

ವಾಷಿಂಗ್ಟನ್: ಇಸ್ರೇಲ್ ಮತ್ತು ಅಮೆರಿಕ ದೇಶಗಳ ಜಂಟಿ ಸೇನಾದಾಳಿ ಬಳಿಕ ಇರಾನ್ ಪರಿಸ್ಥಿತಿ ಸೂತ್ರಹರಿದ ಗಾಳಿಪಟದಂತಾಗಿದ್ದು, ಹೊಸ ಸರ್ವಾಧಿಕಾರಿ ಕುರಿತು ಇರಾನ್ ಗೇ ತಿಳಿದಿಲ್ಲ ಎಂದು ಅಮೆರಿಕ ವ್ಯಂಗ್ಯವಾಡಿದೆ.
ಹೌದು.. ಇರಾನ್ ವಿರುದ್ಧ ಅಮೆರಿಕ ಮತ್ತು ಇಸ್ರೇಲ್ ಸೇನಾದಾಳಿ ಮುಂದುವರೆದಿದ್ದು, ಆರಂಭಿಕ ದಾಳಿಗಳಲ್ಲಿ ಇರಾನ್ ಸರ್ವೋಚ್ಛ ನಾಯಕ ಆಯತೊಲ್ಲ ಖಮೇನಿ ಹತ್ಯೆ ಬಳಿಕ ಅಧಿಕಾರಕ್ಕೆ ಬಂದಿದ್ದ ಅವರ ಮಗ ಮೊಜ್ತಾಬಾ ಖಮೇನಿ ಕೂಡ ವೈಮಾನಿಕ ದಾಳಿಯಲ್ಲಿ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆ ಪಾಲಾಗಿದ್ದಾರೆ. ಅವರ ಒಂದು ಕಾಲು ಕಟ್ ಆಗಿದ್ದು ಗಂಭೀರ ಪರಿಸ್ಥಿತಿಯಲ್ಲಿ ಮೊಜ್ತಾಬಾ ರಹಸ್ಯ ಪ್ರದೇಶದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಈ ನಡುವೆ ಇರಾನ್ ಯುದ್ಧ ಶೀಘ್ರ ಅಂತ್ಯವಾಗಲಿದೆ.. ಇರಾನ್ ಶರಣಾಗಲಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬಡಾಯಿಕೊಚ್ಚಿಕೊಂಡಿದ್ದಾರೆ. ಇದಕ್ಕೆ ಇಂಬು ನೀಡುವಂತೆ ಅಮೆರಿಕದ ರಕ್ಷಣಾ ಕಾರ್ಯದರ್ಶಿ ಪೀಟ್ ಹೆಗ್ಸೆತ್ ಕೂಡ ಹೊಸ ಸರ್ವಾಧಿಕಾರಿ ಯಾರು? ಎಂದು Iran ಗೇ ಗೊತ್ತಿಲ್ಲ.. ಎಂದು ವ್ಯಂಗ್ಯವಾಡಿದ್ದಾರೆ.
ಪೆಂಟಗನ್‌ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪೀಟ್ ಹೆಗ್ಸೆತ್, 'ಇರಾನ್‌ನ ಹೊಸ ಸರ್ವೋಚ್ಚ ನಾಯಕಿ ಮೊಜ್ತಾಬಾ ಖಮೇನಿ ಅವರು ಅಮೆರಿಕ-ಇಸ್ರೇಲಿ ದಾಳಿಗಳಲ್ಲಿ "ಗಾಯಗೊಂಡಿದ್ದಾರೆ. ವಿರೂಪಗೊಂಡಿರುವ ಸಾಧ್ಯತೆಯಿದೆ. ಈ ದಾಳಿಯಲ್ಲಿ ಅಷ್ಟು ಸರ್ವೋಚ್ಚ ನಾಯಕನಲ್ಲದ ಹೊಸಬರು ಕೂಡ ಗಾಯಗೊಂಡಿದ್ದಾರೆ ಎಂದು ನಮಗೆ ತಿಳಿದಿದೆ" ಎಂದು ಹೇಳಿದರು.
