ಅಮೆರಿಕ ಯೋಧರ ಹತ್ಯೆ ಮಾಡಿದರೆ ಯುದ್ಧ ಪುನರಾರಂಭ: ಇರಾನ್'ಗೆ ಟ್ರಂಪ್ ಖಡಕ್ ಎಚ್ಚರಿಕೆ

ಇರಾನ್‌ಗೆ ಈಗ ನೌಕಾಪಡೆ ಇಲ್ಲ, ವಾಯುಪಡೆ ಇಲ್ಲ. ಅವರ ನಾಯಕತ್ವವನ್ನು ನಾವು ಸಂಪೂರ್ಣವಾಗಿ ನಾಶಪಡಿಸಿದ್ದೇವೆ. ಆದರೂ ಕೆಲವು ಮಾಧ್ಯಮಗಳು ಅವರು ಯುದ್ಧದಲ್ಲಿ ಚೆನ್ನಾಗಿ ಸಾಧನೆ ಮಾಡುತ್ತಿದ್ದಾರೆ ಎಂದು ವರದಿ ಮಾಡುತ್ತಿವೆ. ಇದು ನಂಬಲಸಾಧ್ಯ.
Donald Trump, Benjamin Netanyahu
ಡೊನಾಲ್ಡ್ ಟ್ರಂಪ್, ಬೆಂಜಮಿನ್ ನೆತನ್ಯಾಹುAssociated Press
Updated on

ವಾಷಿಂಗ್ಟನ್: ಅಮೆರಿಕಾ ಯೋಧರನ್ನು ಇರಾನ್ ಹತ್ಯೆ ಮಾಡಿದರೆ ಮತ್ತೆ ಸೇನಾ ಕಾರ್ಯಾಚರಣೆ ಆರಂಭಿಸಲು ಅದು ಸಾಕಷ್ಟು ಕಾರಣವಾಗಲಿದೆ ಎಂದು ಇರಾನ್'ಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಕಠಿಣ ಎಚ್ಚರಿಕೆ ನೀಡಿದ್ದಾರೆ.

ಶ್ವೇತಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಟ್ರಂಪ್, ಇರಾನ್‌ನ ಸೇನಾ ಸಾಮರ್ಥ್ಯ ಮತ್ತು ನಾಯಕತ್ವವನ್ನು ಅಮೆರಿಕಾ ಈಗಾಗಲೇ ತೀವ್ರವಾಗಿ ದುರ್ಬಲಗೊಳಿಸಿದೆ. ಅವರು ಅಮೆರಿಕದ ಸೈನಿಕರನ್ನು ಕೊಂದರೆ ಮತ್ತೆ ಯುದ್ಧ ಆರಂಭಿಸಲು ಅದು ಉತ್ತಮ ಕಾರಣವಾಗುತ್ತದೆ ಎಂದು ಹೇಳಿದ್ದಾರೆ.

ಇರಾನ್‌ಗೆ ಈಗ ನೌಕಾಪಡೆ ಇಲ್ಲ, ವಾಯುಪಡೆ ಇಲ್ಲ. ಅವರ ನಾಯಕತ್ವವನ್ನು ನಾವು ಸಂಪೂರ್ಣವಾಗಿ ನಾಶಪಡಿಸಿದ್ದೇವೆ. ಆದರೂ ಕೆಲವು ಮಾಧ್ಯಮಗಳು ಅವರು ಯುದ್ಧದಲ್ಲಿ ಚೆನ್ನಾಗಿ ಸಾಧನೆ ಮಾಡುತ್ತಿದ್ದಾರೆ ಎಂದು ವರದಿ ಮಾಡುತ್ತಿವೆ. ಇದು ನಂಬಲಸಾಧ್ಯ ಎಂದು ತಿಳಿಸಿದರು.

ಇರಾನ್‌ನ 159 ಹಡಗುಗಳು ಸಮುದ್ರದಲ್ಲಿ ಮುಳುಗಿವೆ, ಅದಕ್ಕೆ ಸಂಬಂಧಿಸಿದ ಚಿತ್ರಗಳೂ ನಮ್ಮ ಬಳಿ ಇವೆ ಎಂದು ಹೇಳಿದ್ದಾರೆ.

ಇರಾನ್ ವಿರುದ್ಧ ಮುಂದಿನ ಯಾವುದೇ ಸೈನಿಕ ಕ್ರಮಕ್ಕೆ ಕಾಂಗ್ರೆಸ್ ಅನುಮತಿ ಕಡ್ಡಾಯಗೊಳಿಸುವ ಉದ್ದೇಶದ ನಿರ್ಣಯವನ್ನು ಅಮೆರಿಕ ಪ್ರತಿನಿಧಿಗಳ ಸಭೆ (ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್) ಅಂಗೀಕರಿಸಿದ ಬೆನ್ನಲ್ಲೇ ಟ್ರಂಪ್ ಅವರು ಈ ಹೇಳಿಕೆ ನೀಡಿದ್ದಾರೆ.

