ಮತ್ತೊಂದು F-18 ಫೈಟರ್ ಜೆಟ್ ಹೊಡೆದುರುಳಿಸಿದ್ದೇವೆ ಎಂದ Iran; ಬೆಚ್ಚಿದ ಅಮೆರಿಕದಿಂದ Fact-Check

ಇರಾನಿನ ವಾಯುಪ್ರದೇಶದ ಮೇಲೆ ಕಾರ್ಯಾಚರಣೆಯ ಸಮಯದಲ್ಲಿ ಎಫ್ 18 ಯುದ್ಧ ವಿಮಾನವನ್ನು ಹೊಡೆದುರುಳಿಸಿದ್ದಾಗಿ ಇರಾನ್ ಘೋಷಣೆ ಮಾಡಿದೆ.
American F-18 fighter jet
ಅಮೆರಿಕದ ಎಫ್ 18 ಫೈಟರ್ ಜೆಟ್ ವಿಮಾನ
Updated on

ಟೆಹ್ರಾನ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ 5 ದಿನಗಳ ತಾತ್ಕಾಲಿಕ ಕದನ ವಿರಾಮ ಘೋಷಣೆ ಹೊರತಾಗಿಯೂ ಮಧ್ಯ ಪ್ರಾಚ್ಯದಲ್ಲಿ ಸಂಘರ್ಷ ಮುಂದುವರೆದಿದ್ದು, ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿರುವ ಇರಾನ್ ಅಮೆರಿಕದ ಅತ್ಯಾಧುನಿಕ ಎಫ್ 18 ಯುದ್ಧ ವಿಮಾನವನ್ನು ಹೊಡೆದುರುಳಿಸಿರುವುದಾಗಿ ಘೋಷಣೆ ಮಾಡಿದೆ.

ಹೌದು.. ಇರಾನಿನ ವಾಯುಪ್ರದೇಶದ ಮೇಲೆ ಕಾರ್ಯಾಚರಣೆಯ ಸಮಯದಲ್ಲಿ ಎಫ್ 18 ಯುದ್ಧ ವಿಮಾನವನ್ನು ಹೊಡೆದುರುಳಿಸಿದ್ದಾಗಿ ಇರಾನ್ ಘೋಷಣೆ ಮಾಡಿದೆ. ಮಧ್ಯಪ್ರಾಚ್ಯದ ಅಮೆರಿಕದ ನೆಲೆಯಲ್ಲಿ ತುರ್ತು ಲ್ಯಾಂಡಿಂಗ್ ಮಾಡಿದ ಅಮೆರಿಕದ F-35 ಸ್ಟೆಲ್ತ್ ಫೈಟರ್ ಅನ್ನು ಹಾನಿಗೊಳಿಸಿದ ಜವಾಬ್ದಾರಿಯನ್ನು ಇರಾನ್ ಹೊತ್ತುಕೊಂಡಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ಅಂತೆಯೇ ಇದಕ್ಕೆ ಸಂಬಂಧಿಸಿದ ಗಾಳಿಯಲ್ಲಿ ಬ್ಯಾಲಿಸ್ಟಿಕ್ ಕ್ಷಿಪಣಿಯಂತೆ ಕಾಣುವ ಒಂದು ಫೈಟರ್ ಜೆಟ್ ಡಿಕ್ಕಿ ಹೊಡೆದ ನಂತರ ಎತ್ತರವನ್ನು ಕಳೆದುಕೊಳ್ಳುತ್ತಿರುವುದನ್ನು ತೋರಿಸುವ ವೀಡಿಯೊವನ್ನು ಟೆಹ್ರಾನ್ ಬಿಡುಗಡೆ ಮಾಡಿದೆ.

American F-18 fighter jet
ಪಾಕಿಸ್ತಾನದಂತೆ ಭಾರತ 'ಬ್ರೋಕರ್ ದೇಶವಲ್ಲ': ಸರ್ವ ಪಕ್ಷ ಸಭೆಯಲ್ಲಿ ಜೈಶಂಕರ್ ಲೇವಡಿ!

ಇರಾನ್‌ನ ಪ್ರೆಸ್ ಟಿವಿ ತನ್ನ ಅಧಿಕೃತ ಚಾನೆಲ್‌ನಲ್ಲಿ X ನಲ್ಲಿ ವೀಡಿಯೊವನ್ನು ಪೋಸ್ಟ್ ಮಾಡಿದ್ದು, "ಇರಾನ್‌ನ ಇಸ್ಲಾಮಿಕ್ ರೆವಲ್ಯೂಷನ್ ಗಾರ್ಡ್ಸ್ ಕಾರ್ಪ್ಸ್ (IRGC) ಅಮೆರಿಕದ F-18 ಫೈಟರ್ ಜೆಟ್ ಅನ್ನು ಯಶಸ್ವಿಯಾಗಿ ಗುರಿಯಾಗಿಸಿಕೊಂಡಿದೆ ಎಂದು ಘೋಷಿಸಿದೆ" ಎಂದು ಬರೆದಿದೆ. "ಆದಾಗ್ಯೂ, ದಾಳಿಯ ಸ್ಥಳ, ಹಾನಿಯ ಮಟ್ಟ ಅಥವಾ ಪೈಲಟ್‌ನ ಸ್ಥಿತಿಯ ಕುರಿತು ಪೋಸ್ಟ್ ನಲ್ಲಿ ವಿವರಗಳನ್ನು ಒದಗಿಸಿಲ್ಲ.

