'ರೇಪ್ ಮಾಡಿ ಅನ್ನೋನು ಯಾವ ಸೀಮೆ ನಾಯಕ'.. 'ಬಾಂಬ್ ಅಲ್ಲ.. ಇರಾನಿಯನ್ನರು Khamenei ಆಡಳಿತಕ್ಕೆ ಹೆಚ್ಚು ಭಯಪಡುತ್ತಾರೆ': ನಟಿ ಆಕ್ರೋಶ! VIDEO

ಇರಾನ್ ಮೂಲದ ಅಮೆರಿಕ ನಟಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, 'ರೇಪ್ ಮಾಡಿ ಅನ್ನೋನು ಯಾವ ಸೀಮೆ ನಾಯಕ'.. 'ಬಾಂಬ್ ಅಲ್ಲ.. ಇರಾನಿಯನ್ನರು Khamenei ಆಡಳಿತಕ್ಕೆ ಹೆಚ್ಚು ಭಯಪಡುತ್ತಿದ್ದರು ಎಂದು ಹೇಳಿದ್ದಾರೆ.
Iran-born actress Elnaaz Norouzi
ಇರಾನ್ ಮೂಲದ ನಟಿ ಎಲ್ನಾಜ್ ನೊರೌಜಿ
Updated on

ವಾಷಿಂಗ್ಟನ್: ಇಸ್ರೇಲ್-ಅಮೆರಿಕ ನಡೆಸಿದ ಜಂಟಿ ಸೇನಾದಾಳಿಯಲ್ಲಿ ಇರಾನ್ ಸರ್ವೋಚ್ಛ ನಾಯಕ ಅಯತೊಲ್ಲಾ ಅಲಿ ಖಮೇನಿ ಸಾವಿಗೆ ಭಾರತದಲ್ಲಿ ವ್ಯಕ್ತವಾಗುತ್ತಿರುವ ಪ್ರತಿಭಟನೆಗಳಿಗೆ ಇರಾನ್ ಮೂಲದ ಅಮೆರಿಕ ನಟಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, 'ರೇಪ್ ಮಾಡಿ ಅನ್ನೋನು ಯಾವ ಸೀಮೆ ನಾಯಕ'.. 'ಬಾಂಬ್ ಅಲ್ಲ.. ಇರಾನಿಯನ್ನರು Khamenei ಆಡಳಿತಕ್ಕೆ ಹೆಚ್ಚು ಭಯಪಡುತ್ತಿದ್ದರು ಎಂದು ಹೇಳಿದ್ದಾರೆ.

ಎಎನ್ಐ ಸುದ್ದಿಸಂಸ್ಥೆ ಜೊತೆ ಮಾತನಾಡಿರುವ ಇರಾನ್ ಮೂಲದ ಅಮೆರಿಕ ನಟಿ ಎಲ್ನಾಜ್ ನೊರೌಜಿ, ಇರಾನ್ ಸರ್ವೋಚ್ಛ ನಾಯಕ ಅಯತೊಲ್ಲಾ ಅಲಿ ಖಮೇನಿ ಆಡಳಿತವನ್ನು ದುರಾಡಳಿತ ಎಂದು ಬಣ್ಣಿಸಿದ್ದು ತಮ್ಮ ಕರಾಳ ಅನುಭವವನ್ನು ಬಿಚ್ಚಿಟ್ಟಿದ್ದಾರೆ.

ಅಂತೆಯೇ ಖಮೇನಿ ಹತ್ಯೆ ವಿಚಾರವಾಗಿ ಭಾರತದಲ್ಲಿ ನಡೆಯುತ್ತಿರುವ ಪ್ರತಿಭಟನೆಗಳನ್ನು ತೀವ್ರವಾಗಿ ಟೀಕಿಸಿದ್ದು, ಅನೇಕ ಪ್ರತಿಭಟನಾಕಾರರಿಗೆ ಖಮೇನಿ ಅವರ ಆಡಳಿತದ ಬಗ್ಗೆ "ನಿಖರವಾದ ಮಾಹಿತಿಯ ಕೊರತೆಯಿದೆ" ಎಂದು ಹೇಳಿದ್ದಾರೆ.