ನಾಲ್ವರು ರಿಪಬ್ಲಿಕನ್ ಸಂಸದರು ಡೆಮಾಕ್ರಾಟ್ ಸದಸ್ಯರೊಂದಿಗೆ ಸೇರಿ ಈ ನಿರ್ಣಯವನ್ನು ಬೆಂಬಲಿಸಿದ್ದು, 215-208 ಮತಗಳ ಅಂತರದಲ್ಲಿ ಅಂಗೀಕಾರಗೊಂಡಿದೆ. ಇದೀಗ ಈ ನಿರ್ಣಯ ಸೆನೆಟ್‌ಗೆ ವರ್ಗಾವಣೆಯಾಗಲಿದೆ.

Donald Trump, Benjamin Netanyahu
ಮೋದಿ ನನ್ನ ಉತ್ತಮ ಸ್ನೇಹಿತ, ಶೀಘ್ರದಲ್ಲೇ ಭಾರತ-ಅಮೆರಿಕ ವ್ಯಾಪಾರ ಒಪ್ಪಂದ: ಡೊನಾಲ್ಡ್ ಟ್ರಂಪ್

ಫೆಬ್ರವರಿ 28ರಂದು ಅಮೆರಿಕ ಮತ್ತು ಇಸ್ರೇಲ್ ಜಂಟಿಯಾಗಿ ಇರಾನ್ ವಿರುದ್ಧ ಸೈನಿಕ ದಾಳಿ ಆರಂಭಿಸಿದ ಬಳಿಕ ಟ್ರಂಪ್ ಅವರ ಅಧಿಕಾರಕ್ಕೆ ಕಾಂಗ್ರೆಸ್ ನೀಡಿರುವ ಮೊದಲ ಪ್ರಮುಖ ಸವಾಲು ಇದಾಗಿದೆ.

ಆದರೆ, ಸೆನೆಟ್‌ನಲ್ಲೂ ಈ ನಿರ್ಣಯ ಅಂಗೀಕಾರಗೊಂಡರೆ ಅದಕ್ಕೆ ವೀಟೊ (ನಿರಾಕರಣೆ) ಹಾಕುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ಈ ಮಧ್ಯೆ, ನಿರ್ಣಯವನ್ನು ಬೆಂಬಲಿಸಿದ ನಾಯಕರ ವಿರುದ್ಧ ಟ್ರಂಪ್ ವಾಗ್ದಾಳಿ ನಡೆಸಿದ್ದು, ಈ ಮತದಾನವನ್ನು "ಅರ್ಥಹೀನ" ಎಂದು ಟೀಕಿಸಿದ್ದಾರೆ.

ತಮ್ಮ ಸಾಮಾಜಿಕ ಜಾಲತಾಣ 'ಟ್ರುತ್ ಸೋಷಿಯಲ್'ನಲ್ಲಿ ಪೋಸ್ಟ್ ಮಾಡಿರುವ ಟ್ರಂಪ್, "ಇರಾನ್‌ನೊಂದಿಗೆ ಯುದ್ಧ ಅಂತ್ಯಗೊಳಿಸಲು ನಡೆಯುತ್ತಿರುವ ಅಂತಿಮ ಹಂತದ ಮಾತುಕತೆಗಳ ನಡುವೆಯೇ ನನ್ನ ಯುದ್ಧಾಧಿಕಾರವನ್ನು ಮಿತಿಗೊಳಿಸಲು ಕೆಲ ರಿಪಬ್ಲಿಕನ್‌ಗಳು ಮತ್ತು ಎಲ್ಲಾ ಡೆಮಾಕ್ರಾಟ್‌ಗಳು ಬೆಂಬಲ ನೀಡಿದ್ದಾರೆ. ಇದು ದೇಶಭಕ್ತಿಯಿಲ್ಲದ ನಡೆ," ಎಂದು ಆರೋಪಿಸಿದ್ದಾರೆ.

ಇದೇ ವೇಳೆ ಡೆಮಾಕ್ರಾಟ್‌ಗಳು "ಟ್ರಂಪ್ ಡೆರೇಂಜ್‌ಮೆಂಟ್ ಸಿಂಡ್ರೋಮ್"ನಿಂದ ಪ್ರೇರಿತರಾಗಿದ್ದಾರೆ ಎಂದು ಟೀಕಿಸಿದ ಅವರು, ನಿರ್ಣಯ ಬೆಂಬಲಿಸಿದ ನಾಲ್ವರು ರಿಪಬ್ಲಿಕನ್ ಸದಸ್ಯರನ್ನು "ಪ್ರಚಾರಪ್ರಿಯರು" ಎಂದು ಕರೆದಿದ್ದಾರೆ.

ಇರಾನ್-ಅಮೆರಿಕ ಉದ್ವಿಗ್ನತೆ ಮುಂದುವರಿದಿರುವ ನಡುವೆಯೇ ಟ್ರಂಪ್ ಅವರ ಈ ಹೇಳಿಕೆಗಳು ಮತ್ತಷ್ಟು ಚರ್ಚೆಗೆ ಕಾರಣವಾಗಿವೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com