ಖಮೇನಿ ಹತ್ಯೆ: 'ಪ್ರತೀಕಾರ ಬರುತ್ತೆ.. ನಿಮ್ಮನ್ನು ಬೇಟೆಯಾಡುತ್ತೆ'.. ಲೈವ್ ನಲ್ಲೇ ಬಿಕ್ಕಿ ಬಿಕ್ಕಿ ಅತ್ತ ನಿರೂಪಕಿ, ಇಸ್ರೇಲ್-ಅಮೆರಿಕಗೆ ಎಚ್ಚರಿಕೆ

ಶನಿವಾರ ಮುಂಜಾನೆ ತಮ್ಮ ಕಚೇರಿಯಲ್ಲಿ ಅವರು "ತಮ್ಮ ನಿಯೋಜಿತ ಕರ್ತವ್ಯಗಳನ್ನು ನಿರ್ವಹಿಸುತ್ತಿದ್ದಾಗ" ಕೊಲ್ಲಲ್ಪಟ್ಟರು ಎಂದು ಇರಾನ್ ಸರ್ಕಾರಿ ಸ್ವಾಮ್ಯದ ಟಿವಿ ಐಆರ್‌ಐಬಿ ಹೇಳಿದೆ.
Anchor breaks down at Iran's Press TV
ಇರಾನ್ ಮೇಲೆ ಇಸ್ರೇಲ್ -ಅಮೆರಿಕ ದಾಳಿ
Updated on

ಟೆಹ್ರಾನ್: ಇರಾನ್ ಸರ್ವೋಚ್ಛ ನಾಯಕ ಆಯತೊಲ್ಲ ಅಲ್ ಖಮೆನಿ ಹತ್ಯೆ ವಿಚಾರ ಜಗತ್ತಿನಾದ್ಯಂತ ಆಘಾತಕ್ಕೆ ಕಾರಣವಾಗಿದ್ದು, ಇಸ್ರೇಲ್ ಮತ್ತು ಅಮೆರಿಕ ಜಂಟಿ ದಾಳಿ ಕುರಿತು ಲೈವ್ ನೀಡುತ್ತಿದ್ದ ಇರಾನ್ ನಿರೂಪಕಿ ಬಿಕ್ಕಿ ಬಿಕ್ಕಿ ಅತ್ತು ಸೇಡು ತೀರಿಸಿಕೊಳ್ಳುವುದಾಗಿ ಹೇಳಿದ್ದಾರೆ.

ಅಮೆರಿಕ ಮತ್ತು ಇಸ್ರೇಲ್ ನಡೆಸಿದ ಜಂಟಿ ಸೇನಾದಾಳಿಯಲ್ಲಿ ಇರಾನ್‌ನ ಸರ್ವೋಚ್ಚ ನಾಯಕ ಆಯತೊಲ್ಲ ಅಲಿ ಖಮೇನಿ ಸಾವಿಗೀಡಾಗಿದ್ದು, ಶನಿವಾರ ಮುಂಜಾನೆ ತಮ್ಮ ಕಚೇರಿಯಲ್ಲಿ ಅವರು "ತಮ್ಮ ನಿಯೋಜಿತ ಕರ್ತವ್ಯಗಳನ್ನು ನಿರ್ವಹಿಸುತ್ತಿದ್ದಾಗ" ಕೊಲ್ಲಲ್ಪಟ್ಟರು ಎಂದು ಇರಾನ್ ಸರ್ಕಾರಿ ಸ್ವಾಮ್ಯದ ಟಿವಿ ಐಆರ್‌ಐಬಿ ಹೇಳಿದೆ.

ಈ ಬೆಳವಣಿಗೆ ಬೆನ್ನಲ್ಲೇ ಇರಾನ್ ಸ್ಥಳೀಯ ಆಡಳಿತ ದೇಶಾದ್ಯಂತ ತುರ್ತು ಪರಿಸ್ಥಿತಿ ಘೋಷಣೆ ಮಾಡಿದ್ದು, ಇರಾನ್ ನಾದ್ಯಂತ 40 ದಿನಗಳ ಶೋಕಾಚರಣೆಗೆ ಆದೇಶ ಹೊರಡಿಸಿದೆ.

