ಬ್ರೆಜಿಲ್‌ನಲ್ಲಿ Bungee jump ವೇಳೆ ಭೀಕರ ದುರಂತ; safety rope ಕಟ್ಟುವುದನ್ನೇ ಮರೆತ ಸಿಬ್ಬಂದಿ, 40 ಮೀಟರ್ ಎತ್ತರದಿಂದ ಬಿದ್ದು ಯುವತಿ ದಾರುಣ ಸಾವು- Video

ಹಗ್ಗ ಕಟ್ಟದೆಯೇ ಆಕೆಯನ್ನು ಸೇತುವೆಯಿಂದ ಕೆಳಕ್ಕೆ ತಳ್ಳಲಾಗಿದೆ. ಆಕೆ ಕೆಳಗೆ ಬೀಳುತ್ತಿದ್ದಂತೆ ಅಲ್ಲಿದ್ದ ಜನರು "ಹಗ್ಗ ನೋಡಿ!" ಎಂದು ಕಿರುಚಾಡಿದ್ದಾರೆ. ಆದರೆ, ಅಷ್ಟರಲ್ಲಾಗಲೇ ಯುವತಿ ಕಾಂಕ್ರೀಟ್ ನೆಲಕ್ಕೆ ಅಪ್ಪಳಿಸಿ ಕೊನೆಯುಸಿರೆಳೆದಿದ್ದಾಳೆ.
Brazil Bungee Jump Horror
ಸುರಕ್ಷತಾ ಹಗ್ಗ ಕಟ್ಟದೆಯೇ ಯುವತಿಯನ್ನು ಸೇತುವೆಯಿಂದ ಕೆಳಗೆ ಬಿಡುತ್ತಿರುವ ಸಿಬ್ಬಂದಿ.
Updated on

ಸಾವೊ ಪಾಲೋ (ಬ್ರೆಜಿಲ್): ಬಂಗೀ ಜಂಪ್ ವೇಳೆ ಆಯೋಜಕರ ಬೇಜವಾಬ್ದಾರಿಯಿಂದಾಗಿ 21 ವರ್ಷದ ಯುವತಿಯೊಬ್ಬಳು ಸುಮಾರು 130 ಅಡಿ (40 ಮೀಟರ್) ಎತ್ತರದಿಂದ ಬಿದ್ದು ಸ್ಥಳದಲ್ಲೇ ಸಾವನ್ನಪ್ಪಿರುವ ಧೃತರಾಷ್ಟ್ರ ಘಟನೆ ಬ್ರೆಜಿಲ್‌ನ ಲೈಮೆರಾ ನಗರದಲ್ಲಿ ನಡೆದಿದೆ.

ಮರಿಯಾ ಎಡ್ವರ್ಡಾ ರೋಡ್ರಿಗಸ್ ಡಿ ಫ್ರೈಟಾಸ್ (21) ಮೃತಪಟ್ಟ ದುರ್ದೈವಿ. ಜೂನ್ 13, 2026ರ ಶನಿವಾರದಂದು ಆಗ್ನೇಯ ಸಾಪೋ ಪಾಲೋ ರಾಜ್ಯದ ಲೈಮೆರಾ ನಗರದಲ್ಲಿರುವ 'ಪಾಂಟೆ ಡೊ ಎಸ್ಕ್ವೆಲೆಟೊ' (ಸ್ಕೆಲಿಟನ್ ಬ್ರಿಡ್ಜ್) ಎಂಬ ಸೇತುವೆಯ ಮೇಲೆ ಈ ಘೋರ ದುರಂತ ಸಂಭವಿಸಿದೆ.

ಖಾಸಗಿ ಕಂಪನಿಯೊಂದು ಆಯೋಜಿಸಿದ್ದ ರೋಪ್ ಜಂಪಿಂಗ್ (ಬಂಗೀ ಜಂಪ್ ಮಾದರಿಯ ಸಾಹಸ ಕ್ರೀಡೆ) ಮಾಡಲು ಮರಿಯಾ ಎಡ್ವರ್ಡಾ ಮುಂದಾಗಿದ್ದರು. ಜಿಗಿಯುವ ಪ್ಲಾಟ್‌ಫಾರ್ಮ್‌ಗೆ ಬಂದ ಆಕೆಗೆ ಸುರಕ್ಷತಾ ಹಗ್ಗವನ್ನು (Safety Rope) ಕಟ್ಟಲು ಸಿಬ್ಬಂದಿ ಮರೆತಿದ್ದಾರೆ.

