Venezuela Earth quake: ನೆರವಿಗೆ ಧಾವಿಸಿದ ಅಮೆರಿಕ, ಟ್ರಂಪ್ ಆರ್ಥಿಕ ನೆರವು ಘೋಷಣೆ

ವೆನೆಜುವೆಲಾದ ಮಹಾನ್ ಜನರಿಗೆ ತಟ್ಟಿದ ಎರಡು ಭಾರೀ ಭೂಕಂಪಗಳು ಅಪಾರ ಪ್ರಮಾಣದ ಹಾನಿಯನ್ನುಂಟುಮಾಡಿದ್ದು, ಭಾರೀ ಸಂಖ್ಯೆಯ ಸಾವುಗಳಿಗೆ ಕಾರಣವಾಗಿವೆ.
US President Donald Trump offers aid
ವೆನೆಜುವೆಲಾ ಭೂಕಂಪನ
Updated on

ಕ್ಯಾರಕಾಸ್: ವೆನೆಜುವೆಲಾದಲ್ಲಿ ಸಂಭವಿಸಿದ ಎರಡು ಪ್ರಬಲ ಭೂಕಂಪಗಳ ಹಿನ್ನೆಲೆಯಲ್ಲಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಬುಧವಾರ ತಕ್ಷಣದ ಅಮೆರಿಕದ ನೆರವಿನ ಭರವಸೆ ನೀಡಿದ್ದಾರೆ.

ವೆನೆಜುವೆಲಾದ ಉತ್ತರ ಕರಾವಳಿ ಪ್ರದೇಶದಲ್ಲಿ 7.5 ತೀವ್ರತೆಯ ಭಾರಿ ಭೂಕಂಪ ಸಂಭವಿಸಿದ್ದು, ಇದಕ್ಕೂ ಮುಂಚೆ ಕೇವಲ 40 ಸೆಕೆಂಡುಗಳಲ್ಲಿ 7.2 ತೀವ್ರತೆಯ ಮತ್ತೊಂದು ಭೂಕಂಪನ ನಡೆದಿದೆ.

ಈ ಎರಡು ಕಂಪನಗಳು ವ್ಯಾಪಕ ವಿನಾಶವನ್ನು ಸೃಷ್ಟಿಸಿವೆ. ಕೇವಲ 40 ಸೆಕೆಂಡುಗಳ ಅಂತರದಲ್ಲಿ ಎರಡೆರಡು ಬಾರಿ ಭೂಕಂಪ ಸಂಭವಿಸಿದ್ದು, ನೂರಾರು ಸಾವು ನೋವುಗಳಿಗೆ ಕಾರಣವಾಗಿದೆ ಎಂದು ಹೇಳಲಾಗಿದೆ.

ಪ್ರಮುಖವಾಗಿ ರಾಜಧಾನಿ ಕ್ಯಾರಕಾಸ್‌ನಲ್ಲಿ ಹಲವು ಕಟ್ಟಡಗಳು ಹಾನಿಗೊಳಗಾಗಿದ್ದು, ಅನೇಕ ಕಟ್ಟಡಗಳು ಕುಸಿದು ಬಿದ್ದಿವೆ. ಅಮೆರಿಕದ ಸರ್ಕಾರಿ ವಿಜ್ಞಾನಿಗಳು ಈ ಭೂಕಂಪಗಳಿಂದ ಸಾವಿನ ಸಂಖ್ಯೆ 10,000ರಿಂದ 1,00,000ರವರೆಗೆ ತಲುಪುವ ಸಾಧ್ಯತೆ ಇದೆ ಎಂದು ಎಚ್ಚರಿಕೆ ನೀಡಿದ್ದಾರೆ.

US President Donald Trump offers aid
Venezuela Earth quake: 40 ಸೆಕೆಂಡ್​​ ನಲ್ಲಿ 2 ಬಾರಿ ಭೂಕಂಪ, ಭಾರೀ ವಿನಾಶ, ಕನಿಷ್ಠ 32 ಸಾವು, ಸಾವಿನ ಸಂಖ್ಯೆ 1 ಲಕ್ಷಕ್ಕೇರುವ ಸಾಧ್ಯತೆ!

1 ಲಕ್ಷ ಸಾವು?

