West Asia war: ಹಾರ್ಮುಜ್ ಜಲಸಂಧಿ 'ರೀ ಓಪನ್' ಮಾಡಲು 22 ರಾಷ್ಟ್ರಗಳು ಇರಾನ್ ಗೆ ಒತ್ತಾಯ! ಸೇನಾ ಕಾರ್ಯಾಚರಣೆ ಶೀಘ್ರ ಸ್ಥಗಿತ ಎಂದ ಅಮೆರಿಕ

ಪ್ರಮುಖ ಜಲಮಾರ್ಗವಾಗಿರುವ ಹಾರ್ಮುಜ್ ಜಲಸಂಧಿಯನ್ನು ಮುಚ್ಚಿದ ಇರಾನ್ ಕ್ರಮವನ್ನು UAE, ಬಹ್ರೇನ್ ಸೇರಿದಂತೆ 22 ರಾಷ್ಟ್ರಗಳು ಖಂಡಿಸಿವೆ.
 US-Israel strikes, Iran’s top leadership has been hit and its military weakened
ಪಶ್ಚಿಮ ಏಷ್ಯಾದಲ್ಲಿನ ಯುದ್ಧದ ಸನ್ನಿವೇಶಗಳು
Updated on

ದುಬೈ: ಇರಾನ್ ಜೊತೆಗೆ ಅಮೆರಿಕ ಮತ್ತು ಇಸ್ರೇಲ್ ನಡೆಸುತ್ತಿರುವ ಮಿಲಿಟರಿ ಸಂಘರ್ಷ, ರಾಜತಾಂತ್ರಿಕ ಮತ್ತು ಕೊಲ್ಲಿ ರಾಷ್ಟ್ರಗಳ ಇಂಧನ ಮೂಲಸೌಕರ್ಯಗಳ ಮೇಲಿನ ದಾಳಿ ಹೆಚ್ಚಳದೊಂದಿಗೆ ಪಶ್ಚಿಮ ಏಷ್ಯಾದಲ್ಲಿನ ಯುದ್ಧ ಮೂರನೇ ವಾರಕ್ಕೆ ಕಾಲಿಟ್ಟಿದೆ.

ಫೆ.28 ರಂದು ಅಮೆರಿಕ ಹಾಗೂ ಇಸ್ರೇಲ್ ಜಂಟಿ ವೈಮಾನಿಕ ದಾಳಿಯಿಂದ ಆರಂಭವಾದ ಈ ಸಂಘರ್ಷ ಮಧ್ಯಪ್ರಾಚ್ಯ ಪ್ರದೇಶದಾದ್ಯಂತ ವ್ಯಾಪಿಸಿದ್ದು, ಇಂಧನ ಮಾರುಕಟ್ಟೆ ಮೇಲೆ ತೀವ್ರ ಪರಿಣಾಮ ಬೀರಿದೆ. ಇರಾನ್ ಹಾರ್ಮುಜ್ ಜಲಸಂಧಿಯನ್ನು ಬಂದ್ ಮಾಡುವುದರೊಂದಿಗೆ ತೈಲ ಬೆಲೆ ಏರಿಕೆಯಾಗಿದೆ. ಮತ್ತೊಂದೆಡೆ ಹಿಜ್ಬುಲ್ಲಾ ಸಂಘಟನೆಯನ್ನು ಗುರಿಯಾಗಿಸಿಕೊಂಡು ಇಸ್ರೇಲ್ ದಾಳಿಯನ್ನು ತೀವ್ರಗೊಳಿಸಿದೆ.

