Epic Fury: ಇರಾನ್‌ನಲ್ಲಿ ಸೈನಿಕ ಕಾರ್ಯಾಚರಣೆ ಸದ್ಯದಲ್ಲೇ ಅಂತ್ಯಗೊಳ್ಳಲಿದೆ: ಡೊನಾಲ್ಡ್ ಟ್ರಂಪ್

ಮಾಧ್ಯಮಗಳಿಗೆ ಪ್ರಶ್ನೆಗಳಿಗೆ ಅವಕಾಶ ನೀಡುವ ಮೊದಲು ಮಾತನಾಡಿದ ಟ್ರಂಪ್, ಇರಾನ್ಮ ಮಧ್ಯಪ್ರಾಚ್ಯವನ್ನು ವಶಪಡಿಸಿಕೊಳ್ಳಲು ಮತ್ತು ಇಸ್ರೇಲ್ ನ್ನು ನಾಶಪಡಿಸಲು ಪ್ರಯತ್ನಿಸುತ್ತಿದ್ದರು. ಆದರೆ ನಾವು ಸರಿಯಾದ ಸಮಯದಲ್ಲಿ ಅದನ್ನು ತಡೆದಿದ್ದೇವೆ ಎಂದರು.
D K Shivakumar
ಡಿ ಕೆ ಶಿವಕುಮಾರ್
Updated on

ಫ್ಲೋರಿಡಾ: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇರಾನ್ ವಿರುದ್ಧ ನಡೆಯುತ್ತಿರುವ ಸೈನಿಕ ಕಾರ್ಯಾಚರಣೆ ಬಹಳ ಶೀಘ್ರದಲ್ಲೇ ಅಂತ್ಯಗೊಳ್ಳಲಿದೆ ಎಂದು ಹೇಳಿದ್ದಾರೆ. ಆದರೆ ಅದರ ವೇಳಾಪಟ್ಟಿಯ ಕುರಿತು ಅವರು ಹೆಚ್ಚಿನ ವಿವರಗಳನ್ನು ನೀಡಲಿಲ್ಲ. ಈ ಹಿಂದೆ ಟ್ರಂಪ್ ಈ ಕಾರ್ಯಾಚರಣೆಯನ್ನು 'ಒಂದು ಎಕ್ಸ್ಕರ್ಷನ್' ಎಂದು ಕರೆಯುತ್ತಾ, ಅಮೆರಿಕ ಈ ಬೆದರಿಕೆಯನ್ನು ಅಂತ್ಯ ಮಾಡಲಿದೆ ಎಂದು ಹೇಳಿದ್ದರು.

ಪತ್ರಕರ್ತರೊಬ್ಬರು ಈ ಹಿಂದೆ ಇರಾನ್ ಕಾರ್ಯಾಚರಣೆಯನ್ನು ಎಕ್ಸ್ಕರ್ಷನ್ ಎಂದು ಹೇಳಿದ್ದ ಬಗ್ಗೆ ಹಾಗೂ ಅದು ಯಾವಾಗ ಮುಗಿಯಲಿದೆ ಎಂದು ಕೇಳಿದಾಗ, ಟ್ರಂಪ್, ಬಹಳ ಬೇಗ, ನೋಡಿ, ಅವರ ಬಳಿ ಇದ್ದ ಎಲ್ಲವೂ ನಾಶವಾಗಿದೆ, ಅವರ ನಾಯಕತ್ವ ಸಹ ಸೇರಿ. ವಾಸ್ತವವಾಗಿ ಅವರ ನಾಯಕತ್ವದ ಎರಡು ಹಂತಗಳು ಸಂಪೂರ್ಣವಾಗಿ ಹೋಗಿವೆ. ಇನ್ನೂ ಹೆಚ್ಚು ಮಂದಿ ಕೂಡ ಇದ್ದಾರೆ. ಹೆಚ್ಚಿನ ಜನರು ಅವರು ಹೇಳುತ್ತಿರುವ ಆ ನಾಯಕರ ಬಗ್ಗೆ ಎಂದಿಗೂ ಕೇಳಿರಲಿಲ್ಲ. ಆದ್ದರಿಂದ ಇದು ತುಂಬಾ ಶಕ್ತಿಯುತ ಮತ್ತು ಪರಿಣಾಮಕಾರಿ ಕಾರ್ಯಾಚರಣೆ ಆಗಿದೆ ಎಂದು ಹೇಳಿದರು.