ಭೂಕಂಪಗಳು ಸಂಭವಿಸಿ ಐದು ಗಂಟೆಗಳಿಗಿಂತ ಹೆಚ್ಚು ಸಮಯ ಕಳೆದಿದ್ದರೂ ವೆನೆಜುವೆಲಾ ಅಧಿಕಾರಿಗಳು ಸಾವುನೋವುಗಳ ಬಗ್ಗೆ ಹೆಚ್ಚಿನ ಮಾಹಿತಿ ನೀಡಿಲ್ಲ. ಕಾರ್ಯನಿರ್ವಾಹಕ ಅಧ್ಯಕ್ಷೆ ಡೆಲ್ಸಿ ರೊಡ್ರಿಗಸ್ ದೂರದರ್ಶನದ ಮೂಲಕ ರಾಷ್ಟ್ರವನ್ನು ಉದ್ದೇಶಿಸಿ ಮಾತನಾಡಿ ಸಾವುನೋವುಗಳು ಸಂಭವಿಸಿರುವುದನ್ನು ದೃಢಪಡಿಸಿದರೂ, ಅಧಿಕೃತ ಸಾವಿನ ಸಂಖ್ಯೆಯನ್ನು ಬಹಿರಂಗಪಡಿಸಲಿಲ್ಲ. ಸರ್ಕಾರಿ ಮಾಧ್ಯಮಗಳೂ ಹಾನಿಯ ಪ್ರಮಾಣದ ಕುರಿತು ಸೀಮಿತ ಮಾಹಿತಿಯನ್ನಷ್ಟೇ ನೀಡಿವೆ.

ಅಂತರರಾಷ್ಟ್ರೀಯ ಮಾಧ್ಯಮ ಸಂಸ್ಥೆ ಅಲ್ ಜಜೀರಾ ವರದಿ ಪ್ರಕಾರ, ಅಮೆರಿಕದ ಭೂವೈಜ್ಞಾನಿಕ ಸಮೀಕ್ಷಾ ಸಂಸ್ಥೆ (USGS) ತನ್ನ 'ಪ್ರಾಂಪ್ಟ್ ಅಸೆಸ್ಮೆಂಟ್ ಆಫ್ ಗ್ಲೋಬಲ್ ಎರ್ಥ್‌ಕ್ವೇಕ್ ರೆಸ್ಪಾನ್ಸ್' (PAGER) ವ್ಯವಸ್ಥೆಯ ಮೂಲಕ ಭೂಕಂಪದ ತಕ್ಷಣದ ಮೌಲ್ಯಮಾಪನ ನಡೆಸಿ, ಸಾವಿನ ಸಂಖ್ಯೆ 10,000ರಿಂದ 1,00,000ರವರೆಗೆ ಇರಬಹುದು ಎಂದು ಅಂದಾಜಿಸಿದೆ.

ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದ ಸ್ಯಾನ್ ಡಿಯಾಗೋ ಕ್ಯಾಂಪಸ್‌ನ ಭೂಭೌತಶಾಸ್ತ್ರಜ್ಞ ವಶಾನ್ ರೈಟ್ ಅವರು ಅಲ್ ಜಜೀರಾಗೆ ನೀಡಿದ ಸಂದರ್ಶನದಲ್ಲಿ, PAGER ವ್ಯವಸ್ಥೆಯು ಭೂಕಂಪದ ತೀವ್ರತೆ, ಆಳ, ಸ್ಥಳ, ಜನಸಂಖ್ಯೆಯ ಸಾಂದ್ರತೆ, ಹಿಂದಿನ ಭೂಕಂಪಗಳ ಮಾಹಿತಿ ಹಾಗೂ ಕಟ್ಟಡಗಳ ಸ್ಥಿತಿಗತಿಗಳನ್ನು ವಿಶ್ಲೇಷಿಸಿ ಸಂಭವನೀಯ ಪರಿಣಾಮಗಳ ಅಂದಾಜು ಮಾಡುತ್ತದೆ ಎಂದು ತಿಳಿಸಿದ್ದಾರೆ.

"ಈ ವ್ಯವಸ್ಥೆ ಭೂಕಂಪದ ತೀವ್ರತೆ, ಆಳ, ಸ್ಥಳ, ಜನಸಂಖ್ಯೆಯ ಸಾಂದ್ರತೆ, ಐತಿಹಾಸಿಕ ಭೂಕಂಪಗಳ ಮಾಹಿತಿ ಮತ್ತು ಕಟ್ಟಡಗಳ ವಿವರಗಳಂತಹ ಲಭ್ಯವಿರುವ ಎಲ್ಲಾ ಮಾಹಿತಿಯನ್ನು ಬಳಸಿಕೊಂಡು ಸಂಭವನೀಯ ಹಾನಿಯ ಮುನ್ಸೂಚನೆಯನ್ನು ನೀಡುತ್ತದೆ," ಎಂದು ರೈಟ್ ಹೇಳಿದ್ದಾರೆ. ಅವರು ಮುಂದುವರಿದು, ಅನೇಕ ಸಂದರ್ಭಗಳಲ್ಲಿ PAGER ವ್ಯವಸ್ಥೆಯ ಅಂದಾಜುಗಳು ನಿಜವಾದ ಸಾವಿನ ಸಂಖ್ಯೆಗೆ ಅತ್ಯಂತ ಸಮೀಪವಾಗಿರುತ್ತವೆ ಎಂದು ಹೇಳಿದ್ದಾರೆ.