ಸರ್ವೋಚ್ಚ ನಾಯಕರಾಗಿ ಮೊಜ್ತಾಬಾ ಖಮೇನಿ ಅವರ ಮೊದಲ ಭಾಷಣದಲ್ಲಿ ಧ್ವನಿ ಅಥವಾ ವೀಡಿಯೊ ಏಕೆ ಇರಲಿಲ್ಲ ಎಂದು ಅವರು ಪ್ರಶ್ನಿಸಿದ್ದು, "ಅವರು ನಿನ್ನೆ ಒಂದು ಹೇಳಿಕೆಯನ್ನು ಬಿಡುಗಡೆ ಮಾಡಿದ್ದು, ವಾಸ್ತವವಾಗಿ ದುರ್ಬಲವಾದದ್ದು, ಆದರೆ ಯಾವುದೇ ಧ್ವನಿ ಇರಲಿಲ್ಲ ಮತ್ತು ಯಾವುದೇ ವೀಡಿಯೊ ಇರಲಿಲ್ಲ" ಎಂದು ಹೆಗ್ಸೆತ್ ಪ್ರಶ್ನಿಸಿದ್ದಾರೆ.
ಲಿಖಿತ ಹೇಳಿಕೆ ಏಕೆ?
"ಇರಾನ್‌ನಲ್ಲಿ ಸಾಕಷ್ಟು ಕ್ಯಾಮೆರಾಗಳು ಮತ್ತು ಸಾಕಷ್ಟು ಧ್ವನಿ ರೆಕಾರ್ಡರ್‌ಗಳಿವೆ. ಆದರೂ ಲಿಖಿತ ಹೇಳಿಕೆ ಏಕೆ? ಏಕೆ ಎಂದು ನಿಮಗೆ ತಿಳಿದಿದೆ ಎಂದು ನಾನು ಭಾವಿಸುತ್ತೇನೆ. ಅವರ ತಂದೆ ಸತ್ತಿದ್ದಾರೆ. ಹೀಗಾಗಿ ಮೊಜ್ತಾಬಾ ಅವರು ಭಯಭೀತರಾಗಿದ್ದಾರೆ, ಅವರು ಗಾಯಗೊಂಡಿದ್ದಾರೆ, ಅವರು ಪ್ರಾಣಭೀತಿಯಿಂದ ಪರಾರಿಯಸಲ್ಲಿದ್ದಾರೆ ಮತ್ತು ಅವರಿಗೆ ನ್ಯಾಯಸಮ್ಮತತೆಯ ಕೊರತೆಯಿದೆ. ಇದು ಅವರಿಗೆ ಗೊಂದಲಮಯವಾಗಿದೆ" ಎಂದು ಹೆಗ್ಸೆತ್ ಕಿಡಿಕಾರಿದರು.
ಉಸ್ತುವಾರಿ ಅಥವಾ ಹೊಸ ಸರ್ವಾಧಿಕಾರಿ ಯಾರು ಎಂದು ಇರಾನ್ ಗೇ ತಿಳಿದಿಲ್ಲ..
ಅಂತೆಯೇ ಇಂತಹ ಕ್ಲಿಷ್ಟ ಪರಿಸ್ಥಿತಿಯಲ್ಲಿ ಹೊಸ ಸರ್ವಾಧಿಕಾರಿ ಯಾರು ಎಂದು ಇರಾನ್ ಗೇ ತಿಳಿದಿಲ್ಲ.. ಎಂದು ವ್ಯಂಗ್ಯವಾಡಿರುವ ಹೆಗ್ಸೆತ್, "ಈಗ ಯಾರು ಉಸ್ತುವಾರಿ ವಹಿಸಿದ್ದಾರೆ? ಬಹುಶಃ ಇರಾನ್‌ಗೆ ತಿಳಿದಿಲ್ಲದಿರಬಹುದು. ಯುಎಸ್-ಇಸ್ರೇಲಿ ದಾಳಿಗಳ ನಂತರ ಇರಾನ್‌ನ ಮಿಲಿಟರಿ ಸಾಮರ್ಥ್ಯಗಳು ದುರ್ಬಲಗೊಂಡಿವೆ.
