ಖಾರ್ಗ್ ದ್ವೀಪದ ಮೇಲೆ ಅಮೆರಿಕ ದಾಳಿ ನಂತರವೂ ತೈಲ ಕಾರ್ಯಾಚರಣೆ ಎಂದಿನಂತೆ ಮುಂದುವರೆದಿದೆ: ಇರಾನ್

ಅಮೆರಿಕ ದಾಳಿಯ ನಂತರವೂ ತೈಲ ಕಾರ್ಯಾಚರಣೆ ಎಂದಿನಂತೆ ಮುಂದುವರೆದಿದೆ ಎಂದು ಬುಶೆಹರ್ ಪ್ರಾಂತ್ಯದ ಉಪ ಗವರ್ನರ್ ಎಹ್ಸಾನ್ ಜಹಾನಿಯನ್ ಅವರು ಹೇಳಿದ್ದಾರೆ.
Iranian official says oil operations are normal on Kharg Island after US strikes
ಖಾರ್ಗ್ ದ್ವೀಪದ ಮೇಲೆ ಅಮೆರಿಕ ದಾಳಿ
Updated on

ಇರಾನ್‌ನ ಆರ್ಥಿಕ ಜೀವನಾಡಿ ಹಾಗೂ ಕಿರೀಟ ರತ್ನ ಎಂದೇ ಕರೆಯಲಾಗುವ ಖಾರ್ಗ್‌ ದ್ವೀಪದ ಮೇಲೆ ಅಮೆರಿಕ ಬಾಂಬ್ ದಾಳಿ ನಡೆಸಿದ ನಂತರವೂ ತೈಲ "ರಫ್ತು ಮತ್ತು ಆಮದು ಕಾರ್ಯಾಚರಣೆಗಳು ಹಾಗೂ ದ್ವೀಪವನ್ನು ಆಧರಿಸಿದ ಕಂಪನಿಗಳ ಚಟುವಟಿಕೆಗಳು ಎಂದಿನಂತೆ ನಡೆಯುತ್ತಿವೆ" ಎಂದು ಇರಾನ್ ಹೇಳಿದೆ.

ಅಮೆರಿಕ ದಾಳಿಯ ನಂತರವೂ ತೈಲ ಕಾರ್ಯಾಚರಣೆ ಎಂದಿನಂತೆ ಮುಂದುವರೆದಿದೆ ಎಂದು ಬುಶೆಹರ್ ಪ್ರಾಂತ್ಯದ ಉಪ ಗವರ್ನರ್ ಎಹ್ಸಾನ್ ಜಹಾನಿಯನ್ ಅವರು ಹೇಳಿರುವುದಾಗಿ ನೂರ್ನ್ಯೂಸ್ ವರದಿ ಮಾಡಿದೆ.

ದೈನಂದಿನ ಜೀವನ ಚಟುವಟಿಕೆಗಳು ಸಾಮಾನ್ಯವಾಗಿದ್ದವು ಎಂದು ಜಹಾನಿಯನ್ ಹೇಳಿದ್ದು, ಅಮೆರಿಕ ದಾಳಿಯಲ್ಲಿ ಯಾವುದೇ ಸಾವುನೋವುಗಳು ಸಂಭವಿಸಿಲ್ಲ ಎಂದು ಹೇಳಿದ್ದಾರೆ.

Iranian official says oil operations are normal on Kharg Island after US strikes
ಇರಾನ್‌ನ 'ಮುಕುಟ'ದಂತಿದ್ದ ಖಾರ್ಗ್ ಮೇಲೆ ಬಾಂಬ್ ದಾಳಿ: ದ್ವೀಪ ಸಂಪೂರ್ಣ ಧ್ವಂಸ; ಮಾಹಿತಿ ಹಂಚಿಕೊಂಡ ಟ್ರಂಪ್

ಖಾರ್ಗ್ ದ್ವೀಪವು ದೇಶದ ತೈಲ ರಫ್ತುಗಳನ್ನು ನಿರ್ವಹಿಸುವ ಪ್ರಾಥಮಿಕ ಟರ್ಮಿನಲ್‌ಗೆ ನೆಲೆಯಾಗಿದ್ದು, ಶುಕ್ರವಾರ ಇದರ ಮೇಲೆ ಅಮೆರಿಕ ಭೀಕರ ಬಾಂಬ್ ದಾಳಿ ನಡೆಸಿದೆ.

ಇಂದು ಬೆಳಗ್ಗೆ ಅಮೆರಿಕದ ದಾಳಿಗಳು ಮಿಲಿಟರಿ ಸೌಲಭ್ಯಗಳಿಗೆ ಸೀಮಿತವಾಗಿವೆ ಎಂದು ಫಾರ್ಸ್ ನ್ಯೂಸ್ ಏಜೆನ್ಸಿ ವರದಿ ಮಾಡಿದೆ.

ಅಮೆರಿಕ ಸೆಂಟ್ರಲ್ ಕಮಾಂಡ್ ಮಧ್ಯಪ್ರಾಚ್ಯದ ಇತಿಹಾಸದಲ್ಲಿ ಅತ್ಯಂತ ಶಕ್ತಿಶಾಲಿ ಬಾಂಬ್ ದಾಳಿಗಳಲ್ಲಿ ಒಂದನ್ನು ನಡೆಸುವ ಮೂಲಕ ಮತ್ತು ಇರಾನ್‌ನ ಕಿರೀಟ ರತ್ನವಾದ ಖಾರ್ಗ್ ದ್ವೀಪದಲ್ಲಿನ ಪ್ರತಿಯೊಂದು ಮಿಲಿಟರಿ ಗುರಿಯನ್ನು ಸಂಪೂರ್ಣವಾಗಿ ನಾಶಮಾಡಿದೆ. ಆದರೆ, ಸಭ್ಯತೆಯ ಕಾರಣದಿಂದಾಗಿ ಈ ದ್ವೀಪದಲ್ಲಿನ ತೈಲ ಮೂಲಸೌಕರ್ಯವನ್ನು ಅಳಿಸಿಹಾಕಿಲ್ಲ. ಆದಾಗ್ಯೂ, ಒಂದು ವೇಳೆ, ಇರಾನ್ ಅಥವಾ ಬೇರೆ ಯಾರಾದರೂ, ಹೊರ್ಮುಜ್ ಜಲಸಂಧಿಯ ಮೂಲಕ ಹಡಗುಗಳ ಮುಕ್ತ ಮತ್ತು ಸುರಕ್ಷಿತ ಹಾದಿಗೆ ಅಡ್ಡಿಪಡಿಸಿದರೆ ನಾನು ತಕ್ಷಣ ಈ ನಿರ್ಧಾರವನ್ನು ಮರು ಪರಿಶೀಲಿಸುತ್ತೇನೆ" ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com