ಬೆಚ್ಚಿದ ಅಮೆರಿಕ, ಸತ್ಯ-ಪರಿಶೀಲನೆ

ಇನ್ನು ಅತ್ತ ಇರಾನ್ ಹೇಳಿಕೆ ವ್ಯಾಪಕ ಸುದ್ದಿಗೆ ಗ್ರಾಸವಾಗುತ್ತಲೇ ಇತ್ತ ಬೆಚ್ಚಿದ ಅಮೆರಿಕ ಸೇನೆ ಈ ಕುರಿತು ಪರಿಶೀಲನೆಗೆ ಮುಂದಾಗಿತ್ತು. ಈಗಾಗಲೇ 4 ಎಫ್ 15 ಫೈಟರ್ ಜೆಟ್ ಗಳನ್ನು ಕಳೆದುಕೊಂಡು ಜಾಗತಿಕ ಮಟ್ಟದಲ್ಲಿ ಮುಜುಗರ ಎದುರಿಸುತ್ತಿರುವ ಅಮೆರಿಕಕ್ಕೆ ಇದು ನುಂಗಲಾರದ ಪರಿಸ್ಥಿತಿಯಾಗಿತ್ತು.

ಹೀಗಾಗಿ ಇರಾನ್ ಹೇಳಿಕೆಯನ್ನು ಗಂಭೀರವಾಗಿ ಪರಿಗಣಿಸಿದ ಅಮೆರಿಕ ಕೂಡಲೇ ತನ್ನ ಸೇನಾಪಡೆಗಳಲ್ಲಿನ ಯುದ್ಧ ವಿಮಾನಗಳ ಪರಿಶೀಲನೆಯಲ್ಲಿ ತೊಡಗಿದೆ. ಫ್ಯಾಕ್ಟ್ ಚೆಕ್ ಬಳಿಕ ಅದು ತನ್ನ ಯಾವುದೇ ಎಫ್ 18 ವಿಮಾನಕ್ಕೆ ಹಾನಿಯಾಗಿಲ್ಲ.. ಇರಾನ್ ಹೇಳಿಕೆ ಶುದ್ಧ ಸುಳ್ಳು ಎಂದು ಘೋಷಣೆ ಮಾಡಿದೆ.

'ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ ಹೊಸ ಸುಧಾರಿತ ವಾಯು ರಕ್ಷಣಾ ವ್ಯವಸ್ಥೆಗಳನ್ನು ಬಳಸಿಕೊಂಡು ಚಾಬಹಾರ್ ಮೇಲೆ ಅಮೆರಿಕದ F/A-18 ಫೈಟರ್ ಅನ್ನು ಹೊಡೆದುರುಳಿಸಲಾಗಿದೆ ಎಂದು ಘೋಷಿಸಿತು. ಆದರೆ ಇದು ಸುಳ್ಳಾಗಿದ್ದು, ಅಸಲಿಗೆ ಇರಾನ್ ಯಾವುದೇ ಯುಎಸ್ ಯುದ್ಧ ವಿಮಾನವನ್ನು ಹೊಡೆದುರುಳಿಸಿಲ್ಲ" ಎಂದು ಯುಎಸ್ ಸೆಂಟ್ರಲ್ ಕಮಾಂಡ್ (CENTCOM) X ನಲ್ಲಿ ಪೋಸ್ಟ್‌ನಲ್ಲಿ ತಿಳಿಸಿದೆ.

ಆಪರೇಷನ್ ಎಪಿಕ್ ಫ್ಯೂರಿ

ಇಸ್ರೇಲ್ ಮತ್ತು ಅಮೆರಿಕ ಸೇನೆಗಳು ಜಂಟಿಯಾಗಿ ಇರಾನ್ ಮೇಲೆ 'ಆಪರೇಷನ್ ಎಪಿಕ್ ಫ್ಯೂರಿ' ಎಂಬ ಹೆಸರಿನಲ್ಲಿ ಜಂಟಿ ಸೇನಾ ದಾಳಿ ನಡೆಸುತ್ತಿದ್ದು, ಈ ದಾಳಿಯಲ್ಲಿ ಅಮೆರಿಕದ 8,000 ಕ್ಕೂ ಹೆಚ್ಚು ಯುದ್ಧ ವಿಮಾನಗಳನ್ನು ಬಳಸಿಕೊಳ್ಳಲಾಗುತ್ತಿದೆ ಎಂದು ಹೇಳಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com