ಚೊಚ್ಚಲ ಬಾಹ್ಯಾಕಾಶ ಯಾತ್ರೆ ಕೈಗೊಂಡ ಭಾರತೀಯ ಮೂಲದ ಗಗನಯಾತ್ರಿ ಅನಿಲ್ ಮೆನನ್!

ರಷ್ಯಾದ ಗಗನಯಾತ್ರಿಗಳಾದ ಪಯೋಟರ್ ಡುಬ್ರೊವ್ ಮತ್ತು ಅನ್ನಾ ಕಿಕಿನಾ ಅವರೊಂದಿಗೆ ಕಝಾಕಿಸ್ತಾನ್‌ನ ಬೈಕೊನೂರ್ ಕಾಸ್ಮೊಡ್ರೋಮ್‌ನಿಂದ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ (ISS) ಪ್ರಯಾಣ ಬೆಳೆಸಿದ್ದಾರೆ.
Anil Menon
ಅನಿಲ್ ಮೆನನ್
Updated on

ಕಝಾಕಿಸ್ತಾನ್‌: ಭಾರತೀಯ ಮೂಲದ ಗಗನಯಾತ್ರಿ ಅನಿಲ್ ಮೆನನ್ ತಮ್ಮ ಮೊದಲ ಬಾಹ್ಯಾಕಾಶ ಯಾತ್ರೆಯನ್ನು ಕೈಗೊಂಡಿದ್ದಾರೆ. ರಷ್ಯಾದ 'ಸೋಯುಜ್ ಎಂಎಸ್-29' (Soyuz MS-29) ರಾಕೆಟ್ ಮೂಲಕ ಬಾಹ್ಯಾಕಾಶ ಯಾನ ಆರಂಭಿಸಿದ್ದಾರೆ.

ರಷ್ಯಾದ ಗಗನಯಾತ್ರಿಗಳಾದ ಪಯೋಟರ್ ಡುಬ್ರೊವ್ ಮತ್ತು ಅನ್ನಾ ಕಿಕಿನಾ ಅವರೊಂದಿಗೆ ಕಝಾಕಿಸ್ತಾನ್‌ನ ಬೈಕೊನೂರ್ ಕಾಸ್ಮೊಡ್ರೋಮ್‌ನಿಂದ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ (ISS) ಪ್ರಯಾಣ ಬೆಳೆಸಿದ್ದಾರೆ.

ಪಯೋಟರ್ ಡುಬ್ರೊವ್ ಮತ್ತು ಅನ್ನಾ ಕಿಕಿನಾ ಅವರಿಗೆ ಇದು ಎರಡನೇ ಮಿಷನ್ ಆಗಿದೆ. ಈ ಮೂವರ ತಂಡ ಸುಮಾರು 8 ತಿಂಗಳ ಕಾಲ ಬಾಹ್ಯಾಕಾಶ ನಿಲ್ದಾಣದಲ್ಲಿ ವಾಸ್ತವ್ಯ ಹೂಡಲಿದ್ದು, ಅಲ್ಲಿ ಅವರು ಹಲವು ಪ್ರಮುಖ ಸಂಶೋಧನೆಗಳಲ್ಲಿ ತೊಡಗಿಸಿಕೊಳ್ಳಲಿದ್ದು, 2027 ರ ಆರಂಭದಲ್ಲಿ ಭೂಮಿಗೆ ಮರಳಲಿದ್ದಾರೆ.

