

ಸ್ವಿಟ್ಜರ್ಲ್ಯಾಂಡ್: ಅಮೆರಿಕದ ಉಪಾಧ್ಯಕ್ಷ ಜೆಡಿ ವ್ಯಾನ್ಸ್ ಭಾನುವಾರ ತಮ್ಮ ಇಬ್ಬರು "ಪ್ರಿಯ" ವ್ಯಕ್ತಿಗಳು ಯಾರು ಎಂಬುದನ್ನು ಬಹಿರಂಗಪಡಿಸಿದ್ದಾರೆ.
ವ್ಯಾನ್ಸ್ ಗೆ ಭಾರತೀಯ ಮತ್ತು ಪಾಕಿಸ್ತಾನಿ ವ್ಯಕ್ತಿಗಳು ಪ್ರಿಯರಾಗಿದ್ದಾರೆ. ಈ ಪೈಕಿ ಪಾಕಿಸ್ತಾನದ ಆಸೀಮ್ ಮುನೀರ್ ಒಬ್ಬರಾಗಿದ್ದಾರೆ. ಸ್ವಿಟ್ಜರ್ಲೆಂಡ್‌ನ ಬರ್ಗೆನ್‌ಸ್ಟಾಕ್‌ನಲ್ಲಿರುವ ಲುಸೆರೆನ್ ಸರೋವರದ ಮೇಲಿರುವ ಐಷಾರಾಮಿ ರೆಸಾರ್ಟ್‌ನಲ್ಲಿರುವ ಮಾತುಕತೆ ಕೊಠಡಿಯಲ್ಲಿ ಮಾತನಾಡುತ್ತಾ, ಸಂಧಾನಕಾರರ ತಂಡಗಳೊಂದಿಗೆ ನಿಂತಿದ್ದ ಮುನೀರ್ ಅವರನ್ನು ವ್ಯಾನ್ಸ್ ಹೊಗಳಿದರು.
"ಫೀಲ್ಡ್ ಮಾರ್ಷಲ್ ಮುನೀರ್ ಇಸ್ಲಾಮಾಬಾದ್‌ನಲ್ಲಿ ಪ್ರಧಾನಿಯೊಂದಿಗೆ ನಮ್ಮನ್ನು ಸ್ವಾಗತಿಸಿದಾಗಿನಿಂದ, ನನ್ನ ಜೀವನದಲ್ಲಿ ನನಗೆ ಇಬ್ಬರು ಬಹಳ ಮುಖ್ಯವಾದ ವ್ಯಕ್ತಿಗಳಿದ್ದಾರೆ ಎಂದು ನಾನು ತಮಾಷೆ ಮಾಡಿದ್ದೇನೆ. ಒಬ್ಬ ಭಾರತೀಯ ಮತ್ತು ಒಬ್ಬ ಪಾಕಿಸ್ತಾನಿ. ಭಾರತೀಯ ವ್ಯಕ್ತಿ ನನ್ನ ಪತ್ನಿಯಾದರೆ, ಮತ್ತೋರ್ವ ಪ್ರಿಯ ವ್ಯಕ್ತಿ ಪಾಕಿಸ್ತಾನಿ ಫೀಲ್ಡ್ ಮಾರ್ಷಲ್ ಮುನೀರ್," ಅವರು ಹೇಳಿದರು.
ಕಳೆದ ಮೂರು ತಿಂಗಳುಗಳಲ್ಲಿ, "ಬೇರೆ ಯಾರಿಗಿಂತ" ಹೆಚ್ಚು ಮುನೀರ್ ಅವರೊಂದಿಗೆ ಮಾತನಾಡಿದ್ದೇನೆ ಎಂದು ವ್ಯಾನ್ಸ್ ಬಹಿರಂಗಪಡಿಸಿದ್ದಾರೆ.
"ಅವರ ರಾಜತಾಂತ್ರಿಕತೆ ಇಲ್ಲದಿದ್ದರೆ ನಾನು ಇಲ್ಲಿ ಇರುತ್ತಿರಲಿಲ್ಲ. ಅವರು ಖಂಡಿತವಾಗಿಯೂ ಒಬ್ಬ ಮಹಾನ್ ಮಿಲಿಟರಿ ನಾಯಕ, ಆದರೆ ಅವರು ತಮ್ಮನ್ನು ತಾವು ಒಬ್ಬ ಮಹಾನ್ ರಾಜತಾಂತ್ರಿಕ ಎಂದು ತೋರಿಸಿಕೊಂಡಿದ್ದಾರೆ ಎಂದು ನಾನು ಭಾವಿಸುತ್ತೇನೆ. ಖಂಡಿತವಾಗಿಯೂ, ಅವರು ಅದ್ಭುತ ನಾಯಕ." ಎಂದು ವ್ಯಾನ್ಸ್ ಹೇಳಿದ್ದಾರೆ.
Advertisement