D K Shivakumar
US-Iran war ಎಫೆಕ್ಟ್: ಪಾಕಿಸ್ತಾನದಲ್ಲಿ ಇಂಧನ ಸಂಕಷ್ಟ; ಶಾಲೆಗಳು 2 ವಾರ ಬಂದ್, ಸರ್ಕಾರಿ ಕಚೇರಿಗಳಿಗೆ 4 ದಿನ ಕೆಲಸ

ಮಾಧ್ಯಮಗಳಿಗೆ ಪ್ರಶ್ನೆಗಳಿಗೆ ಅವಕಾಶ ನೀಡುವ ಮೊದಲು ಮಾತನಾಡಿದ ಟ್ರಂಪ್, ಇರಾನ್ಮ ಮಧ್ಯಪ್ರಾಚ್ಯವನ್ನು ವಶಪಡಿಸಿಕೊಳ್ಳಲು ಮತ್ತು ಇಸ್ರೇಲ್ ನ್ನು ನಾಶಪಡಿಸಲು ಪ್ರಯತ್ನಿಸುತ್ತಿದ್ದರು. ಆದರೆ ನಾವು ಸರಿಯಾದ ಸಮಯದಲ್ಲಿ ಅದನ್ನು ತಡೆದಿದ್ದೇವೆ. ಈ ಕಾರ್ಯಾಚರಣೆಯಲ್ಲಿ ಭಾಗಿಯಾಗಿರುವುದಕ್ಕೆ ನಮಗೆ ಹೆಮ್ಮೆ ಇದೆ. ಇದು ಶೀಘ್ರದಲ್ಲೇ ಮುಗಿಯಲಿದೆ. ಮತ್ತೆ ಇದನ್ನು ಪ್ರಾರಂಭಿಸಿದರೆ ಅವರಿಗೆ ಇನ್ನೂ ಕಠಿಣವಾಗಿ ಹೊಡೆತ ನೀಡಲಾಗುತ್ತದೆ ಎಂದು ಹೇಳಿದರು.

ಆಪರೇಷನ್ ಎಪಿಕ್ ಫ್ಯೂರಿ

‘ಆಪರೇಶನ್ ಎಪಿಕ್ ಫ್ಯೂರಿ’ಯ ಮೊದಲ ಎರಡು ದಿನಗಳಲ್ಲಿ ಇರಾನ್‌ನ ಸೈನ್ಯವನ್ನು ಸಂಪೂರ್ಣವಾಗಿ ನಾಶಪಡಿಸಲಾಗಿದೆ, ಇದನ್ನು ಭಾರೀ ಯಶಸ್ಸು ಎಂದು ಬಣ್ಣಿಸಿದರು. ಇರಾನ್ ನೌಕಾಪಡೆ ಇಲ್ಲ, ವಾಯುಪಡೆ ಇಲ್ಲ, ಆಂಟಿ-ಏರ್‌ಕ್ರಾಫ್ಟ್ ಸಾಧನಗಳಿಲ್ಲ. ಎಲ್ಲವೂ ಸ್ಫೋಟಗೊಳಿಸಲಾಗಿದೆ. ಅವರಿಗೆ ರಾಡಾರ್ ಇಲ್ಲ, ದೂರಸಂಪರ್ಕ ವ್ಯವಸ್ಥೆ ಇಲ್ಲ, ನಾಯಕತ್ವ ಇಲ್ಲ — ಎಲ್ಲವೂ ನಾಶವಾಗಿದೆ.

ನಾವು ಈಗಲೇ ಇದನ್ನು ದೊಡ್ಡ ಯಶಸ್ಸು ಎಂದು ಹೇಳಬಹುದು. ಆದರೆ ನಾವು ಇನ್ನೂ ಮುಂದೆ ಹೋಗುತ್ತೇವೆ. ಯುದ್ಧದ ದೊಡ್ಡ ಅಪಾಯ ಮೂರು ದಿನಗಳ ಹಿಂದೆಯೇ ಮುಗಿದಿತ್ತು. ಮೊದಲ ಎರಡು ದಿನಗಳಲ್ಲಿ ನಾವು ಅವರನ್ನು ಸಂಪೂರ್ಣವಾಗಿ ಸೋಲಿಸಿದ್ದೇವೆ. ಅದನ್ನು ಯೋಚಿಸಿದರೆ ಅದ್ಭುತವಾಗಿದೆ ಎಂದು ಟ್ರಂಪ್ ಹೇಳಿದರು.

