Oman ಕರಾವಳಿಯಲ್ಲಿ ತೈಲ ಟ್ಯಾಂಕರ್ ಮೇಲೆ Drone ದಾಳಿ, ಭಾರತ ಮೂಲದ ಸಿಬ್ಬಂದಿ ಸಾವು! Video

ತೈಲ ಟ್ಯಾಂಕರ್‌ ಮೇಲಿನ ದಾಳಿಯ ಬಗ್ಗೆ ಒಮನ್‌ನಿಂದ ಮಾಹಿತಿ ಲಭ್ಯವಾಗಿದ್ದು, ಸುಲ್ತಾನ್ ಕಬೂಸ್ ಬಂದರು ಬಳಿ ತೈಲ ಟ್ಯಾಂಕರ್ ಮೇಲೆ ಇರಾನ್ ದಾಳಿ ನಡೆಸಿದೆ.
Indian crew member killed in attack on oil tanker in Gulf of Oman
ತೈಲ ಟ್ಯಾಂಕರ್ ಮೇಲೆ ದಾಳಿ, ಭಾರತ ಮೂಲದ ಸಿಬ್ಬಂದಿ ಸಾವು
Updated on

ನವದೆಹಲಿ: ಇಸ್ರೇಲ್‌-ಅಮೆರಿಕದ ಜಂಟಿ ದಾಳಿಗೆ ಇರಾನ್‌ನಿಂದ ಪ್ರತಿಕಾರದ ದಾಳಿ ನಡೆದಿದ್ದು, ಒಮನ್‌ನಲ್ಲಿ ತೈಲ ಟ್ಯಾಂಕರ್‌ ಮೇಲೆ ನಡೆದ ದಾಳಿಯಲ್ಲಿ ಓರ್ವ ಭಾರತೀಯ ಸಿಬ್ಬಂದಿ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.

ತೈಲ ಟ್ಯಾಂಕರ್‌ ಮೇಲಿನ ದಾಳಿಯ ಬಗ್ಗೆ ಒಮನ್‌ನಿಂದ ಮಾಹಿತಿ ಲಭ್ಯವಾಗಿದ್ದು, ಸುಲ್ತಾನ್ ಕಬೂಸ್ ಬಂದರು ಬಳಿ ತೈಲ ಟ್ಯಾಂಕರ್ ಮೇಲೆ ಇರಾನ್ ದಾಳಿ ನಡೆಸಿದೆ. ಇದರಲ್ಲಿ ಭಾರತೀಯ ಮೃತಪಟ್ಟಿರುವ ಬಗ್ಗೆ ಒಮನ್ ದೃಢಪಡಿಸಿದೆ. ಇದರ ವಿಡಿಯೋಗಳು ಕೂಡ ಹರಿದಾಡುತ್ತಿವೆ.

ಅಮೆರಿಕ ಮತ್ತು ಇಸ್ರೇಲ್ ದಾಳಿಗಳಿಗೆ ಪ್ರತಿಯಾಗಿ ಇರಾನ್ ಅಮೆರಿಕ ಸೇನಾ ನೆಲೆಗಳ ಮೇಲೆ ದಾಳಿ ನಡೆಸುತ್ತಿದ್ದು, ಅದರಂತೆ ಒಮನ್ ಮೇಲೂ ಇರಾನ್ ದಾಳಿ ನಡೆಸಿದೆ. ಒಮನ್ ಕರಾವಳಿಯಲ್ಲಿ ಮಾನವರಹಿತ ಡ್ರೋನ್ ವೊಂದು ಹಡಗು ತೈಲ ಟ್ಯಾಂಕರ್‌ಗೆ ಅಪ್ಪಳಿಸಿದ ಪರಿಣಾಮವಾಗಿ ಸಂಭವಿಸಿದ ಸ್ಫೋಟದಲ್ಲಿ ಭಾರತೀಯ ಸಿಬ್ಬಂದಿಯೊಬ್ಬರು ಸಾವನ್ನಪ್ಪಿದ್ದಾರೆ.

Indian crew member killed in attack on oil tanker in Gulf of Oman
ಪ್ರತೀಕಾರದ ಶಪಥ ಮಾಡಿದ್ದ 24 ಗಂಟೆಗಳಲ್ಲೇ ಇರಾನ್ ನೂತನ ಸರ್ವಾಧಿಕಾರಿ ಅರಾಫಿ ಹತ್ಯೆ?; ನಾಯಕನಿಲ್ಲದಂತಾದ ಇರಾನ್!

ಈ ಮೂಲಕ ಇರಾನ್- ಇಸ್ರೇಲ್ ನಡುವಿನ ಯುದ್ಧದಲ್ಲಿ ಮೊದಲ ಭಾರತೀಯನ ಸಾವಾಗಿದೆ. ಈ ದಾಳಿಯಿಂದಾಗಿ ಬೆಂಕಿ ಕಾಣಿಸಿಕೊಂಡು ಹಡಗಿನಲ್ಲಿದ್ದ ಎಲ್ಲಾ ಸಿಬ್ಬಂದಿಯನ್ನು ಸ್ಥಳಾಂತರಿಸಬೇಕಾಯಿತು. ಆದರೆ, ಈ ದುರಂತದಲ್ಲಿ ಓರ್ವ ಭಾರತೀಯ ಮೃತಪಟ್ಟಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಸೋಮವಾರ ಓಮನ್ ಕೊಲ್ಲಿಯಲ್ಲಿ ಮಾರ್ಷಲ್ ದ್ವೀಪಗಳ ಧ್ವಜ ಹೊತ್ತ ತೈಲ ಟ್ಯಾಂಕರ್‌ಗೆ ಬಾಂಬ್ ತುಂಬಿದ ಡ್ರೋನ್ ಡಿಕ್ಕಿ ಹೊಡೆದು ಭಾರತೀಯ ನಾವಿಕನೊಬ್ಬ ಸಾವನ್ನಪ್ಪಿದ್ದಾನೆ ಎಂದು ಓಮನ್ ಅಧಿಕಾರಿಗಳನ್ನು ಉಲ್ಲೇಖಿಸಿ ಮಾಧ್ಯಮ ವರದಿಗಳು ತಿಳಿಸಿವೆ.

ಮಸ್ಕತ್ ಬಳಿ ಈ ದಾಳಿ ನಡೆದಿದ್ದು, MKD VYOM ಎಂದು ಗುರುತಿಸಲಾದ ಹಡಗು ದಾಳಿಯಲ್ಲಿ ಹಾನಿಗೊಳಗಾಗಿದೆ. ಮೃತ ಸಿಬ್ಬಂದಿ ಭಾರತೀಯ ಪ್ರಜೆ ಎಂದು ಅಧಿಕಾರಿಗಳು ದೃಢಪಡಿಸಿದ್ದು, ಕಾರ್ಯನಿರತ ಪ್ರಾದೇಶಿಕ ಹಡಗು ಕಾರಿಡಾರ್‌ನಲ್ಲಿ ಸಮುದ್ರ ಭದ್ರತೆಯ ಬಗ್ಗೆ ಹೊಸ ಕಳವಳಗಳನ್ನು ಹುಟ್ಟುಹಾಕಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com