West Asia war: ತಾರಕಕ್ಕೇರಿದ ಅಮೆರಿಕಾ-ಇರಾನ್ ಸಂಘರ್ಷ; ಟ್ರಂಪ್ ಬೆದರಿಕೆಗೆ ಮಣಿಯದ ಟೆಹ್ರಾನ್, ವಿದ್ಯುತ್ ಸ್ಥಾವರ ನಾಶಪಡಿಸಿದರೆ ಭೀಕರ ಪ್ರತಿದಾಳಿ ಎಚ್ಚರಿಕೆ

ವಿದ್ಯುತ್ ಸ್ಥಾವರಗಳ ಮೇಲೆ ದಾಳಿ ನಡೆಸುವುದಾಗಿ ಟ್ರಂಪ್ ನೀಡಿರುವ ಎಚ್ಚರಿಕೆ ಬಗ್ಗದ ಇರಾನ್, ನಮ್ಮ ಮೂಲಸೌಕರ್ಯಗಳನ್ನು ನಾಶಪಡಿಸಿದರೆ, ಅಮೆರಿಕಾ ಜೊತೆಗೆ ಅದರ ಮಿತ್ರ ರಾಷ್ಟ್ರಗಳ ಎಲ್ಲಾ ಪ್ರಮುಖ ಮೂಲಸೌಕರ್ಯಗಳನ್ನು ಗುರಿಯಾಗಿಸಿ ದಾಳಿ ಮಾಡುವುದಾಗಿ ಇರಾನ್ ತಿರುಗೇಟು ನೀಡಿದೆ.
West Asia war
ಮಧ್ಯಪ್ರಾಚ್ಯ ಸಂಘರ್ಷ
Updated on

ಮಧ್ಯ ಏಷ್ಯಾದಲ್ಲಿ ಯುದ್ಧದ ವಾತಾವರಣ ಮತ್ತಷ್ಟು ಗಂಭೀರವಾಗುತ್ತಿದ್ದು, ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೀಡಿದ ಬೆದರಿಕೆಗೆ ಇರಾನ್ ತೀವ್ರ ಪ್ರತಿಕ್ರಿಯೆ ನೀಡಿದೆ.

ವಿದ್ಯುತ್ ಸ್ಥಾವರಗಳ ಮೇಲೆ ದಾಳಿ ನಡೆಸುವುದಾಗಿ ಟ್ರಂಪ್ ನೀಡಿರುವ ಎಚ್ಚರಿಕೆ ಬಗ್ಗದ ಇರಾನ್, ನಮ್ಮ ಮೂಲಸೌಕರ್ಯಗಳನ್ನು ನಾಶಪಡಿಸಿದರೆ, ಅಮೆರಿಕಾ ಜೊತೆಗೆ ಅದರ ಮಿತ್ರ ರಾಷ್ಟ್ರಗಳ ಎಲ್ಲಾ ಪ್ರಮುಖ ಮೂಲಸೌಕರ್ಯಗಳನ್ನು ಗುರಿಯಾಗಿಸಿ ದಾಳಿ ಮಾಡುವುದಾಗಿ ಇರಾನ್ ತಿರುಗೇಟು ನೀಡಿದೆ.

ಇರಾನ್ ನೀಡಿದ ಎಚ್ಚರಿಕೆಯಲ್ಲಿ, ಕೇವಲ ಸೇನಾ ಕಾರ್ಯಾಚರಣೆಯಷ್ಟೇ ಅಲ್ಲದೆ, ಮಧ್ಯಪ್ರಾಚ್ಯದಾದ್ಯಂತ ಇರುವ ಇಂಧನ ಘಟಕಗಳು, ತೈಲ ಶುದ್ಧೀಕರಣ ಘಟಕಗಳು, ಬಂದರುಗಳು ಮತ್ತು ಪ್ರಮುಖ ಮೂಲಸೌಕರ್ಯಗಳ ಮೇಲೂ ದಾಳಿ ನಡೆಸುವ ಸಾಧ್ಯತೆ ಇರುವುದಾಗಿ ಸ್ಪಷ್ಟಪಡಿಸಿದೆ. ಇದು ಸಂಘರ್ಷವನ್ನು ಮತ್ತಷ್ಟು ವಿಸ್ತರಿಸುವ ಸೂಚನೆ ನೀಡಿದೆ.

