

ವಾಷಿಂಗ್ಟನ್: ಇರಾನ್‌ನ ಮಿಲಿಟರಿ ಸಾಮರ್ಥ್ಯವು ಶೇಕಡಾ 100 ರಷ್ಟು ನಾಶವಾಗಿದ್ದು, ಅದಾಗ್ಯೂ ಟೆಹ್ರಾನ್‌ಗೆ "ಒಂದು ಅಥವಾ ಎರಡು ಡ್ರೋನ್‌ಗಳನ್ನು ಕಳುಹಿಸುವುದು" ಸುಲಭ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.
ಇರಾನ್‌ನೊಂದಿಗಿನ ಯುದ್ಧವು 15ನೇ ದಿನಕ್ಕೆ ಕಾಲಿಟ್ಟಿದ್ದು, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇತರ ರಾಷ್ಟ್ರಗಳು ಹಾರ್ಮುಜ್ ಜಲಸಂಧಿಯನ್ನು ಸುರಕ್ಷಿತವಾಗಿರಿಸಲು ತಮ್ಮ ಯುದ್ಧ ನೌಕೆಗಳನ್ನು ಕಳುಹಿಸುವಂತೆ ಒತ್ತಾಯಿಸಿದ್ದಾರೆ.
"ಈ ಕೃತಕ ನಿರ್ಬಂಧದಿಂದ ಪ್ರಭಾವಿತವಾಗಿರುವ ಚೀನಾ, ಫ್ರಾನ್ಸ್, ಜಪಾನ್, ದಕ್ಷಿಣ ಕೊರಿಯಾ, ಬ್ರಿಟನ್ ಮತ್ತು ಇತರೆ ದೇಶಗಳು ಹಾರ್ಮುಜ್ ಜಲಸಂಧಿಯು ಸಂಪೂರ್ಣವಾಗಿ ಇರಾನ್ ನಿಂದ ಇನ್ನು ಮುಂದೆ ಬೆದರಿಕೆಯಾಗದಂತೆ ಆ ಪ್ರದೇಶಕ್ಕೆ ಹಡಗುಗಳನ್ನು ಕಳುಹಿಸುತ್ತವೆ ಎಂದು ನಾನು ಭಾವಿಸುತ್ತೇನೆ" ಎಂದು ಟ್ರಂಪ್ ಹೇಳಿದರು.
ತಮ್ಮ ಸಾಮಾಜಿಕ ಮಾಧ್ಯಮ ವೇದಿಕೆಯಲ್ಲಿ ಟ್ರಂಪ್, "ಇರಾನ್‌ನ ಹಾರ್ಮುಜ್ ಜಲಸಂಧಿಯನ್ನು ಮುಚ್ಚುವ ಪ್ರಯತ್ನದಿಂದ ಪ್ರಭಾವಿತರಾದ ಅನೇಕ ದೇಶಗಳು, ಜಲಸಂಧಿಯನ್ನು ಮುಕ್ತ ಮತ್ತು ಸುರಕ್ಷಿತವಾಗಿಡಲು ಯುನೈಟೆಡ್ ಸ್ಟೇಟ್ಸ್ ಆಫ್ ಅಮೇರಿಕಾ ಜೊತೆಗೂಡಿ ಯುದ್ಧನೌಕೆಗಳನ್ನು ಕಳುಹಿಸಲಿವೆ" ಎಂದು ಹೇಳಿದರು.
ಟ್ಯಾಂಕರ್ ಗಳಿಗೆ ಅಮೆರಿಕ ಸೇನಾ ಬೆಂಗಾವಲು
ಇದೇ ವೇಳೆ ಅಮೆರಿಕ ನೌಕಾಪಡೆಯು ಶೀಘ್ರದಲ್ಲೇ ಜಲಸಂಧಿಯ ಮೂಲಕ ಹಾದು ಹೋಗುವ ಟ್ಯಾಂಕರ್‌ಗಳಿಗೆ ಬೆಂಗಾವಲು ನೀಡಲು ಪ್ರಾರಂಭಿಸುತ್ತದೆ ಎಂದು ಟ್ರಂಪ್ ಈ ಹಿಂದೆ ಹೇಳಿದ್ದಾರೆ.
ಇರಾನ್‌ನ ತೈಲ ರಫ್ತುಗಳನ್ನು ನಿರ್ವಹಿಸುವ ಮುಖ್ಯ ಟರ್ಮಿನಲ್‌ಗೆ ನೆಲೆಯಾಗಿರುವ ಖಾರ್ಗ್ ದ್ವೀಪದಲ್ಲಿರುವ "ನಾಶವಾದ" ಮಿಲಿಟರಿ ತಾಣಗಳು ಎಂದು ಶುಕ್ರವಾರ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಿಸಿದ್ದು, ಟೆಹ್ರಾನ್ ಹಾರ್ಮುಜ್ ಜಲಸಂಧಿಯ ಮೂಲಕ ಹಡಗುಗಳ ಸಾಗಣೆಗೆ ಹಸ್ತಕ್ಷೇಪ ಮಾಡುವುದನ್ನು ಮುಂದುವರಿಸಿದರೆ ಇರಾನ್‌ನ ತೈಲ ಮೂಲಸೌಕರ್ಯವು ನಮ್ಮ ಗುರಿಗಳ ಮುಂದಿನ ಸ್ಥಾನದಲ್ಲಿರಬಹುದು ಎಂದು ಅವರು ಎಚ್ಚರಿಕೆ ನೀಡಿದ್ದಾರೆ.
ಹರ್ಮುಜ್ ಜಲಸಂಧಿ
ಮಾರ್ಚ್ 1 ರ ಸುಮಾರಿಗೆ ಇರಾನ್ ಹಾರ್ಮುಜ್ ಜಲಸಂಧಿಯನ್ನು ಸ್ಥಗಿತಗೊಳಿಸಿದೆ ಎಂದು ವರದಿಯಾಗಿತ್ತು. ಕಿರಿದಾದ ಜಲಮಾರ್ಗವು ವಿಶ್ವದ ಪ್ರಮುಖ ಇಂಧನ ಮಾರ್ಗಗಳಲ್ಲಿ ಒಂದಾಗಿದೆ. ಸಾಮಾನ್ಯವಾಗಿ ಪ್ರತಿದಿನ ಸುಮಾರು 20 ಮಿಲಿಯನ್ ಬ್ಯಾರೆಲ್‌ಗಳ ತೈಲ ಸಾಗಣೆಯನ್ನು ನಿರ್ವಹಿಸುತ್ತದೆ ಮತ್ತು ಜಾಗತಿಕ ದ್ರವೀಕೃತ ನೈಸರ್ಗಿಕ ಅನಿಲ ವ್ಯಾಪಾರದ ಸರಿಸುಮಾರು 20 ಪ್ರತಿಶತದಷ್ಟಿದೆ.
Advertisement