ಅಂತೆಯೇ ಖಮೇನಿಯವರ ಮಗಳು, ಅಳಿಯ ಮತ್ತು ಮೊಮ್ಮಗ ಕೂಡ ಈ ದಾಳಿಯಲ್ಲಿ ಸಾವನ್ನಪ್ಪಿದ್ದು, ಇದು ಭಯೋತ್ಪಾದಕ ದಾಳಿ ಎಂದು ಐಆರ್‌ಜಿಸಿ ಹೇಳಿದೆ. ಅಲ್ಲದೆ "ಇರಾನಿನ ರಾಷ್ಟ್ರದ ಸೇಡಿನ ಕೈ... ಅವರನ್ನು ಹೋಗಲು ಬಿಡುವುದಿಲ್ಲ" ಎಂದು ಪ್ರತೀಕಾರದ ಎಚ್ಚರಿಕೆ ನೀಡಿದೆ.

Anchor breaks down at Iran's Press TV
Ayatollah Ali Khamenei ಸಾವು: 40 ದಿನಗಳ ಶೋಕಾಚರಣೆಗೆ ಆದೇಶ, ಇರಾನ್ ಸೇನಾಧಿಕಾರಿ, ರಕ್ಷಣಾ ಸಚಿವ ಕೂಡ ಹತ

ಬಿಕ್ಕಿ ಬಿಕ್ಕಿ ಅತ್ತ ನಿರೂಪಕಿ

ಇನ್ನು ಖಮೇನಿ ಹತ್ಯೆ ಕುರಿತು ನಡೆದ ನೇರ ಪ್ರಸಾರದ ಸಂದರ್ಭದಲ್ಲಿ, ಪ್ರೆಸ್ ಟಿವಿ ನಿರೂಪಕಿ ಮರ್ಯಮ್ ಅಜರ್ಚೆರ್ ಈ ಸುದ್ದಿಯನ್ನು ಘೋಷಿಸುವಾಗ ತಮ್ಮ ಅತೀವ ದುಃಖವನ್ನು ಹೊರಹಾಕಿದರು. ಅಲ್ಲದೆ ಇರಾನ್ ಮೇಲಿನ ದಾಳಿ ಮತ್ತು ಖಮೆನಿ ಹತ್ಯೆಯನ್ನು ತೀವ್ರವಾಗಿ ಖಂಡಿಸಿರುವ ನಿರೂಪಕಿ ಮರ್ಯಮ್ ಅಜರ್ಚೆರ್ ಅಮೆರಿಕ-ಇಸ್ರೇಲ್ ಮತ್ತು ಅವುಗಳ ಬೆಂಬಲಿತ ರಾಷ್ಟ್ರಗಳ ಮೇಲೆ ಇರಾನ್ ಸೇಡು ತೀರಿಸಿಕೊಳ್ಳಲಿದೆ ಎಂದು ಹೇಳಿದ್ದಾರೆ.

"ಸೇಡು ತೀರಿಸಿಕೊಳ್ಳುವ ಸಮಯ ಬರುತ್ತಿದೆ. ಸೇಡು ತೀರಿಸಿಕೊಳ್ಳುವ ಸಮಯ ಶೀಘ್ರದಲ್ಲೇ ಬರಲಿದೆ. ಅವರು ಏನು ಮಾಡಿದ್ದಾರೆಂದು ಅವರು ನೋಡುತ್ತಾರೆ" ಎಂದು ನಿರೂಪಕಿ ಹೇಳಿದ್ದಾರೆ. ಅಲ್ಲದೆ ಇಂದು, ಅವರನ್ನು ಶೋಕಿಸುವವರು ಪ್ರಪಂಚದಾದ್ಯಂತ ಅನಾಥರಾಗುತ್ತಾರೆ.

ಅನಾಥರು ಒಮ್ಮೆ ಇಮಾಮ್ ಅಲಿ ಅವರನ್ನು ಶೋಕಿಸಿದಂತೆ, ಅವರಿಗೆ ಶಾಂತಿ ಸಿಗಲಿ. ಇಂದು ವಿಶ್ವದ ದೆವ್ವಗಳು ಆಚರಿಸುತ್ತವೆ. ಆದರೆ ಇದು ಇಷ್ಟಕ್ಕೇ ಮುಗಿದಿಲ್ಲ. ಟ್ರಂಪ್ ಭಾರಿ ಬೆಲೆ ತೆತ್ತಲಿದ್ದಾರೆ. ಯಾವುದೇ ಸಮಯದಲ್ಲಿ ಯಾವುದೇ ಅಮೇರಿಕನ್ ಅಧ್ಯಕ್ಷರು ಪಾವತಿಸದ, ಯಾವುದೇ ಜಿಯೋನಿಸ್ಟ್ ಪಾವತಿಸದ, ಯಾವುದೇ ಕಾಲದ ಯಾವುದೇ ಅಪರಾಧಿ ಪಾವತಿಸದ ಬೆಲೆ ಅದಾಗಿರುತ್ತದೆ" ಎಂದು ಅವರು ಹೇಳಿದರು.

