ಶಾಂತಿ ಒಪ್ಪಂದದ ಭಾಗವಾಗಿ ಅಮೆರಿಕದಿಂದ ಇರಾನಿನ 12 ಬಿಲಿಯನ್ ಡಾಲರ್ ಸಂಪತ್ತು ಬಿಡುಗಡೆ ಸಾಧ್ಯತೆ

ವಿಶ್ವ ನಾಯಕರು ವಾಷಿಂಗ್ಟನ್ ಮತ್ತು ಟೆಹ್ರಾನ್ ನಡುವಿನ ಶಾಂತಿ ಒಪ್ಪಂದವನ್ನು ಸ್ವಾಗತಿಸುತ್ತಿದ್ದರೂ ಸಹ, 12 ಶತಕೋಟಿ ಡಾಲರ್ ಮೌಲ್ಯದ ಸ್ಥಗಿತಗೊಂಡ ಇರಾನಿನ ಆಸ್ತಿಗಳು ಎರಡೂ ದೇಶಗಳ ನಡುವಿನ ಘರ್ಷಣೆಯ ಕೇಂದ್ರ ಬಿಂದುವಾಗಿದೆ.
US likely to release frozen Iranian assets worth 12 billion dollars as part of peace deal, says report
ಸಾಂದರ್ಭಿಕ ಚಿತ್ರ
Updated on

ವಾಷಿಂಗ್ಟನ್: ಅಮೆರಿಕ-ಇರಾನ್ ನಡುವಣ 107 ದಿನಗಳ ಯುದ್ಧ ಕೊನೆಗೂ ಅಂತ್ಯವಾಗುವ ಕಾಲ ಸನ್ನಿಹಿತವಾಗಿದ್ದು, ಉಭಯ ದೇಶಗಳು ಶಾಂತಿ ಒಪ್ಪಂದವನ್ನು ಅಂತಿಮಗೊಳಿಸಿರುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಿಸಿದ್ದಾರೆ.

ವಿಶ್ವ ನಾಯಕರು ವಾಷಿಂಗ್ಟನ್ ಮತ್ತು ಟೆಹ್ರಾನ್ ನಡುವಿನ ಶಾಂತಿ ಒಪ್ಪಂದವನ್ನು ಸ್ವಾಗತಿಸುತ್ತಿದ್ದರೂ ಸಹ, 12 ಶತಕೋಟಿ ಡಾಲರ್ ಮೌಲ್ಯದ ಸ್ಥಗಿತಗೊಂಡ ಇರಾನಿನ ಆಸ್ತಿಗಳು ಎರಡೂ ದೇಶಗಳ ನಡುವಿನ ಘರ್ಷಣೆಯ ಕೇಂದ್ರ ಬಿಂದುವಾಗಿದೆ.

ಆದಾಗ್ಯೂ, ಇರಾನ್‌ನ ಮೆಹರ್ ಸುದ್ದಿ ಸಂಸ್ಥೆ 14 ಅಂಶಗಳ ಕರಡು ಒಪ್ಪಂದ ಪ್ರತಿಯನ್ನು ಉಲ್ಲೇಖಿಸಿ ವರದಿ ಮಾಡಿದ್ದು, ಇದು ಮಾತುಕತೆಗಳನ್ನು ಪ್ರಾರಂಭಿಸುವ ಮೊದಲೇ ಅಮೆರಿಕವು ಫ್ರೀಜ್ ಮಾಡಿದ ಆಸ್ತಿಗಳನ್ನು ಬಿಡುಗಡೆ ಮಾಡಲು ಒಪ್ಪಿಕೊಂಡಿದೆ ಎಂದು ಹೇಳಿದೆ.

US likely to release frozen Iranian assets worth 12 billion dollars as part of peace deal, says report
ಅಮೆರಿಕ-ಇರಾನ್ ಶಾಂತಿ ಒಪ್ಪಂದ: ಕಚ್ಚಾ ತೈಲ ಬೆಲೆ ಭಾರೀ ಇಳಿಕೆ; ಪೆಟ್ರೋಲ್, ಡೀಸೆಲ್ ದರ ಕಮ್ಮಿ ಮಾಡ್ತಾರಾ ಮೋದಿ?

ಮೆಹರ್ ಪ್ರಕಟಿಸಿದ ಕರಡು ದಾಖಲೆಯು, ಒಪ್ಪಂದ ಅಂತಿಮಗೊಂಡ ನಂತರ ಪ್ರಾರಂಭವಾಗುವ "60 ದಿನಗಳ ಮಾತುಕತೆಯ ಅವಧಿಯಲ್ಲಿ 24 ಶತಕೋಟಿ ಡಾಲರ್‌ಗಳಷ್ಟು ಸ್ಥಗಿತಗೊಂಡ ಇರಾನಿನ ಆಸ್ತಿಗಳನ್ನು ಬಿಡುಗಡೆ ಮಾಡಬೇಕು ಎಂಬ " ಷರತ್ತು ವಿಧಿಸಲಾಗಿದೆ.

