋಕಾಚರಣೆಯಲ್ಲಿ 10 ಮಿಲಿಯನ್‌ಗಿಂತಲೂ ಹೆಚ್ಚು ಜನರು ಭಾಗವಹಿಸುತ್ತಾರೆ ಎಂದು ಅಧಿಕಾರಿಗಳು ಅಂದಾಜಿಸಿದ್ದಾರೆ.
ಮೊಜ್ತಬಾ ಖಮೇನಿ ಏಕೆ ಗೈರುಹಾಜರಾಗಿದ್ದಾರೆ?
ಮಾರ್ಚ್‌ನಲ್ಲಿ ತಮ್ಮ ತಂದೆಯ ನಂತರ ಇರಾನ್‌ನ ಸರ್ವೋಚ್ಚ ನಾಯಕರಾಗಿ ಅಧಿಕಾರ ವಹಿಸಿಕೊಂಡ ನಂತರ ಮೊಜ್ತಬಾ ಖಮೇನಿ ಅವರ ಅನುಪಸ್ಥಿತಿಯು ಆಶ್ಚರ್ಯಕರವಾಗಿದೆ. ಅವರ ನೇಮಕಾತಿಯ ನಂತರ, ಅವರನ್ನು ಸಾರ್ವಜನಿಕವಾಗಿ ನೋಡಲಾಗಿಲ್ಲ ಅಥವಾ ಕಾಣಿಸಿಲ್ಲ. ಅಂತ್ಯಕ್ರಿಯೆಯ ಯಾವ ಕ್ರಿಯೆಗೆ ಮೊಜ್ತಬಾ ಹಾಜರಾಗುತ್ತಾರೆಯೇ ಎಂಬುದರ ಕುರಿತು ಇರಾನಿನ ಅಧಿಕಾರಿಗಳು ಮೌನವಾಗಿದ್ದಾರೆ. ಅಂತ್ಯಕ್ರಿಯೆಯ ಯೋಜನಾ ಸಮಿತಿಯ ಮುಖ್ಯಸ್ಥ ಅಲಿ ಅಕ್ಬರ್ ಪೌರ್ಜಮ್ಶಿಡಿಯನ್ ಕಳೆದ ವಾರ ಪತ್ರಿಕಾಗೋಷ್ಠಿಯಲ್ಲಿ, "ಸುಪ್ರೀಂ ನಾಯಕನ ಭಾಗವಹಿಸುವಿಕೆಯ ವಿಷಯ ನನ್ನ ಅಧಿಕಾರ ವ್ಯಾಪ್ತಿ ಅಥವಾ ತಿಳುವಳಿಕೆಗೆ ಮೀರಿದ್ದು ಎಂದು ಹೇಳಿದರು. ಇದಕ್ಕೆ ಸಂಬಂಧಿಸಿದ ಯಾವುದೇ ಮಾಹಿತಿಯು ನೇರವಾಗಿ ಅವರ ಕಚೇರಿಯಿಂದ ಬರುತ್ತದೆ ಎಂದು ಅವರು ಹೇಳಿದರು.