ಇರಾನ್‌ನಲ್ಲಿ ಜನಿಸಿದ ಈ ನಟಿ, ನಂತರ ಭಾರತದಲ್ಲಿ ತನ್ನ ವೃತ್ತಿಜೀವನವನ್ನು ಸ್ಥಾಪಿಸುವ ಮೊದಲು ಜರ್ಮನಿಗೆ ತೆರಳಿದರು, ಇರಾನ್‌ನಲ್ಲಿ ಮಾನವ ಹಕ್ಕುಗಳ ಕಾಳಜಿಗಳ ಬಗ್ಗೆ ಧ್ವನಿ ಎತ್ತಿದ್ದಾರೆ.

Iran-born actress Elnaaz Norouzi
'ನರಕ.. ಇರಾನ್ ಅಲ್ಲದವರಾದ್ರೆ ಮುಚ್ಕೊಂ*ರಿ': Khamenei ಸಾವಿಗೆ ಅಳುವ ಭಾರತೀಯ ಮುಸ್ಲಿಂ ಮಹಿಳೆಯರ ಲೇವಡಿ ಮಾಡಿದ ಇರಾನ್ ಮಹಿಳೆಯರು!

ದಬ್ಬಾಳಿಕೆಯ ನಾಯಕನನ್ನು ಏಕೆ ಜನ ಬೆಂಬಲಿಸುತ್ತಿದ್ದಾರೆ..?

ಇದು ತುಂಬಾ ದುಃಖಕರ. ಆದರೆ ಇದು ಅವರ ಬಳಿ ಮಾಹಿತಿ ಇಲ್ಲದ ಕಾರಣ ಮಾತ್ರ ನಡೆಯುತ್ತಿದೆ ಎಂದು ನಾನು ಭಾವಿಸುತ್ತೇನೆ... ದಬ್ಬಾಳಿಕೆಯ ನಾಯಕನನ್ನು ಏಕೆ ಜನ ಬೆಂಬಲಿಸುತ್ತಿದ್ದಾರೆ..? ಈ ವ್ಯಕ್ತಿ (ಖಮೇನಿ) ಧರ್ಮದ ಹೆಸರಿನಲ್ಲಿ ಎಲ್ಲ ರೀತಿಯ ದೌರ್ಜನ್ಯಗಳನ್ನು ಮಾಡಿದ್ದಾನೆ. ಯಾವ ರೀತಿಯ ದೌರ್ಜನ್ಯಗಳನ್ನು ಮಾಡಿದ್ದಾನೆಂದು ಅವರಿಗೆ ತಿಳಿದಿಲ್ಲ. ಆತ ಅನೇಕ ಜನರನ್ನು ಕೊಂದಿದ್ದಾನೆ.

ಅವರಿಗೆ ಇದು ತಿಳಿದಿಲ್ಲ. ಅವರು ಧಾರ್ಮಿಕ ನಾಯಕ ಎಂದು ಮಾತ್ರ ಅವರಿಗೆ ತಿಳಿದಿದೆ. ಹೀಗಾಗಿ ಅವರು ಖಮೇನಿಯನ್ನು ಕುರುಡಾಗಿ ಅನುಸರಿಸುತ್ತಿದ್ದಾರೆ. ಇರಾನ್‌ನ ಹೊರಗೆ ವಾಸಿಸುವುದರಿಂದ ಮಾತ್ರ ಅವರು ಬಹಿರಂಗವಾಗಿ ಮಾತನಾಡಲು ಸಾಧ್ಯವಾಗುತ್ತದೆ. ಒಂದು ವೇಳೆ ಅವರು ಇರಾನ್ ನಲ್ಲಿದಿದ್ದರೆ ವಾಸ್ತವಾಂಶ ತಿಳಿಯುತ್ತಿತ್ತು ಎಂದು ಎಲ್ನಾಜ್ ಹೇಳಿದ್ದಾರೆ.

