ಹಳ್ಳ ಹಿಡಿದ ಇರಾನ್ ಆರ್ಥಿಕತೆ! 1 ಲೀಟರ್ ಹಾಲಿನ ಬೆಲೆ 8 ಲಕ್ಷ, ಬ್ರೆಡ್‌ 6.6 ಲಕ್ಷ, 1 ಕೆಜಿ ಅಕ್ಕಿಗೆ 32 ಲಕ್ಷ ರಿಯಾಲ್!

ಯುದ್ಧದ ಪರಿಣಾಮ ಇರಾನ್ ಆಹಾರ ಪದಾರ್ಥಗಳು ಮತ್ತು ಸಾಮಾನ್ಯ ಜನರಿಗೆ ದಿನನಿತ್ಯ ಬಳಸುವ ವಸ್ತುಗಳ ಬೆಲೆ ಏರಿಕೆಗೆ ಕಾರಣವಾಗಿವೆ.
milk-Cheese
ಹಾಲು, ಚೀಸ್ (ಸಂಗ್ರಹ ಚಿತ್ರ)online desk
Updated on

ಟೆಹ್ರಾನ್: ಇರಾನ್ ಮೇಲೆ ಅಮೆರಿಕ ಮತ್ತು ಇಸ್ರೇಲ್ ನಡೆಸಿದ ಜಂಟಿ ಮಿಲಿಟರಿ ದಾಳಿಗಳು ಯುದ್ಧಪೀಡಿತ ದೇಶದ ಆರ್ಥಿಕತೆಯನ್ನು ಹಾಳುಗೆಡವಿದೆ.

ಯುದ್ಧದ ಪರಿಣಾಮ ಇರಾನ್ ಆಹಾರ ಪದಾರ್ಥಗಳು ಮತ್ತು ಸಾಮಾನ್ಯ ಜನರಿಗೆ ದಿನನಿತ್ಯ ಬಳಸುವ ವಸ್ತುಗಳ ಬೆಲೆ ಏರಿಕೆಗೆ ಕಾರಣವಾಗಿವೆ. ಇರಾನಿನ ಕರೆನ್ಸಿ ರಿಯಾಲ್‌ನ ಮೌಲ್ಯದಲ್ಲಿನ ಭಾರಿ ಕುಸಿತ ಇದಕ್ಕೆ ಪ್ರಮುಖ ಕಾರಣವಾಗಿದೆ.

ದಿನನಿತ್ಯದ ವಸ್ತುಗಳ ಬೆಲೆಗಳು ಜನರ ಜೀವನದ ಮೇಲೆ ಗಮನಾರ್ಹವಾಗಿ ಪರಿಣಾಮ ಬೀರುತ್ತವೆ. ಇವು ನೇರವಾಗಿ ಮಧ್ಯಮ ವರ್ಗದವರ ಜೇಬಿನ ಮೇಲೆ ಪರಿಣಾಮ ಬೀರುತ್ತವೆ. ಇರಾನ್‌ನಲ್ಲಿನ ಕೆಲವು ಪ್ರಮುಖ ಸರಕುಗಳ ಬೆಲೆಗಳ ಪಟ್ಟಿ ಇಂತಿದೆ..

ಹಾಲು: ಇರಾನಿನ ಕರೆನ್ಸಿಯಲ್ಲಿ, ಒಂದು ಲೀಟರ್ ಹಾಲಿನ ದರ 8.2 ಲಕ್ಷ ಇರಾನಿನ ರಿಯಾಲ್ (₹57 ಭಾರತೀಯ ರೂಪಾಯಿ) ತಲುಪಿದೆ. ಚೀಸ್‌ನಂತಹ ಹಾಲಿಗೆ ಸಂಬಂಧಿತ ಉತ್ಪನ್ನಗಳ ಬೆಲೆಗಳು ಸಹ ಏರಿಕೆಯಾಗಿವೆ.

  • ಬ್ರೆಡ್: 500 ಗ್ರಾಂ ತಾಜಾ ಬಿಳಿ ಬ್ರೆಡ್‌ನ ಬೆಲೆ 6.6 ಲಕ್ಷ ಇರಾನಿನ ರಿಯಾಲ್ (₹46 ಭಾರತೀಯ ರೂಪಾಯಿ)

  • ಅಕ್ಕಿ: 1 ಕೆಜಿಯ ಅಕ್ಕಿಯ ಬೆಲೆ ಪ್ರಸ್ತುತ 32 ಲಕ್ಷ ರಿಯಾಲ್ (₹224 ಭಾರತೀಯ ರೂಪಾಯಿ)

  • ಮೊಟ್ಟೆಗಳು: 12 ದೊಡ್ಡ ಗಾತ್ರದ ಮೊಟ್ಟೆಗಳ ಬೆಲೆ 14.54 ಲಕ್ಷ ರಿಯಾಲ್ (₹101 ಭಾರತೀಯ ರೂಪಾಯಿ)

  • ಚೀಸ್: 1 ಕೆಜಿ ಸ್ಥಳೀಯ ಚೀಸ್‌ನ ಬೆಲೆ 52 ಲಕ್ಷ ರಿಯಾಲ್ (₹361 ಭಾರತೀಯ ರೂಪಾಯಿ)

ಈ ರೀತಿಯ ಬೆಲೆಗಳೊಂದಿಗೆ ಯುದ್ಧಪೀಡಿತ ರಾಷ್ಟ್ರದಲ್ಲಿ ಬಡವರ ಪರಿಸ್ಥಿತಿ ಹೇಗಿದೆ ಎಂಬುದನ್ನು ಊಹಿಸಿ.

