US-Iran conflict: ತೈಲ ಸಾಗಣೆ ನಿಂತರೆ ಇದೂವರೆಗೆ ನಡೆಸಿದ್ದಕ್ಕಿಂತ 20 ಪಟ್ಟು ಹೆಚ್ಚು ದಾಳಿ: ಇರಾನ್‌ಗೆ ಟ್ರಂಪ್ ಕಠಿಣ ಎಚ್ಚರಿಕೆ

ಹಾರ್ಮುಜ್ ಸಮುದ್ರ ಮಾರ್ಗವು ಜಾಗತಿಕ ತೈಲ ಸಾಗಣೆಗೆ ಅತ್ಯಂತ ಪ್ರಮುಖ ದಾರಿ. ಈ ಮಾರ್ಗವು ಪರ್ಷಿಯನ್ ಗಲ್ಫ್ ಅನ್ನು ಗಲ್ಫ್ ಆಫ್ ಒಮನ್ ಹಾಗೂ ಅರೇಬಿಯನ್ ಸಮುದ್ರದೊಂದಿಗೆ ಸಂಪರ್ಕಿಸುತ್ತದೆ.
As the war between the United States and Israel over Iran enters the eleventh day, attacks continue across Iran and other countries in West Asia.
ಇರಾನ್-ಇಸ್ರೇಲ್-ಅಮೆರಿಕಾ ಯುದ್ಧ
Updated on

ವಾಷಿಂಗ್ಟನ್: ಹಾರ್ಮುಜ್ ಮಾರ್ಗದಲ್ಲಿನ ತೈಲ ಸಾಗಣೆ ತಡೆದರೆ ಇದೂವರೆಗೆ ನಡೆಸಿದ ದಾಳಿಗಿಂತ 20 ಪಟ್ಟು ಹೆಚ್ಚು ದಾಳಿ ನಡೆಸುವುದಾಗಿ ಇರಾನ್'ಗೆ ಅಮೆರಿಕಾ ಅಧ್ಯಕ್ಷ ಕಠಿಣ ಎಚ್ಚರಿಕೆ ನೀಡಿದ್ದಾರೆ.

ಸೋಮವಾರ ತಮ್ಮ ಸಾಮಾಜಿಕ ಜಾಲತಾಣವಾದ Truth Social ನಲ್ಲಿ ಟ್ರಂಪ್ ಅವಪು ಈ ಎಚ್ಚರಿಕೆ ಸಂದೇಶವನ್ನು ನೀಡಿದ್ದಾರೆ.

ತೈಲ ಸಾಗಣೆಯನ್ನು ತಡೆಯಲು ಇರಾನ್ ಯಾವುದೇ ಕ್ರಮ ಕೈಗೊಂಡಪೂ ಅಮೆರಿಕಾ ಅದಕ್ಕೆ ಕಠಿಣ ರೀತಿಯಲ್ಲಿ ಪ್ರತಿಕ್ರಿಯೆ ನೀಡುತ್ತದೆ ಎಂದು ಹೇಳಿದ್ದಾರೆ.

Strait of Hormuz ಸಮುದ್ರ ಮಾರ್ಗವು ಜಾಗತಿಕ ತೈಲ ಸಾಗಣೆಗೆ ಅತ್ಯಂತ ಪ್ರಮುಖ ದಾರಿ. ಈ ಮಾರ್ಗವು ಪರ್ಷಿಯನ್ ಗಲ್ಫ್ ಅನ್ನು ಗಲ್ಫ್ ಆಫ್ ಒಮನ್ ಹಾಗೂ ಅರೇಬಿಯನ್ ಸಮುದ್ರದೊಂದಿಗೆ ಸಂಪರ್ಕಿಸುತ್ತದೆ. ಜಾಗತಿಕವಾಗಿ ಬಳಕೆಯಾಗುವ ತೈಲದ ಸುಮಾರು 20 ಶೇಕಡಾ ಈ ಮಾರ್ಗದ ಮೂಲಕ ಸಾಗುತ್ತದೆ ಎಂದು ಅಮೆರಿಕದ ಅಮೆರಿಕಾ ಮಾಹಿತಿ ನೀಡಿದೆ.

