'ಸಂಗಾತಿ ಜೊತೆ ಜಗಳ'; ಮನುಷ್ಯನಂತೆ ಚಿಂತಿಸುತ್ತಿರುವ Gorilla ವಿಡಿಯೋ ವೈರಲ್

ಜಪಾನ್‌ನ ಹಿಗಶಿಯಾಮಾ ಮೃಗಾಲಯ ಮತ್ತು ಸಸ್ಯೋದ್ಯಾನದಲ್ಲಿರುವ ಗೊರಿಲ್ಲಾವೊಂದು ಸಾಮಾಜಿಕ ಜಾಲತಾಣಗಳಲ್ಲಿ ಅನಿರೀಕ್ಷಿತವಾಗಿ ಭಾರೀ ಜನಪ್ರಿಯತೆ ಗಳಿಸಿದೆ.
Gorillas human-like reaction after fight with mate goes viral
ಮನುಷ್ಯನಂತೆ ಚಿಂತಿಸುತ್ತಿರುವ ಗೊರಿಲ್ಲಾ
Updated on

ಟೋಕಿಯೊ: ಸಂಗಾತಿ ಜೊತೆ ಜಗಳ ಮಾಡಿಕೊಂಡ ಗೊರಿಲ್ಲಾವೊಂದು ಮನುಷ್ಯನ ರೀತಿ ಚಿಂತಿಸುತ್ತಿರುವ ವಿಡಿಯೋವೊಂದು ವ್ಯಾಪಕ ವೈರಲ್ ಆಗುತ್ತಿದೆ.

ಜಪಾನ್‌ನ ಹಿಗಶಿಯಾಮಾ ಮೃಗಾಲಯ ಮತ್ತು ಸಸ್ಯೋದ್ಯಾನದಲ್ಲಿರುವ ಗೊರಿಲ್ಲಾವೊಂದು ಸಾಮಾಜಿಕ ಜಾಲತಾಣಗಳಲ್ಲಿ ಅನಿರೀಕ್ಷಿತವಾಗಿ ಭಾರೀ ಜನಪ್ರಿಯತೆ ಗಳಿಸಿದೆ. ತನ್ನ ಸಂಗಾತಿಯೊಂದಿಗೆ ಜಗಳವಾದ ಬಳಿಕ ಒಂಟಿಯಾಗಿ ಕುಳಿತು ಗಂಭೀರ ಚಿಂತೆಯಲ್ಲಿ ಮುಳುಗಿರುವಂತೆ ಕಂಡ ವಿಡಿಯೋ ವೈರಲ್ ಆದ ನಂತರ ಈ ಗೊರಿಲ್ಲಾ ನೆಟ್ಟಿಗರ ಗಮನ ಸೆಳೆದಿದೆ.

ಉದ್ಯಾನದಲ್ಲಿರುವ ಕಿಯೋಮಸಾ (Kiyomasa) ಎಂಬ 13 ವರ್ಷದ ಗೊರಿಲ್ಲಾ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ತನ್ನ ಆಕರ್ಷಕ ಭಂಗಿಗಳ ಮೂಲಕ ಪ್ರವಾಸಿಗರ ಸೆಳೆಯುತ್ತಿದೆ. ಈ ಕಿಯೋಮಾಸಾ, ತನ್ನ ಆಕರ್ಷಕ ವ್ಯಕ್ತಿತ್ವ ಮತ್ತು ರೂಪದ ಮೂಲಕ ವಿಶ್ವದಾದ್ಯಂತ ಖ್ಯಾತಿ ಪಡೆದ ಬೆಳ್ಳಿಬಣ್ಣದ ಬೆನ್ನಿನ ಗೊರಿಲ್ಲಾ ಶಬಾನಿ (Shabani) ಯ ಪುತ್ರನಾಗಿದ್ದಾನೆ.

Gorillas human-like reaction after fight with mate goes viral
ಫುಟ್‌ಬಾಲ್ ಪಂದ್ಯದ ವೇಳೆ ಸ್ಪೈಡರ್‌ಕ್ಯಾಮ್ ಗೆ ಬೆಂಕಿ, ಕ್ಯಾಮೆರಾಮನ್ ಬಚಾವ್, ಕೂದಲೆಳೆ ಅಂತರದಲ್ಲಿ ತಪ್ಪಿದ ಭಾರಿ ಅನಾಹುತ! Video

ಮನುಷ್ಯನಂತೆ ವರ್ತಿಸಿದ ಗೊರಿಲ್ಲಾ!

ಪ್ರಸ್ತುತ ವೈರಲ್ ಆಗಿರುವ ಸುಮಾರು ಒಂದು ನಿಮಿಷದ ವಿಡಿಯೋದಲ್ಲಿ ಕಿಯೋಮಾಸಾ ಒಂಟಿಯಾಗಿ ಕುಳಿತಿರುವುದು ಕಾಣಿಸುತ್ತದೆ. ತನ್ನ ಬಲಗೈಯನ್ನು ಎದೆಯ ಮೇಲೆ ಮಡಚಿಕೊಂಡು, ಎಡಗೈಯನ್ನು ಬಾಯಿಯ ಬಳಿ ಇರಿಸಿಕೊಂಡು ದೂರದತ್ತ ದೃಷ್ಟಿ ನೆಟ್ಟಿರುವಂತೆ ಕಾಣುತ್ತದೆ.

ಸಂಗಾತಿ ಜೊತೆ ಜಗಳ

ವರದಿಗಳ ಪ್ರಕಾರ, ಕಿಯೋಮಾಸಾ ತನ್ನ ಸಂಗಾತಿಯೊಂದಿಗೆ ಸಣ್ಣ ಜಗಳ ಮಾಡಿಕೊಂಡಿತ್ತು. ಈ ಘಟನೆ ಬಳಿಕ ಕಿಯೋಮಸಾ ಈ ರೀತಿ ವರ್ತಿಸಿದೆ ಎಂದು ಮೃಗಾಲಯದ ಸಿಬ್ಬಂದಿ ಹೇಳಿದ್ದಾರೆ. ಕಿಯೋಮಾಸಾ ನಿಜವಾಗಿ ಏನು ಯೋಚಿಸುತ್ತಿದ್ದ ಎಂಬುದನ್ನು ತಿಳಿಯಲು ಯಾವುದೇ ಮಾರ್ಗವಿಲ್ಲ. ಆದರೆ ಅವನ ದೇಹಭಾಷೆ ಮನುಷ್ಯರ ವರ್ತನೆಯನ್ನು ಹೋಲುವಂತಿದ್ದ ಕಾರಣ ಸಾಮಾಜಿಕ ಜಾಲತಾಣ ಬಳಕೆದಾರರು ಅದಕ್ಕೆ ಫಿದಾ ಆಗಿದ್ದಾರೆ.

ವಿಡಿಯೋ X ನಲ್ಲಿ ವೈರಲ್ ಆದ ನಂತರ ಕಾಮೆಂಟ್‌ಗಳ ಮಹಾಪೂರವೇ ಹರಿದುಬರುತ್ತಿದೆ. ಅನೇಕರು ಕಿಯೋಮಾಸಾದ ಮುಖಭಾವವು ಜಗಳ ಮುಗಿದ ನಂತರವೂ ಮನಸ್ಸಿನಲ್ಲಿ ಅದೇ ವಾದವನ್ನು ಮತ್ತೆ ಮತ್ತೆ ನೆನಪಿಸಿಕೊಳ್ಳುವ ಅನುಭವವನ್ನು ನಿಖರವಾಗಿ ಪ್ರತಿಬಿಂಬಿಸುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com