ಯುಎಸ್ ಮತ್ತು ಇಸ್ರೇಲಿ ಪಡೆಗಳು 15,000 ಶತ್ರು ಗುರಿಗಳನ್ನು ಹೊಡೆದುರುಳಿಸಿವೆ. ಅವರ ಕ್ಷಿಪಣಿ ಪ್ರಮಾಣವು 90% ಕಡಿಮೆಯಾಗಿದೆ. ನಿನ್ನೆ ಅವರ ಏಕಮುಖ ದಾಳಿ ಡ್ರೋನ್‌ಗಳು 95% ಕಡಿಮೆಯಾಗಿದೆ. ಇದೇ ಕಾರಣಕ್ಕೆ ಇರಾನ್ ಜಗತ್ತು ನೋಡುತ್ತಿರುವಂತೆ, ಹಾರ್ಮುಜ್ ಜಲಸಂಧಿಯನ್ನು ಮುಚ್ಚುವ ಮೂಲಕ ಸಂಪೂರ್ಣ ಹತಾಶೆ ವ್ಯಕ್ತಪಡಿಸುತ್ತಿದೆ. ಇದು ನಾವು ಎದುರಿಸುತ್ತಿರುವ ವಿಷಯ" ಎಂದು ಹೆಗ್ಸೆತ್ ಹೇಳಿದ್ದಾರೆ.
ಮೊಜ್ತಬಾ ಖಮೇನಿ ಮೊದಲ ಹೇಳಿಕೆ
ಇದಕ್ಕೂ ಮೊದಲು ಇರಾನ್‌ನ ಹೊಸ ಸರ್ವೋಚ್ಚ ನಾಯಕ ಮೊಜ್ತಬಾ ಖಮೇನಿ ಅವರು ತಮ್ಮ ನೇಮಕಾತಿಯ ನಂತರದ ಮೊದಲ ಹೇಳಿಕೆ ಬಿಡುಗಡೆ ಮಾಡಿದ್ದರು. ತಮ್ಮ ಈ ಲಿಖಿತ ಹೇಳಿಕೆಯಲ್ಲಿ ಅವರು, 'ಅಮೆರಿಕದ ವಿರುದ್ಧ ಹತೋಟಿಗಾಗಿ ಹಾರ್ಮುಜ್ ಜಲಸಂಧಿಯನ್ನು ಮುಚ್ಚಬೇಕು ಮತ್ತು ಮಧ್ಯಪ್ರಾಚ್ಯದ ನೆರೆಹೊರೆಯವರ ಮೇಲಿನ ದಾಳಿಗಳು ಮುಂದುವರಿಯುತ್ತವೆ ಎಂದು ಹೇಳಿದರು.
ಖಮೇನಿ ಅವರ ಹೇಳಿಕೆಯನ್ನು ಗುರುವಾರ ರಾಜ್ಯ ದೂರದರ್ಶನದಲ್ಲಿ ಸುದ್ದಿ ನಿರೂಪಕರೊಬ್ಬರು ಓದಿದರು. 'ಇರಾನ್ ಎಂದಿಗೂ ಹಿಂದೆ ಸರಿಯುವುದಿಲ್ಲ ಮತ್ತು "ಪೂರ್ಣ ಬಲದಿಂದ" ವಿರೋಧಿಸುತ್ತದೆ ಮತ್ತು ದಿವಂಗತ ಅಯತೊಲ್ಲಾ ಅಲಿ ಖಮೇನಿ ಅವರ ಮೇಲೆ ಮಾತ್ರವಲ್ಲದೆ ಯುದ್ಧದಲ್ಲಿ ಪ್ರಾಣ ಕಳೆದುಕೊಂಡ ಪ್ರತಿಯೊಬ್ಬ ನಾಗರಿಕನ ಪರವಾಗಿ ಶತ್ರುಗಳ ವಿರುದ್ಧ ಸೇಡು ತೀರಿಸಿಕೊಳ್ಳುತ್ತದೆ ಎಂದು ಹೇಳಿಕೆಯಲ್ಲಿ ತಿಳಿಸಿದ್ದರು.
Advertisement