

ದುಬೈ: ಸುಮಾರು 37 ವರ್ಷಗಳ ಕಾಲ ಅಧಿಕಾರದಲ್ಲಿದ್ದ ಇರಾನ್‌ನ ಸುಪ್ರೀಂ ನಾಯಕ ಆಯತೊಲ್ಲಾ ಅಲಿ ಖಮೇನಿ ಅವರ ಮರಣವು ದೇಶದ ಭವಿಷ್ಯದ ಬಗ್ಗೆ ಅತ್ಯಂತ ಮಹತ್ವದ ಪ್ರಶ್ನೆಗಳನ್ನು ಎಬ್ಬಿಸಿದೆ. ಖಮೇನಿ ಹತ್ಯೆಯ ನಂತರದ ಸಂಕೀರ್ಣ ಉತ್ತರಾಧಿಕಾರ ಪ್ರಕ್ರಿಯೆಯ ರೂಪರೇಷೆಗಳು ಸ್ಪಷ್ಟವಾಗಲು ಆರಂಭಿಸಿವೆ.
ಇರಾನ್‌ನ ಸಂವಿಧಾನದ ಪ್ರಕಾರ, ದೇಶದ ನಾಯಕತ್ವ ಜವಾಬ್ದಾರಿಗಳನ್ನು ವಹಿಸಿಕೊಳ್ಳಲು ಮತ್ತು ಆಡಳಿತ ನಡೆಸಲು ಒಂದು ಮಂಡಳಿಯನ್ನು ರಚಿಸಲಾಗಿದೆ. ಈ ಮಂಡಳಿಯಲ್ಲಿ ಇರಾನ್‌ನ ಹಾಲಿ ಅಧ್ಯಕ್ಷರು, ದೇಶದ ನ್ಯಾಯಾಂಗ ಮುಖ್ಯಸ್ಥರು ಹಾಗೂ ಸಂಸತ್ತಿಗೆ ಸಲಹೆ ನೀಡುವ ಮತ್ತು ಪರಮೋಚ್ಛ ನಾಯಕರಿಗೆ ಮಾರ್ಗದರ್ಶನ ನೀಡುವ ಎಕ್ಸ್‌ಪಿಡಿಯೆನ್ಸಿ ಕೌನ್ಸಿಲ್ ಆಯ್ಕೆ ಮಾಡಿದ ಗಾರ್ಡಿಯನ್ ಕೌನ್ಸಿಲ್‌ನ ಒಬ್ಬ ಸದಸ್ಯರು ಸೇರಿರುತ್ತಾರೆ.
ಇರಾನ್‌ನ ಸುಧಾರಣಾವಾದಿ ಅಧ್ಯಕ್ಷ ಮಸೂದ್ ಪೆಜೆಶ್ಕಿಯನ್ ಮತ್ತು ಕಠಿಣ ನಿಲುವಿನ ನ್ಯಾಯಾಂಗ ಮುಖ್ಯಸ್ಥ ಘೋಲಾಮ್‌ಹೊಸೆನ್ ಮೊಹ್ಸೆನಿ ಎಜೆಇ ಅವರು ಸದಸ್ಯರಾಗಿದ್ದು, ಇವರು ತಾತ್ಕಾಲಿಕವಾಗಿ ಎಲ್ಲಾ ನಾಯಕತ್ವದ ಜವಾಬ್ದಾರಿಗಳನ್ನು ವಹಿಸಿಕೊಳ್ಳುತ್ತಾರೆ.
ನಾಯಕತ್ವ ಮಂಡಳಿ ತಾತ್ಕಾಲಿಕವಾಗಿ ಆಡಳಿತ ನಡೆಸಿದರೂ, ಇರಾನ್ ಕಾನೂನು ಪ್ರಕಾರ 88 ಸದಸ್ಯರ “ಅಸೆಂಬ್ಲಿ ಆಫ್ ಎಕ್ಸ್‌ಪರ್ಟ್ಸ್” ಸಾಧ್ಯವಾದಷ್ಟು ಬೇಗ ಹೊಸ ಸುಪ್ರೀಂ ನಾಯಕರನ್ನು ಆಯ್ಕೆ ಮಾಡಬೇಕು.
