ಟ್ರಂಪ್ ಶಾಂತಿ ಪ್ರಸ್ತಾಪದ ನಡುವೆ ಯುದ್ಧ ಮುಂದುವರಿಕೆ: ಯಾಜ್ದ್‌ನಲ್ಲಿ ಇರಾನ್‌ನ ಕ್ಷಿಪಣಿ ತಯಾರಿಕಾ ಘಟಕದ ಮೇಲೆ ಇಸ್ರೇಲ್ ದಾಳಿ!

ಇರಾನ್ ನಾದ್ಯಂತ ನಡೆಸಿದ ದಾಳಿಗಳಲ್ಲಿ ಬ್ಯಾಲಿಸ್ಟಿಕ್ ಕ್ಷಿಪಣಿ ತಯಾರಿಕಾ ಕೇಂದ್ರಗಳ ಕಡಗೆ ಒತ್ತು ನೀಡುವ ಮೂಲಕ ವಾಯುಪಡೆಯು ಮೂಲಸೌಕರ್ಯ ಮತ್ತು ಶಸ್ತ್ರಾಸ್ತ್ರ ತಯಾರಿಕಾ ಕೇಂದ್ರಗಳ ಮೇಲೆ ದಾಳಿ ನಡೆಸಲಾಗಿದೆ.
Casual Images
ಸಾಂದರ್ಭಿಕ ಚಿತ್ರ
Updated on

ಯಾಜ್ದ್‌: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇರಾನ್‌ಗೆ ಸಾರ್ವಜನಿಕ ಶಾಂತಿ ಪ್ರಸ್ತಾಪ ಮಾಡಿದರೂ, ಪಶ್ಚಿಮ ಏಷ್ಯಾದಲ್ಲಿ ಸಂಘರ್ಷ ಮುಂದುವರೆದಿದೆ. ಇರಾನ್‌ನ ಯಾಜ್ದ್‌ನಲ್ಲಿ ಕ್ಷಿಪಣಿ ತಯಾರಿಕಾ ಘಟಕಗಳ ಮೇಲೆ ದಾಳಿ ನಡೆಸಿರುವುದಾಗಿ ಇಸ್ರೇಲ್ ರಕ್ಷಣಾ ಪಡೆಗಳು ಶನಿವಾರ ತಿಳಿಸಿವೆ.

ಕಡಲ ತೀರ ಪ್ರದೇಶವನ್ನು ಗುರಿಯಾಗಿಸಿ ಜಲಾಂತರ್ಗಾಮಿ ನೌಕೆಗಳು ಮತ್ತು ಹೆಲಿಕಾಪ್ಟರ್‌ಗಳಿಂದ ಉಡಾವಣೆ ಮಾಡುವ ಉದ್ದೇಶದ ಸುಧಾರಿತ ಕ್ಷಿಪಣಿಗಳ ಯೋಜನೆ, ಅಭಿವೃದ್ಧಿ, ಜೋಡಣೆ ಮತ್ತು ಸಂಗ್ರಹಣೆಗಾಗಿ ಈ ಪ್ರದೇಶವನ್ನು ಬಳಸಲಾಗುತಿತ್ತು ಎಂದು IDF ಹೇಳಿಕೊಂಡಿದೆ.

ಇರಾನ್ ನಾದ್ಯಂತ ನಡೆಸಿದ ದಾಳಿಗಳಲ್ಲಿ ಬ್ಯಾಲಿಸ್ಟಿಕ್ ಕ್ಷಿಪಣಿ ತಯಾರಿಕಾ ಕೇಂದ್ರಗಳ ಕಡಗೆ ಒತ್ತು ನೀಡುವ ಮೂಲಕ ವಾಯುಪಡೆಯು ಮೂಲಸೌಕರ್ಯ ಮತ್ತು ಶಸ್ತ್ರಾಸ್ತ್ರ ತಯಾರಿಕಾ ಕೇಂದ್ರಗಳ ಮೇಲೆ ದಾಳಿ ನಡೆಸಲಾಗಿದೆ.

