Hormuz ಮೇಲೆ ಶುಲ್ಕ ಘೋಷಿಸಿ ಕೆಲವೇ ಗಂಟೆಗಳಲ್ಲೇ ಟ್ರಂಪ್ ಯೂಟರ್ನ್‌; ಇರಾನ್‌ಗೆ 'ಭೀಕರ ದಾಳಿ' ಎಚ್ಚರಿಕೆ ನೀಡಿದ ನೆತನ್ಯಾಹು!

ಹಾರ್ಮುಜ್ ಜಲಸಂಧಿ ಮೂಲಕ ಹಾದುಹೋಗುವ ಹಡಗುಗಳಿಗೆ ಭದ್ರತೆ ನೀಡಿದ್ದಕ್ಕಾಗಿ ಸರಕು ಸಾಗಣೆಯ ಮೇಲೆ ಶೇ.20 ಶುಲ್ಕ ವಿಧಿಸುವುದಾಗಿ ಡೊನಾಲ್ಡ್ ಟ್ರಂಪ್​ ಸೋಮವಾರ ಹೇಳಿದ್ದರು.
Donald Trump
ಡೊನಾಲ್ಡ್ ಟ್ರಂಪ್online desk
Updated on

ವಾಷಿಂಗ್ಟನ್: ಹಾರ್ಮುಜ್ ಜಲಸಂಧಿಯ ಮೂಲಕ ಸಾಗುವ ಹಡಗುಗಳ ಮೇಲಿನ ಯೋಜಿತ ಶೇ. 20 ರಷ್ಟು ಶುಲ್ಕವನ್ನು ರದ್ದುಗೊಳಿಸುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಮಂಗಳವಾರ ಘೋಷಿಸಿದ್ದಾರೆ.

ಹಾರ್ಮುಜ್ ಜಲಸಂಧಿ ಮೂಲಕ ಹಾದುಹೋಗುವ ಹಡಗುಗಳಿಗೆ ಭದ್ರತೆ ನೀಡಿದ್ದಕ್ಕಾಗಿ ಸರಕು ಸಾಗಣೆಯ ಮೇಲೆ ಶೇ.20 ಶುಲ್ಕ ವಿಧಿಸುವುದಾಗಿ ಡೊನಾಲ್ಡ್ ಟ್ರಂಪ್​ ಸೋಮವಾರ ಹೇಳಿದ್ದರು. ಇದೀಗ ಉಲ್ಟಾ ಹೊಡೆದಿರುವ ಟ್ರಂಪ್, ಶುಲ್ಕ ರದ್ದುಗೊಳಿಸುತ್ತಿರುವುದಾಗಿ ಮತ್ತು ಗಲ್ಫ್ ಮಿತ್ರರಾಷ್ಟ್ರಗಳೊಂದಿಗೆ ವ್ಯಾಪಾರ ಒಪ್ಪಂದಗಳನ್ನು ಮುಂದುವರಿಸುವುದಾಗಿ ತಿಳಿಸಿದ್ದಾರೆ.

ಕಾರ್ಯತಂತ್ರದ ಜಲಮಾರ್ಗದ ಕುರಿತು ಇರಾನ್‌ನೊಂದಿಗೆ ಹೊಸ ಉದ್ವಿಗ್ನತೆಯ ನಡುವೆ ಘೋಷಿಸಲಾಗಿದ್ದ ಶೇ. 20 ರಷ್ಟು ಟೋಲ್ ಅನ್ನು ಹಿಂತೆಗೆದುಕೊಳ್ಳುವ ನಿರ್ಧಾರವು "ಮಧ್ಯಪ್ರಾಚ್ಯ ನಾಯಕತ್ವದೊಂದಿಗೆ ಹೆಚ್ಚು ಫಲಪ್ರದ ಮಾತುಕತೆಯನ್ನು ಆಧರಿಸಿದೆ" ಎಂದು ಟ್ರಂಪ್ ಹೇಳಿದ್ದಾರೆ.

"ನಾನು ಶೇ. 20 ರಷ್ಟು ಯುನೈಟೆಡ್ ಸ್ಟೇಟ್ಸ್ ಮರುಪಾವತಿ ಶುಲ್ಕವನ್ನು ವಿವಿಧ ಗಲ್ಫ್ ರಾಷ್ಟ್ರಗಳು, ಯುನೈಟೆಡ್ ಸ್ಟೇಟ್ಸ್‌ನೊಂದಿಗೆ ಮಾಡಿಕೊಳ್ಳಲಿರುವ ವ್ಯಾಪಾರ ಮತ್ತು ಹೂಡಿಕೆ ಒಪ್ಪಂದಗಳೊಂದಿಗೆ ಬದಲಾಯಿಸಲು ನಿರ್ಧರಿಸಿದ್ದೇನೆ" ಎಂದು ಟ್ರಂಪ್ ತಮ್ಮ ಟ್ರೂತ್ ಸೋಶಿಯಲ್ ಪ್ಲಾಟ್‌ಫಾರ್ಮ್‌ನಲ್ಲಿ ತಿಳಿಸಿದ್ದಾರೆ.