ಈ ಮಧ್ಯೆ ಪ್ರಮುಖ ಜಲಮಾರ್ಗವಾಗಿರುವ ಹಾರ್ಮುಜ್ ಜಲಸಂಧಿಯನ್ನು ಮುಚ್ಚಿದ ಇರಾನ್ ಕ್ರಮವನ್ನು UAE, ಬಹ್ರೇನ್ ಸೇರಿದಂತೆ 22 ರಾಷ್ಟ್ರಗಳು ಖಂಡಿಸಿವೆ. ಈ ಕುರಿತು ಜಂಟಿ ಹೇಳಿಕೆಯನ್ನು ಬಿಡುಗಡೆ ಮಾಡಿದ್ದು, ಇತ್ತೀಚಿನ ಕೊಲ್ಲಿಯಲ್ಲಿ ನಿರಾಯುಧ ವಾಣಿಜ್ಯ ಹಡಗುಗಳ ಮೇಲೆ ಇರಾನ್ ದಾಳಿ, ತೈಲ ಮತ್ತು ಅನಿಲ ಸ್ಥಾವರಗಳು ಸೇರಿದಂತೆ ನಾಗರಿಕ ಮೂಲಸೌಕರ್ಯಗಳ ಮೇಲಿನ ದಾಳಿ ಹಾಗೂ ಹಾರ್ಮುಜ್ ಜಲಸಂಧಿಯನ್ನು ಮುಚ್ಚುವಿಕೆಯನ್ನು ತೀವ್ರವಾಗಿ ಖಂಡಿಸುತ್ತೇವೆ ಎಂದು ಹೇಳಿವೆ.

ಹಾರ್ಮುಜ್ ಜಲಸಂಧಿಯ ಮೂಲಕ ಸುರಕ್ಷಿತ ಸಂಚಾರವನ್ನು ಖಚಿತಪಡಿಸುವ ಸೂಕ್ತ ಪ್ರಯತ್ನಗಳಿಗೆ ಕೈ ಜೋಡಿಸುತ್ತೇವೆ. ಇದಕ್ಕಾಗಿ ಪೂರ್ವ ಸಿದ್ಧತಾ ಯೋಜನೆಯಲ್ಲಿ ತೊಡಗಿರುವ ರಾಷ್ಟ್ರಗಳ ಬದ್ಧತೆಯನ್ನು ನಾವು ಸ್ವಾಗತಿಸುತ್ತೇವೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

ಈ ಮಧ್ಯೆ ಸೇನಾ ಕಾರ್ಯಾಚರಣೆ ಶೀಘ್ರ ಮುಗಿಯಲಿದೆ ಎಂದು ಹೌಸ್ ಹೌಸ್ ಸ್ಪೀಕರ್ ಮೈಕ್ ಜಾನ್ಸನ್ ಹೇಳಿದ್ದಾರೆ. ಅಂದುಕೊಂಡಷ್ಟು ಕಾರ್ಯಾಚರಣೆ ಈಗ ಮುಗಿದಿದೆ ಅಂದುಕೊಂಡಿದ್ದೇನೆ. ಬ್ಯಾಲಿಸ್ಟಿಕ್ ಕ್ಷಿಪಣಿಗಳು ಮತ್ತು ಅವುಗಳ ಉತ್ಪಾದನಾ ಸಾಧನಗಳನ್ನು ಹೊರತೆಗೆಯಲು ಮತ್ತು ನೌಕಪಡೆಯನ್ನು ನಾಶಪಡಿಸಲು ಪ್ರಯತ್ನಿಸುತ್ತಿದ್ದೇವೆ ಎಂದು ತಿಳಿಸಿದ್ದಾರೆ.

 US-Israel strikes, Iran’s top leadership has been hit and its military weakened
ಈದ್ ಅಲ್-ಫಿತರ್‌ ದಿನವೇ ಜಿರುಸಲೇಂ ಮೇಲೆ ಇರಾನ್ ಕ್ಷಿಪಣಿ ದಾಳಿ: ಅಲ್-ಅಕ್ಸಾ ಮಸೀದಿ ಬಳಿ ಸ್ಫೋಟ! Video

ಹಾರ್ಮುಜ್ ಜಲಸಂಧಿಯಲ್ಲಿ ಹಡಗುಗಳಿಗೆ ಬೆದರಿಕೆ ಹಾಕುವ ಇರಾನ್‌ನ ಸಾಮರ್ಥ್ಯ ಸ್ವಲ್ಪ ಮಟ್ಟಿಗೆ ಕಷ್ಟಕರವಾಗಿದೆ. ಅಮೆರಿಕ ಅಧ್ಯಕ್ಷರ ಮನವಿಯನ್ನು ಮಿತ್ರರಾಷ್ಟ್ರಗಳೇ ನಿರಾಕರಿಸಿದ್ದಾರೆ. ಆದರೆ ಆದಷ್ಟು ಬೇಗ ಶಾಂತ ಪರಿಸ್ಥಿತಿ ಮರುಕಳಿಸಲಿದೆ ಎಂದು ಅವರು ತಿಳಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com