ಖಮೆನಿ ಹತ್ಯೆಯನ್ನು ಇರಾನ್ ನಲ್ಲೇ ಕೆಲವರು ಸಂಭ್ರಮಿಸುತ್ತಿದ್ದಾರೆ. ಅವರೆಲ್ಲರೂ ಅಮೆರಿಕದ ಬ್ರೈನ್‌ವಾಶ್ ಗೆ ತುತ್ತಾದವರು. ಅವರಿಗೆ ಶೀಘ್ರದಲ್ಲೇ ದೇವರು ಪಾಠಕಲಿಸುತ್ತಾನೆ ಎಂದು ಬಿಕ್ಕಿ ಬಿಕ್ಕಿ ಅಳುತ್ತಾ ಹೇಳಿದ್ದಾರೆ.

Anchor breaks down at Iran's Press TV
ಇರಾನ್ ಸರ್ವಾಧಿಕಾರಿ Ayatollah Khamenei ಹತ: Trump ಬಳಿಕ ಇರಾನ್ ಸರ್ಕಾರಿ ಸ್ವಾಮ್ಯದ ಟಿವಿ ಸ್ಪಷ್ಟನೆ

ಅಮೆರಿಕ ವಿರುದ್ಧ ಇರಾನ್ ಸೇಡು

ಅಂತೆಯೇ ಇರಾನ್ ಸೇಡು ತೀರಿಸಿಕೊಳ್ಳಲಿದೆ. ಪ್ರತೀಕಾರ ನಿಮ್ಮ ಬೆನ್ನಟ್ಟಲಿದೆ. ಟ್ರಂಪ್ ಮತ್ತು ಈ ಹತ್ಯೆಗೆ ಸಹಕರಿಸಿದ ಪ್ರತಿಯೊಬ್ಬರ ಮೇಲೆಯೂ ಅದು ಬರಲಿದೆ. ಅವರು ಅಂತಿಮ ಬೆಲೆಯನ್ನು ತೆರಬೇಕಾಗುತ್ತದೆ.

"ಪ್ರತೀಕಾರವು" ಲಕ್ಷಾಂತರ ಇರಾನಿಯನ್ನರಿಂದ" ಅಥವಾ "ಪ್ರತಿರೋಧ ದೇಶಗಳಿಂದ" ಮಾತ್ರವಲ್ಲ, "ಇಮಾಮ್ ಖೊಮೇನಿಯವರ ಪರಂಪರೆಯನ್ನು ಝಿಯೋನಿಸಂ ವಿರುದ್ಧ ನೋಡಿದ" ಹೊಸದಾಗಿ ಪ್ರತಿರೋಧಕ್ಕೆ ಸೇರಿದ ಅಮೆರಿಕನ್ನರು, ಯುರೋಪಿಯನ್ನರು "ಇವರಿಂದ" ಕೂಡ ಬರುತ್ತದೆ ಎಂದು ಅವರು ಹೇಳಿದರು.

"ವರ್ಷಗಳ ಕಾಲ ಅವರು ಯಾವುದೇ ಕಾರಣವಿಲ್ಲದೆ ಪಶ್ಚಿಮ ವಿರೋಧಿ ಎಂದು, ಯಾವುದೇ ಕಾರಣವಿಲ್ಲದೆ 'ಇಸ್ರೇಲ್ ನಾಶವಾಯಿತು' ಎಂದು ಹೇಳುತ್ತಿದ್ದರು ಎಂದು ಆರೋಪಿಸಿದರು. ಆದರೆ ಅವರು ಪ್ರಪಂಚದ ದಮನಿತರು ಸುತ್ತುವರೆದಿದ್ದ ಶಕ್ತಿಯಾಗಿದ್ದರು" ಎಂದು ಅವರು ಹೇಳಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com