As the war between the United States and Israel over Iran enters the eleventh day, attacks continue across Iran and other countries in West Asia.
ಹೆಜ್ಬೊಲ್ಲಾಹ್‌ ಹೆಡೆಮುರಿ ಕಟ್ಟಿದ ಇಸ್ರೇಲ್; ದಕ್ಷಿಣ ಲೆಬನಾನ್ ನಲ್ಲಿದ್ದ ಉಗ್ರ ಸಂಘಟನೆ ಮುಖ್ಯಸ್ಥನ ಭೀಕರ ಹತ್ಯೆ!

ಇತ್ತೀಚೆಗೆ ಅಮೆರಿಕ ಮತ್ತು ಇಸ್ರೇಲ್ ನಡೆಸಿದ ದಾಳಿಗಳ ನಂತರ ಇರಾನ್‌ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್‌ ಈ ಸಮುದ್ರ ಮಾರ್ಗವನ್ನು ಮುಚ್ಚಿ, ಸಾಗಣೆ ಮಾಡುವ ಹಡಗುಗಳಿಗೆ ಬೆದರಿಕೆ ಹಾಕಿದೆ ಎಂದು ವರದಿಯಾಗಿದೆ.

ಸಾಮಾನ್ಯವಾಗಿ ದಿನಕ್ಕೆ ಸುಮಾರು 60 ಹಡಗುಗಳು ಸಾಗುವ ಈ ಮಾರ್ಗದಲ್ಲಿ ಕಳೆದ 24 ಗಂಟೆಗಳಲ್ಲಿ ಕೇವಲ ಎರಡು ಹಡಗುಗಳು ಮಾತ್ರ ಸಂಚರಿಸಿರುವುದಾಗಿ ತಿಳಿದುಬಂದಿದೆ.

ಈ ಬೆಳವಣಿಗೆಯಿಂದ ಜಾಗತಿಕ ಇಂಧನ ಬೆಲೆ ಏರಿಕೆಯಾಗಿದ್ದು, ಅಮೆರಿಕ ಸೇರಿದಂತೆ ಹಲವು ದೇಶಗಳಲ್ಲಿ ಪೆಟ್ರೋಲ್ ದರಗಳು ಹೆಚ್ಚಳವಾಗಿವೆ. ಉತ್ತರ ಅಮೆರಿಕ ಮಾರುಕಟ್ಟೆಯ ಮಾನದಂಡವಾದ ವೆಸ್ಟ್ ಇಂಟರ್ಮೀಡಿಯೇಟ್ ಕಚ್ಚಾ ತೈಲದ ಬೆಲೆ ಪ್ರತಿ ಬ್ಯಾರೆಲ್‌ಗೆ 86 ಡಾಲರ್‌ಗಿಂತ ಹೆಚ್ಚು ಆಗಿದೆ.

ಇದೇ ವೇಳೆ ಅಮೆರಿಕದ ಇಂಧನ ಕಾರ್ಯದರ್ಶಿ ಕ್ರಿಸ್ ರೈಟ್ ಸಿಎನ್‌ಎನ್‌ಗೆ ನೀಡಿದ ಸಂದರ್ಶನದಲ್ಲಿ, ಹಾರ್ಮುಜ್ ಸಮುದ್ರ ಮಾರ್ಗದಲ್ಲಿ ಹಡಗು ಸಂಚಾರವು ಶೀಘ್ರದಲ್ಲೇ ಸಾಮಾನ್ಯ ಸ್ಥಿತಿಗೆ ಮರಳಬಹುದು ಎಂದು ತಿಳಿಸಿದ್ದಾರೆ. ಇದು ಕೆಲವೇ ವಾರಗಳ ವಿಷಯ ಎಂದು ಅವರು ಹೇಳಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com