‘ಇರಾನ್‌ನಲ್ಲಿ ವಾಕ್ ಸ್ವಾತಂತ್ರ್ಯವಿಲ್ಲ’

“ಒಂದು ದೇಶದಲ್ಲಿ ವಾಕ್ ಸ್ವಾತಂತ್ರ್ಯವಿಲ್ಲದಿದ್ದಾಗ, ಇದೆಲ್ಲವೂ ಸಂಭವಿಸುತ್ತದೆ. ನಾನು ಈಗ ಸುರಕ್ಷಿತವಾಗಿರುವ ದೇಶದಲ್ಲಿ ವಾಸಿಸುತ್ತಿರುವುದರಿಂದ ನಾನು ಇದನ್ನೆಲ್ಲಾ ಮಾಡಬಹುದು. ಅಲ್ಲಿ ನಾನು ಇರಾನ್‌ನಲ್ಲಿ ನಡೆಯುತ್ತಿರುವುದನ್ನು ಬಹಿರಂಗವಾಗಿ ಮಾತನಾಡಬಹುದು ಮತ್ತು ಹೇಳಬಹುದು. ದುರದೃಷ್ಟವಶಾತ್, ಇರಾನ್‌ನಲ್ಲಿರುವವರು ಇದನ್ನು ಮಾಡಲು ಸಾಧ್ಯವಿಲ್ಲ. ಏಕೆಂದರೆ ಅವರು ಸರ್ಕಾರದ ವಿರುದ್ಧ ಏನಾದರೂ ಹೇಳಿದರೆ ಅವರು ಜೈಲಿಗೆ ಹೋಗುತ್ತಾರೆ. ಅಥವಾ ನಿಗೂಢವಾಗಿ ನಾಪತ್ತೆಯಾಗಿ ಕೊಲ್ಲಲ್ಪಡುತ್ತಾರೆ ಎಂದು ನಟಿ ಹೇಳಿದ್ದಾರೆ.

ಇದೇ ವೇಳೆ ನಟಿ ಎಲ್ನಾಜ್ ನೊರೌಜಿ, ಇರಾನ್ ನ ಜೈಲು ಪರಿಸ್ಥಿತಿಗಳ ಬಗ್ಗೆಯೂ ಅವರು ಗಂಭೀರ ಆರೋಪಗಳನ್ನು ಮಾಡಿದ್ದು, “ಜೈಲುಗಳಲ್ಲಿ ಏನು ನಡೆಯುತ್ತಿದೆ ಎಂಬುದರ ಕುರಿತು ಹಲವು ವರ್ಷಗಳಿಂದ ಹಲವಾರು ಕಥೆಗಳು ಬಂದಿವೆ. ಖಮೇನಿ ಸರ್ಕಾರ ಮಹಿಳೆಯರ ಮೇಲೆ ಅತ್ಯಾಚಾರ ಮಾಡುತ್ತಿದ್ದಾರೆ, ಅವರು ರಾಜಕೀಯ ಕೈದಿಗಳಿಗೆ ನೋವುಂಟು ಮಾಡುತ್ತಿದ್ದಾರೆ. ಜೈಲಿನಲ್ಲಿರುವ ವರ್ಜಿನ್ ಹೆಣ್ಣುಮಕ್ಕಳನ್ನು ಅತ್ಯಾಚಾರ ಮಾಡಿ.. ಅವರಿಗೆ ಜನ್ನತ್ ಸಿಗಬಾರದು ಎಂದು ಹೇಳುವವನು ಯಾವ ಸೀಮೆ ನಾಯಕನಾಗುತ್ತಾನೆ ಎಂದು ನಟಿ ಎಲ್ನಾಜ್ ನೊರೌಜಿ ಪ್ರಶ್ನಿಸಿದ್ದಾರೆ.

‘ಇರಾನಿನ ಜನರು ಪರಮಾಣು ಬಾಂಬ್ ಬಯಸುವುದಿಲ್ಲ’

ವಿಶಾಲ ಸಂಘರ್ಷವನ್ನು ಉದ್ದೇಶಿಸಿ ಮಾತನಾಡಿದ ನಟಿ ನೊರೌಜಿ, 'ಪ್ರಸ್ತುತ ಯುದ್ಧವು ಇರಾನ್, ಅಮೆರಿಕ ಮತ್ತು ಇಸ್ರೇಲ್ ನಡುವಿನ ದೀರ್ಘಕಾಲದ ಉದ್ವಿಗ್ನತೆಯಿಂದ ಹುಟ್ಟಿಕೊಂಡಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. "ಕಳೆದುಹೋಗುವ ಪ್ರತಿಯೊಂದು ಜೀವವೂ ನಷ್ಟವೇ, ವಿಶೇಷವಾಗಿ ಅದು ಮಕ್ಕಳ ಜೀವವಾಗಿದ್ದರೆ. ದುರದೃಷ್ಟವಶಾತ್, ಯುದ್ಧದಲ್ಲಿ ಇದೆಲ್ಲವೂ ಸಂಭವಿಸುತ್ತದೆ, ಆದ್ದರಿಂದ ಯುದ್ಧ ಇರಬಾರದು.

