

ಕುವೈತ್: ಇರಾನ್ ವಿರುದ್ಧದ ಇಸ್ರೇಲ್-ಅಮೆರಿಕ ಯುದ್ಧ 13 ದಿನಕ್ಕೆ ಕಾಲಿಟ್ಟಿರುವಂತೆಯೇ ಪರ್ಷಿಯನ್ ಕೊಲ್ಲಿಯ ಕರಾವಳಿಯಲ್ಲಿರುವ ಸಣ್ಣ ಆದರೆ ಶ್ರೀಮಂತ ಅರಬ್ ದೇಶದ ರಾಜಧಾನಿ ಕುವೈತ್ ನ ವಸತಿ ಕಟ್ಟಡವೊಂದಕ್ಕೆ ಗುರುವಾರ ವೈಮಾನಿಕ ದಾಳಿ ನಡೆದಿದೆ.
ಪರಿಣಾಮ ಭಾರಿ ಪ್ರಮಾಣದ ಸಾವು ನೋವು ಮತ್ತು ನಷ್ಟ ಉಂಟಾಗಿರುವುದಾಗಿ ವರದಿಯಾಗಿದೆ. ಇಂದು ಮುಂಜಾನೆ ದಕ್ಷಿಣ ಕುವೈತ್ ನ ವಸತಿ ಕಟ್ಟಡವನ್ನು ಗುರಿಯಾಗಿಸಿಕೊಂಡು ಶತ್ರು ರಾಷ್ಟ್ರ ಡ್ರೋನ್ ದಾಳಿ ನಡೆಸಿದೆ.
ಘಟನೆಯಲ್ಲಿ ಇಬ್ಬರು ಗಾಯಗೊಂಡಿದ್ದು, ಅವರಿಗೆ ಅಗತ್ಯ ಚಿಕಿತ್ಸೆ ನೀಡಲಾಗುತ್ತಿದೆ ಎಂದು ರಕ್ಷಣಾ ಸಚಿವಾಲಯ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿದೆ.
ದಾಳಿಯಲ್ಲಿ ಕೆಲವರು ಸಾವನ್ನಪ್ಪಿರುವ ಜೊತೆಗೆ ಅಪಾರ ಪ್ರಮಾಣದಲ್ಲಿ ಹಾನಿಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪರಿಸ್ಥಿತಿಯನ್ನು ಪರಿಶೀಲಿಸುತ್ತಿದ್ದು, ಡ್ರೋನ್‌ನ ಮೂಲದ ಬಗ್ಗೆ ಅಧಿಕಾರಿಗಳು ಇನ್ನೂ ಹೆಚ್ಚಿನ ವಿವರಗಳನ್ನು ಬಿಡುಗಡೆ ಮಾಡಿಲ್ಲ. ಘಟನೆಯಲ್ಲಿ ಡಜನ್ ಗಟ್ಟಲೇ ಸಿಬ್ಬಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ CBS ನ್ಯೂಸ್ ವರದಿ ಮಾಡಿದೆ.
Advertisement