ಇದಕ್ಕೂ ಮುನ್ನ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಇರಾನ್'ಗೆ ಎಚ್ಚರಿಕೆ ನೀಡಿದ್ದರು. ಇರಾನ್ ರಾಷ್ಟ್ರಕ್ಕೆ 48 ಗಂಟೆಗಳ ಗಡುವು ನೀಡಿರುವ ಟ್ರಂಪ್ ಅವರು, ಮಾರ್ಗವನ್ನು ತಕ್ಷಣ ತೆರೆಯದಿದ್ದರೆ ಇರಾನ್‌ನ ಪ್ರಮುಖ ವಿದ್ಯುತ್ ಸ್ಥಾವರಗಳನ್ನು ಸಂಪೂರ್ಣವಾಗಿ ನಾಶ ಮಾಡುತ್ತೇವೆಂದು ಎಚ್ಚರಿಕೆ ನೀಡಿದ್ದರು. ಇದಕ್ಕೆ ಇರಾನ್ ತಿರುಗೇಟು ನೀಡಿದೆ.

West Asia war
West Asia war: ಜಾಗತಿಕ ತೈಲ ಮಾರುಕಟ್ಟೆ ಅಸ್ಥಿರ; 48 ಗಂಟೆಗಳಲ್ಲಿ 'ಹಾರ್ಮುಜ್ ಜಲಸಂಧಿ' ತೆರೆಯದಿದ್ದರೆ ವಿದ್ಯುತ್ ಸ್ಥಾವರಗಳ ನಾಶ; ಇರಾನ್'ಗೆ ಟ್ರಂಪ್ ಕಠಿಣ ಎಚ್ಚರಿಕೆ

ಜಾಗತಿಕ ತೈಲ ಸಾಗಾಟದ ಪ್ರಮುಖ ದ್ವಾರವಾದ Strait of Hormuz ಸುತ್ತ ಉದ್ಭವಿಸಿರುವ ಈ ವಿವಾದವೇ ಈ ಉದ್ವಿಗ್ನತೆಗೆ ಪ್ರಮುಖ ಕಾರಣವಾಗಿದೆ.

ಈ ಸಮುದ್ರ ಮಾರ್ಗದ ಮೂಲಕ ಜಗತ್ತಿನ ದೊಡ್ಡ ಪ್ರಮಾಣದ ತೈಲ ಸಾಗಾಟ ನಡೆಯುತ್ತಿದ್ದು, ಯಾವುದೇ ಅಡಚಣೆ ಉಂಟಾದರೂ ಜಾಗತಿಕ ಆರ್ಥಿಕತೆಯ ಮೇಲೆ ನೇರ ಪರಿಣಾಮ ಬೀರುತ್ತದೆ.

ತಜ್ಞರ ಪ್ರಕಾರ, ಈ ಸಂಘರ್ಷ ಮುಂದುವರಿದರೆ ಅದು ಕೇವಲ ಅಮೆರಿಕಾ ಮತ್ತು ಇರಾನ್ ನಡುವೆ ಸೀಮಿತವಾಗದೇ, ಸಂಪೂರ್ಣ ಮಧ್ಯಪ್ರಾಚ್ಯವನ್ನು ಒಳಗೊಂಡ ದೊಡ್ಡ ಮಟ್ಟದ ಯುದ್ಧವಾಗಿ ಮಾರ್ಪಡುವ ಸಾಧ್ಯತೆ ಇದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com