ಆದರೆ ಯುದ್ಧ ಹೇಗೆ ನಡೆಯಿತು ಎಂಬುದನ್ನು ನೀವು ನೋಡಬೇಕು. 47 ವರ್ಷಗಳಿಂದ 'ಅಮೆರಿಕಕ್ಕೆ ಸಾವು', 47 ವರ್ಷಗಳಿಂದ 'ಇಸ್ರೇಲ್‌ಗೆ ಸಾವು' ಎಂದು ಹೇಳುತ್ತಿರುವ ಮತ್ತು ಅಮೆರಿಕ, ಇಸ್ರೇಲ್ ಮತ್ತು ಉಳಿದ ಜಗತ್ತಿಗೆ ತುಂಬಾ ಅಪಾಯಕಾರಿಯಾಗಬಹುದಾದ ಪರಮಾಣು ಬಾಂಬ್ ಅನ್ನು ರಹಸ್ಯವಾಗಿ ತಯಾರಿಸುತ್ತಿರುವ ಒಂದು ಆಡಳಿತ ಇದಾಗಿತ್ತು ಎಂದು ನೊರೌಜಿ ಹೇಳಿದ್ದಾರೆ.

ಅಂತೆಯೇ ಇರಾನ್‌ನ ಪರಮಾಣು ಮಹತ್ವಾಕಾಂಕ್ಷೆಗಳ ಉದ್ದೇಶವನ್ನು ಪ್ರಶ್ನಿಸಿದ ಅವರು, "ನಿಮಗೆ ಪರಮಾಣು ಬಾಂಬ್ ಏಕೆ ಬೇಕು? ನೀವು ಅಮೆರಿಕವನ್ನು ಅಳಿಸಿಹಾಕಲು ಬಯಸುತ್ತೀರಿ, ನೀವು ಇಸ್ರೇಲ್ ಅನ್ನು ಅಳಿಸಿಹಾಕಲು ಬಯಸುತ್ತೀರಿ; ನೀವು ಪರಮಾಣು ಬಾಂಬ್ ತಯಾರಿಸುತ್ತಿರುವಾಗ ನಿಮ್ಮ ಸ್ವಂತ ಜನರು ಈಗ ಬಳಲುತ್ತಿದ್ದಾರೆ.

ಆದರೆ ಆ ಬಗ್ಗೆ ನಿಮಗೆ ಕಾಳಜಿ ಇಲ್ಲ. ಪ್ರಾದೇಶಿಕ ಪ್ರಾಕ್ಸಿ ಗುಂಪುಗಳನ್ನು ಬೆಂಬಲಿಸಲು ರಾಜ್ಯ ನಿಧಿಗಳನ್ನು ಬಳಸಲಾಗುತ್ತಿದೆ. ಈ ಪರಮಾಣು ಬಾಂಬ್ ತಯಾರಿಸಲು ನಿಮ್ಮಲ್ಲಿರುವ ಎಲ್ಲಾ ಹಣವನ್ನು ನೀವು ಬಳಸುತ್ತೀರಿಯ. ನಿಮ್ಮಲ್ಲಿರುವ ಎಲ್ಲಾ ಹಣವನ್ನು ಹಮಾಸ್, ಹೆಜ್ಬೊಲ್ಲಾ ಮತ್ತು ಹೌತಿಗಳಂತಹ ಉಗ್ರ ಸಂಘಟನೆಗಳನ್ನು ನಿಮ್ಮ ಪ್ರಾಕ್ಸಿಗಳಾಗಿ ಬಳಸಲು ಹಣ ವಿನಿಯೋಗಿಸುತ್ತಿದ್ದೀರಿ. ಆದರೆ ಅವರು ನಿಮಗೆ ಏನನ್ನೂ ಮಾಡುವುದಿಲ್ಲ ಎಂದರು.

Iran-born actress Elnaaz Norouzi
10 ದಿನಕ್ಕಷ್ಟೇ ಮಿಸೈಲ್ ಸ್ಟಾಕ್: ಪೆಂಟಗಾನ್ ಎಚ್ಚರಿಕೆ; ಇರಾನ್ ಯುದ್ಧದಲ್ಲಿ ಅಮೆರಿಕಕ್ಕೆ ಹಿನ್ನಡೆ ಸಾಧ್ಯತೆ?