ಪಶ್ಚಿಮ ಇರಾನ್‌ನಲ್ಲಿ ವಾಯುಪಡೆಯು ರಾತ್ರಿಯಿಡೀ ನಡೆಸಿದ ಕಾರ್ಯಾಚರಣೆಯಲ್ಲಿ ಇರಾನಿನ ಭಯೋತ್ಪಾದಕ ಆಡಳಿತ ಕೇಂದ್ರದ ಮೇಲೆ ದಾಳಿ ನಡೆಸಲಾಗಿದೆ. ಇಸ್ರೇಲ್ ರಾಜ್ಯಕ್ಕೆ ಅಪಾಯವನ್ನುಂಟುಮಾಡುವ ಲಾಂಚರ್‌ಗಳು ಮತ್ತು ಕ್ಷಿಪಣಿ ಸಂಗ್ರಹ ಕೇಂದ್ರಗಳ ಮೇಲೆ ದಾಳಿ ನಡೆಸಲಾಗಿದೆ ಎಂದು IDF ಹೇಳಿದೆ.

ಇಸ್ರೇಲ್ ರಾಜ್ಯದ ನಾಗರಿಕರ ಪ್ರದೇಶದ ಕಡೆಗೆ ದಾಳಿ ಕಡಿಮೆ ಮಾಡುವ ಉದ್ದೇಶದಿಂದ ಬ್ಯಾಲಿಸ್ಟಿಕ್ ಕ್ಷಿಪಣಿ ತಯಾರಿಕಾ ಕೇಂದ್ರದ ಮೇಲೆ ದಾಳಿ ಮಾಡುವ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಿದ್ದೇವೆ. ಕಳೆದ ದಿನ ಇಸ್ರೇಲ್ ವಾಯುಪಡೆ ಇರಾನ್ ನ ಭಯೋತ್ಪಾದಕರ ಡಜನ್ ಗಟ್ಟಲೇ ಮೂಲಸೌಕರ್ಯಗಳ ಮೇಲೆ ದಾಳಿ ನಡೆಸಲಾಗಿದೆ. ಪಶ್ಚಿಮ ಇರಾನ್ ಸುಮಾರು 20 ಯುದ್ಧ ವಿಮಾನಗಳನ್ನು ಹೊಡೆದುರುಳಿಸಲಾಗಿದೆ ಎಂದು ಮಾಹಿತಿ ನೀಡಿದೆ.

ಕೆರ್ಮಾನ್ಶಾ ಮತ್ತು ಡೆಜ್ಫುಲ್ ನಲ್ಲಿ ಬ್ಯಾಲಿಸ್ಟಿಕ್ ಕ್ಷಿಪಣಿಗಳು ಮತ್ತು ವಾಯು ರಕ್ಷಣಾ ವ್ಯವಸ್ಥೆಗಳನ್ನು ಸಂಗ್ರಹಿಸಲು ಮತ್ತು ಉಡಾವಣೆ ಮಾಡಲು ಬಳಸುತ್ತಿದ್ದ ಪ್ರದೇಶಗಳಲ್ಲಿ ದಾಳಿ ನಡೆಸಲಾಗಿದೆ.

Casual Images
ಇರಾನ್-ಅಮೆರಿಕ ಸಂಘರ್ಷದಲ್ಲಿ ಮಧ್ಯಸ್ಥಿಕೆ; ಯುದ್ಧ ಮುಂದುವರಿದರೆ ಸೌದಿ ಅರೇಬಿಯಾದಿಂದ ಪಾಕಿಸ್ತಾನಕ್ಕೆ ಸಮಸ್ಯೆ!

ಇಸ್ರೇಲ್ ನಲ್ಲಿ ನಾಗರಿಕರ ವಸತಿ ಪ್ರದೇಶಗಳಲ್ಲಿ ದಾಳಿ ಪ್ರಮಾಣವನ್ನು ಕಡಿಮೆ ಮಾಡುವ ಉದ್ದೇಶದಿಂದ ಬ್ಯಾಲಿಸ್ಟಿಕ್ ಕ್ಷಿಪಣಿ ಹೊಡೆದುರುಳಿಸಲು ವಿರಾಮವಿಲ್ಲದೆ ಕಾರ್ಯಾಚರಣೆಯನ್ನು ಮುಂದುವರೆಸಿದೆ ಎಂದು ಇಸ್ರೇಲ್ ವಾಯುಪಡೆ ಹೇಳಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com