West Asia conflict: ದುಬೈ ಏರ್‌ಪೋರ್ಟ್‌ ಬಳಿ ಡ್ರೋನ್‌ ದಾಳಿ; ವಿಮಾನ ಸಂಚಾರ ತಾತ್ಕಾಲಿಕ ಸ್ಥಗಿತ; Hormuz ರಕ್ಷಣೆಗೆ NATO ನೆರವು ಕೋರಿದ ಟ್ರಂಪ್

ವಿಮಾನ ನಿಲ್ದಾಣದ ಸಮೀಪದಲ್ಲಿ ಡ್ರೋನ್ ದಾಳಿ ನಡೆದಿದ್ದು, ಇದು ಒಂದು ಇಂಧನ ಟ್ಯಾಂಕ್‌ಗೆ ತಗುಲಿ ಬೆಂಕಿ ಕಾಣಿಸಿಕೊಂಡಿದೆ. ಘಟನೆಯ ತಕ್ಷಣವೇ ದುಬೈ ನಾಗರಿಕ ರಕ್ಷಣಾ ಪಡೆ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಬೆಂಕಿಯನ್ನು ನಿಯಂತ್ರಣಕ್ಕೆ ತರಲು ಕಾರ್ಯಾಚರಣೆ ಆರಂಭಿಸಿದ್ದಾರೆ.
A drone-related incident sparked a fire near Dubai's international airport.
ದುಬೈ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಬಳಿ ಡ್ರೋನ್ ದಾಳಿ
Updated on

ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಯುದ್ಧದ ನಡುವೆಯೇ ದುಬೈ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಸಮೀಪ ಡ್ರೋನ್ ದಾಳಿ ಸಂಭವಿಸಿದ್ದು, ಇದರ ಪರಿಣಾಮ ಭಾರೀ ಬೆಂಕಿ ಕಾಣಿಸಿಕೊಂಡಿದೆ.

ಈ ಕಾರಣದಿಂದ ವಿಮಾನ ಸಂಚಾರವನ್ನು ಕೆಲಕಾಲ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ನಗರದ ಮಾಹಿತಿ ಕಚೇರಿ ನೀಡಿದ ವಿವರಗಳ ಪ್ರಕಾರ, ವಿಮಾನ ನಿಲ್ದಾಣದ ಸಮೀಪದಲ್ಲಿ ಡ್ರೋನ್ ದಾಳಿ ನಡೆದಿದ್ದು, ಇದು ಒಂದು ಇಂಧನ ಟ್ಯಾಂಕ್‌ಗೆ ತಗುಲಿ ಬೆಂಕಿ ಕಾಣಿಸಿಕೊಂಡಿದೆ. ಘಟನೆಯ ತಕ್ಷಣವೇ ದುಬೈ ನಾಗರಿಕ ರಕ್ಷಣಾ ಪಡೆ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಬೆಂಕಿಯನ್ನು ನಿಯಂತ್ರಣಕ್ಕೆ ತರಲು ಕಾರ್ಯಾಚರಣೆ ಆರಂಭಿಸಿದ್ದಾರೆ.

ಈ ಘಟನೆಯಲ್ಲಿ ಯಾವುದೇ ಸಾವು-ನೋವು ಸಂಭವಿಸಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆದರೆ ಸುರಕ್ಷತಾ ಕ್ರಮವಾಗಿ ವಿಮಾನ ಸಂಚಾರವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದ್ದು, ಪರಿಸ್ಥಿತಿ ನಿಯಂತ್ರಣಕ್ಕೆ ಬಂದ ನಂತರ ಹಂತ ಹಂತವಾಗಿ ವಿಮಾನ ಸಂಚಾರವನ್ನು ಪುನರಾರಂಭಿಸುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇತ್ತೀಚೆಗೆ ಆರಂಭವಾಗಿರುವ ಮಧ್ಯಪ್ರಾಚ್ಯದ ಯುದ್ಧದಲ್ಲಿ ಇರಾನ್ ಮತ್ತು ಇಸ್ರೇಲ್ ನಡುವೆ ಉದ್ವಿಗ್ನತೆ ತೀವ್ರಗೊಂಡಿದ್ದು, ಅದರ ಪರಿಣಾಮವಾಗಿ ಗಲ್ಫ್ ಪ್ರದೇಶದ ಪ್ರಮುಖ ಆರ್ಥಿಕ ಕೇಂದ್ರಗಳಲ್ಲಿಯೂ ಭದ್ರತಾ ಆತಂಕ ಹೆಚ್ಚಾಗಿದೆ.

'Hormuz' ರಕ್ಷಣೆಗೆ NATO ನೆರವು ಕೋರಿದ ಟ್ರಂಪ್

ಏತನ್ಮಧ್ಯೆ ಹಾರ್ಮುಜ್ ಜಾಗತಿಕ ತೈಲ ಮಾರ್ಗ ರಕ್ಷಣೆಗೆ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ನ್ಯಾಟೋ ನೆರವು ಕೋರಿದ್ದಾರೆ.