ಸಂಘರ್ಷಕ್ಕೆ ಇರಾನ್ ಸರ್ಕಾರವೇ ಕಾರಣ

ಇದೇ ವೇಳೆ ಹಾಲಿ ನಡೆಯುತ್ತಿರುವ ಸಂಘರ್ಷಕ್ಕೆ ಇರಾನ್ ಕಾರಣ ಎಂದು ಹೇಳಿರುವ ನಟಿ, 'ಈ ಸಂಘರ್ಷದ ಜವಾಬ್ದಾರಿ ಇರಾನ್ ನಾಯಕತ್ವದ ಮೇಲಿದೆ. ಈ ಯುದ್ಧವು ಆಡಳಿತದ ಹೆಗಲ ಮೇಲೆ ಇದೆ. ಏಕೆಂದರೆ ಅಮೆರಿಕ ಮತ್ತು ಇಸ್ರೇಲ್ ವರ್ಷಗಳಿಂದ ಒಪ್ಪಂದವನ್ನು ಬಯಸುತ್ತಿವೆ.

ಕ್ಷಿಪಣಿಗಳನ್ನು ನಿಲ್ಲಿಸಿ, ಪರಮಾಣು [ಕಾರ್ಯಕ್ರಮ] ನಿಲ್ಲಿಸಿ. ಇರಾನಿನ ಜನರು ಪರಮಾಣು ಬಾಂಬ್ ಅನ್ನು ಬಯಸುವುದಿಲ್ಲ. ನಮಗೆ ಅದು ಬೇಡ. ಹಾಗಾದರೆ ನೀವು ಅದನ್ನು ಏಕೆ ಮಾಡುತ್ತಿದ್ದೀರಿ? ಅದರಿಂದಲೇ ಯುದ್ಧ ಪ್ರಾರಂಭವಾಯಿತು - ಅವರು ಒಪ್ಪಲಿಲ್ಲ. ‘ಸರಿ, ನಾವು ನಿಮ್ಮೊಂದಿಗೆ ಒಪ್ಪಂದ ಮಾಡಿಕೊಳ್ಳುತ್ತೇವೆ’ ಎಂದು ಹೇಳುವ ಬದಲು ಅವರು ತಮ್ಮ ಜನರ ಜೀವಗಳನ್ನು ಅಪಾಯಕ್ಕೆ ಸಿಲುಕಿಸುತ್ತಾರೆ. ನಿಮ್ಮ ಅಹಂ ಮತ್ತು ಅಮೆರಿಕದ ಮೇಲಿನ ನಿಮ್ಮ ದ್ವೇಷವು ನಿಮ್ಮ ಸ್ವಂತ ಜನರ ಜೀವಕ್ಕಿಂತ ದೊಡ್ಡದಾಗಿದೆ ಎಂದರು”

‘ಇರಾನಿಯನ್ನರು ಬಾಂಬ್ ದಾಳಿಗಿಂತ ಖಮೇನಿ ಆಡಳಿತಕ್ಕೆ ಹೆಚ್ಚು ಭಯಪಡುತ್ತಾರೆ’

ಅಲ್ಲದೆ ಇರಾನ್ ಜನರು ಅಮೆರಿಕ-ಇಸ್ರೇಲ್ ಗಳ ಬಾಂಬ್ ದಾಳಿಗಿಂತ ಖಮೇನಿ ಅವರ ದುರಾಡಳಿತಕ್ಕೆ ಹೆಚ್ಚು ಭಯಪಡುತ್ತಾರೆ ಎಂದು ನಟಿ ಹೇಳಿದ್ದು, 'ಸಾಮಾನ್ಯ ಇರಾನಿಯನ್ನರು ವಾಯುದಾಳಿಗಿಂತ ತಮ್ಮ ಸರ್ಕಾರಕ್ಕೆ ಹೆಚ್ಚು ಭಯಪಡುತ್ತಾರೆ. ಇರಾನಿನ ಜನರು ಬಾಂಬ್ ದಾಳಿ ಮತ್ತು ಕ್ಷಿಪಣಿಗಳಿಗಿಂತ ಅಲ್ಲಿನ ಆಡಳಿತಕ್ಕೆ ಹೆಚ್ಚು ಭಯಪಡುತ್ತಾರೆ.