US President Donald Trump offers aid
ಭಾರೀ ಭೂಕಂಪಕ್ಕೆ ವೆನೆಜುವೆಲಾ ತತ್ತರ: ಮೃತರ ಕುಟುಂಬಗಳಿಗೆ ಪ್ರಧಾನಿ ಮೋದಿ ಸಂತಾಪ, ಮಾನವೀಯ ನೆರವಿಗೆ ಭಾರತ ಸಜ್ಜು..!

ನೆರವಿಗೆ ಧಾವಿಸಿದ ಅಮೆರಿಕ

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ತಮ್ಮ 'ಟ್ರೂತ್ ಸೋಶಿಯಲ್' ಖಾತೆಯಲ್ಲಿ, "ವೆನೆಜುವೆಲಾದ ಮಹಾನ್ ಜನರಿಗೆ ತಟ್ಟಿದ ಎರಡು ಭಾರೀ ಭೂಕಂಪಗಳು ಅಪಾರ ಪ್ರಮಾಣದ ಹಾನಿಯನ್ನುಂಟುಮಾಡಿದ್ದು, ಭಾರೀ ಸಂಖ್ಯೆಯ ಸಾವುಗಳಿಗೆ ಕಾರಣವಾಗಿವೆ.

ಅಮೆರಿಕ ನೆರವು ನೀಡಲು ಸಂಪೂರ್ಣ ಸಿದ್ಧವಾಗಿದೆ. ತ್ವರಿತವಾಗಿ ಕಾರ್ಯಪ್ರವೃತ್ತರಾಗಲು ನಮ್ಮ ಸರ್ಕಾರದ ಎಲ್ಲಾ ಇಲಾಖೆಗಳಿಗೂ ನಾನು ಸೂಚನೆ ನೀಡಿದ್ದೇನೆ. ನಮ್ಮ ಹೊಸ ಹಾಗೂ ಉತ್ತಮ ಸ್ನೇಹಿತರ ನೆರವಿಗೆ ನಾವು ಧಾವಿಸುತ್ತೇವೆ. ಆರಂಭಿಕ ವರದಿಗಳು ಉತ್ತಮವಾಗಿಲ್ಲ!" ಎಂದು ಬರೆದಿದ್ದಾರೆ.

ಅಮೆರಿಕದಿಂದ ತುರ್ತು ನೆರವು

ಇದೇ ವೇಳೆ, ಅಮೆರಿಕ ವೆನೆಜುವೆಲಾಗೆ ತುರ್ತು ನೆರವು ಒದಗಿಸಲು ಸಿದ್ಧತೆ ಆರಂಭಿಸಿದೆ. ವಿದೇಶಿ ನೆರವು ವಿಭಾಗದ ಉಪ ಕಾರ್ಯದರ್ಶಿ ಜೆರೆಮಿ ಲೆವಿನ್ ಅವರು, ಪರಿಹಾರ ಕಾರ್ಯಗಳನ್ನು ಸಮನ್ವಯಗೊಳಿಸಲು ವಿಪತ್ತು ನೆರವು ತಂಡ ಮತ್ತು ವಿಶೇಷ ಕಾರ್ಯಪಡೆಯನ್ನು ಈಗಾಗಲೇ ಸಕ್ರಿಯಗೊಳಿಸಲಾಗಿದೆ ಎಂದು ತಿಳಿಸಿದ್ದಾರೆ.

ಎಕ್ಸ್ ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದ ಸಂದೇಶದಲ್ಲಿ ಲೆವಿನ್, "ಅಮೆರಿಕದ ವಿದೇಶಾಂಗ ಇಲಾಖೆ ವೆನೆಜುವೆಲಾ ಜನತೆಗೆ ಅಗತ್ಯ ನೆರವು ಒದಗಿಸಲು ಮತ್ತು ಅದರ ಸಮನ್ವಯಕ್ಕಾಗಿ ವಿಪತ್ತು ನೆರವು ತಂಡ ಹಾಗೂ ಕಾರ್ಯಪಡೆಯನ್ನು ಈಗಾಗಲೇ ಸಜ್ಜುಗೊಳಿಸಿದೆ.

ವೆನೆಜುವೆಲಾದ ಮಧ್ಯಂತರ ಸರ್ಕಾರದ ನಮ್ಮ ಪಾಲುದಾರರೊಂದಿಗೆ ಕೈಜೋಡಿಸಿ, ಶೋಧ ಮತ್ತು ರಕ್ಷಣಾ ತಂಡಗಳು, ವೈದ್ಯಕೀಯ ಹಾಗೂ ಮಾನವೀಯ ನೆರವು ಸಾಮಗ್ರಿಗಳು ಮತ್ತು ಇತರ ಅಗತ್ಯ ಸಂಪನ್ಮೂಲಗಳನ್ನು ಈ ದುರಂತದ ಆರಂಭಿಕ ದಿನಗಳಲ್ಲೇ ಕಳುಹಿಸಲಾಗುತ್ತದೆ," ಎಂದು ತಿಳಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X
Kannada Prabha
www.kannadaprabha.com