

ಕ್ಯಾರಕಾಸ್: ಗುರುವಾರ ವೆನೆಜುವೆಲಾದಲ್ಲಿ (Venezuela) ಸಂಭವಿಸಿದ 2 ಪ್ರಬಲ ಭೂಕಂಪಗಳು (Earthquake) ದೇಶವನ್ನೇ ತತ್ತರಗೊಳಿಸಿದ್ದು ಭಾರಿ ವಿನಾಶವನ್ನೇ ಸೃಷ್ಟಿಸಿವೆ.
ವೆನೆಜುವೆಲಾದ ಉತ್ತರ ಕರಾವಳಿ ಪ್ರದೇಶದಲ್ಲಿ 7.5 ತೀವ್ರತೆಯ ಭಾರಿ ಭೂಕಂಪ ಸಂಭವಿಸಿದ್ದು, ಇದಕ್ಕೂ ಮುಂಚೆ ಕೇವಲ 40 ಸೆಕೆಂಡುಗಳಲ್ಲಿ 7.2 ತೀವ್ರತೆಯ ಮತ್ತೊಂದು ಭೂಕಂಪನ ನಡೆದಿದೆ. ಈ ಎರಡು ಕಂಪನಗಳು ವ್ಯಾಪಕ ವಿನಾಶವನ್ನು ಸೃಷ್ಟಿಸಿವೆ.
ಕೇವಲ 40 ಸೆಕೆಂಡುಗಳ ಅಂತರದಲ್ಲಿ ಎರಡೆರಡು ಬಾರಿ ಭೂಕಂಪ ಸಂಭವಿಸಿದ್ದು, ನೂರಾರು ಸಾವು ನೋವುಗಳಿಗೆ ಕಾರಣವಾಗಿದೆ ಎಂದು ಹೇಳಲಾಗಿದೆ.
ಪ್ರಮುಖವಾಗಿ ರಾಜಧಾನಿ ಕ್ಯಾರಕಾಸ್‌ನಲ್ಲಿ ಹಲವು ಕಟ್ಟಡಗಳು ಹಾನಿಗೊಳಗಾಗಿದ್ದು, ಅನೇಕ ಕಟ್ಟಡಗಳು ಕುಸಿದು ಬಿದ್ದಿವೆ. ಭೂಕಂಪನ ತುಂಬಾ ಪ್ರಬಲವಾಗಿದ್ದ ಕಾರಣ ಜನರು ತಮ್ಮ ಕುಟುಂಬದವರೊಂದಿಗೆ ಮನೆಗಳು ಮತ್ತು ಕಚೇರಿಗಳಿಂದ ಹೊರಗೆ ಓಡಿ ಬೀದಿಗಳಲ್ಲಿ ಆಶ್ರಯ ಪಡೆದಿದ್ದಾರೆ.
ಸಮರೋಪಾದಿ ರಕ್ಷಣೆ
ವೆನೆಜುವೆಲಾದಲ್ಲಿ ರಕ್ಷಣಾ ಕಾರ್ಯಾಚರಣೆಗಳು ತೀವ್ರಗತಿಯಲ್ಲಿ ನಡೆಯುತ್ತಿವೆ. ಸರ್ಕಾರ ಮತ್ತು ಅಂತರರಾಷ್ಟ್ರೀಯ ಸಂಸ್ಥೆಗಳು ನೆರವು ನೀಡುತ್ತಿವೆ. ಜನರು ತುಂಬಾ ಆತಂಕದಲ್ಲಿದ್ದಾರೆ. ಮುಂದಿನ ದಿನಗಳಲ್ಲಿ ಹೆಚ್ಚುವರಿ ಆಫ್ಟರ್ ಶಾಕ್‌ಗಳು ಸಂಭವಿಸುವ ಸಾಧ್ಯತೆ ಇದೆ ಎಂದು ಎಚ್ಚರಿಸಲಾಗಿದೆ. ಈ ಭೂಕಂಪಗಳು ಪ್ರಕೃತಿಯ ಶಕ್ತಿಯ ಮುಂದೆ ಮನುಷ್ಯ ಎಷ್ಟು ಅಸಹಾಯಕ ಎಂಬುದನ್ನು ಮತ್ತೊಮ್ಮೆ ತೋರಿಸಿವೆ. ವೆನೆಜುವೆಲಾ ಜನರ ಸುರಕ್ಷತೆಗಾಗಿ ಪ್ರಾರ್ಥಿಸೋಣ. ಪರಿಸ್ಥಿತಿ ಸುಧಾರಿಸುವ ನಿರೀಕ್ಷೆಯಿದೆ.
ಜಪಾನ್-ಅಮೆರಿಕದಲ್ಲೂ ಕಂಪನ
ಅದೇ ದಿನ ಜಪಾನ್‌ನಲ್ಲಿ 6.9 ತೀವ್ರತೆಯ ಭೂಕಂಪವೂ ಸಂಭವಿಸಿದೆ. ಅಲ್ಲದೆ ಅಮೆರಿಕಾದ ಕ್ಯಾಲಿಫೋರ್ನಿಯಾದಲ್ಲಿ 5.6 ತೀವ್ರತೆಯ ಭೂಕಂಪ ದಾಖಲಾಗಿದೆ. ಒಂದೇ ದಿನ ಮೂರು ದೇಶಗಳಲ್ಲಿ ಪ್ರಬಲ ಭೂಕಂಪಗಳು ಸಂಭವಿಸಿರುವುದರಿಂದ ಜನರಲ್ಲಿ ‘ಇವುಗಳಿಗೆ ಸಂಬಂಧವಿದೆಯೇ?’ ಎಂಬ ಪ್ರಶ್ನೆ ಉದ್ಭವಿಸಿದೆ. ಆದರೆ ತಜ್ಞರು ಈ ಭೂಕಂಪಗಳು ಪರಸ್ಪರ ಸಂಬಂಧ ಹೊಂದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ವಿಡಿಯೋಗಳು ವೈರಲ್!
ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿರುವ ವೀಡಿಯೊಗಳಲ್ಲಿ ಕಟ್ಟಡಗಳು ಕುಸಿಯುತ್ತಿರುವುದು, ಗೋಡೆಗಳು ಬೀಳುತ್ತಿರುವುದು ಮತ್ತು ಧೂಳಿನ ಮೋಡ ಆವರಿಸಿರುವುದು ಸ್ಪಷ್ಟವಾಗಿ ಕಾಣುತ್ತಿದೆ. ಅಮೆರಿಕ ಭೂವೈಜ್ಞಾನಿಕ ಸಮೀಕ್ಷೆ (USGS) ಪ್ರಕಾರ, ಭೂಕಂಪದ ಕೇಂದ್ರಬಿಂದು ಮಾಂಟಲ್ಬನ್ ಪ್ರದೇಶದಿಂದ ಸುಮಾರು 28 ಕಿಲೋಮೀಟರ್ ವಾಯುವ್ಯಕ್ಕೆ ಇತ್ತು. ಈ ಪ್ರದೇಶವು ವೆನೆಜುವೆಲಾದ ದೊಡ್ಡ ತೈಲ ಸಂಸ್ಕರಣಾ ಘಟಕಗಳಿಗೆ ಹತ್ತಿರವಾಗಿದೆ.
ಕನಿಷ್ಠ 32 ಸಾವು, ಸಾವಿನ ಸಂಖ್ಯೆ 1 ಲಕ್ಷಕ್ಕೇರುವ ಸಾಧ್ಯತೆ!
ಇನ್ನು ಈ ಪ್ರಬಲ ಭೂಕಂಪನದಲ್ಲಿ ಭಾರಿ ಪ್ರಮಾಣದ ಸಾವು-ನೋವು ಸಂಭವಿಸಿದ್ದು, ಪ್ರಸ್ತುತ ಅಧಿಕಾರಿಗಳ ಹೇಳಿಕೆ ಪ್ರಕಾರ ಕನಿಷ್ಠ 32 ಮಂದಿ ಸಾವಿಗೀಡಾಗಿದ್ದು, ಸಾವಿನ ಸಂಖ್ಯೆ 1 ಲಕ್ಷ ಮೀರುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ಶಂಕೆ ವ್ಯಕ್ತಪಡಿಸಿದ್ದಾರೆ. ಕೆಲವು ವರದಿಗಳ ಪ್ರಕಾರ 10,000 ಜನರು ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ. ಆದರೆ ಸರ್ಕಾರ ಇನ್ನೂ ಅಧಿಕೃತ ಸಾವುನೋವುಗಳ ಸಂಖ್ಯೆಯನ್ನು ಘೋಷಿಸಿಲ್ಲ. ಆದರೂ ಸಾವು ನೋವುಗಳು ಸಂಭವಿಸಿದೆ. ಈ ಸಂಖ್ಯೆ 1 ಲಕ್ಷಕ್ಕೇರಲೂ ಬಹುದು ಎಂದು ಹೇಳಿದೆ.
ರಾಷ್ಟ್ರೀಯ ತುರ್ತು ಪರಿಸ್ಥಿತಿ ಘೋಷಣೆ
ಬುಧವಾರ ಸಂಭವಿಸಿದ ಎರಡು ಪ್ರಬಲ ಭೂಕಂಪಗಳ ನಂತರ ವೆನೆಜುವೆಲಾದ ಹಂಗಾಮಿ ಅಧ್ಯಕ್ಷೆ ಡೆಲ್ಸಿ ರೊಡ್ರಿಗಸ್ ದೇಶದಲ್ಲಿ ರಾಷ್ಟ್ರೀಯ ತುರ್ತು ಪರಿಸ್ಥಿತಿ ಘೋಷಿಸಿದ್ದಾರೆ. ದೂರದರ್ಶನದಲ್ಲಿ ರಾಷ್ಟ್ರವನ್ನುದ್ದೇಶಿಸಿ ಮಾತನಾಡಿದ ಅವರು, ‘ಈ ದುರಂತದಲ್ಲಿ ಅನೇಕ ಜನರು ಪ್ರಾಣ ಕಳೆದುಕೊಂಡಿದ್ದಾರೆ’ ಎಂದು ಹೇಳಿ, ಸತ್ತವರ ಕುಟುಂಬಗಳಿಗೆ ಸಂತಾಪ ಸೂಚಿಸಿದ್ದಾರೆ. ಭೂಕಂಪದ ನಂತರ ಅಮೆರಿಕ ಸುನಾಮಿ ಎಚ್ಚರಿಕೆ ಕೇಂದ್ರವು ಪೋರ್ಟೊ ರಿಕೊ ಮತ್ತು ವರ್ಜಿನ್ ದ್ವೀಪಗಳಿಗೆ ಸುನಾಮಿ ಎಚ್ಚರಿಕೆ ನೀಡಿತ್ತು. ಆದರೆ ನಂತರ ಪರಿಸ್ಥಿತಿ ಪರಿಶೀಲಿಸಿ ಎಚ್ಚರಿಕೆಯನ್ನು ಹಿಂತೆಗೆದುಕೊಳ್ಳಲಾಗಿದೆ.