ಹೆಚ್ಚಿನ ಹಣದುಬ್ಬರವು ಬಹಳ ಹಿಂದಿನಿಂದಲೂ ಇರಾನಿಯನ್ನರನ್ನು ತತ್ತರಿಸುವಂತೆ ಮಾಡಿದೆ. ಕಳೆದ 10 ತಿಂಗಳುಗಳಲ್ಲಿ ಡಿಸೆಂಬರ್ 2025 ರವರೆಗೆ ಸರಕುಗಳ ಬೆಲೆ ಏರಿಕೆಯ ದರ ನಿರಂತರವಾಗಿದೆ. ದೇಶದ ಕೇಂದ್ರ ಬ್ಯಾಂಕ್, ಬ್ಯಾಂಕ್ ಮಾರ್ಕಾಜಿ ಪ್ರಕಾರ, ಡಿಸೆಂಬರ್ 2025 ರ ಹಣದುಬ್ಬರ ಮುದ್ರಣ 42.4% ಕ್ಕೆ ಬಂದಿತ್ತು.

milk-Cheese
ಅಮೆರಿಕ ಹೊಡೆದಿದ್ದು ಇರಾನ್ ನ ಖಾರ್ಗ್ ಗೆ; ಪೆಟ್ಟು ಚೀನಾಗೆ!; ಅಡಕತ್ತರಿಯಲ್ಲಿ ಬೀಜಿಂಗ್!, ಇಂಧನಕ್ಕೆ ಹಾಹಾಕಾರ!

ಕರೆನ್ಸಿ ಕುಸಿತವನ್ನು ತಡೆಯಲು ಇರಾನ್ ಸರ್ಕಾರ ಇತ್ತೀಚೆಗೆ ಕೈಗೊಂಡ ಕ್ರಮ:

ಫೆಬ್ರವರಿ 28 ರ ದಾಳಿಯ ಮೊದಲು, ಇರಾನ್ ಸರ್ಕಾರ ರಾಷ್ಟ್ರೀಯ ಕರೆನ್ಸಿಯಿಂದ ನಾಲ್ಕು ಸೊನ್ನೆಗಳನ್ನು ತೆಗೆದುಹಾಕುವುದಾಗಿ ಹೇಳಿತ್ತು. ಸರಳವಾಗಿ ಹೇಳುವುದಾದರೆ, 10,000 ಮುಖಬೆಲೆಯ ರಿಯಾಲ್‌ಗಳು ಕೇವಲ 1 ರಿಯಾಲ್‌ ಮೌಲ್ಯಕ್ಕೆ ಸಮಾನವಾಗಿರುತ್ತದೆ. ಇದನ್ನು ದೇಶದ ಸಂಸತ್ತು ಸಹ ಈ ಕ್ರಮವನ್ನು ಅನುಮೋದಿಸಿದೆ. ದೀರ್ಘಕಾಲದ ಹಣದುಬ್ಬರವು ರಿಯಾಲ್ ಅನ್ನು ಗಮನಾರ್ಹವಾಗಿ ಅಪಮೌಲ್ಯಗೊಳಿಸಿದೆ.

ಪ್ರಸ್ತುತ, ಮುಕ್ತ ಮಾರುಕಟ್ಟೆಯಲ್ಲಿ ಇರಾನಿನ ರಿಯಾಲ್ ಪ್ರತಿ ಯುಎಸ್ ಡಾಲರ್‌ಗೆ ಸುಮಾರು 13.50 ಲಕ್ಷ ತಲುಪಿದೆ. 1 ಭಾರತೀಯ ರೂಪಾಯಿ 14,000 ರಿಯಾಲ್‌ಗಳಿಗಿಂತ ಹೆಚ್ಚು ಮೌಲ್ಯವನ್ನು ಹೊಂದಿದೆ.

ಇರಾನ್‌ನ ಒಟ್ಟು ದೇಶೀಯ ಉತ್ಪನ್ನ (ಜಿಡಿಪಿ) ಬೆಳವಣಿಗೆಯ ದರವು ಕಳೆದ ಕೆಲವು ವರ್ಷಗಳಲ್ಲಿ ಕುಸಿದಿದೆ. ಅಂತರರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) ಪ್ರಕಾರ, ದೇಶದ ಆರ್ಥಿಕತೆಯು 2025 ರಲ್ಲಿ 0.6% ನಷ್ಟು ಅಲ್ಪ ದರದಲ್ಲಿ ಮಾತ್ರ ವಿಸ್ತರಿಸುತ್ತದೆ. ಕಳೆದ ಕೆಲವು ವರ್ಷಗಳಲ್ಲಿ ಜಿಡಿಪಿ ಒಂದೇ ಅಂಕಿಗಳಲ್ಲಿ ಮತ್ತು ಹಣದುಬ್ಬರವು ಎರಡು ಅಂಕಿಗಳಲ್ಲಿ ಬೆಳೆದಿದೆ!

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com