ಇಂದು ಭಾರತೀಯ ಕಾಲಮಾನ ರಾತ್ರಿ 8:17ಕ್ಕೆ ಸೋಯುಜ್ ರಾಕೆಟ್ ಉಡಾವಣೆಯಾಗಿದೆ. ಕೇವಲ ಮೂರು ಗಂಟೆಗಳ ಪ್ರಯಾಣದ ನಂತರ ಅಂದರೆ ರಾತ್ರಿ ಸುಮಾರು 11:26ಕ್ಕೆ ಇವರು ಬಾಹ್ಯಾಕಾಶ ನಿಲ್ದಾಣ ತಲುಪಲಿದ್ದಾರೆ. ಬಾಹ್ಯಾಕಾಶದಲ್ಲಿ ರಕ್ತ ಪರಿಚಲನೆ ಹೇಗೆ ಬದಲಾಗುತ್ತದೆ ಮತ್ತು ಅಂಗಾಂಶಗಳ ದುರಸ್ತಿಗೆ ಸಂಬಂಧಿಸಿದ ಬಯೋಪ್ರಿಂಟಿಂಗ್ ತಂತ್ರಜ್ಞಾನದ ಬಗ್ಗೆಯೂ ಅವರು ಅಧ್ಯಯನ ನಡೆಸಲಿದ್ದಾರೆ.

ಯಾರಿದು ಅನಿಲ್ ಮನೆನ್? ಅನಿಲ್ ತಂದೆ ಕೇರಳ ಮೂಲದ ಭಾರತೀಯರು ಮತ್ತು ತಾಯಿ ಉಕ್ರೇನ್ ಮೂಲದವರು. ಹಾರ್ವರ್ಡ್ ವಿಶ್ವವಿದ್ಯಾಲಯದಲ್ಲಿ ನ್ಯೂರೋಬಯಾಲಜಿಯಲ್ಲಿ ಪದವಿ ಪಡೆದಿರುವ ಇವರು, ಸ್ಟ್ಯಾನ್‌ಫೋರ್ಡ್ ವಿಶ್ವವಿದ್ಯಾಲಯದಲ್ಲಿ ಮೆಕ್ಯಾನಿಕಲ್ ಎಂಜಿನಿಯರಿಂಗ್ ಮತ್ತು ವೈದ್ಯಕೀಯ ಶಿಕ್ಷಣ (M.D.) ಪೂರೈಸಿದ್ದಾರೆ. ನಾಸಾ ಸೇರುವ ಮುನ್ನ ಇವರು ಎಲೋನ್ ಮಾಸ್ಕ್ ಅವರ SpaceX ಕಂಪನಿಯ ಮೊದಲ 'ಫ್ಲೈಟ್ ಸರ್ಜನ್' ಆಗಿ ಕೆಲಸ ಮಾಡಿದ್ದರು.

Anil Menon
NASA ಗಗನಯಾತ್ರಿ ಭಾರತೀಯ ಮೂಲದ Anil Menon ಮೊದಲ ಬಾಹ್ಯಾಕಾಶ ಯಾನಕ್ಕೆ ಸಜ್ಜು; ಜುಲೈ 14ರಂದು ಉಡಾವಣೆ..!

ಪ್ರಸ್ತುತ ಅವರು ಅಮೆರಿಕ ಬಾಹ್ಯಾಕಾಶ ಪಡೆಯಲ್ಲಿ (US Space Force) ಕರ್ನಲ್ ಆಗಿಯೂ ಸೇವೆ ಸಲ್ಲಿಸುತ್ತಿದ್ದಾರೆ. ಅನಿಲ್ ಅವರ ಪತ್ನಿ ಅನ್ನಾ ಮೆನನ್ ಕೂಡ ಖ್ಯಾತ ಗಗನಯಾನಿಯಾಗಿದ್ದು, ಅವರು ಇತ್ತೀಚೆಗಷ್ಟೇ ಖಾಸಗಿ ಬಾಹ್ಯಾಕಾಶ ಮಿಷನ್ ಮೂಲಕ ಸುದ್ದಿಯಾಗಿದ್ದರು.

ಕಲ್ಪನಾ ಚಾವ್ಲಾ ಮತ್ತು ಸುನಿತಾ ವಿಲಿಯಮ್ಸ್ ಅವರ ನಂತರ ಬಾಹ್ಯಾಕಾಶಕ್ಕೆ ಹಾರಿದ ಭಾರತೀಯ ಮೂಲದ ಪ್ರಮುಖ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಅನಿಲ್ ಮೆನನ್ ಪಾತ್ರರಾಗಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X
Kannada Prabha
www.kannadaprabha.com