ಈ ಮಂಡಳಿಯಲ್ಲಿ ಸಂಪೂರ್ಣವಾಗಿ ಶಿಯಾ ಧಾರ್ಮಿಕ ಪಂಡಿತರು ಇದ್ದು, ಇವರನ್ನು ಪ್ರತಿ ಎಂಟು ವರ್ಷಗಳಿಗೊಮ್ಮೆ ಜನರಿಂದ ಆಯ್ಕೆ ಮಾಡಲಾಗುತ್ತದೆ. ಆದರೆ ಅವರ ಅಭ್ಯರ್ಥಿತ್ವವನ್ನು ಇರಾನ್‌ನ ಸಂವಿಧಾನ ಪರಿವೀಕ್ಷಕ ಸಂಸ್ಥೆಯಾಗಿರುವ ಗಾರ್ಡಿಯನ್ ಕೌನ್ಸಿಲ್ ಅನುಮೋದಿಸಬೇಕು. ಈ ಸಂಸ್ಥೆ ವಿವಿಧ ಚುನಾವಣೆಗಳಲ್ಲಿ ಅನೇಕ ಅಭ್ಯರ್ಥಿಗಳನ್ನು ಅನರ್ಹಗೊಳಿಸಿರುವುದಕ್ಕೆ ಪ್ರಸಿದ್ಧವಾಗಿದೆ. 2024ರ ಮಾರ್ಚ್‌ನಲ್ಲಿ ನಡೆದ ಅಸೆಂಬ್ಲಿ ಆಫ್ ಎಕ್ಸ್‌ಪರ್ಟ್ಸ್ ಚುನಾವಣೆಗೆ 2015ರ ಅಣು ಒಪ್ಪಂದವನ್ನು ಜಗತ್ತಿನ ಮಹಾಶಕ್ತಿಗಳೊಂದಿಗೆ ಮಾಡಿಕೊಂಡಿದ್ದ ಮಾಜಿ ಅಧ್ಯಕ್ಷ ಹಸನ್ ರೌಹಾನಿಯನ್ನು ಗಾರ್ಡಿಯನ್ ಕೌನ್ಸಿಲ್ ಅನರ್ಹಗೊಳಿಸಿತು.
ಉತ್ತರಾಧಿಕಾರದ ವಿಚಾರದಲ್ಲಿ ನಡೆಯುವ ಚರ್ಚೆಗಳು ಸಾರ್ವಜನಿಕ ವಲಯದಿಂದ ದೂರ ನಡೆಯುವುದರಿಂದ ಯಾರು ಪ್ರಮುಖ ಅಭ್ಯರ್ಥಿಯಾಗಬಹುದು ಎಂಬುದನ್ನು ಅಂದಾಜಿಸಲು ಕಷ್ಟವಾಗಿದೆ.
ಹಿಂದೆ, ಖಮೇನಿ ಅವರ ಆಪ್ತರಾದ ಕಠಿಣ ನಿಲುವಿನ ಅಧ್ಯಕ್ಷ ಎಬ್ರಾಹಿಂ ರೈಸಿ ಉತ್ತರಾಧಿಕಾರಿಯಾಗಬಹುದು ಎಂಬ ನಿರೀಕ್ಷೆ ಇತ್ತು. ಅವರು 2024ರ ಮೇ ತಿಂಗಳಲ್ಲಿ ಹೆಲಿಕಾಪ್ಟರ್ ಅಪಘಾತದಲ್ಲಿ ಮೃತಪಟ್ಟರು. ಇದರಿಂದ ಖಮೇನಿ ಅವರ 56 ವರ್ಷದ ಪುತ್ರ ಮೊಜ್ತಾಬಾ, ಶಿಯಾ ಧಾರ್ಮಿಕ ಪಂಡಿತರಾಗಿ, ಸಂಭಾವ್ಯ ಅಭ್ಯರ್ಥಿಯಾಗಿ ಕಾಣಿಸಿಕೊಂಡಿದ್ದಾರೆ. ಆದರೆ ಅವರು ಯಾವುದೇ ಸರ್ಕಾರಿ ಹುದ್ದೆ ವಹಿಸಿಕೊಂಡಿಲ್ಲ.
ಸುಪ್ರೀಂ ನಾಯಕ ಸ್ಥಾನವನ್ನು ತಂದೆಯಿಂದ ಮಗನಿಗೆ ಹಸ್ತಾಂತರಿಸುವುದು, ಧಾರ್ಮಿಕ ಆಡಳಿತದ ವಿರುದ್ಧ ಈಗಾಗಲೇ ಟೀಕಾತ್ಮಕ ನಿಲುವು ಹೊಂದಿರುವ ಇರಾನಿಯರಷ್ಟೇ ಅಲ್ಲದೆ, ವ್ಯವಸ್ಥೆಯ ಬೆಂಬಲಿಗರಲ್ಲಿಯೂ ಅಸಮಾಧಾನ ಹುಟ್ಟಿಸಬಹುದು. 1979ರಲ್ಲಿ ಅಮೆರಿಕಾ ಬೆಂಬಲಿತ ಶಾಹ್ ಮೊಹಮ್ಮದ್ ರೆಜಾ ಪಹ್ಲವಿ ಅವರ ಆಡಳಿತ ಕುಸಿತದ ನಂತರ ಹೊಸ ಧಾರ್ಮಿಕ ವಂಶವನ್ನೇ ಸ್ಥಾಪಿಸುವಂತಾಗುತ್ತದೆ ಎಂಬ ಅಭಿಪ್ರಾಯವೂ ವ್ಯಕ್ತವಾಗಬಹುದು.