ಸಂದರ್ಶನವೊಂದರಲ್ಲಿ ಮಾತನಾಡಿರುವ ಅವರು, ನಮಗೆ ನ್ಯಾಟೋ ಎಂಬ ವ್ಯವಸ್ಥೆಯಿದೆ. ಆದರೆ, ನಾವು ಮಾತ್ರ ಹೆಚ್ಚು ಹೊಣೆ ಹೊತ್ತಿದ್ದೇವೆ. ಹಾರ್ಮುಝ್ ಜಲಸಂಧಿ ತೆರೆಯುವ ಕಾರ್ಯದಲ್ಲಿ ಮಿತ್ರರಾಷ್ಟ್ರಗಳು ಸಹಕರಿಸದಿದ್ದರೆ, ನ್ಯಾಟೋಗೆ ಕೆಟ್ಟ ಪರಿಣಾಮಗಳು ಎದುರಾಗುತ್ತವೆ ಎಂದು ಎಚ್ಚರಿಸಿದ್ದಾರೆ.

ಉಕ್ರೇನ್ ವಿಚಾರವನ್ನು ಉಲ್ಲೇಖಿಸಿದ ಅವರು, ಉಕ್ರೇನ್ ನಮ್ಮಿಂದ ಸಾವಿರಾರು ಮೈಲುಗಳಷ್ಟು ದೂರದಲ್ಲಿದೆ. ಆದರೂ ನಾವು ಅವರಿಗೆ ನೆರವಾಗಿದ್ದೆವು. ಈಗ ಅವರು ನಮಗೆ ಸಹಾಯ ಮಾಡುತ್ತಾರೆಯೇ ನೋಡಬೇಕು. ನಾವು ಅವರ ಪರ ಇರುತ್ತೇವೆ, ಆದರೆ, ಅವರು ನಮ್ಮ ಪರ ಇರುವುದಿಲ್ಲ ಎಂದು ತಿಳಿಸಿದ್ದಾರೆ.

ಮಿತ್ರರ ನೆರವಿನ ಸ್ವರೂಪದ ಕುರಿತ ಪ್ರಶ್ನೆಗೆ ಉತ್ತರಿಸಿ, “ಅದು ಏನು ಬೇಕಾದರೂ ಆಗಿರಬಹುದು ಎಂದು ಹೇಳಿದರು.

A drone-related incident sparked a fire near Dubai's international airport.
West Asia conflict: ಕುವೈತ್ ಸೇನಾ ತಾಣದ ಮೇಲೆ ಡ್ರೋನ್ ದಾಳಿ; ಯುದ್ಧದಲ್ಲಿ ಹಸ್ತಕ್ಷೇಪ ಮಾಡದಿರಿ- ಇತರೆ ರಾಷ್ಟ್ರಗಳಿಗೆ ಇರಾನ್ ಖಡಕ್ ಎಚ್ಚರಿಕೆ

ಇದೇ ವೇಳೆ ಯುಕೆ ನಿಲುವಿನ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಟ್ರಂಪ್, ಯುಕೆಯನ್ನು ಪ್ರಮುಖ ಮಿತ್ರರಾಷ್ಟ್ರವೆಂದು ಪರಿಗಣಿಸುತ್ತೇವೆ. ಆದರೆ, ನಾನು ಅವರನ್ನು ಬರಲು ಕೇಳಿದಾಗ, ಅವರು ತಕ್ಷಣ ಸ್ಪಂದಿಸಲಿಲ್ಲ. ನಾವು ಇರಾನ್‌ ನ ಅಪಾಯವನ್ನು ಬಹುತೇಕ ನಿಯಂತ್ರಣಕ್ಕೆ ತಂದ ನಂತರ ಮಾತ್ರ ಅವರು ‘ಎರಡು ಹಡಗುಗಳನ್ನು ಕಳುಹಿಸುತ್ತೇವೆ’ ಎಂದರು. ಆದರೆ,. ಗೆಲುವಿನ ನಂತರವಲ್ಲ, ಗೆಲ್ಲುವ ಮೊದಲು ಸಹಾಯ ಬೇಕಿತ್ತು ಎಂದರು.

ಈ ನಡುವೆ ಜಲಮಾರ್ಗವನ್ನು ನಿರ್ಬಂಧಮುಕ್ತಗೊಳಿಸಲು ಚೀನಾವನ್ನು ಒತ್ತಾಯಿಸುತ್ತಿರುವ ಹಿನ್ನೆಲೆಯಲ್ಲಿ, ಈ ತಿಂಗಳ ಕೊನೆಯಲ್ಲಿ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರೊಂದಿಗೆ ನಿಗದಿಯಾಗಿದ್ದ ಶೃಂಗಸಭೆಯನ್ನು ಮುಂದೂಡುವ ಸಾಧ್ಯತೆ ಇದೆ ಎಂದು ಟ್ರಂಪ್ ತಿಳಿಸಿದ್ದಾರೆ.

ಈ ಜಲಸಂಧಿಯಿಂದ ಲಾಭ ಪಡೆಯುವ ರಾಷ್ಟ್ರಗಳು ಅಲ್ಲಿ ಯಾವುದೇ ಅಡಚಣೆ ಉಂಟಾಗದಂತೆ ನೋಡಿಕೊಳ್ಳಬೇಕು,” ಎಂದು ಹೇಳಿದ್ದಾರೆ. ಅಮೆರಿಕಕ್ಕಿಂತ ಚೀನಾ ಮತ್ತು ಯುರೋಪ್ ಗಲ್ಫ್ ಪ್ರದೇಶದ ತೈಲದ ಮೇಲೆ ಹೆಚ್ಚು ಅವಲಂಬಿತವಾಗಿವೆ ಎಂಬುದನ್ನೂ ಟ್ರಂಪ್ ಅವರು ಉಲ್ಲೇಖ ಮಾಡಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com