Donald Trump
'Hormuz ಭದ್ರತೆಗೆ ಸರಕು ಸಾಗಣೆಯ ಮೇಲೆ ಶೇ.20 ಶುಲ್ಕ ಹೇರಿ': ಜಗತ್ತಿಗೆ ಮತ್ತೆ ಶಾಕ್ ಕೊಟ್ಟ Donald Trump, ಇರಾನ್ ಕೆಂಡಾಮಂಡಲ

ಆದಾಗ್ಯೂ, ಇರಾನಿನ ಬಂದರುಗಳಿಗೆ ಮತ್ತು ಅಲ್ಲಿಂದ ಪ್ರಯಾಣಿಸುವ ಅಥವಾ ಇರಾನಿನ ಸರಕುಗಳನ್ನು ಸಾಗಿಸುವ ಹಡಗುಗಳ ಮೇಲೆ "ಪೂರ್ಣ ದಿಗ್ಬಂಧನ"ವನ್ನು ಮುಂದುವರಿಸುವುದಾಗಿ ಅಮೆರಿಕ ಅಧ್ಯಕ್ಷರು ಘೋಷಿಸಿದ್ದಾರೆ.

ವಾಷಿಂಗ್ಟನ್ ಈಗ "ಹಾರ್ಮುಜ್ ಜಲಸಂಧಿಯ ಕಾವಲುಗಾರ" ಎಂದು ಟ್ರಂಪ್ ಸೋಮವಾರ ಘೋಷಿಸಿದ್ದರು ಮತ್ತು ಪ್ರಮುಖ ತೈಲ ಹಾಗೂ ಅನಿಲ ಸಾಗಣೆ ಮಾರ್ಗವನ್ನು ರಕ್ಷಿಸಿದ್ದಕ್ಕಾಗಿ ಯುನೈಟೆಡ್ ಸ್ಟೇಟ್ಸ್‌ಗೆ ಸರಕು ಸಾಗಣೆಯ ಮೇಲೆ ಶೇ. 20 ರಷ್ಟ ಶುಲ್ಕ ವಿಧಿಸುವುದಾಗಿ ಹೇಳಿದ್ದರು.

ಇರಾನ್‌ಗೆ 'ಭೀಕರ ದಾಳಿ' ಎಚ್ಚರಿಕೆ ನೀಡಿದ ನೆತನ್ಯಾಹು!

ಏತನ್ಮಧ್ಯೆ, ಇರಾನ್ ಗೆ 'ಭೀಕರ ದಾಳಿ'ಯ ಎಚ್ಚರಿಕೆ ನೀಡಿದ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು, ಟೆಹ್ರಾನ್ ಮತ್ತೆ ದಾಳಿ ನಡೆಸಿದರೆ ಅತ್ಯಂತ ಭೀಕರವಾಗಿ ಪ್ರತಿಕ್ರಿಯಿಸುವುದಾಗಿ ಮಂಗಳವಾರ ಪ್ರತಿಜ್ಞೆ ಮಾಡಿದ್ದಾರೆ.

"ನಾನು ಇರಾನ್ ನಾಯಕರಿಗೆ ಹೇಳುತ್ತೇನೆ: ನೀವು ನಮ್ಮ ಮೇಲೆ ದಾಳಿ ಮಾಡಿದರೆ ಸುಮ್ಮನಿರಲು ಸಾಧ್ಯವಿಲ್ಲ" ಎಂದು ನೆತನ್ಯಾಹು ಡಿಮೋನಾದಲ್ಲಿ ನಡೆದ ಸಮ್ಮೇಳನದಲ್ಲಿ ಹೇಳಿದ್ದಾರೆ.

ಭವಿಷ್ಯದ ಯಾವುದೇ ದಾಳಿಗಳು ಈ ವರ್ಷದ ಆರಂಭದಲ್ಲಿ ತನ್ನ ಪ್ರಮುಖ ಮಿತ್ರ ರಾಷ್ಟ್ರ ಯುನೈಟೆಡ್ ಸ್ಟೇಟ್ಸ್‌ನೊಂದಿಗೆ ಜಂಟಿಯಾಗಿ ನಡೆಸಿದ ದಾಳಿಗಳಿಗಿಂತ ಹೆಚ್ಚು ಶಕ್ತಿಶಾಲಿಯಾಗಿರುತ್ತವೆ ಎಂದು ನೆತನ್ಯಾಹು ಎಚ್ಚರಿಕೆ ನೀಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com