D K Shivakumar
US-Iran conflict: ತೈಲ ಸಾಗಣೆ ನಿಂತರೆ ಇದೂವರೆಗೆ ನಡೆಸಿದ್ದಕ್ಕಿಂತ 20 ಪಟ್ಟು ಹೆಚ್ಚು ದಾಳಿ: ಇರಾನ್‌ಗೆ ಟ್ರಂಪ್ ಕಠಿಣ ಎಚ್ಚರಿಕೆ

ಪತ್ರಕರ್ತರ ಪ್ರಶ್ನೆಗಳಿಗೆ ಉತ್ತರಿಸುವ ವೇಳೆ, ಇರಾನ್‌ನ ಹೊಸ ಸುಪ್ರೀಂ ನಾಯಕ ಮೊಜ್ತಬಾ ಖಮೇನಿ ಬಗ್ಗೆ ಕೇಳಿದಾಗ ಟ್ರಂಪ್ ಅಸಮಾಧಾನ ವ್ಯಕ್ತಪಡಿಸಿದರು. ನಾನು ನಿರಾಶನಾಗಿದ್ದೇನೆ. ಅವರ ಆಯ್ಕೆ ದೇಶಕ್ಕೆ ಇದೇ ರೀತಿಯ ಸಮಸ್ಯೆಗಳನ್ನು ಮುಂದುವರಿಸುವುದಕ್ಕೆ ಕಾರಣವಾಗಬಹುದು ಎಂದು ನಾವು ಭಾವಿಸುತ್ತೇವೆ ಎಂದು ಹೇಳಿದರು.

56 ವರ್ಷದ ಮೊಜ್ತಬಾ ಖಮೇನಿ 88 ಸದಸ್ಯರ ‘ಅಸೆಂಬ್ಲಿ ಆಫ್ ಎಕ್ಸ್‌ಪರ್ಟ್ಸ್’ ದೇಶದ ಉನ್ನತ ಸ್ಥಾನಕ್ಕೆ ನೇಮಕ ಮಾಡಿದೆ. ಈ ಧಾರ್ಮಿಕ ಸಂಸ್ಥೆ, ಗೌರವಾನ್ವಿತ ಪ್ರತಿನಿಧಿಗಳ ನಿರ್ಣಾಯಕ ಮತದಾನದ ಆಧಾರದ ಮೇಲೆ ಅವರನ್ನು ಇರಾನ್ ಇಸ್ಲಾಮಿಕ್ ಗಣರಾಜ್ಯದ ಪವಿತ್ರ ವ್ಯವಸ್ಥೆಯ ಮೂರನೇ ನಾಯಕರಾಗಿ ನೇಮಿಸಿ ಪರಿಚಯಿಸಲಾಗಿದೆ ಎಂದು ಘೋಷಿಸಿತು.

ಹಿಂದಿನ ನಾಯಕ ಅಯತೊಲ್ಲಾ ಅಲಿ ಖಮೇನಿ ಸಾವಿಗೆ ಕಾರಣವಾದ ಸೈನಿಕ ಕಾರ್ಯಾಚರಣೆಯ ನಂತರ ಈ ನಾಯಕತ್ವ ಬದಲಾವಣೆ ನಡೆದಿದೆ. ಇದಕ್ಕೆ ಪ್ರತಿಯಾಗಿ ಟೆಹ್ರಾನ್ ಹಲವು ಅರಬ್ ದೇಶಗಳಲ್ಲಿರುವ ಅಮೆರಿಕ ಸೈನಿಕ ನೆಲೆಗಳ ಮೇಲೆ ಹಾಗೂ ಪ್ರದೇಶದ ಇಸ್ರೇಲ್ ಆಸ್ತಿಗಳ ಮೇಲೆ ಪ್ರತಿದಾಳಿ ನಡೆಸಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com