ಇರಾನ್ ಪ್ರತೀಕಾರ: ಇಸ್ರೇಲ್‌ನ ಬೀಟ್ ಶೆಮೆಶ್ ನಲ್ಲಿ ಕ್ಷಿಪಣಿ ದಾಳಿ, 8 ಮಂದಿ ಹತ್ಯೆ!

ಜೆರುಸಲೆಂನಿಂದ ಸುಮಾರು 35 ಕಿ.ಮೀ. ದೂರದಲ್ಲಿರುವ ಬೀಟ್ ಶೆಮೆಶ್‌ನಲ್ಲಿರುವ ವಸತಿ ಕಟ್ಟಡದ ಮೇಲೆ ನಡೆಸಿದ ನೇರ ಕ್ಷಿಪಣಿ ದಾಳಿಯಲ್ಲಿ ಎಂಟು ಜನರು ಸಾವನ್ನಪ್ಪಿದ್ದಾರೆ ಎಂದು ರಕ್ಷಣಾ ಸೇವೆಗಳು ಭಾನುವಾರ ತಿಳಿಸಿವೆ.
Emergency personnel carry a body at the site
ರಕ್ಷಣಾ ಸಿಬ್ಬಂದಿ ಮೃತದೇಹವೊಂದನ್ನು ಸಾಗಿಸುತ್ತಿರುವ ಚಿತ್ರ
Updated on

ಜೆರುಸಲೆಂ: ಮಧ್ಯ ಪ್ರಾಚ್ಯ ಭೀಕರ ಯುದ್ಧದಿಂದ ತತ್ತರಿಸಿದೆ. ಸರ್ವೋಚ್ಚ ನಾಯಕ ಅಯಾತೊಲ್ಲಾ ಅಲಿ ಖಮೇನಿ ಹತ್ಯೆಯಿಂದ ಪ್ರತೀಕಾರದ ಜ್ವಾಲೆಯಲ್ಲಿ ಬೇಯುತ್ತಿರುವ ಇರಾನ್, ಇಸ್ರೇಲ್ ನ ಬೀಟ್ ಶೆಮೆಶ್ ನಲ್ಲಿ ಕ್ಷಿಪಣಿ ದಾಳಿ ನಡೆಸಿದೆ.

ಜೆರುಸಲೆಂನಿಂದ ಸುಮಾರು 35 ಕಿ.ಮೀ. ದೂರದಲ್ಲಿರುವ ಬೀಟ್ ಶೆಮೆಶ್‌ನಲ್ಲಿರುವ ವಸತಿ ಕಟ್ಟಡದ ಮೇಲೆ ನಡೆಸಿದ ನೇರ ಕ್ಷಿಪಣಿ ದಾಳಿಯಲ್ಲಿ ಎಂಟು ಜನರು ಸಾವನ್ನಪ್ಪಿದ್ದಾರೆ ಎಂದು ರಕ್ಷಣಾ ಸೇವೆಗಳು ಭಾನುವಾರ ತಿಳಿಸಿವೆ.

ಇದರೊಂದಿಗೆ ಶನಿವಾರದಿಂದ ಇರಾನ್ ನಡೆಸಿದ ಗುಂಡಿನ ದಾಳಿಯಲ್ಲಿ ಇಸ್ರೇಲ್‌ನಲ್ಲಿ ಹತ್ಯೆಯಾದವರ ಸಂಖ್ಯೆ ಒಂಬತ್ತಕ್ಕೆ ಏರಿಕೆಯಾಗಿದೆ.

Emergency personnel carry a body at the site
ನಮ್ಮ ಪ್ರತೀಕಾರ ಭೀಕರವಾಗಿರುತ್ತೇ: ಖಮೇನಿ ಸಾವಿನ ಬೆನ್ನಲ್ಲೇ ಜಮ್ಕರನ್ ಮೇಲೆ ಕೆಂಪು ಧ್ವಜ ಹಾರಾಟ, ಇಸ್ರೇಲ್ ಕಟ್ಟಡಗಳು ಧ್ವಂಸ!

ಇರಾನ್ ಕ್ಷಿಪಣಿಯು ನಗರದ ವಸತಿ ಪ್ರದೇಶಕ್ಕೆ ಅಪ್ಪಳಿಸಿದ್ದು, ಬಾಂಬ್ ನಿಂದ ರಕ್ಷಣೆ ಪಡೆಯಲು ಸಾರ್ವಜನಿಕರಿಗಾಗಿ ಮಾಡಲಾದ ಶೆಲ್ಟರ್ ಮತ್ತು ಸುತ್ತಮುತ್ತಲಿನ ಮನೆಗಳಿಗೆ ವ್ಯಾಪಕ ಹಾನಿಯನ್ನುಂಟುಮಾಡಿದೆ. ಯುವತಿ ಸೇರಿದಂತೆ ಇತರ ಇಬ್ಬರ ಸ್ಥಿತಿ ಗಂಭೀರವಾಗಿದೆ ಎಂದು ರಕ್ಷಣಾ ಸೇವೆಗಳು ತಿಳಿಸಿವೆ.

ಘಟನಾ ಸ್ಥಳದಲ್ಲಿದ್ದ 20 ಜನರಿಗೆ ಅಲ್ಪ ಪ್ರಮಾಣದ ಗಾಯಗಳಾಗಿವೆ. ನಾಲ್ಕು ವರ್ಷದ ಬಾಲಕನೊಬ್ಬ ಗಾಯಗೊಂಡಿದ್ದಾನೆ ಎಂದು ಇಸ್ರೇಲ್‌ನ ಮ್ಯಾಗೆನ್ ಡೇವಿಡ್ ಆಡಮ್ ತುರ್ತು ಸೇವೆ ತಿಳಿಸಿದೆ. ಅಗ್ನಿಶಾಮಕ ದಳದವರು ಸ್ಥಳದಲ್ಲಿದ್ದು, ಅವಶೇಷಗಳಡಿ ಸಿಲುಕಿರುವವರಿಗಾಗಿ ಶೋಧ ನಡೆಸುತ್ತಿದ್ದಾರೆ. ಕ್ಷಿಪಣಿ ಅಪ್ಪಳಿಸಿದ ಕಟ್ಟಡದ ಸಮೀಪದಲ್ಲಿದ್ದ ಡಜನ್‌ ಗೂ ಹೆಚ್ಚು ಮನೆಗಳಿಗೂ ಹಾನಿಯಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com