1979ರ ಇಸ್ಲಾಮಿಕ್ ಕ್ರಾಂತಿಯ ನಂತರ ಇರಾನ್‌ನಲ್ಲಿ ಸುಪ್ರೀಂ ನಾಯಕ ಸ್ಥಾನದಲ್ಲಿ ಅಧಿಕಾರ ಹಸ್ತಾಂತರ ನಡೆದದ್ದು ಒಂದೇ ಬಾರಿ. 1989ರಲ್ಲಿ ಕ್ರಾಂತಿಯ ನಾಯಕ ಮತ್ತು ಇರಾಕ್ ವಿರುದ್ಧದ ಎಂಟು ವರ್ಷದ ಯುದ್ಧದಲ್ಲಿ ದೇಶವನ್ನು ಮುನ್ನಡೆಸಿದ ಗ್ರ್ಯಾಂಡ್ ಆಯತೊಲ್ಲಾ ರುಹೊಲ್ಲಾ ಖುಮೇನಿ ಅವರು 86ನೇ ವಯಸ್ಸಿನಲ್ಲಿ ನಿಧನರಾದರು.
2025ರ ಜೂನ್‌ನಲ್ಲಿ ಇಸ್ರೇಲ್ ಇರಾನ್ ವಿರುದ್ಧ 12 ದಿನಗಳ ಯುದ್ಧ ಆರಂಭಿಸಿದ ಹಿನ್ನೆಲೆಯಲ್ಲಿ ನಡೆಯುತ್ತಿದೆ.
ಇರಾನ್‌ನ ಸಂಕೀರ್ಣ ಶಿಯಾ ಧರ್ಮಾಧಿಪತ್ಯ ವ್ಯವಸ್ಥೆಯಲ್ಲಿ ಸುಪ್ರೀಂ ನಾಯಕ ಕೇಂದ್ರ ಸ್ಥಾನ ಹೊಂದಿದ್ದು, ಎಲ್ಲಾ ರಾಷ್ಟ್ರ ವ್ಯವಹಾರಗಳಲ್ಲಿ ಅಂತಿಮ ಮಾತು ಅವರದೇ ಆಗಿರುತ್ತದೆ.
ಅವರು ದೇಶದ ಸಶಸ್ತ್ರ ಪಡೆಗಳ ಹಾಗೂ ಅಮೆರಿಕಾ 2019ರಲ್ಲಿ ಭಯೋತ್ಪಾದಕ ಸಂಘಟನೆ ಎಂದು ಘೋಷಿಸಿದ ರೆವಲ್ಯೂಷನರಿ ಗಾರ್ಡ್‌ನ ಮುಖ್ಯ ಕಮಾಂಡರ್ ಕೂಡ ಆಗಿರುತ್ತಾರೆ. ಖಮೇನಿ ಅವರ ಆಡಳಿತದಲ್ಲಿ ಈ ಗಾರ್ಡ್ ಹೆಚ್ಚಿನ ಶಕ್ತಿಯನ್ನು ಪಡೆದಿದೆ. ಮಧ್ಯಪ್ರಾಚ್ಯದಲ್ಲಿ ಅಮೆರಿಕಾ ಮತ್ತು ಇಸ್ರೇಲ್ ವಿರುದ್ಧ ಹೋರಾಡಲು ಉದ್ದೇಶಿಸಿದ “ಆಕ್ಸಿಸ್ ಆಫ್ ರೆಸಿಸ್ಟನ್ಸ್” ಎನ್ನುವ ಸಂಘಟನೆಗಳ ಜಾಲವನ್ನು ಮುನ್ನಡೆಸುವುದಲ್ಲದೆ, ಈ ಗಾರ್ಡ್ ಇರಾನ್‌ನೊಳಗೂ ವ್ಯಾಪಕ ಆರ್ಥಿಕ ಸಂಪತ್ತನ್ನು ಹೊಂದಿದೆ.
Advertisement