ಇದಲ್ಲದೆ, ಅಧಿಕೃತವಾಗಿ ದೃಢೀಕರಿಸದ ದಾಖಲೆಯ ಪ್ರಕಾರ, "ಈ ಮೊತ್ತದ ಅರ್ಧದಷ್ಟು ಮೊತ್ತವನ್ನು ಮಾತುಕತೆಗಳ ಆರಂಭಕ್ಕೂ ಮುನ್ನ ಇರಾನ್‌ಗೆ ಲಭ್ಯವಾಗುವಂತೆ ಮಾಡಬೇಕು" ಎಂದು ನಿರ್ದಿಷ್ಟಪಡಿಸುತ್ತದೆ.

ಕರಡು ಒಪ್ಪಂದದಲ್ಲಿ ಇರಾನ್‌ ನ ಸ್ಥಗಿತಗೊಂಡ ಹಣಕಾಸು - ಆಸ್ತಿಗಳ ಬಿಡುಗಡೆಗೂ ಅವಕಾಶ ಕಲ್ಪಿಸಲಾಗಿದೆ ಎಂದು ಇರಾನಿನ ಮೂಲಗಳು ಹೇಳಿವೆ. ಆದರೆ ಅಮೆರಿಕದ ಅಧಿಕಾರಿಗಳು ಈ ವಾದವನ್ನು ತಳ್ಳಿಹಾಕಿದ್ದಾರೆ.

ರಾಯಿಟರ್ಸ್ ಉಲ್ಲೇಖಿಸಿದ ಹಿರಿಯ ಇರಾನಿನ ಅಧಿಕಾರಿಯ ಪ್ರಕಾರ, ಕರಡು ಒಪ್ಪಂದದಲ್ಲಿ ಅಮೆರಿಕವು ಇರಾನ್‌ ನ 24 ಶತಕೋಟಿ ಡಾಲರ್‌ ಮೌಲ್ಯದ ಸ್ಥಗಿತಗೊಂಡ ಆಸ್ತಿಗಳನ್ನು ಬಿಡುಗಡೆ ಮಾಡಲಿದೆ. ನೇರ ಹಣ ವರ್ಗಾವಣೆ, ಪ್ರಾದೇಶಿಕ ರಾಷ್ಟ್ರಗಳ ಸಹಕಾರ ವ್ಯವಸ್ಥೆಗಳು ಹಾಗೂ ಹಣಕಾಸು ಸಾಲ ಮಾರ್ಗಗಳು ಇದರಲ್ಲಿ ಸೇರಿವೆ ಎಂದು ಅವರು ಹೇಳಿದ್ದಾರೆ.

ಶಾಂತಿ ಒಪ್ಪಂದದಲ್ಲೇನಿದೆ?

ಟೆಹ್ರಾನ್‌ನ ಪರಮಾಣು ಕಾರ್ಯಕ್ರಮ, ಹಾರ್ಮುಝ್ ಜಲಸಂಧಿಯನ್ನು ಪುನಃ ತೆರೆಯುವುದು, ಅಮೆರಿಕದ ನೌಕಾ ದಿಗ್ಬಂಧನ ತೆರವು, ತೈಲ ನಿರ್ಬಂಧಗಳ ಮೇಲಿನ ವಿನಾಯಿತಿಗಳು ಸೇರಿದಂತೆ ಹಲವು ವಿಷಯಗಳನ್ನು ಒಳಗೊಂಡ ಕರಡು ಒಪ್ಪಂದದ ಕುರಿತು ಎರಡೂ ದೇಶಗಳ ನಡುವೆ ಮಾತುಕತೆ ನಡೆದಿದೆ. ತಿಳುವಳಿಕೆ ಪತ್ರಕ್ಕೆ (MOU) ಒಪ್ಪಿಗೆ ದೊರೆತ ಬಳಿಕ 60 ದಿನಗಳ ಅವಧಿಯಲ್ಲಿ ಅಂತಿಮ ಶಾಂತಿ ಒಪ್ಪಂದದ ಕುರಿತು ಚರ್ಚೆ ನಡೆಸಲಾಗುವುದು ಎಂದು ಇರಾನಿನ ಹಿರಿಯ ಅಧಿಕಾರಿಯೊಬ್ಬರು ರಾಯಿಟರ್ಸ್‌ ಗೆ ತಿಳಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com