ಆದರೆ ನೀವು ಈಗ ನೋಡಿದರೆ, ತುಂಬಾ ನೋವುಂಟುಮಾಡುವ ವೀಡಿಯೊಗಳು ತುಂಬಾ ಇವೆ; ನೀವು ನೋಡಿದರೆ, ಅವರು ತಮ್ಮ ಮುಂದೆ ಬಾಂಬ್ ದಾಳಿ ನಡೆಯುತ್ತಿರುವಾಗ ವೀಡಿಯೊಗಳನ್ನು ತೆಗೆದುಕೊಳ್ಳುತ್ತಿದ್ದಾರೆ, ಆದರೆ ಅಲ್ಲಿ ವಾಸಿಸುತ್ತಿರುವವರು ಈಗ ಸಾಯುತ್ತಿದ್ದಾರೆ. ಅದಾಗ್ಯೂ ಅವರಿಗೆ ಸ್ವಾತಂತ್ರ್ಯ ಸಿಗುತ್ತದೆ ಎಂದು ಅವರಿಗೆ ತಿಳಿದಿರುವುದರಿಂದ ಅವರು ತುಂಬಾ ಸಂತೋಷವಾಗಿದ್ದಾರೆ. ನಿಮ್ಮ ದೇಶಕ್ಕೆ ಬಾಂಬ್ ದಾಳಿಯಾದಾಗ ನೀವು ಹೇಗೆ ಸಂತೋಷವಾಗಿರಬಹುದು ಎಂದು ಯೋಚಿಸಿ. ಅದು ನಿಮಗೆ ಸಂತೋಷದ ವಿಷಯವಾಗಿರುವ ಹಂತಕ್ಕೆ ನೀವು ತಲುಪಿದ್ದೀರಿ? ಎಂದು ನೋರೌಜಿ ಹೇಳಿದ್ದಾರೆ.

Iran-born actress Elnaaz Norouzi
US–Iran conflict | ಇಸ್ರೇಲ್ ಮೇಲೆ ಇರಾನ್ ಕ್ಷಿಪಣಿ ದಾಳಿ; 6ನೇ ದಿನಕ್ಕೆ ಕಾಲಿಟ್ಟ ಯುದ್ಧ; ಡೊನಾಲ್ಡ್ ಟ್ರಂಪ್ ಯುದ್ಧಾಧಿಕಾರಗಳನ್ನು ನಿಯಂತ್ರಿಸಲು ಸೆನೆಟ್ ವಿಫಲ!

ಪಶ್ಚಿಮ ಏಷ್ಯಾದಲ್ಲಿ ಹೆಚ್ಚುತ್ತಿರುವ ಉದ್ವಿಗ್ನತೆ

ಕಳೆದ ವಾರ ಅಮೆರಿಕ-ಇಸ್ರೇಲಿ ಜಂಟಿ ದಾಳಿಯಲ್ಲಿ ಖಮೇನಿ ಕೊಲ್ಲಲ್ಪಟ್ಟರು. ಇದು ಪಶ್ಚಿಮ ಏಷ್ಯಾದಾದ್ಯಂತ ಭೌಗೋಳಿಕ ರಾಜಕೀಯ ಉದ್ವಿಗ್ನತೆಯನ್ನು ಉಂಟುಮಾಡಿತು. ಟೆಹ್ರಾನ್ ಮತ್ತು ಇತರ ನಗರಗಳಲ್ಲಿ ಸ್ಫೋಟಗಳು ವರದಿಯಾಗಿವೆ. ನಂತರ ಇರಾನ್ ಯುಎಸ್ ಆಸ್ತಿಗಳು ಮತ್ತು ಪ್ರಾದೇಶಿಕ ಮಿತ್ರರಾಷ್ಟ್ರಗಳನ್ನು ಗುರಿಯಾಗಿಸಿಕೊಂಡು ಕ್ಷಿಪಣಿ ಮತ್ತು ಡ್ರೋನ್ ದಾಳಿಗಳೊಂದಿಗೆ ಪ್ರತೀಕಾರ ತೀರಿಸಿಕೊಂಡಿತು, ಪಶ್ಚಿಮ ಏಷ್ಯಾದಾದ್ಯಂತ ಉದ್ವಿಗ್ನತೆಯನ್ನು ಹೆಚ್ಚಿಸಿತು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com