ಹಗ್ಗ ಕಟ್ಟದೆಯೇ ಆಕೆಯನ್ನು ಸೇತುವೆಯಿಂದ ಕೆಳಕ್ಕೆ ತಳ್ಳಲಾಗಿದೆ. ಆಕೆ ಕೆಳಗೆ ಬೀಳುತ್ತಿದ್ದಂತೆ ಅಲ್ಲಿದ್ದ ಜನರು "ಹಗ್ಗ ನೋಡಿ!" ಎಂದು ಕಿರುಚಾಡಿದ್ದಾರೆ. ಆದರೆ, ಅಷ್ಟರಲ್ಲಾಗಲೇ ಯುವತಿ ಕಾಂಕ್ರೀಟ್ ನೆಲಕ್ಕೆ ಅಪ್ಪಳಿಸಿ ಕೊನೆಯುಸಿರೆಳೆದಿದ್ದರು.

Brazil Bungee Jump Horror
ಶಾಕಿಂಗ್: ರೈಲು ಢಿಕ್ಕಿಯಿಂದ ಮಕ್ಕಳ ರಕ್ಷಿಸಲು ದೇಹವನ್ನೇ ಗುರಾಣಿಯಾಗಿಸಿದ ಮಹಿಳೆ, Video

ವಿಷಾದನೀಯ ಸಂಗತಿಯೆಂದರೆ, ಜಿಗಿಯುವ ಕೆಲವೇ ನಿಮಿಷಗಳ ಮೊದಲು ಮರಿಯಾ ತನ್ನ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ, "ಸೇತುವೆಯಿಂದ ಜಿಗಿಯಲು ನನಗೆ ಅನುಮತಿ ನೀಡಿದ ಆ ಹುಚ್ಚ ಯಾರು?" ಎಂದು ತಮಾಷೆಯಾಗಿ ಬರೆದುಕೊಂಡಿದ್ದರು. ಆದರೆ, ಇದೇ ತಮ್ಮ ಕೊನೆಯ ಪೋಸ್ಟ್ ಆಗುತ್ತದೆ ಎಂದು ಆಕೆ ಊಹಿಸಿರಲಿಲ್ಲ.

ಅಪಘಾತ ಸಂಭವಿಸುತ್ತಿದ್ದಂತೆ ಕಂಗಾಲಾದ ಸಿಬ್ಬಂದಿ ಸ್ಥಳದಿಂದ ಓಡಿಹೋಗಲು ಯತ್ನಿಸಿದರು. ಆದರೆ, ಮಿಲಿಟರಿ ಪೊಲೀಸರು ಹೆಲಿಕಾಪ್ಟರ್ ಬಳಸಿ ಕಾರ್ಯಾಚರಣೆ ನಡೆಸಿ, ಘಟನೆಗೆ ಕಾರಣರಾದ ಇಬ್ಬರು ಪ್ರಮುಖ ಆರೋಪಿಗಳು ಸೇರಿದಂತೆ ಒಟ್ಟು ಆರು ಜನರನ್ನು ಬಂಧಿಸಿದ್ದಾರೆ.

ವರದಿಗಳ ಪ್ರಕಾರ, ಈ 'ಸ್ಕೆಲಿಟನ್ ಬ್ರಿಡ್ಜ್' ಸಾಹಸ ಕ್ರೀಡೆಗಳಿಗೆ ಪ್ರಸಿದ್ಧಿಯಾಗಿದ್ದರೂ, ಇಲ್ಲಿ ಯಾವುದೇ ಅಧಿಕೃತ ಪ್ರವಾಸಿ ನಿಯಂತ್ರಣ ಅಥವಾ ಸುರಕ್ಷತಾ ಮೂಲಸೌಕರ್ಯಗಳು ಇರಲಿಲ್ಲ ಎಂದು ತಿಳಿದುಬಂದಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com